Breaking News

1 ಗಂಟೆ ಪೊಲೀಸ್ ಆದ 8 ವರ್ಷದ ಪೋರ… ಆಜಾನ್​ ಖಾನ್​

Spread the love

ಶಿವಮೊಗ್ಗ: ಎಂಟೂವರೆ ವರ್ಷದ ಪುಟ್ಟ ಬಾಲಕ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯ ಪೊಲೀಸ್ ಆಗಿ ಒಂದು ಗಂಟೆ ಕರ್ತವ್ಯ ನಿರ್ವಹಿಸಿ ಗಮನ ಸೆಳೆದಿದ್ದಾನೆ.

ಪುಟ್ಟ ಬಾಲಕನ ಆದೇಶಕ್ಕೆ ಎಲ್ಲ ಪೊಲೀಸರು ಸೆಲ್ಯೂಟ್ ಹೊಡೆದು ಎಸ್ ಸಾರ್‌ ಅಂದ್ರು. ಹೌದು ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಗೆ ಬುಧವಾರ ಒಂದು ಗಂಟೆಯ ಮಟ್ಟಿಗೆ ಎಂಟೂವರೆ ವರ್ಷದ ಬಾಲಕ ಪೊಲೀಸ್​ ಇನ್ಸ್​ಪೆಕ್ಟ್​​ರ್​ ಆಗಿ ಕರ್ತವ್ಯ ನಿರ್ವಹಿಸಿದ್ದು ವಿಶೇಷವಾಗಿತ್ತು.

ಈ ಬಾಲಕನ ಹೆಸರು ಆಜಾನ್ ಖಾನ್. ಈತ ಈಗ 1 ನೇ ತರಗತಿಯಲ್ಲಿ ಓದುತ್ತಿದ್ದಾನೆ.‌ ಪೊಲೀಸ್ ಠಾಣೆಗೆ ಬಂದು ತನ್ನ ಆಸೆಯಂತೆ ಪೊಲೀಸ್​ ಇನ್ಸ್​ಪೆಕ್ಟ್​​ರ್ ಆಗಿ ಕರ್ತವ್ಯ ನಿರ್ವಹಿಸಿದನು. ಠಾಣೆಗೆ ಬಂದಾಗ ಖುದ್ದು ಎಸ್ಪಿ ಅವರು ಹೂವಿನ ಬೊಕ್ಕೆ‌ ನೀಡಿ ವೆಲ್‌ಕಮ್ ಮಾಡಿಕೊಂಡರು. ನಂತರ ಠಾಣೆ ಒಳಗೆ ಹೋಗಿ ಪೊಲೀಸ್​ ಇನ್ಸ್​ಪೆಕ್ಟ್​​ರ್ ಖುರ್ಚಿಯಲ್ಲಿ‌ ಕುಳಿತು ಕೊಂಡು ಠಾಣೆಯ ಸಿಬ್ಬಂದಿಯನ್ನು ಕರೆಯಿಸಿ ರೂಲ್ ಕಾಲ್ ನಡೆಸಲಾಯಿತು.

ಸಿಬ್ಬಂದಿಯ ಕುಂದು ಕೂರತೆ ಆಲಿಸಿದ್ದು, ಈ ವೇಳೆ ಮಹಿಳಾ ಪೊಲೀಸ್ ಪೇದೆಯು ಒಂದು ದಿನ ರಜೆ ಬೇಕು ಎಂದಾಗ ಅವರಿಗೆ ಆಜಾನ್ ಖಾನ್ ಒಂದು ದಿನ ಯಾಕೆ ಎರಡು ದಿನ ರಜೆ ತೆಗೆದುಕೊಳ್ಳಿ ಎಂದು ರಜೆ ನೀಡಿದ್ದಾನೆ. ಠಾಣೆಗೆ ಬಂದ ನಂತರ ರಿಜಿಸ್ಟಾರ್​ನಲ್ಲಿ ಸಹಿ ಮಾಡಿ, ವಿವಿಧ ಐಪಿಸಿ ಕಾಯ್ದೆಯ ಬಗ್ಗೆ ಮಾಹಿತಿ ಪಡೆದುಕೊಂಡ. ನಂತರ ಸಿಬ್ಬಂದಿಯನ್ನು ಕರೆಯಿಸಿ ಇಂದು ಏನೇನೂ ಕರ್ತವ್ಯ ನಿರ್ವಹಿಸಿದ್ದಿರಿ ಎಂದು ಪ್ರಶ್ನಿಸಿದ್ದಾನೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ