Breaking News

ಆಸ್ತಿಗಾಗಿ ಪತ್ನಿಯೊಂದಿಗೆ ಸೇರಿ ಹೆತ್ತಮ್ಮನನ್ನೇ ಕೊಂದ ಪುತ್ರ

Spread the love

ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ಆಸ್ತಿಗಾಗಿ ಹೆತ್ತ ತಾಯಿಯನ್ನು ಮಗ ಕೊಲೆ ಮಾಡಿರುವ ಪ್ರಕರಣ ದೇವನಹಳ್ಳಿ ತಾಲೂಕಿನ ಉದಯಗಿರಿ ಸಮೀಪ ನಡೆದಿದೆ.

ಚಿನ್ನಮ್ಮ ಕೊಲೆಗೀಡಾದ ಮಹಿಳೆ. ಚಿನ್ನಮ್ಮನಿಗೆ ಇಬ್ಬರು ಗಂಡು ಮಕ್ಕಳು. ಮೊದಲನೇ ಮಗ ರಾಘವೇಂದ್ರ ಮತ್ತು ಎರಡನೇ ಮಗ ರಾಜೇಶ್. ಮೊದಲ ಮಗ ರಾಘವೇಂದ್ರನಿಗೆ ಸುಧಾ ಎಂಬುವವಳೊಂದಿಗೆ ಮದುವೆ ಆಗಿದೆ. ಕಳೆದ ಒಂದು ವರ್ಷದ ಹಿಂದೆ ಚಿನ್ನಮ್ಮ ತನ್ನ ಗಂಡನನ್ನು ಕಳೆದುಕೊಂಡಿದ್ದರು. ಇರೋ ಜಮೀನನ್ನು ಮಾರಿ ಇಬ್ಬರು ಮಕ್ಕಳಿಗೆ ಸಮನಾಗಿ ಹಂಚುವ ನಿರ್ಧಾರ ಮಾಡಿದ್ದರು. ಅದಕ್ಕೂ ಮೊದಲೇ ಮಗ ರಾಘವೇಂದ್ರ ಮತ್ತು ಸೊಸೆ ಸುಧಾ ಸೇರಿಕೊಂಡು ಚಿನ್ನಮ್ಮನನ್ನು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು ಆಸ್ತಿ ವಿಚಾರವಾಗಿ ಹಲವು ದಿನಗಳಿಂದ ರಾಘವೇಂದ್ರ ತಾಯಿ ಜೊತೆ ಜಗಳವಾಡುತ್ತಿದ್ದ. ಇಂದು ಬೆಳಗ್ಗೆ ಚಿನ್ನಮ್ಮ ಊರಿನ ಆಚೆ ಪೊರಕೆ ಕಡ್ಡಿ ಕಟಾವಿಗೆ ಹೋಗಿದ್ದಾರೆ. ಇದೇ ಅವಕಾಶ ಬಳಸಿಕೊಂಡ ರಾಘವೇಂದ್ರ ಮತ್ತು ಸುಧಾ ಚಿನ್ನಮ್ಮನನ್ನು ಹಿಂಬಾಲಿಸಿಕೊಂಡು ಹೋಗಿದ್ದಾರೆ. ನಿರ್ಜನ ಪ್ರದೇಶದಲ್ಲಿ ಕೆಲ ಕಾಲ ಚಿನ್ನಮ್ಮ ಜೊತೆ ಜಗಳವಾಡಿ ಕೊನೆಗೆ ಹಲ್ಲೆ ಮಾಡಿದ್ದಾರೆ. ನಂತರ ಆಂಬ್ಯುಲೆನ್ಸ್ ಕರೆಸಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಅಷ್ಟರಲ್ಲಾಗಲೇ ಚಿನ್ನಮ್ಮ ಮೃತಪಟ್ಟಿದ್ದರು. ಈ ವಿಷಯ ತಿಳಿದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸ್​ ಠಾಣೆಯ ಸಿಬ್ಬಂದಿ ವೃದ್ಧೆ ಚಿನ್ನಮ್ಮನ ಮಗ ರಾಘವೇಂದ್ರ ಮತ್ತು ಸೊಸೆ ಸುಧಾಳನ್ನು ಬಂಧಿಸಿದ್ದಾರೆ. ಸ್ಥಳಕ್ಕೆ ಡಿಸಿಪಿ ಲಕ್ಷ್ಮೀ ಪ್ರಸಾದ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


Spread the love

About Laxminews 24x7

Check Also

ಅತ್ತೆ-ಮಾವನ ಮನಸ್ಥಿತಿ ಎಂದಿಗೂ ಬದಲಾಗಲ್ಲʼ; ವಿಡಿಯೋ ರೆಕಾರ್ಡ್‌ ಮಾಡಿ ನೇಣಿಗೆ ಶರಣಾದ ಶಿಕ್ಷಕಿ

Spread the loveನವದೆಹಲಿ: ಮದುವೆಯಾದ 8 ತಿಂಗಳ ಬಳಿಕ ಸರ್ಕಾರಿ ಶಿಕ್ಷಕಿಯೊಬ್ಬರು ವಿಡಿಯೋ ರೆಕಾರ್ಡ್‌ ಮಾಡಿ, ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ