Breaking News

”ಬಿಜೆಪಿ ವಿರೋಧ ಪಕ್ಷವಾಗಿ ಬಾಳೆ ಹಣ್ಣು ತಿನ್ನುತ್ತಾ ಕೂತಿಲ್ಲ” ಎಂದವಿಜಯೇಂದ್ರ

Spread the love

ಬೆಂಗಳೂರು: ”ಬಿಜೆಪಿ ವಿರೋಧ ಪಕ್ಷವಾಗಿ ಬಾಳೆ ಹಣ್ಣು ತಿನ್ನುತ್ತಾ ಕೂತಿಲ್ಲ” ಎಂದು ಬಿಜೆಪಿ ಶಾಸಕ ಬಿ.ವೈ.

ವಿಜಯೇಂದ್ರ ತೀವ್ರ ವಾಗ್ದಾಳಿ ನಡೆಸಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ”ಕುಂತಲ್ಲಿ, ನಿಂತಲ್ಲಿ ಕಾಂಗ್ರೆಸ್ ಸರ್ಕಾರವು ಹಿಂದಿನ ಬಿಜೆಪಿ ಸರ್ಕಾರದ ಬಗ್ಗೆ ತನಿಖೆ ಮಾಡುವುದಾಗಿ ಗೊಡ್ಡು ಬೆದರಿಕೆ ಹಾಕ್ತಿದ್ದಾರೆ. ಅವರ ಗೊಡ್ಡು ಬೆದರಿಕೆಗೆ ನಾವು ಹೆದರಲ್ಲ. ಭರವಸೆಗಳನ್ನು ನೀವು ಈಡೇರಿಸಬೇಕು ಎಂಬುದು ನಮ್ಮ ಆಗ್ರಹವಾಗಿದೆ. ಬಿಜೆಪಿ ಅಧಿಕಾರಾವಧಿಯಲ್ಲಿನ ಹಗರಣಗಳನ್ನು ತನಿಖೆ ಮಾಡುತ್ತೇವೆ ಎಂದು ಹೇಳಿ ಗ್ಯಾರಂಟಿ ಜಾರಿಯ ವೈಫಲ್ಯವನ್ನು ಮುಚ್ಚಿ ಹಾಕುತ್ತಿದ್ದಾರೆ ಎಂದು ಕಿಡಿ ಕಾರಿದರು.

”ಬಿಜೆಪಿ ಇಂತಹ ಬೆದರಿಕೆಗಳಿಗೆ ಹೆದರುವುದಿಲ್ಲ. ಬಿಜೆಪಿ ಸರ್ಕಾರದ ಯಾವುದೇ ತನಿಖೆ ಮಾಡಿದ್ರೂ ಬಿಜೆಪಿ ಸಿದ್ಧವಿದೆ. ಕಾಂಗ್ರೆಸ್ ಪಕ್ಷದ ವಿರುದ್ಧ ಬಿಜೆಪಿ ಹೋರಾಟ ಮಾಡುತ್ತಿದೆ. ಯಡಿಯೂರಪ್ಪನವರು ಹೊರಗೆ ಹೋರಾಟ ಮಾಡುತ್ತಿದ್ದರೆ. ಬಿಜೆಪಿ ಶಾಸಕರು ಸದನದ ಒಳಗೆ ಪ್ರತಿಭಟನೆ ಮಾಡುತ್ತಾರೆ. ಕಾಂಗ್ರೆಸ್ ಮೊದಲ ದಿನವೇ ಗ್ಯಾರೆಂಟಿ ಅನುಷ್ಠಾನ ಮಾಡ್ತೀವಿ ಎಂದು ಭರವಸೆ ನೀಡಿದರು. ಸರ್ಕಾರ ಬಂದು 50 ದಿನಗಳಾಗಿದ್ರೂ ಭರವಸೆ ಈಡೇರಿಸಿಲ್ಲ. ಕಾಂಗ್ರೆಸ್ ಸರ್ಕಾರ ಸಮಯ ದೂಡುತ್ತಿದೆ” ಎಂದು ಗರಂ ಆದರು.

ನ್ಯಾಯಾಂಗ ತನಿಖೆ ಆದೇಶ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ”ಈ ಸರ್ಕಾರ ಯಾವುದೇ ತನಿಖೆ ಮಾಡಲಿ. ಬಾಯಿ ಮುಚ್ಚುವ ಕೆಲಸ ಸರ್ಕಾರ ಮಾಡುತ್ತಿದೆ. ಭರವಸೆ ಈಡೇರಿಸಲು ಆಗದೇ ಗೊಡ್ಡು ಬೆದರಿಕೆ ಹಾಕುತ್ತಿದೆ. ಕೊಟ್ಟ ಭರವಸೆ ತಕ್ಷಣವೇ ಈಡೇರಿಸಬೇಕಾಗಿದೆ. ಬಿಜೆಪಿ ತನ್ನ ಹೋರಾಟ‌ ಮುಂದುವರೆಸಲಿದೆ” ಎಂದು ಆಗ್ರಹಿಸಿದರು.

ಜನರ ಕಿವಿಗೆ ಹೂವು ಇಡುತ್ತಿರುವ ಕಾಂಗ್ರೆಸ್ ಸರ್ಕಾರ: ”ಕಾಂಗ್ರೆಸ್ ಸರ್ಕಾರ ಜನರ ಕಿವಿಗೆ ಹೂವು ಇಡುವ ಕಾರ್ಯ ಮಾಡುತ್ತಿದೆ” ಎಂದು ಬಿಜೆಪಿ ಶಾಸಕ ಬಿ.ವೈ. ವಿಜಯೇಂದ್ರ ಇತ್ತೀಚೆಗೆ ಬೆಂಗಳೂರಿನಲ್ಲಿ ಸರ್ಕಾರದ ವಿರುದ್ಧ ಕಿಡಿಕಾರಿದ್ದರು. ಕಾಂಗ್ರೆಸ್ ಸರ್ಕಾರ ಪಡಿತರ ಅಕ್ಕಿಗೆ ಬದಲಾಗಿ ಹಣ ನೀಡಲು ತೀರ್ಮಾನ ಮಾಡುತ್ತಿದೆ. ಸರ್ಕಾರ ನೀಡಬೇಕಿರೋದು ಹತ್ತು ಕೆಜಿ ಪಡಿತರ ಅಕ್ಕಿ. ಆದ್ರೆ ನೀವು ಐದು ಕೆಜಿ ಕೊಡುತ್ತೇವೆ ಎಂದು ಈ ಹಿಂದೆ ಹೇಳಿರಲಿಲ್ಲ‌. ಕೇಂದ್ರ ಸರ್ಕಾರವು ಈಗಾಗಲೇ ಐದು ಕೆಜಿ ಅಕ್ಕಿ ಕೊಡುತ್ತಿದೆ‌. ನೀವು ಕೊಡಬೇಕಾಗಿರುವುದು ಹತ್ತು ಕೆಜಿ ಅಕ್ಕಿಗೆ ಮಾರ್ಕೆಟ್‌ನಲ್ಲಿ ಕನಿಷ್ಠ ಬೆಲೆ 45 ರೂ. ಇದೆ. 34 ರೂ.ಗೆ ಇವರು ಅಕ್ಕಿಯನ್ನು ತಂದು ಕೊಡಲಿ ನೋಡೊಣ. 10 ಕೆಜಿಯಲ್ಲಿ ಪ್ರತಿ ಕೆಜಿಗೆ 45 ರೂ. ಕೊಡಬೇಕು” ಎಂದು ಒತ್ತಾಯಿಸಿದ್ದರು.


Spread the love

About Laxminews 24x7

Check Also

ಸರ್ಕಾರಿ ಶಾಲೆಗಳನ್ನು ಉಳಿಸಿ-ಬೆಳೆಸಿ : ಜಿಲ್ಲಾಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ

Spread the love ಸರ್ಕಾರಿ ಶಾಲೆಗಳನ್ನು ಉಳಿಸಿ-ಬೆಳೆಸಿ : ಜಿಲ್ಲಾಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಕೊಳವಿ ಗ್ರಾಮದ ನಮ್ಮೂರ ಸರಕಾರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ