Breaking News

ಕಾವೇರಿ ಹೋರಾಟ ಬೆಂಬಲಿಸದ ಸ್ಯಾಂಡಲ್​ವುಡ್​ ವಿರುದ್ಧ ಮುಖ್ಯಮಂತ್ರಿ ಚಂದ್ರು ವಾಗ್ದಾಳಿ

Spread the love

ಮಂಡ್ಯ: ಮಂಡ್ಯದಲ್ಲಿ ದಿನೇ ದಿನೇ ಕಾವೇರಿ ಹೋರಾಟದ ಕಿಚ್ಚು ಹೆಚ್ಚಾಗಿದೆ. ಇಂದು ಕೂಡ ರೈತರ ಹೋರಾಟ ಮುಂದುವರೆದಿದೆ. ರೈತರು ನಡೆಸುತ್ತಿರುವ ಧರಣಿಗೆ ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಸಾಥ್​ ನೀಡಿದ್ದಾರೆ. ಬಳಿಕ, ಮಂಡ್ಯದ ಎಂಪಿ ಸಿನಿಮಾ ರಂಗದಲ್ಲಿ ಇದ್ದುಕೊಂಡು ಅವರೇ ಈ ವಿಚಾರವಾಗಿ ಸ್ಪಂದಿಸುತ್ತಿಲ್ಲ. ಕಾವೇರಿ ಹೋರಾಟಕ್ಕೆ ಕನ್ನಡ ಚಿತ್ರರಂಗ ಬೆಂಬಲಿಸುತ್ತಿಲ್ಲ ಎಂದು ಸರ್ಕಾರ ಮತ್ತು ಚಿತ್ರರಂಗದ ವಿರುದ್ಧ ಮುಖ್ಯಮಂತ್ರಿ ಚಂದ್ರು ವಾಗ್ದಾಳಿ ನಡೆಸಿದ್ದಾರೆ.

ಮಂಡ್ಯದಲ್ಲಿ ನಡೆಯುತ್ತಿರುವ ರೈತ ಹಿತರಕ್ಷಣಾ ಸಮಿತಿ ಕಾವೇರಿ ಹೋರಾಟಕ್ಕೆ ಬೆಂಬಲ ಕೊಟ್ಟು ಮಾತನಾಡಿದ ಅವರು, ಚಿತ್ರರಂಗದವರು ನಾವೇ ಬೇರೆ, ಜನರೇ ಬೇರೆ ಎನ್ನಬಾರದು. ನಾವು ಬದುಕುತ್ತಿರುವುದು, ತಿನ್ನುತ್ತಿರುವುದು ಇದೇ ಜನರ ತೆರಿಗೆ ಹಣದಿಂದ. ನಾವು, ನಮ್ಮ ಕುಟುಂಬದವರು ಇಂದು ಸುಖವಾಗಿ ಇದ್ದೀವಿ ಅಂದ್ರೆ ಅದಕ್ಕೆ ಕಾರಣ ಇದೇ ಜನರು. ಅವರಿಗೆ ತೊಂದರೆಯಾದಾಗ ಅವರೊಂದಿಗೆ ನಿಲ್ಲಬೇಕಾಗಿರುವುದು ನಮ್ಮ ಕರ್ತವ್ಯ ಎಂದು ಹೇಳಿದರು.

”ಮಂಡ್ಯದ ಎಂಪಿ ಸಿನಿಮಾ ರಂಗದಲ್ಲಿ ಇದ್ದುಕೊಂಡು ಅವರೇ ಸರಿಯಾಗಿ ಸ್ಪಂದಿಸುತ್ತಿಲ್ಲ. ಅಧಿಕಾರಕ್ಕಾಗಿ ಎಲ್ಲೆಲ್ಲೋ ಓಡಾಡಿಕೊಂಡು ಇದ್ದಾರೆ. ಸಿನಿಮಾದವರು ಎಲ್ಲಾ ದಿನ ಬಂದು ಹೋರಾಟ ಮಾಡಬೇಕು ಅಂತೇನಿಲ್ಲ. ಕಾವೇರಿ ಹೋರಾಟಕ್ಕೆ ಬೆಂಬಲವನ್ನಾದರೂ ನೀಡಬೇಕು. ಈ ವಿಚಾರಕ್ಕೆ ಸ್ಪಂದಿಸದೇ ಇದ್ರೆ ಇದಕ್ಕಿಂತ ದೊಡ್ಡ ದುರಂತ ಮತ್ತೊಂದಿಲ್ಲ. ಚಿತ್ರರಂಗ ಧ್ವನಿ ಎತ್ತದೇ ಇರುವುದು ಬೇಜವಾಬ್ದಾರಿಯನ್ನು ತೋರಿಸುತ್ತದೆ. ನಟ, ನಟಿಯರಿಗೆ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಅವರಿಗೆ ಗದ್ದೆ, ಜಾನುವಾರುಗಳಿಲ್ಲ. ಹೀಗಾಗಿ ಅವರಲ್ಲಿ ಉದಾಸೀನದ ಮನೋಭಾವನೆ ಇದೆ. ಸಿನಿಮಾರಂಗ ಎಂದಿಗೂ ನೆಲ, ಜಲ, ಭಾಷೆಯ ವಿಚಾರಕ್ಕೆ ತೊಂದರೆ ಆದಾಗ ಮೊದಲು ಧ್ವನಿ ಎತ್ತಬೇಕು” ಎಂದು ಒತ್ತಾಯಿಸಿದರು.


Spread the love

About Laxminews 24x7

Check Also

ಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ!

Spread the loveಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ