Breaking News

ರೈಲು ದುರಂತ ಸಂತ್ರಸ್ತರಿಗೆ ₹10 ಕೋಟಿ ಕೊಡುವೆ, ಸ್ವೀಕರಿಸಿ; ಜೈಲಿನಿಂದಲೇ ಸರ್ಕಾರಕ್ಕೆ ಪತ್ರ ಬರೆದ ಸುಕೇಶ್ ಚಂದ್ರಶೇಖರ್‌!

Spread the love

ನವದೆಹಲಿ: ಭಾರತೀಯ ರೈಲ್ವೆ ಇತಿಹಾಸದಲ್ಲೇ ಅತಿದೊಡ್ಡ ಅಪಘಾತಗಳಲ್ಲಿ ಒಂದಾದ ಒಡಿಶಾ ರೈಲು ದುರಂತದ ಸಂತ್ರಸ್ತರಿಗೆ ನೆರವಾಗಲು ಬಹುಕೋಟಿ ರೂಪಾಯಿ ವಂಚಿಸಿದ ಗಂಭೀರ ಆರೋಪ ಎದುರಿಸುತ್ತಿರುವ ಸುಕೇಶ್ ಚಂದ್ರಶೇಖರ್ ಮುಂದೆ ಬಂದಿದ್ದಾನೆ.

ದುರಂತದಲ್ಲಿ ಮೃತಪಟ್ಟವರ ಮಕ್ಕಳು ಭವಿಷ್ಯಕ್ಕಾಗಿ ದೇಣಿಗೆಯಾಗಿ 10 ಕೋಟಿ ರೂಪಾಯಿ ನೀಡಲು ಬಯಸಿದ್ದು, ಸ್ವೀಕರಿಸುವಂತೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಜೈಲಿನಿಂದಲೇ ಶುಕ್ರವಾರ ಪತ್ರ ಬರೆದಿದ್ದಾನೆ.

ಜೂನ್​ 2ರಂದು ಒಡಿಶಾದ ಬಾಲಸೋರ್​ ಜಿಲ್ಲೆಯಲ್ಲಿ ಮೂರು ರೈಲುಗಳ ಅಪಘಾತದಲ್ಲಿ ಇದುವರೆಗೆ 288 ಮಂದಿ ಮೃತಪಟ್ಟಿದ್ದಾರೆ. ಒಂದು ಸಾವಿರಕ್ಕೂ ಅಧಿಕ ಜನರು ಗಾಯಗೊಂಡಿದ್ದರು. ಸಂತ್ರಸ್ತರಿಗೆ ಕೇಂದ್ರ ಸರ್ಕಾರ, ರೈಲ್ವೆ ಇಲಾಖೆ ಹಾಗೂ ಒಡಿಶಾ, ತಮಿಳುನಾಡು, ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶದ ಸರ್ಕಾರಗಳು ತಮ್ಮ ರಾಜ್ಯಗಳ ಮೃತರ ಕುಟುಂಬಗಳಿಗೆ ಪರಿಹಾರ ಘೋಷಿಸಿವೆ. ಅಲ್ಲದೇ, ಖ್ಯಾತ ಉದ್ಯಮಿ ಗೌತಮ್ ಅದಾನಿ ಹಾಗೂ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಸಹ ಸಂತ್ರಸ್ತರ ಮಕ್ಕಳಿಗೆ ಸಹಾಯಹಸ್ತ ಚಾಚುವುದಾಗಿ ಪ್ರಕಟಿಸಿದ್ದಾರೆ. ಇದೀಗ ಅಕ್ರಮ ಹಣ ವರ್ಗಾವಣೆ ಹಾಗೂ ವಂಚನೆ ಆರೋಪವನ್ನು ಎದುರಿಸುತ್ತಿರುವ ಸುಕೇಶ್ ಚಂದ್ರಶೇಖರ್ ಸಹ ಸಂತ್ರಸ್ತರ ಕುಟುಂಬಸ್ಥರಿಗೆ ನೆರವು ನೀಡುವುದಾಗಿ ಹೇಳಿಕೊಂಡಿದ್ದಾನೆ.

 ರೈಲ್ವೆ ಸಚಿವರಿಗೆ ಸುಕೇಶ್ ಚಂದ್ರಶೇಖರ್ ಪರ ವಕೀಲರು ಬರೆದ ಪತ್ರಈ ಬಗ್ಗೆ ಸದ್ಯ ತಾನಿರುವ ಮಂಡೋಲಿ ಜೈಲಿನಿಂದಲೇ ಪತ್ರ ಬರೆದಿದ್ದು, “ಹೇಳಲಾದ ದೇಣಿಗೆಯು ನನ್ನ ವೈಯಕ್ತಿಕ ನಿಧಿಯಿಂದ ಬಂದಿದೆ. ಅದು ನನ್ನ ಕಾನೂನುಬದ್ಧ ಗಳಿಕೆಯ ಮೂಲದಿಂದ ಬಂದಿದೆ, ಅದು ಸಂಪೂರ್ಣವಾಗಿ ತೆರಿಗೆಯಾಗಿದೆ. ರಿಟರ್ನ್ಸ್ ಫೈಲಿಂಗ್‌ಗಳ ಜೊತೆಗೆ ದಾಖಲೆಗಳನ್ನು 10 ಕೋಟಿ ರೂ.ಗಳ ಡಿಮ್ಯಾಂಡ್ ಡ್ರಾಫ್ಟ್‌ ಮಾಡಲು ಅನುಮತಿಸಬೇಕೆಂದು ಕೇಳಿಕೊಂಡಿದ್ದಾನೆ.


Spread the love

About Laxminews 24x7

Check Also

ಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ!

Spread the loveಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ