Breaking News

Daily Archives: ಜುಲೈ 18, 2026

ಶಿಕ್ಷಕರಿಂದ ಹಲ್ಲೆ ವಿದ್ಯಾರ್ಥಿ ಆತ್ಮಹತ್ಯೆಗೆ ಯತ್ನ

ಬೆಂಗಳೂರು: ಖಾಸಗಿ ಶಾಲೆಯಲ್ಲಿ ಏಳನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ, ವಿದ್ಯಾರ್ಥಿ ಪೋಷಕರು ನೀಡಿದ ದೂರಿನ ಮೇರೆಗೆ ಪೊಲೀಸರು ನಡೆಸಿದ ತನಿಖೆ ವೇಳೆ ಶಾಲೆಯ ಪ್ರಾಂಶುಪಾಲರು ಹಾಗೂ ಶಿಕ್ಷಕರ ಹಲ್ಲೆ ನಡೆಸಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ವಿದ್ಯಾರ್ಥಿ ತಂದೆ, ಚಿಕ್ಕಬಸ್ತಿಯ ರಾಮಸಂದ್ರ ನಿವಾಸಿ ಮಹೇಶ್ ಕುಮಾರ್ ಎಂಬುವರು ನೀಡಿದ ದೂರಿನ ಮೇರೆಗೆ ಜ್ಞಾನಭಾರತಿ ಠಾಣೆ ಪೊಲೀಸರು ಮರಿಯಪ್ಪನಪಾಳ್ಯದಲ್ಲಿನ ಸೇಂಟ್ ಫಿಲೋಮಿನ ಶಾಲೆ ಆಡಳಿತ ಮಂಡಳಿ ಸಂಸ್ಥಾಪಕ ಕಾರ್ಯದರ್ಶಿ ರಂಗಸ್ವಾಮಿ, ಪ್ರಾಂಶುಪಾಲ …

Read More »

ಬೆಳಗಾವಿಯಲ್ಲಿ ಸಹೋದರರ ಭೀಕರ ಕೊಲೆ

ಬೆಳಗಾವಿ: ಕೌಟುಂಬಿಕ ವಿಚಾರಕ್ಕೆ ಸಂಬಂಧಿಸಿದ ಕ್ಷುಲ್ಲಕ ಕಾರಣದ ಜಗಳವೊಂದು ಇಬ್ಬರು ಸಹೋದರರ ಭೀಕರ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ನುಗ್ಗಾನಟ್ಟಿ ಗ್ರಾಮದಲ್ಲಿ ನಡೆದಿದೆ. ಲಗಮಪ್ಪ ರಾಮಣ್ಣವರ (32) ಹಾಗೂ ಬಸಪ್ಪ ರಾಮಣ್ಣವರ (38) ಕೊಲೆಯಾದ ದುರ್ದೈವಿ ಸಹೋದರರು. ಮೃತ ಸಹೋದರರು ಹಾಗೂ ಅವರ ಸಂಬಂಧಿಕರ ನಡುವೆ ಕೌಟುಂಬಿಕ ವಿಚಾರವಾಗಿ ಜಗಳ ಆರಂಭವಾಗಿದೆ.  ಮಾತಿನ ಚಕಮಕಿಯಾಗಿದ್ದ ವಾಗ್ವಾದ, ಕ್ಷಣಾರ್ಧದಲ್ಲೇ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ವೇಳೆ ಉದ್ರಿಕ್ತಗೊಂಡ …

Read More »

ಅರಿವು ಮೂಡಿಸಿ ಸೂಕ್ತ ಚಿಕಿತ್ಸೆ ಕೊಡಿಸುವಲ್ಲಿ ಪಿಆರ್‌ಗಳ ಪಾತ್ರ ಪ್ರಮುಖ: ಡಾ. ಕರ್ನಲ್‌ ಎಂ ದಯಾನಂದ

ಬೆಳಗಾವಿ: ಆಸ್ಪತ್ರೆಯಲ್ಲಿ ಕೆಲಸ ಮಾಡುವಾಗ ಹಲವಾರು ಸಮಸ್ಯೆಗಳು, ಒತ್ತಡಗಳು, ಅಸಮಾಧಾನಗಳು, ಬೇಡಿಕೆಗಳಿರುತ್ತವೆ. ಆದರೆ ಅವುಗಳನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಜನಸಂಪರ್ಕ ಅಧಿಕಾರಿಗಳು ನಿಸ್ಸಿಮರು. ಅವರು ಆಸ್ಪತ್ರೆಯಲ್ಲಿದ್ದರೂ, ಇಲ್ಲದಿದ್ದರೂ ಕೆಲಸದ ಮಹತ್ವ ಒಂದೇ ಆಗಿರುತ್ತದೆ. ಆಸ್ಪತ್ರೆಗಳ ಬಗ್ಗೆ ಜನರ ಮನೋಭಾವ ಸ್ವಲ್ಪ ನಕಾರಾತ್ಮಕವಾಗಿದ್ದು, ಹಣ ಹೆಚ್ಚು ಖರ್ಚಾಗುತ್ತದೆ ಎಂಬ ಭಾವನೆ.  ಅದನ್ನು ಹೋಗಲಾಡಿಸಿ ಜನರಿಗೆ ಅರಿವು ಮೂಡಿಸಿ ಸೂಕ್ತ ಚಿಕಿತ್ಸೆ ಕೊಡಿಸುವಲ್ಲಿ ಜನಸಂಪರ್ಕ ಅಧಿಕಾರಿಗಳು ಪ್ರಮುಖ ಪಾತ್ರವಹಿಸುತ್ತಾರೆ ಎಂದು ಕೆಎಲ್‌ಇ ಸಂಸ್ಥೆಯ ಡಾ. …

Read More »

ಪಿಜಿ ಕೋರ್ಸ್‌ಗಳ ಪ್ರವೇಶ ದಿನಾಂಕ ವಿಸ್ತರಿಸಿದ ಆರ್‌ಸಿಯು

ಬೆಳಗಾವಿ: ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಬೆಳಗಾವಿ ಮುಖ್ಯ ಆವರಣದ ಸ್ನಾತಕೋತ್ತರ ಅಧ್ಯಯನ ವಿಭಾಗಗಳು, ಸ್ನಾತಕೋತ್ತರ ಕೇಂದ್ರ ವಿಜಯಪುರ ಹಾಗೂ ಬೆಳಗಾವಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿನ ಸಂಯೋಜಿತ ಮಹಾವಿದ್ಯಾಲಯಗಳಲ್ಲಿ 2026-27ನೇ ಶೈಕ್ಷಣಿಕ ಸಾಲಿನಲ್ಲಿ ಲಭ್ಯವಿರುವ ಸ್ನಾತಕೋತ್ತರ ಕೋರ್ಸುಗಳ ವ್ಯಾಸಂಗಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಯು.ಯು.ಸಿ.ಎಂ.ಎಸ್ ತಂತ್ರಾಂಶ (UUCMS) https://uucms.karnataka.gov.in. ಮೂಲಕ ಅರ್ಜಿಗಳನ್ನು ದಿನಾಂಕ: 01-07-2026 ರಿಂದ ದಿನಾಂಕ:   20-07-2026. ಆಹ್ವಾನಿಸಲಾಗಿತ್ತು. ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಠಿಯಿಂದ ಸ್ನಾತಕೋತ್ತರ ಪ್ರವೇಶಾತಿ ಅರ್ಜಿ ಸಲ್ಲಿಸುವ ದಿನಾಂಕವನ್ನು ದಿನಾಂಕ: 21-07-2026 ರಿಂದ 26-07-2026ರ ವರೆಗೆ …

Read More »

ದಾಖಲೆ ತಿದ್ದುಪಡಿ ಮಾಡಿ ರೈತರಿಗೆ ಹಸ್ತಾಂತರಿಸಿದ ನೀರಾವರಿ ನಿಗಮ: ರೈತರ ಹೋರಾಟಕ್ಕೆ ಮಣಿದ ಅಧಿಕಾರಿಗಳು

ಬೆಳಗಾವಿ: ಇಲ್ಲಿನ ಕರ್ನಾಟಕ ನೀರಾವರಿ ನಿಗಮ ನಿಯಮಿತದ ಬೆಳಗಾವಿ ಉತ್ತರ ವಲಯ ಕಚೇರಿ ಎದುರು ನಾಲ್ಕು ದಿನಗಳಿಂದ ನಡೆಸುತ್ತಿದ್ದ ಹುಕ್ಕೇರಿ ತಾಲೂಕಿನ ಮಾಸ್ತಿಹೊಳಿ ಗ್ರಾಮದ ರೈತರು ನಡೆಸುತ್ತಿದ್ದ ಅಹೋರಾತ್ರಿ ಧರಣಿ ಶುಕ್ರವಾರ ನೀರಾವರಿ ಇಲಾಖೆಯ ಅಧಿಕಾರಿಗಳು ಭರವಸೆ ನೀಡುವುದರೊಂದಿಗೆ ಅಂತ್ಯಕಂಡಿದೆ. ಹಿಡಕಲ್ ಜಲಾಶಯ ಯೋಜನೆಯಿಂದ ಭೂಮಿ ಕಳೆದುಕೊಂಡ 24 ಗ್ರಾಮಗಳ ಸಂತ್ರಸ್ತ ರೈತರು ನ್ಯಾಯಯುತ ಪರಿಹಾರ ಹಾಗೂ ದಾಖಲೆಗಳಲ್ಲಿನ ಲೋಪದೋಷಗಳನ್ನು ಸರಿಪಡಿಸುವಂತೆ ಆಗ್ರಹಿಸಿ ಜಾನುವಾರುಗಳೊಂದಿಗೆ   ಕರ್ನಾಟಕ ನೀರಾವರಿ ನಿಗಮದ …

Read More »