Breaking News

ಬೆಳಗಾವಿ ತಾಲೂಕು ಬರಪೀಡಿತ ಪ್ರದೇಶ ಎಂದು ಘೋಷಿಸಲು ೭ ದಿನ ಅವಧಿ ಕೊಟ್ಟ ರೈತ ಸಂಘ

Spread the love

ಬೆಳಗಾವಿ ತಾಲೂಕು ಬರಪೀಡಿತ ಪ್ರದೇಶ ಎಂದು ಘೋಷಿಸದಿದ್ದರೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅಹೋ ರಾತ್ರಿ ಧರಣಿ ಮಾಡುತ್ತೇವೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಬೆಳಗಾವಿ ಜಿಲ್ಲಾ ಉಪಾಧ್ಯಕ್ಷ ಕಲಗೌಡಾ ಪಾಟೀಲ ಆಗ್ರಹಿಸಿದ್ದಾರೆ .

 

ಬೆಳಗಾವಿ ತಾಲೂಕಿನ ಅಗಸಗಿ ಮನ್ನಿಕೇರಿ ,ಕಡೋಲಿ ,ಕೆಟನೂರು ಹಂದಿಗನೂರು ,ಶಿವಾಪುರ ಹಳ್ಳಿಗಳ ರೈತರು ಇಂದು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಬೆಳಗಾವಿ ತಾಲೂಕು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಿ ಎಂದು ಮನವಿ ಸಲ್ಲಿಸಿದರು .

 

ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ಬೆಳಗಾವಿ ಜಿಲ್ಲಾ ಉಪಾಧ್ಯಕ್ಷ ಕಲಗೌಡಾ ಬಾಳಗೌಡಾ ಪಾಟೀಲ ಬೆಳಗಾವಿ ತಾಲೂಕಿನ ಅಗಸಗಿ ಮನ್ನಿಕೇರಿ ,ಕಡೋಲಿ ,ಕೆಟನೂರು ಹಂದಿಗನೂರು ,ಶಿವಾಪುರ ಹಳ್ಳಿಗಳ ಸೇರಿದಂತೆ ಎಲ್ಲಾ ರೈತರ ಸ್ಥಿತಿ ಜಿಂತಾಜನಕವಾಗಿದೆ ,ರೈತರು ಬೆಳೆದ ಬಟಾಟಿ ,ಗೋಂಜಾಳ ,ಭತ್ತ ,ಗೋಂಜಾಳ ,ಗೆಣಸು ಮೆಣಸಿನಗಿಡ ಎಲ್ಲವು ನೀರಿಲ್ಲದೆ ಒಣಗಿವೆ ಹೀಗಿರುವಾಗ ಯಾವುದೇ ಒಬ್ಬ ಅಧಿಕಾರಿ ನಮ್ಮ ಕಡೆ ಗಮನ ಹರಿಸುತ್ತಿಲ್ಲ ಸರ್ಕಾರಕ್ಕೆ ೭ ದಿನ ಕಾಲಾವಕಾಶ ನೀಡುತ್ತೇವೆ
೭ ದಿನ ಅವಧಿ ಯಲ್ಲಿ ಬೆಳಗಾವಿ ತಾಲೂಕು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಿ ಇಲ್ಲವಾದಲ್ಲಿ ನಮ್ಮ ರೈತರೆಲ್ಲ ಸೇರಿ ಅಹೋ ರಾತ್ರಿ ಧರಣಿ ಮಾಡುತ್ತೇವೆ ಎಂದು ಗುಡುಗಿದರು 


Spread the love

About Laxminews 24x7

Check Also

ಪ್ರಾಥಮಿಕ ಶಾಲಾ ಶಿಕ್ಷಕರ ಬಡ್ತಿಗೆ 2:1ರ ಅನುಪಾತ: ಗೆಜೆಟ್ ಅಧಿಸೂಚನೆ ಪ್ರಕಟ

Spread the loveಬೆಂಗಳೂರು: ಪ್ರಾಥಮಿಕ ಶಾಲಾ ಶಿಕ್ಷಕರ ಮುಂಬಡ್ತಿಗೆ ರಾಜ್ಯ ಸರ್ಕಾರವು ನಿಯಮಗಳನ್ನು ರೂಪಿಸಿ ಗೆಜೆಟ್ ಅಧಿಸೂಚನೆ ಪ್ರಕಟಿಸಿದೆ. ಅದರಂತೆ, ಪ್ರಾಥಮಿಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ