Breaking News

ಭಾರೀ ಮಳೆಗೆ 9ರ ಬಾಲಕಿ ಬಲಿ

Spread the love

ತಮಿಳುನಾಡು: ಭಾರೀ ಮಳೆಗೆ (Rain) ಮನೆಯ ಗೊಡೆ ಕುಸಿದು ಬಾಲಕಿ (Girl) ಮೃತಪಟ್ಟ ಘಟನೆ ತಮಿಳುನಾಡಿನ (Tamil Nadu) ತಿರುವಾರೂರ್‌ನಲ್ಲಿ ನಡೆದಿದೆ.

ಮೃತ ಬಾಲಕಿಯನ್ನು ಮೋನಿಷಾ (9) ಎಂದು ಗುರುತಿಸಲಾಗಿದೆ. ಧಾರಾಕಾರ ಮಳೆಯಿಂದಾಗಿ ಮನೆಯ ಗೋಡೆಯ ಒಂದು ಭಾಗ ಬಿದ್ದಿದೆ.

ಈ ವೇಳೆ ಮನಿಷಾ ಸ್ಥಳದಲ್ಲೇ ಮೃತಪಟ್ಟರೇ, ಆಕೆಯ ಸಹೋದರ ಮೋಹನ್‌ ದಾಸ್‌ (12) ಗಾಯಗೊಂಡಿದ್ದಾನೆ. ಈ ಹಿನ್ನೆಲೆಯಲ್ಲಿ ಮೋಹನ್‌ ದಾಸ್‌ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಳೆಯಿಂದಾಗಿ ತಮಿಳುನಾಡಿನ 8 ಜಿಲ್ಲೆಗಳಲ್ಲಿ ಸೋಮವಾರ ಶಾಲೆಗಳಿಗೆ ಜಿಲ್ಲಾಧಿಕಾರಿಗಳು ರಜೆ ಘೋಷಿಸಿದ್ದಾರೆ. ವಿಲ್ಲುಪುರಂ, ಕಡಲೂರು, ತಿರುವಾರೂರ್ ಮತ್ತು ಮೈಲಾಡುತುರೈ ಜಿಲ್ಲೆಗಳು ಶಿಕ್ಷಣ ಸಂಸ್ಥೆಗಳನ್ನು ಮುಚ್ಚುವುದಾಗಿ ಘೋಷಿಸಿದರೆ, ಅರಿಯಲೂರ್, ಚೆಂಗಲ್ಪಟ್ಟು, ಕಲ್ಲಕುರಿಚಿ ಮತ್ತು ತಿರುವಣ್ಣಾಮಲೈ ಶಾಲೆಗಳು ಕೂಡ ರಜೆ ನೀಡಿವೆ.

ಅದೇ ರೀತಿ ಮಳೆಯಿಂದಾಗಿ ಚೆನ್ನೈ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿದೆ. ತಿರುವರೂರು ವೈದ್ಯಕೀಯ ಕಾಲೇಜಿನ ಮೆಟರ್ನಿಟಿ ವಾರ್ಡ್‌ಗೆ ಪ್ರವಾಹದ ನೀರು ನುಗ್ಗಿದ್ದು, ರೋಗಿಗಳನ್ನು ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ