ಬೆಳಗಾವಿ : ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಗೋಕಾಕ್ ತಾಲೂಕಿನ ಘಟಪ್ರಭಾದಲ್ಲಿ ನಡೆದಿದೆ.
ರಾಯಬಾಗ ತಾಲೂಕಿನ ರೈಲ್ವೆ ಸ್ಟೇಷನ್ ನಿವಾಸಿ ಸಂಜಯ ಸಾಗರ ಕಾಂಬಳೆ (30) ಕೊಲೆಗೀಡಾದ ವ್ಯಕ್ತಿ.
ಹಲವು ದಿನಗಳಿಂದ ಬುದ್ಧಿ ಮಾಂಧ್ಯನಂತೆ ವರ್ತಿಸುತ್ತಿದ್ದ ಈತನನ್ನು ಘಟಪ್ರಭಾದ ಅನುರಾಧಾ ಬಾರ್ ಹತ್ತಿರ ಕೊಲೆ ಮಾಡಲಾಗಿದೆ. ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆಯನ್ನು ಪೊಲೀಸರು ಕೈಗೊಂಡಿದ್ದಾರೆ.
Laxmi News 24×7