Breaking News

ಕಲಿಸಿದ ಗುರುವಿಗೆ ಮಕ್ಕಳು ಹಾಗೂ ಶಿಕ್ಷಕರಿಂದ ಗುರುವಂದನಾ ಕಾರ್ಯಕ್ರಮದ ಜೊತೆಗೆ ಬಿಳ್ಕೊಡುವ ಸಮಾರಂಭ

Spread the love

ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಸವಸುದ್ದಿ ಗ್ರಾಮದ ಬಡಿಗೇರ ತೋಟದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವಎಸ್ ಎಸ್ ಹಣಿಗೆರಿ ಶಿಕ್ಷಕಿಯ ವರ್ಗಾವಣೆಯಾದ ಹಿನ್ನೆಲೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ವಿದ್ಯಾರ್ಥಿಗಳು.

೧೫ ವರ್ಷಗಳ ಸೇವೆ ಸಲ್ಲಿಸಿದ ನನಗೆ ಸಮಯ ಹೇಗೆ ಮುಕ್ತಾಯವಾಯಿತು ಗೊತ್ತಿಲ್ಲ ನನ್ನನ ಈ ಶಾಲೆಯ ಪಾಲಕರು ಶಿಕ್ಷಕಿಯನ್ನಾಗಿ ನೋಡದೆ ತಮ್ಮ ಮನೆಯ ಮಗಳಂತೆ ಕಂಡಿದ್ದಾರೆ ಎಂದು ಎಸ್ ಎಸ್ ಹಣಿಕೆರಿ ಶಿಕ್ಷಕಿ ಭಾವುಕರಾಗಿ ಹೇಳಿದರು .

ಇಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಡಗೇರ ತೋಟ ಸವಸುದ್ದಿ ಶಾಲೆಯಲ್ಲಿ ಕಳೆದ ೧೫ ವರ್ಷಗಳ ಸೇವೆ
ಸಲ್ಲಿಸಿ ವರ್ಗಾವಣೆ ಗೊಂಡ ಶಿಕ್ಷಕಿಗೆ ಗುರು ವಂದನಾ ಕಾರ್ಯಕ್ರಮ ಜರುಗಿತು .

ಇದೆ ಸಂದರ್ಭದಲ್ಲಿ ಪ್ರಾಧಾನ ಗುರುಗಳಾದ ಬಿ ಎಚ್ ಬುದ್ಯಾಳ ಮಾತನಾಡಿ ಒಬ್ಬ ಗುರುವಿನ ಮಹತ್ವ ಗೊತ್ತಾಗುವುದು ಇಂತಹ ಸಂದರ್ಭದಲ್ಲಿ ಅಂದರೆ ಸುದೀರ್ಘ ೧೫ ವರ್ಷಗಳ ಸೇವೆ ಸಲ್ಲಿಸಿ ಇವತ್ತು ವರ್ಗಾವಣೆ ಯಾಗಿ ಹೊಗುತ್ತಿರುವ ಶಿಕ್ಷಕಿಗೆ ಪಾಲಕರು ಮಕ್ಕಳು ಹಾಗೂ ಗ್ರಾಮಸ್ಥರು ಒಂದು ಕಡೆ ಗೌರವಿಸಿ ಬಿಳಕ್ಕೊಡುತ್ತಿದ್ದರೆ ಇನ್ನೊಂದೆಡೆ ಎಲ್ಲರೂ ದು:ಖದಿಂದ ಕಣ್ಣಿರು ಹಾಕುತ್ತಿದ್ದು ಇದೆ ಒಬ್ಬ ಗುರುವಿನ ಸ್ಥಾನಮಾನ ಎನ್ನಬಹುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅದ್ಯಕ್ಷರಾದ ಸುರೇಶ ಖಣದಾಳೆ ಭೂ ದಾನಿಗಳಾದ ನಿಂಗಪ್ಪ ಖಣದಾಳೆ ಹಾಗೂ ಮಲ್ಲಿಕಾರ್ಜುನ ಖಣದಾಳೆ, ಗ್ರಾಮಸ್ಥರಾದ ಬೊರಪ್ಪ ಖಣದಾಳೆ, ಲಕ್ಕಪ್ಪ ಖಣದಾಳೆ, ದುಂಡಪ್ಪ ಬೆಟಗೇರಿ ,ಹಳೆಯ ವಿದ್ಯಾರ್ಥಿ ಗಳಾದ ಬಸವರಾಜ ಇಂಗಳಗಾಂವಿ ಕಿರಣ ಬಳಿಗಾರ ,ಸಂತೋಷ ಕೋರೆ ಸೇರಿದಂತೆ ಶಾಲೆಯ ಎಲ್ಲ ಮಕ್ಕಳು ಹಾಗೂ ಶಿಕ್ಷಕರು ಮತ್ತು ಅಡುಗೆ ಸಿಬ್ಬಂದಿ ಗಳು ಉಪಸ್ಥಿತರಿದ್ದರು .


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ