Breaking News

ಜೈಲಿನಿಂದ ಹೊರಬಂದ ಕಲವೇ ಗಂಟೆಗಳಲ್ಲಿ ರೌಡಿಶೀಟರ್ ಹತ್ಯೆ

Spread the love

ಬೆಂಗಳೂರು, ಆ.5: ಜೈಲಿನಿಂದ ಹೊರಬಂದ ಕೆಲವೇ ಗಂಟೆಗಳಲ್ಲಿ ಬೆಂಗಳೂರಿನ ಕುಖ್ಯಾತ ರೌಡಿಶೀಟರ್(Rowdy Sheeter)​ ಸಿದ್ದಾಪುರ ಮಹೇಶ್​ನನ್ನು ಹೊಸ ರೋಡ್​ ಜಂಕ್ಷನ್​ ಬಳಿ ದುಷ್ಕರ್ಮಿಗಳುಕೊಚ್ಚಿ ಕೊಲೆಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿರೋಧಿ ಗ್ಯಾಂಗ್​ ಎಂದು ಗುರುತಿಸಿಕೊಂಡಿದ್ದ ರೌಡಿಶೀಟರ್​​​ ವಿಲ್ಸನ್​​ಗಾರ್ಡನ್​​​ ನಾಗ, ಡಬಲ್ ಮೀಟರ್​ ಮೋಹನ್​​, ಸುನೀಲ್​ ಸೇರಿದಂತೆ ಹಲವರ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್​​ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ.

ಇಬ್ಬರು ರೌಡಿಶೀಟರ್​ ಮಧ್ಯೆ ದ್ವೇಷ

ಹೌದು, ವಿಲ್ಸನ್​​ಗಾರ್ಡನ್​​​ ನಾಗ ಮತ್ತು ಸಿದ್ದಾಪುರ ಮಹೇಶ್ ಮಧ್ಯೆ ಮೊದಲಿನಿಂದಲೂ ದ್ವೇಷವಿತ್ತು. ಇನ್ನು 2020 ರಲ್ಲಿ ಜಯನಗರದಲ್ಲಿ ನಡೆದಿದ್ದ ಮದನ್​ ಕೊಲೆ ಕೇಸ್​ನಲ್ಲಿ ಭಾಗಿಯಾಗಿ ಮಹೇಶ್​ ಜೈಲು ಸೇರಿದ್ದ. ಆತನ ಆಗಮನಕ್ಕೆ ಕಾಯಿತ್ತಿದ್ದ ಗ್ಯಾಂಗ್.​ ಇದೀಗ ಆತ ಹೊರ ಬರುತ್ತಲೇ ಕಾರು ಅಡ್ಡಗಟ್ಟಿ ಮನಸೋ ಇಚ್ಛೆ ಕೊಚ್ಚಿ ಕೊಲೆ ಮಾಡಿದ್ದಾರೆ. ಈ ಕುರಿತು ಪರಪ್ಪನ ಅಗ್ರಹಾರ ಪೊಲೀಸರು ಐಪಿಸಿ ಸೆಕ್ಷನ್​​​ 302, 120ಬಿ, 143, 147, 148, 343, 327, 149ರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

ಮೂಡಿಗೆರೆ ತಾಲೂಕಿನಲ್ಲಿ ಮುಂದುವರಿದ ಕಾಡಾನೆ ಉಪಟಳ;

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಮುಂದುವರಿದ ಕಾಡಾನೆ ಉಪಟಳ ಮುಂದುವರೆದಿದ್ದು, ಕಾಫಿ ತೋಟದಲ್ಲಿಯೇ ಎರಡು ಕಾಡಾನೆ ಬೀಡು ಬಿಟ್ಟಿದೆ. ಕಾಡಾನೆ ದಾಂಧಲೆಗೆ ಲಕ್ಷಾಂತರ ಮೌಲ್ಯದ ಕಾಫಿ ಮೆಣಸು, ಅಡಿಕೆ, ಬಾಳೆ ನಾಶವಾಗಿದ್ದು, ಬಡವನದಿಣ್ಣೆ, ಮೇಗೂರು,ಮಲೆಮನೆ, ಸುಂದರಬೈಲ್ ಬಾಳೂರು ಗ್ರಾಮಗಳಲ್ಲಿ ಆನೆಗಳು ಸಂಚಾರ ಮಾಡುತ್ತಿದೆ. ನಿರಂತರವಾಗಿ ಕಾಫಿ ತೋಟದಲ್ಲಿ ಬೆಳೆ ನಾಶ ಮಾಡುತ್ತಿರುವ ಕಾಡಾನೆಗಳಿಂದ ಕಾಫಿ ತೋಟಕ್ಕೆ ಕೆಲಸಕ್ಕೆ ಬರಲು ಕಾರ್ಮಿಕರ ಹಿಂದೇಟು ಹಾಕುತ್ತಿದ್ದಾರೆ. ಈ ಹಿನ್ನಲೆ ಕಾಡಾನೆ ಸ್ಥಳಾಂತರ ಮಾಡುವಂತೆ ಸರ್ಕಾರಕ್ಕೆ ಗ್ರಾಮಸ್ಥರ ಆಗ್ರಹಿಸಿದ್ದಾರೆ.


Spread the love

About Laxminews 24x7

Check Also

ದಾವಣಗೆರೆ, ಬಾಗಲಕೋಟೆ ವಿಧಾನಸಭೆ ಬೈಎಲೆಕ್ಷನ್: ಉಸ್ತುವಾರಿ ಸಮಿತಿ ರಚನೆ; 31 ಜನರಿಗೆ ಜವಾಬ್ದಾರಿ

Spread the loveಬೆಂಗಳೂರು: ದಾವಣಗೆರೆ ಮತ್ತು ಬಾಗಲಕೋಟೆ ವಿಧಾನಸಭೆ ಉಪ ಚುನಾವಣೆ  ಹಿನ್ನೆಲೆ  ಎರಡೂ ಕ್ಷೇತ್ರಕ್ಕೆ ಕಾಂಗ್ರೆಸ್ ಉಸ್ತುವಾರಿ ವೀಕ್ಷಕರ ನೇಮಿಸಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ