Breaking News

Daily Archives: ನವೆಂಬರ್ 6, 2026

ʻವೋಟ್ ಬಚಾವೋ, ದೇಶ್ ಬಚಾವೋʼ ಅಭಿಯಾನಕ್ಕೆ ಕಾಂಗ್ರೆಸ್ ರಣಕಹಳೆ

ಗದಗ: ಮತದಾನದ ಹಕ್ಕಿನ ರಕ್ಷಣೆ ಹಾಗೂ ಮತದಾರರ ಪಟ್ಟಿಯಲ್ಲಿನ ಅಕ್ರಮಗಳನ್ನು ಖಂಡಿಸಿ ಗದಗದಲ್ಲಿ (Gadag) ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ನಗರದ ಗಾಂಧಿ ಸರ್ಕಲ್‌ನಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಸಮಾವೇಶದಲ್ಲಿ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು. ಮತದಾರರ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದ ಕಾಂಗ್ರೆಸ್ ನಾಯಕರು, ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ದೇಶದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಯುತ್ತಿದೆ ಎಂದು ಕೇಂದ್ರ ಸರ್ಕಾರದ …

Read More »

ರೈತರಿಗೆ ದೀಪಾವಳಿ ಗಿಫ್ಟ್‌ – 2,500 ರೂ. ಇದ್ದ ಪರಿಹಾರದ ಮೊತ್ತ 5,000 ರೂ.ಗೆ ಹೆಚ್ಚಳ

ಬೆಂಗಳೂರು: ದೀಪಾವಳಿ ಹೊತ್ತಿನಲ್ಲೇ ರಾಜ್ಯದ ರೈತರಿಗೆ ಸಿಎಂ ಡಿಕೆ ಶಿವಕುಮಾರ್‌  ಬಂಪರ್‌ ಉಡುಗೊರೆ ನೀಡಿದ್ದಾರೆ. ಈ ಹಿಂದೆ 2,500 ರೂ. ಇದ್ದ ಬರ ಪರಿಹಾರದ ಮೊತ್ತವನ್ನ 5,000 ರೂ.ಗೆ ಹೆಚ್ಚಿಸಿರುವುದಾಗಿ ಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದಾರೆ. ಯಾದಗಿರಿ ಜಿಲ್ಲೆಯ ರೈತರ ಖಾತೆಗೆ  ಹಣ ಜಮೆ ಮಾಡುವ ಮೂಲಕ ಬರ ಪರಿಹಾರ ವಿರಣೆಗೆ ಸಿಎಂ ಚಾಲನೆ ನೀಡಿದರು. ಬಟನ್ ಕ್ಲಿಕ್ ಮಾಡುವ ಮೂಲಕ ರೈತರ ಖಾತೆಗೆ ಡಿಬಿಟಿ ಹಣ ಪಾವತಿಗೆ ಚಾಲನೆ ನೀಡಿದರು. …

Read More »

ಮೆಜೆಸ್ಟಿಕ್‌ನಲ್ಲಿ ಭಿಕ್ಷೆ ಬೇಡಿ ಬಿಜೆಪಿ ಪ್ರತಿಭಟನೆ – ಬಸ್ ಟಿಕೆಟ್ ದರ ಏರಿಕೆಗೆ ತೀವ್ರ ಆಕ್ರೋಶ

ಬೆಂಗಳೂರು: ರಾಜ್ಯ ಸರ್ಕಾರದ ಬಸ್‌ ದರ ಏರಿಕೆಯನ್ನು ಖಂಡಿಸಿ ಬಿಜೆಪಿ ನಾಯಕರು ಇಂದು ಮೆಜೆಸ್ಟಿಕ್‌ನಲ್ಲಿ (Majestic) ವಿಭಿನ್ನವಾಗಿ ಪ್ರತಿಭಟನೆ ನಡೆಸಿದರು. ಪಕ್ಷದ ಕಾರ್ಯಕರ್ತರು ಭಿಕ್ಷೆ ಬೇಡುವ ಮೂಲಕ ಬೆಲೆ ಏರಿಕೆ ಕುರಿತು ಆಕ್ರೋಶ ಹೊರಹಾಕಿದರು. ಪ್ರತಿಭಟನೆಯ ನೇತೃತ್ವವನ್ನು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಛಲವಾದಿ ನಾರಾಯಣಸ್ವಾಮಿ, ಶಾಸಕ ಎಸ್. ರಘು, ಸಂಸದರಾದ ಪಿ.ಸಿ. ಮೋಹನ್ ಮತ್ತು ಬ್ರಿಜೇಶ್ ಚೌಟ ಹಾಗೂ ನಾಯಕ ಅರವಿಂದ್ ಬೆಲ್ಲದ್ ವಹಿಸಿದ್ದರು. ಕೆಎಸ್‌ಆರ್‌ಟಿಸಿ …

Read More »

ಚನ್ನಪಟ್ಟಣದ ಸುಳ್ಳೇರಿಯಲ್ಲಿ ಚಿರತೆ ಪ್ರತ್ಯಕ್ಷ – ಸಿಸಿಟಿವಿಯಲ್ಲಿ ದೃಶ್ಯ ಸೆರೆ, ಗ್ರಾಮಸ್ಥರಲ್ಲಿ ಆತಂಕ

ರಾಮನಗರ: ಚನ್ನಪಟ್ಟಣ  ತಾಲೂಕಿನಲ್ಲಿ ಚಿರತೆ  ಹಾವಳಿ ಮುಂದುವರಿದಿದೆ. ತಾಲೂಕಿನ ಸುಳ್ಳೇರಿ ಗ್ರಾಮದ ಜನವಸತಿ ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಸಾರ್ವಜನಿಕರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಗ್ರಾಮದ ನಿವಾಸಿ ಮುತ್ತುರಾಜು ಎಂಬವರ ಮನೆಯ ಬಳಿ ತಡರಾತ್ರಿ ಚಿರತೆಯೊಂದು ಓಡಾಡುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಜನವಸತಿ ಪ್ರದೇಶದಲ್ಲೇ ಚಿರತೆ ಪ್ರತ್ಯಕ್ಷಗೊಂಡಿರುವುದರಿಂದ ಗ್ರಾಮಸ್ಥರು ರಾತ್ರಿ ವೇಳೆ ಹೊರಬರಲು ಹೆದರುವಂತಾಗಿದೆ. ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುಳ್ಳೇರಿ …

Read More »

ಭಾರತದಲ್ಲಿ ಮೊದಲ ದಿನ 77.50 ಕೋಟಿ ಕಲೆಕ್ಷನ್‌ ಮಾಡಿದ ‘ರಾಮಾಯಣ’ – ಕರ್ನಾಟಕದಲ್ಲಿ ಗಳಿಸಿದ್ದೆಷ್ಟು?

ಯಶ್‌ ನಟನೆಯ ‘ರಾಮಾಯಣ’ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದೆ. ಭಾರತದಲ್ಲಿ ಸಿನಿಮಾ ಮೊದಲ ದಿನ 77.50 ಕೋಟಿ ಗಳಿಸಿದೆ. ಸ್ಯಾಕ್ನ್ಲಿಲ್ಕ್ ವರದಿ ಪ್ರಕಾರ, ಭಾರತದಲ್ಲಿ ಸಿನಿಮಾ ಅಂದಾಜು 77.50 ಕೋಟಿ ರೂಪಾಯಿ ಮೊದಲ ದಿನದ ಕಲೆಕ್ಷನ್‌ ಆಗಿದೆ. ವಿದೇಶಿ ಗಳಿಕೆ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಭಾರತದಾದ್ಯಂತ ಮೊದಲ ದಿನ‌ 25,25,775 ಟಿಕೆಟ್ ಅಂದಾಜು ಸೇಲ್ ಆಗಿದೆ. ಹಿಂದಿ ಬೆಲ್ಟ್‌ನಲ್ಲಿ ಸಿನಿಮಾ ರೋಚಕ ಕಲೆಕ್ಷನ್‌ ಮಾಡಿದೆ. ವಿದೇಶಗಳಲ್ಲಿ ಭಾರೀ ಸಂಖ್ಯೆಯ ಥಿಯೇಟರ್‌ನಲ್ಲಿ ರಾಮಾಯಣ …

Read More »

ಸಿಎಂ ಎದುರಲ್ಲೇ ಸರ್ಕಾರಿ ಶಾಲೆಗಳ ಅವ್ಯವಸ್ಥೆ ಬಿಚ್ಚಿಟ್ಟ ಪುತ್ರಿ:ಶಿಕ್ಷಕರ ಕಾರ್ಯವೈಖರಿಗೆ ಐಶ್ವರ್ಯಾ ಹೆಗ್ಡೆ ಅಸಮಾಧಾನ

ಬೆಂಗಳೂರಿನಲ್ಲಿ ನಡೆದ ‘ನಮ್ಮ ಶಾಲೆ ನಮ್ಮ ಜವಾಬ್ದಾರಿ’ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಮ್ಮುಖದಲ್ಲೇ ಪುತ್ರಿ ಐಶ್ವರ್ಯಾ ಹೆಗ್ಡೆ ಸರ್ಕಾರಿ ಶಾಲೆಗಳ ಸ್ಥಿತಿಗತಿಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಪ್ರಮುಖರಾಗಿ ವೇದಿಕೆಯಲ್ಲಿ ಭಾಗವಹಿಸಿದ್ದ ಅವರು, ಸರ್ಕಾರಿ ಶಾಲೆಗಳಲ್ಲಿನ ಸಮಸ್ಯೆಗಳನ್ನು ಎತ್ತಿ ತೋರಿಸುವುದರ ಜೊತೆಗೆ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಸರ್ಕಾರಕ್ಕೆ ಹಲವು ಸಲಹೆಗಳನ್ನು ನೀಡಿದ್ದಾರೆ. ನ್ಯಾಷನಲ್ ಎಜುಕೇಷನ್ ಫೌಂಡೇಶನ್‌ನ ಟ್ರಸ್ಟಿ ಕಾರ್ಯದರ್ಶಿಯೂ ಆಗಿರುವ ಐಶ್ವರ್ಯಾ …

Read More »

ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿ ಹಂಚಿಕೆ: ಕಾನೂನು ಕ್ರಮದ ಎಚ್ಚರಿಕೆ

ಬೆಳಗಾವಿ: ಕಬ್ಬು ಬೆಳೆಗಾರರ ಪ್ರತಿಭಟನೆ ಹಿನ್ನೆಲೆಯಲ್ಲಿ ರಸ್ತೆ ತಡೆ, ಧರಣಿ ಇತ್ಯಾದಿ ನಿರ್ಬಂಧಿಸಿ ಈಗಾಗಲೇ ಬೆಳಗಾವಿ ಕಮೀಷನರೇಟ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಹೊರಡಿಸಲಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಕೆಲ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿ, ಪ್ರಚೋದನಾಕಾರಿ ಪೋಸ್ಟ್ ಗಳನ್ನು ಹಂಚಿಕೊಳ್ಳುತ್ತಿರುವುದು ಕಂಡುಬಂದಿದೆ. ಈ ರೀತಿಯ ತಪ್ಪು ಮಾಹಿತಿಯನ್ನು ಹಾಗೂ ಪ್ರಚೋದನಕಾರಿ ವಿಡಿಯೋಗಳನ್ನು ಪೋಸ್ಟ್ ಮಾಡುವ ವ್ಯಕ್ತಿಗಳ ವಿರುದ್ಧ ನಿಯಮಾನುಸಾರ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

Read More »

ಬೆಲೆ ಏರಿಕೆ ಕೂಡಲೇ ಹಿಂಪಡೆಯಲಿ: ಕಿರಣ ಜಾಧವ ಆಗ್ರಹ

ಬೆಳಗಾವಿ: ಹಾಲು, ಮೊಸರು, ಬಸ್ ಟಿಕೆಟ್ ಸೇರಿದಂತೆ ಅಗತ್ಯ ವಸ್ತುಗಳು ಹಾಗೂ ಸೇವೆಗಳ ಬೆಲೆ ಏರಿಕೆಯನ್ನು ರಾಜ್ಯ ಸರಕಾರ ಕೂಡಲೇ ಹಿಂಪಡೆಯಬೇಕು. ಜನಸಾಮಾನ್ಯರ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿ, ಸಂಕಷ್ಟದಲ್ಲಿರುವ ಜನರ ನೆರವಿಗೆ ಧಾವಿಸಬೇಕು ಎಂದು ಬಿಜೆಪಿ ಮುಖಂಡ ಕಿರಣ ಜಾಧವ ಆಗ್ರಹಿಸಿದ್ದಾರೆ. ರಾಜ್ಯದ ಕಾಂಗ್ರೆಸ್ ಸರಕಾರ ಅಗತ್ಯ ವಸ್ತುಗಳು ಹಾಗೂ ಸಾರಿಗೆ ಸೇವೆಗಳ ದರ ಹೆಚ್ಚಿಸುವ ಮೂಲಕ ಜನಸಾಮಾನ್ಯರ ಬದುಕನ್ನು ಮತ್ತಷ್ಟು ದುಸ್ತರಗೊಳಿಸಿದೆ. ಈಗಾಗಲೇ ಆರ್ಥಿಕ ಸಂಕಷ್ಟದಿಂದ …

Read More »

ಬೆಳಗಾವಿಯ ಡಾ. ಸ್ಮಿತಾ ಸುರೇಬಾನ್ಕರ್ ಅವರಿಗೆ ₹1 ಲಕ್ಷ ಮೊತ್ತದ ‘ಇತಿಹಾಸ ಸಾಂಸ್ಕೃತಿಕ ಶ್ರೀ’ ಪ್ರಶಸ್ತಿ

ಬೆಳಗಾವಿ: ಇತಿಹಾಸ ಸಂಶೋಧನೆ, ಸಂಸ್ಕೃತಿ ಮತ್ತು ಪರಂಪರೆಯ ಸಂರಕ್ಷಣೆಯಲ್ಲಿ ಮಹತ್ವದ ಕೊಡುಗೆ ನೀಡಿರುವ ಬೆಳಗಾವಿಯ ಹಿರಿಯ ಸಂಶೋಧಕಿ ಹಾಗೂ ಆರ್.ಪಿ.ಡಿ. ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಡಾ. ಸ್ಮಿತಾ ಸುರೇಬಾನ್ಕರ್ ಅವರಿಗೆ ಕರ್ನಾಟಕ ಇತಿಹಾಸ ಅಕಾಡೆಮಿಯ ಪ್ರತಿಷ್ಠಿತ ‘ಇತಿಹಾಸ ಸಾಂಸ್ಕೃತಿಕ ಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಭಾಲ್ಕಿ ತಾಲ್ಲೂಕಿನ ಕರಡ್ಯಾಳದ ಶ್ರೀ ಚನ್ನಬಸವೇಶ್ವರ ಗುರುಕುಲ ಅನುಭವ ಮಂಟಪದಲ್ಲಿ ಶುಕ್ರವಾರ ನಡೆದ ಕರ್ನಾಟಕ ಇತಿಹಾಸ ಅಕಾಡೆಮಿಯ 40ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಪುರಾಲೇಖ ತಜ್ಞ …

Read More »

ಕಬ್ಬು ಬೆಳೆಗಾರರ ಹೋರಾಟ ತಾತ್ಕಾಲಿಕ ವಾಪಸ್: ನಾಳೆಯಿಂದ ಸಕ್ಕರೆ ಕಾರ್ಖಾನೆ ಆರಂಭ: ಚುನಪ್ಪ ಪೂಜಾರಿ

ಬೆಳಗಾವಿ: ಕಬ್ಬಿನ ದರ ನಿಗದಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ನಡೆಸುತ್ತಿದ್ದ ಹೋರಾಟವನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ ಎಂದು ರೈತ ಮುಖಂಡ ಚೂನಪ್ಪ ಪೂಜಾರಿ ಘೋಷಿಸಿದ್ದಾರೆ. ಪೊಲೀಸರ ವಶದಿಂದ ಬಿಡುಗಡೆಯಾದ ಬಳಿಕ ಬೆಳಗಾವಿಯ ಪೊಲೀಸ್ ಕ್ವಾರ್ಟರ್ಸ್‌ನ ವೀರಭದ್ರ ದೇವಸ್ಥಾನದಲ್ಲಿ ಮಾತನಾಡಿದ ಅವರು, ಸಕ್ಕರೆ ಕಾರ್ಖಾನೆಗಳು ನಾಳೆಯಿಂದ ಕಾರ್ಯಾರಂಭ ಮಾಡಲಿದ್ದು, ಯಾವುದೇ ರೈತರು ಕಾರ್ಖಾನೆಗಳ ಆರಂಭಕ್ಕೆ ಅಡ್ಡಿಪಡಿಸಬಾರದು ಎಂದು ಮನವಿ ಮಾಡಿದರು. ಗುರ್ಲಾಪುರದಲ್ಲಿಯೂ ಹೋರಾಟವನ್ನು ಹಿಂಪಡೆಯಲಾಗಿದ್ದು, ನಾಳೆ ಅಲ್ಲಿ ರೈತರೆಲ್ಲರೂ …

Read More »