Breaking News

ಸುಳ್ಳು ಸುದ್ದಿಯಿಂದ ಗ್ಯಾಸ್ ಎಜೆನ್ಸಿಗಳ ಮುಂದೆ ಜನಜಂಗುಳಿ

Spread the love

ಕೊಪ್ಪಳ, ಡಿ.28: ಡಿಸೆಂಬರ್ 31 ರೊಳಗೆ ಗ್ಯಾಸ್ ಸಂಪರ್ಕ್ ಪಡೆದವರೆಲ್ಲರೂ ನಿಮಗೆ ಸೇವೆ ನೀಡುವ ಗ್ಯಾಸ್ ಏಜೆನ್ಸಿಯವರ ಬಳಿ ಹೋಗಿ ಇ ಕೆವೈಸಿ ಮಾಡಿಸಬೇಕು. ಇಲ್ಲದಿದ್ದರೆ ನಿಮ್ಮ ಸಬ್ಸಿಡಿ(Subsidy) ಹಣ ಬಂದಾಗುತ್ತದೆ. ಕೆವೈಸಿ ಮಾಡಿಸಿದ್ರೆ ನಿಮಗೆ ಕೇವಲ ಐನೂರು ರೂಪಾಯಿಗೆ ಸಿಲಿಂಡರ್ ಸಿಗುತ್ತೆ.ಇಲ್ಲದಿದ್ದರೆ, ಕಮರ್ಷಿಯಲ್ ಸಿಲಿಂಡರ್ ಬೆಲೆ ನೀಡಿ ಸಿಲಿಂಡರ್ ಖರೀದಿಸಬೇಕು ಎನ್ನುವ ವದಂತಿಯನ್ನು ಹಬ್ಬಿಸಿದ್ದಾರೆ. ಈ ಹಿನ್ನಲೆ ಕೊಪ್ಪಳ(Koppala) ನಗರ ಸೇರಿದಂತೆ ರಾಜ್ಯದ ವಿವಿಧ ಗ್ಯಾಸ್ ಏಜೆನ್ಸಿಗಳ ಅಂಗಡಿಗಳ ಮುಂದೆ ನೂರಾರು ಜನ ಕ್ಯೂ ನಿಲ್ಲುತ್ತಿದ್ದಾರೆ. ಬೆಳ್ಳೆಂಬೆಳಗ್ಗೆ ಆರು ಗಂಟೆಗೆ ತಮ್ಮ ಬೇರೆ ಕೆಲಸಗಳನ್ನು ಕೂಡ ಬಿಟ್ಟು, ಗ್ಯಾಸ್ ಅಂಗಡಿ ಮುಂದೆ ಬಂದು ಕಾಯುತ್ತಿದ್ದಾರೆ.

 

ಈ ವದಂತಿ ಬಾಯಿಂದ ಬಾಯಿಗೆ ಅನೇಕರಿಗೆ ಹಬ್ಬಿದ್ರೆ, ಇನ್ನು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಹರದಾಡುತ್ತಿರುವ ವದಂತಿಯನ್ನು ನಂಬಿ, ತಾವು ಗ್ಯಾಸ್ ಸಂಪರ್ಕ ಪಡಿದಿರುವ ಏಜೆನ್ಸಿಗಳ ಮುಂದೆ ಬಂದು ಇ ಕೆವೈಸಿ ಮಾಡಲು ಮುಗಿಬೀಳುತ್ತಿದ್ದಾರೆ. ಇನ್ನು ದಿಢೀರನೆ ನೂರಾರು ಜನ ಬರುತ್ತಿರುವುದರಿಂದ ಏಜೆನ್ಸಿಗಳ ಅಂಗಡಿಗಳು ಜನರಿಂದ ತುಂಬಿ ತುಳಕುತ್ತಿವೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ