Breaking News

ರೈಲಿನಲ್ಲಿ ವ್ಯಕ್ತಿ ನೇಣಿಗೆ ಶರಣು

Spread the love

ಬೈಯಪ್ಪನಹಳ್ಳಿಯ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ನಲ್ಲಿ(ಎಸ್ಎಂವಿಟಿ) ಬುಧವಾರ ಬೆಳಗ್ಗೆ ಕಾರೈಕಲ್ ಎಕ್ಸ್ಪ್ರೆಸ್ ರೈಲಿನಲ್ಲಿ 45 ವರ್ಷದ ವ್ಯಕ್ತಿಯೊಬ್ಬರು ಕೋಚ್ನ ಫ್ಯಾನ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತರು… ಬೆಂಗಳೂರು: ಬೈಯಪ್ಪನಹಳ್ಳಿಯ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ನಲ್ಲಿ(ಎಸ್ಎಂವಿಟಿ) ಬುಧವಾರ ಬೆಳಗ್ಗೆ ಕಾರೈಕಲ್ ಎಕ್ಸ್ಪ್ರೆಸ್ ರೈಲಿನಲ್ಲಿ 45 ವರ್ಷದ ವ್ಯಕ್ತಿಯೊಬ್ಬರು ಕೋಚ್ನ ಫ್ಯಾನ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಮೃತರು ಕೇರಳದವರು ಎಂದು ಶಂಕಿಸಲಾಗಿದೆ. ಕೋಚ್ ಅನ್ನು ಪ್ರತ್ಯೇಕಿಸಲಾಗಿದ್ದು, ರೈಲು ಮೂರು ಗಂಟೆ ವಿಳಂಬವಾಗಿ ತೆರಳಿದೆ. ಸರ್ಕಾರಿ ರೈಲ್ವೆ ಪೊಲೀಸರು(GRP) CrPcಯ ಸೆಕ್ಷನ್ 174 ರ ಅಡಿಯಲ್ಲಿ ಅಸಹಜ ಸಾವು ಪ್ರಕರಣ ದಾಖಲಿಸಿದ್ದಾರೆ. ಬುಧವಾರ ಬೆಳಗಿನ ಜಾವ 2 ಗಂಟೆಗೆ ಮೈಸೂರಿನಿಂದ ಪ್ಲಾಟ್ಫಾರ್ಮ್ 5ಕ್ಕೆ ಆಗಮಿಸಿದ ಸಂಪೂರ್ಣ ಕಾಯ್ದಿರಿಸದ ರೈಲಿನಲ್ಲಿ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜತೆ ಮಾತನಾಡಿದ GRP ಪೋಲೀಸ್ ಒಬ್ಬರು, ಬೆಳಗ್ಗೆ 7 ಗಂಟೆ ಸುಮಾರಿಗೆ ರೈಲು(ಸಂಖ್ಯೆ 16529) ಹತ್ತಿದ ಪ್ರಯಾಣಿಕರೊಬ್ಬರು ಕೋಚ್ನ ಮೇಲಿರುವ ಫ್ಯಾನ್ಗೆ ವ್ಯಕ್ತಿ ನೇತಾಡುತ್ತಿರುವ ಆಘಾತಕಾರಿ ದೃಶ್ಯವನ್ನು ನೋಡಿದ್ದಾರೆ. ತಕ್ಷಣ ಅವರು ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎಂದರು. 


Spread the love

About Laxminews 24x7

Check Also

ಮುಧೋಳ ತಾಲ್ಲೂಕಿನ ಪ್ರವಾಹ ಬಾದಿತ ಜಮೀನುಗಳಿಗೆ ಸಚಿವ ತಿಮ್ಮಾಪೂರ ಭೇಟಿ; ಪರಿಹಾರ ಭರವಸೆ!!

Spread the love ಮುಧೋಳ ತಾಲ್ಲೂಕಿನ ಪ್ರವಾಹ ಬಾದಿತ ಜಮೀನುಗಳಿಗೆ ಸಚಿವ ತಿಮ್ಮಾಪೂರ ಭೇಟಿ; ಪರಿಹಾರ ಭರವಸೆ!! ನಿರಂತರ ಮಳೆಯಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ