ಕೊಪ್ಪಳ: ತುಂಗಭದ್ರಾ ಜಲಾಶಯದ ಹೊಸ ಕ್ರಸ್ಟ್ ಗೇಟ್‌ಗಳನ್ನು ಇದೇ ಜೂನ್ 25ರಂದು ಲೋಕಾರ್ಪಣೆ ಮಾಡಲಾಗುವುದು ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ಕೊಪ್ಪಳ ತಾಲೂಕಿನ ಮುನಿರಾಬಾದ್‌ಗೆ ಭೇಟಿ ನೀಡಿ, ಜಲಾಶಯದ ಮೇಲ್ಭಾಗ ಹಾಗೂ ಕಾಯ೯ಕ್ರಮ ನಡೆಸುವ ಮೈದಾನವನ್ನು ಪರಿಶೀಲನೆ ನಡೆಸಿ, ಅಧಿಕಾರಿಗಳ ಸಭೆ ನಡೆಸಿದರು. ಬಳಿಕ ಮಾತನಾಡಿದ ಅವರು, ಹೊಸ ಕ್ರಸ್ಟ್ ಗೇಟಗಳ ಲೋಕಾಪ೯ಣೆ ಕಾಯ೯ಕ್ರಮಕ್ಕೆ ಆಂಧ್ರಪ್ರದೇಶ, ತಮಿಳುನಾಡಿನ ಮುಖ್ಯಮಂತ್ರಿಗಳು ಹಾಗೂ ರಾಜ್ಯದ ಮುಖ್ಯಮಂತ್ರಿಗಳು ಸೇರಿದಂತೆ ಸಚಿವರು ಆಗಮಿಸಲಿದ್ದಾರೆ. ಕೇಂದ್ರ ಜಲಸಂಪನ್ಮೂಲ …
Read More »Daily Archives: ಜೂನ್ 19, 2026
ಭಟ್ಕಳದಲ್ಲಿ ಲವ್ ಜಿಹಾದ್ ಆರೋಪ – ಅಪಹರಿಸಿ ಯುವತಿ ಮೇಲೆ ಲೈಂಗಿಕ ದೌರ್ಜನ್ಯ, ಯುವಕ ಅರೆಸ್ಟ್
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಕಿಚ್ಚು ಹಚ್ಚಿದ ಹಿಂದೂ, ಮುಸ್ಲಿಂ ಸಂಘರ್ಷಕ್ಕೆ ಟ್ಟಿಸ್ಟ್ ಸಿಕ್ಕಿದೆ. ಕಾರಿನಲ್ಲಿ ಅಪಹರಿಸಿ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಮುಸ್ಲಿಂ ಯುವಕನನ್ನು ಅರೆಸ್ಟ್ ಮಾಡಲಾಗಿದ್ದು, ಲವ್ ಜಿಹಾದ್ ಆರೋಪ ಕೇಳಿಬಂದಿದೆ. ಯುವತಿಯನ್ನ ಅಪಹರಿಸುವ ವೇಳೆ ಹಿಂದೂಪರ ಕಾರ್ಯಕರ್ತರು ಕಾರನ್ನು ತಡೆದು ಇಬ್ಬರನ್ನೂ ಪೊಲೀಸರಿಗೆ ಒಪ್ಪಿಸಿದ್ದರು. ಆದರೇ ಗ್ರಾಮೀಣ ಠಾಣೆ ಪೊಲೀಸರು ಹಿಂದೂ ಮುಖಂಡರ ವಿರುದ್ಧವೇ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಿಸಿದ್ದನ್ನ ವಿರೋಧಿಸಿ ಹಿಂದೂಪರ …
Read More »ಹೊಸ ಸರ್ಕಾರ ಬಂದ ಮೇಲೆ ಶಾಸಕರ ಬೆಂಬಲ ನೋಡಿ ಆಶ್ಚರ್ಯ ಆಗ್ತಿದೆ: ಡಿಕೆಶಿ
ಬೆಂಗಳೂರು: ಹೊಸ ಸರ್ಕಾರ ಬಂದ ಮೇಲೆ ನಡೆದ ಚುನಾವಣೆಯಲ್ಲಿ ಶಾಸಕರ ಬೆಂಬಲ ನೋಡಿ ಆಶ್ಚರ್ಯ ಆಗುತ್ತಿದೆ ಎಂದು ಸಿಎಂ ಡಿ.ಕೆ ಶಿವಕುಮಾರ್ ಹೇಳಿದರು. ಪರಿಷತ್ ಚುನಾವಣೆ ಫಲಿತಾಂಶದ ಬಗ್ಗೆ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಈ ವೇಳೆ, ನಮ್ಮ ಸರ್ಕಾರಕ್ಕೆ ನೀವು ಮುಂದುವರಿಯಿರಿ ಎಂದು ರಾಜ್ಯದ ಜನರ ಅಭಿಪ್ರಾಯದ ಬೆಂಬಲ ಇದಾಗಿದೆ. ನಮಗೆ ಬೇರೆ ಬೇರೆ ಪಕ್ಷದವರು ಮತ ಕೊಟ್ಟಿದ್ದಾರೆ. ಅವರ ವಿಶ್ವಾಸಕ್ಕೆ, ಭಾವನಗೆ ನಾವು ಗೌರವಿಸುತ್ತೇವೆ. ಇದು ಇಡಿ …
Read More »ಬಿಸಿಯೂಟದಲ್ಲಿ ಹಲ್ಲಿ ಬಾಲ ಪತ್ತೆ ಶಂಕೆ; 67 ಮಕ್ಕಳು ಆಸ್ಪತ್ರೆಗೆ ದಾಖಲು
ಮಂಡ್ಯ: ಶಾಲೆಯ ಬಿಸಿಯೂಟದಲ್ಲಿ ಹಲ್ಲಿ ಬಿದ್ದಿರುವ ಶಂಕೆ ವ್ಯಕ್ತವಾದ ಹಿನ್ನೆಲೆ 67 ವಿದ್ಯಾರ್ಥಿಗಳನ್ನು ಮುಂಜಾಗೃತಾ ಕ್ರಮವಾಗಿ ಆಸ್ಪತ್ರೆಗೆ ದಾಖಲಿಸಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ರಾವಣಿ ಗ್ರಾಮದಲ್ಲಿ ನಡೆದಿದೆ. ರಾವಣಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ವಿದ್ಯಾರ್ಥಿಗಳು ಮಧ್ಯಾಹ್ನದ ಬಿಸಿಯೂಟ ಸೇವಿಸುತ್ತಿದ್ದ ವೇಳೆ ಒಬ್ಬ ವಿದ್ಯಾರ್ಥಿಯ ತಟ್ಟೆಯಲ್ಲಿ ಹಲ್ಲಿ ಬಾಲದಂತಿರುವ ಪದಾರ್ಥ ಪತ್ತೆಯಾಗಿದೆ. ಇದರಿಂದ ವಿದ್ಯಾರ್ಥಿಗಳು, ಶಿಕ್ಷಕರಲ್ಲಿ ಆತಂಕ ಉಂಟಾಗಿದೆ. ತಕ್ಷಣ ಎಚ್ಚೆತ್ತ ಶಾಲಾ ಸಿಬ್ಬಂದಿ, …
Read More »ಮೊದಲ ಮಹಡಿಯಿಂದ ಬಿದ್ದು ಮಗು ದಾರುಣ ಸಾವು
ನೆಲಮಂಗಲ: ಆಟವಾಡುತ್ತಿದ್ದ ಮಗು ಮೊದಲನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ ಘಟನೆ ಬೆಂಗಳೂರು ಉತ್ತರ ತಾಲೂಕಿನ ತೋಟದಗುಡ್ಡದಹಳ್ಳಿ ಗ್ರಾಮದಲ್ಲಿ ನಡೆದಿದೆ. ಟಿ.ದಾಸರಹಳ್ಳಿ ನಿವಾಸಿ ನವೀನ್ ಕುಮಾರ್ ಹಾಗೂ ಕಾವ್ಯ ದಂಪತಿ ಪುತ್ರ ದೀಕ್ಷಿತ್ (2) ಮೃತಪಟ್ಟ ಮಗು. ಆಟವಾಡುವ ವೇಳೆ ಮೆಟ್ಟಿಲ ಮೇಲಿಂದ ಮಗು ಉರುಳಿ ಬಿದ್ದಿದೆ. ಕೂಡಲೇ ಪೋಷಕರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. 24 ಗಂಟೆಗಳ ಕಾಲ ಕೋಮಾದಲ್ಲಿದ್ದ ಮಗು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ. ನವೀನ್ ಕುಮಾರ್ ಹಾಗೂ ಕಾವ್ಯ …
Read More »ಟೋಲ್ ವಿರೋಧಿಸಿ ಜೂ.23 ರಂದು ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ
ಮಂಡ್ಯ: ರಾಜ್ಯದ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹ ವಿರೋಧಿಸಿ ಮತ್ತು ರೈತರ ವಾಹನಗಳಿಗೆ ಟೋಲ್‌ನಿಂದ ವಿನಾಯಿತಿ ನೀಡಬೇಕೆಂದು ಆಗ್ರಹಿಸಿ, ಜೂನ್ 23 ರಂದು ರಾಜ್ಯಾದ್ಯಂತ ಟೋಲ್ ಬೂತ್‌ಗಳ ಮುಂದೆ ಬೃಹತ್ ಪ್ರತಿಭಟನೆ ನಡೆಸಲು ಕರ್ನಾಟಕ ರಾಜ್ಯ ರೈತ ಸಂಘ ಕರೆ ನೀಡಿದೆ. ರಾಜ್ಯ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ಈ ಹೋರಾಟ ನಡೆಯಲಿದೆ ಎಂದು ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ. ಕಬ್ಬು, ತರಕಾರಿ ಮತ್ತು ಹಣ್ಣುಗಳನ್ನು ಸಾಗಿಸುವ ಕೃಷಿ ವಾಹನಗಳ ಮೇಲೆ …
Read More »ಜೈಲಿನಲ್ಲಿ ಪವಿತ್ರಾಗೌಡಗೆ ರಾಜಾತಿಥ್ಯ ಆರೋಪ – ಸಂಧ್ಯಾ ನಾಗರಾಜ್ ವಿರುದ್ಧ ದೂರು
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಎ1 ಆರೋಪಿ ಪವಿತ್ರಾಗೌಡ ಅವರಿಗೆ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆ ಬೆಂಗಳೂರಿನ ಸಂಧ್ಯಾ ನಾಗರಾಜ್ ವಿರುದ್ಧ ದೂರು ನೀಡಲಾಗಿದೆ. ಇತ್ತೀಚೆಗೆ ಮಾಧ್ಯಮವೊಂದರಲ್ಲಿ ಮಾತನಾಡಿದ್ದ ಸಂಧ್ಯಾ ನಾಗರಾಜ್ , ಜೈಲಿನಲ್ಲಿ ಅಧಿಕಾರಿಗಳು ಆಕೆಗೆ ಸಹಕಾರ ಕೊಡ್ತಿದ್ದಾರೆ. ಪ್ರತಿದಿನ ಬಾಕ್ಸ್‌ನಲ್ಲಿ ಊಟ ತಂದುಕೊಡ್ತಾರೆ. ಜೈಲಿನಲ್ಲಿ ರಾಜಾತಿಥ್ಯ ಪಡೆಯುತ್ತಿದ್ದಾರೆ ಎಂದು ಆರೋಪಿಸಿದ್ದರು. ಈ ಹಿಂದೆ ಜೈಲಿನಲ್ಲಿ ಇದ್ದ ಸಂಧ್ಯಾ ನಾಗರಾಜ್ …
Read More »ಹೋಟೆಲ್ ಆಂಟಿ ಜೊತೆ ಅಂಕಲ್ ಲವ್ವಿಡವ್ವಿ – ಓಡಿ ಹೋಗಿ ಮದುವೆ
ಮಂಡ್ಯ: ಹೋಟೆಲ್ ಆಂಟಿ ಜೊತೆ ಅಂಕಲ್ ಎಸ್ಕೇಪ್ ಆಗಿ ಮದುವೆಯಾಗಿರುವ ಘಟನೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಶಿಕಾರಿಪುರ ಗ್ರಾಮದಲ್ಲಿ ನಡೆದಿದೆ. ಪವಿತ್ರ, ಯೇಸುದಾಸ್ ಓಡಿ ಹೋಗಿ ಮದುವೆಯಾದ ಆಂಟಿ, ಅಂಕಲ್. ಪವಿತ್ರಗೆ ಹಲವು ವರ್ಷದ ಹಿಂದೆಯೇ ವಿಜಯ್ ಕುಮಾರ್ ಎಂಬಾತನ ಜೊತೆ ಮದುವೆಯಾಗಿತ್ತು. ಪವಿತ್ರ, ವಿಜಯ್‌ಗೆ ಎರಡು ಮಕ್ಕಳು ಸಹ ಇದ್ದಾರೆ. ಅತ್ತ ಯೇಸುದಾಸ್‌ಗೂ ಮದುವೆಯಾಗಿ ಎರಡು ಮಕ್ಕಳಿದ್ದಾರೆ. ಹೋಟೆಲ್ ನಡೆಸುತ್ತಿದ್ದ ಪವಿತ್ರ ಜೊತೆ ಊಟಕ್ಕೆಂದು ಬರುತ್ತಿದ್ದ ಯೇಸುದಾಸ್ …
Read More »ನೀಟ್ ಮರು ಪರೀಕ್ಷೆ ಹಿನ್ನೆಲೆ ಟೆಲಿಗ್ರಾಂ ನಿಷೇಧ; ಆದೇಶ ಕಾಯ್ದಿರಿಸಿದ ದೆಹಲಿ ಹೈಕೋರ್ಟ್
ನವದೆಹಲಿ: ಜೂನ್ 21 ರಂದು ನಡೆಯಲಿರುವ ನೀಟ್ ಮರು ಪರೀಕ್ಷೆಗೆ ಮುನ್ನ ಪತ್ರಿಕೆ ಸೋರಿಕೆಯನ್ನು ತಡೆಗಟ್ಟಲು ಜೂನ್ 22 ರವರೆಗೆ ಭಾರತದಲ್ಲಿ ಟೆಲಿಗ್ರಾಂ ಆ್ಯಪ್ ಅನ್ನು ತಾತ್ಕಾಲಿಕವಾಗಿ ನಿರ್ಬಂಧಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ. ವಿಚಾರಣೆಯ ಸಮಯದಲ್ಲಿ, ನ್ಯಾಯಮೂರ್ತಿ ತೇಜಸ್ ಕರಿಯಾ ಅವರು, ನೀಟ್ ಆಕಾಂಕ್ಷಿಗಳು ಪರೀಕ್ಷೆಗೆ ಹಾಜರಾಗುತ್ತಿದ್ದಾರೆ ಎಂಬ ಕಾರಣಕ್ಕಾಗಿ 150 ಮಿಲಿಯನ್ ಬಳಕೆದಾರರ ಹಕ್ಕುಗಳನ್ನು ನಿರ್ಬಂಧಿಸಬಹುದೇ …
Read More »ಸ್ವಯಂಘೋಷಿತ ದೇವಮಾನವನಿಂದ ಮಹಿಳೆಗೆ ಲೈಂಗಿಕ ಕಿರುಕುಳ – ಮೂತ್ರ ಕುಡಿಸಿ ಚಿತ್ರಹಿಂಸೆ, 8 ಮಂದಿ ಅರೆಸ್ಟ್
ಮುಂಬೈ: ಸ್ವಯಂಘೋಷಿತ ದೇವಮಾನವನೊಬ್ಬ ನಂಬಿಸಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ತನ್ನ ಮೂತ್ರ ಕುಡಿಸಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ನಾನು ದೇವರ ಅವತಾರ ಎಂದು ನಂಬಿಸಿದ್ದ ರಾಧೇಶ್ಯಾಮ್ ಮಿಶ್ರಾ ಅಲಿಯಾಸ್ ರಾಧಾಮೋಹನ್ ಮಿಶ್ರಾ ಹಾಗೂ ಆತನ ಏಳು ಮಂದಿ ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ. ರಾಧೇಶ್ಯಾಮ್ ಮಿಶ್ರಾ ಪುಣೆಯ ವಾಗೋಲಿ ಸಮೀಪದ ಉಬಾಲೆ ನಗರದಲ್ಲಿ ಮಾಡರ್ನ್ ಗುರುಕುಲ ಎಂಬ ಹೆಸರಿನಲ್ಲಿ ಆಶ್ರಮ ನಡೆಸುತ್ತಿದ್ದು, ಕಳೆದ ಹಲವು ವರ್ಷಗಳಿಂದ ಜನರಿಗೆ …
Read More »
Laxmi News 24×7