Breaking News

ಈ ಸಾರಿ ವರ್ಲ್ಡ್​ ಕಪ್​ ನಮ್ದೇ’: ರಜಿನಿಕಾಂತ್​ ವಿಶ್ವಾಸ

Spread the love

ಅಹಮದಾಬಾದ್(ಗುಜರಾತ್)​: ತಮಿಳು ಸೂಪರ್ ​ ಸ್ಟಾರ್ ರಜಿನಿಕಾಂತ್ ಅವರು ಕ್ರಿಕೆಟ್​ನ ಕಟ್ಟಾ ಅಭಿಮಾನಿ.

ತಮ್ಮ ನೆಚ್ಚಿನ ಕ್ರಿಕೆಟಿಗರ ಬಗ್ಗೆಯೂ ಆಗಾಗ ಅವರು ಮಾತನಾಡುತ್ತಾರೆ. ಇತ್ತೀಚೆಗೆ ನಡೆದ ಭಾರತ-ನ್ಯೂಜಿಲೆಂಡ್ ಸೆಮಿ ಫೈನಲ್ ಪಂದ್ಯಕ್ಕೆ ಕುಟುಂಬಸಮೇತರಾಗಿ ಆಗಮಿಸಿ ಸಂಭ್ರಮಿಸಿದ್ದರು. ಮುಂಬೈನಿಂದ ಚೆನ್ನೈಗೆ ಮರಳಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಶ್ವಕಪ್ ಫೈನಲ್​ ಕುರಿತು ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡರು.

ರಜಿನಿಕಾಂತ್​ ನ್ಯೂಜಿಲೆಂಡ್ ವಿರುದ್ಧದ ಪಂದ್ಯದ ಕುರಿತು ಮಾತನಾಡುತ್ತಾ, ನಾವು ಮೊದಲು ಸ್ವಲ್ಪ ಹೊತ್ತು ಟೆನ್ಷನ್ ಆಗಿದ್ದೆವು. ಪ್ರತಿ ವಿಕೆಟ್ ಬೀಳುತ್ತಿದ್ದಂತೆ ಪರಿಸ್ಥಿತಿ ನಮ್ಮ ಪರವಾಗಿ ಬದಲಾಯಿತು. ಆದರೆ, ಮೊದಲ ಒಂದೂವರೆ ಗಂಟೆಗಳ ಕಾಲ ನಾವು ತುಂಬಾ ಚಿಂತಿತರಾಗಿದ್ದೆವು. ಈ ಬಾರಿಯ ವಿಶ್ವಕಪ್ ನಮ್ದೇ. ಶೇ.100ರಷ್ಟು ವಿಶ್ವಕಪ್​ ಭಾರತಕ್ಕೆ ಬರಲಿದೆ ಎಂದರು. ವಿಶ್ವಕಪ್‌ನ ಸೆಮಿ ಫೈನಲ್‌ನಲ್ಲಿ ಉತ್ತಮ ಬೌಲಿಂಗ್ ಮಾಡಿದ್ದ ಮೊಹಮ್ಮದ್ ಶಮಿ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ, ಸೆಮಿ ಫೈನಲ್‌ನಲ್ಲಿ ಭಾರತ ತಂಡದ ಗೆಲುವಿಗೆ ನೂರಕ್ಕೆ ನೂರು ಅವರೇ ಕಾರಣ ಎಂದು ಉತ್ತರಿಸಿದರು.

ಅಲ್ಲದೇ, ಸೆಮಿ ಫೈನಲ್​ನಲ್ಲಿ ದಾಖಲೆ ಸೃಷ್ಟಿಸಿದ ಕೊಹ್ಲಿ ಹಾಗೂ ಶಮಿಗೆ ರಜಿನಿ ಅಭಿನಂದನೆ ಸಲ್ಲಿಸಿದ್ದಾರೆ. ಸ್ಪಿನ್ನರ್ ಅಶ್ವಿನ್ ಜೊತೆಗಿನ ಅವರ ಇತ್ತೀಚಿನ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಫೈನಲ್​ ಪಂದ್ಯ ಭಾನುವಾರ ಆಸ್ಟ್ರೇಲಿಯಾ ಮತ್ತು ಭಾರತ ಮಧ್ಯೆ ನಡೆಯಲಿದೆ. ಎರಡು ದಶಕಗಳ ನಂತರ ಮತ್ತೊಮ್ಮೆ ವಿಶ್ವಕಪ್ ಫೈನಲ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಮುಖಾಮುಖಿಯಾಗುತ್ತಿದೆ. ಗುರುವಾರ ನಡೆದ ರೋಚಕ ಸೆಮಿಫೈನಲ್ ಪಂದ್ಯದಲ್ಲಿ ಆಸೀಸ್ 3 ವಿಕೆಟ್​ಗಳಿಂದ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿ ಟೀಂ ಇಂಡಿಯಾ ಜೊತೆ ಪ್ರಶಸ್ತಿ ಹೋರಾಟಕ್ಕೆ ಸಜ್ಜಾಗಿದೆ. ಬೌಂಡರಿ ಮತ್ತು ರನ್‌ಗಳ ಕೊರತೆಯಿಂದ ಕಡಿಮೆ ಸ್ಕೋರ್‌ ಮಧ್ಯೆಯೂ ಸೆಮಿಸ್ ಪಂದ್ಯ ರೋಚಕವಾಗಿ ಸಾಗಿತು. ಮೊದಲಿಗೆ ಸ್ಟಾರ್ಕ್, ಹೇಜಲ್‌ವುಡ್ ಹಾಗೂ ಹೆಡ್​ನಿಂದಾಗಿ ಕುಸಿಯುವ ಭೀತಿಯಲ್ಲಿದ್ದ ದಕ್ಷಿಣ ಆಫ್ರಿಕಾ, ಮಿಲ್ಲರ್ (101) ಅದ್ಭುತ ಹೋರಾಟದಿಂದ 212 ರನ್ ಗಳಿಸಲಷ್ಟೇ ಶಕ್ತವಾಯಿತು. ಅಲ್ಪ ವಿರಾಮದಲ್ಲಿ ಆಸೀಸ್ ಗೊಂದಲದಲ್ಲಿ ಸಿಲುಕಲಿಲ್ಲ. ಗುರಿ ಬೆನ್ನತ್ತಿದ ತಂಡ 47.2 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು ಗೆಲುವಿನ ನಗೆ ಬೀರಿತು. ಹೆಡ್ (62) ನಿರ್ಣಾಯಕ ಇನಿಂಗ್ಸ್ ಆಡಿದರು. ಬೌಲಿಂಗ್​ನಲ್ಲಿ ದಕ್ಷಿಣ ಆಫ್ರಿಕಾ ತೀವ್ರ ಹೋರಾಟ ನಡೆಸಿದರೂ ಸ್ಕೋರ್ ಕಡಿಮೆ ಇದ್ದ ಕಾರಣ ಅದೃಷ್ಟ ಕೈಹಿಡಿಯಲಿಲ್ಲ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ