ಕಲಬುರಗಿ: ನಗರದ ಎಸ್‌ಪಿ ಕಚೇರಿ ಸಮೀಪದಲ್ಲಿರುವ ಸರ್ಕಾರಿ ಪದವಿಪೂರ್ವ ಬಾಲಕಿಯರ ಕಾಲೇಜಿನಲ್ಲಿ ತರಗತಿ ನಡೆಯುತ್ತಿದ್ದ ವೇಳೆ ಮೇಲ್ಛಾವಣಿಯ ಸಿಮೆಂಟ್ ಪದರು ಏಕಾಏಕಿ ಕುಸಿದು ಬಿದ್ದ ಪರಿಣಾಮ ಐವರು ವಿದ್ಯಾರ್ಥಿನಿಯರು ಗಾಯಗೊಂಡಿರುವ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ. ಕಾಲೇಜಿನ ಪ್ರಥಮ ಪಿಯುಸಿ ಕಾಮರ್ಸ್ ತರಗತಿ ನಡೆಯುತ್ತಿದ್ದ ವೇಳೆ ಈ ಅವಘಡ ಸಂಭವಿಸಿದ್ದು, ಆ ಸಮಯದಲ್ಲಿ ತರಗತಿಯಲ್ಲಿ 80ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಪಾಠ ಆಲಿಸುತ್ತಿದ್ದರು. ಇದೇ ವೇಳೆ ಮೇಲ್ಛಾವಣಿಯ ಸಿಮೆಂಟ್ ಹೆಪ್ಪುಗಟ್ಟಿದ ಭಾಗಗಳು ವಿದ್ಯಾರ್ಥಿನಿಯರ …
Read More »Daily Archives: ಜೂನ್ 13, 2026
ಬೆಳಗಾವಿ ವ್ಯಾಪಾರೋದ್ಯಮಗಳ ವಿದ್ಯುತ್ ಸಮಸ್ಯೆಗೆ ಶೀಘ್ರ ಮುಕ್ತಿ: ಕೆಪಿಟಿಸಿಎಲ್, ಹೆಸ್ಕಾಂ ಭರವಸೆ*
ಬೆಳಗಾವಿ: ವಿದ್ಯುತ್ ಕೊರತೆ, ಪದೇ ಪದೆ ವಿದ್ಯುತ್ ನಿಲುಗಡೆ ಸೇರಿದಂತೆ ಬೆಳಗಾವಿಯ ಉದ್ಯಮಗಳ ಎದುರಿಸುತ್ತಿರುವ ಸಮಸ್ಯೆಗಳಿಗೆ ಶೀಘ್ರದಲ್ಲೇ ಮುಕ್ತಿ ನೀಡುವುದಾಗಿ ಕೆಪಿಟಿಸಿಎಲ್ ಮತ್ತು ಹೆಸ್ಕಾಂ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಬೆಳಗಾವಿಯ ಚೆಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ಸಭಾಭವನದಲ್ಲಿ ಕೈಗಾರಿಕೊದ್ಯಮಿಗಳ ಅಹವಾಲು ಆಲಿಸಿ ಅಧಿಕಾರಿಗಳು ಈ ಭರವಸೆ ನೀಡಿದರು. ಚೆಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ಅಧ್ಯಕ್ಷ ಪ್ರಭಾಕರ ನಾಗರಮುನೋಳಿ ಮಾತನಾಡಿ, ವಿದ್ಯುತ್ ಕೈಗಾರಿಕೆಗಳ ಬೆನ್ನೆಲುಬು, ಆದರೆ ಬಹಳಷ್ಟು ಸಮಸ್ಯೆಗಳಿವೆ. …
Read More »ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಎಲ್ಲ ಇಲಾಖೆಗಳ ಸಮನ್ವಯ ಅಗತ್ಯ: ಕೆ. ಎನ್. ಶಿವಕುಮಾರ್
ಬೆಳಗಾವಿ: ಬಾಲಕಾರ್ಮಿಕ ಪದ್ದತಿ ಕಾಯ್ದೆಯು ಜಾರಿಗೆ ಬಂದು ಸುಮಾರು ನಲವತ್ತು ವರ್ಷಗಳಾಗಳಾದರು ಸಹ ಬಾಲಕಾರ್ಮಿಕ ಪದ್ಧತಿ ಇನ್ನೂ ಜೀವಂತವಾಗಿದ್ದು, ಇಂತಹ ಅನಿಷ್ಠ ಪದ್ದತಿಯ ನಿರ್ಮೂಲನೆಗೆ ಸಂಬಂಧಪಟ್ಟ ಎಲ್ಲ ಇಲಾಖೆಗಳ ಸಮನ್ವಯದ ಅಗತ್ಯವಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ. ಎನ್. ಶಿವಕುಮಾರ ತಿಳಿಸಿದರು. ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಜೂನ್ 12 (ಶುಕ್ರವಾರ) ಆಯೋಜಿಸಲಾಗಿದ್ದ ‘ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ-2026’ ಕಾರ್ಯಕ್ರಮವನ್ನು ಉದ್ಘಾಟಿಸಿ …
Read More »ಬೆಳಗಾವಿಯಲ್ಲಿ ನಟ ಪ್ರಕಾಶ್ ರಾಜ್ ಅವರ ಭಾವಚಿತ್ರಕ್ಕೆ ಬೆಂಕಿ ಇಟ್ಟು ಪ್ರತಿಭಟಿಸಿದ ಮುತಾಲಿಕ್
ಬೆಳಗಾವಿ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿ ಹೈಕೋರ್ಟ್ಗೆ ಚಿನ್ನಯ್ಯ ಸಲ್ಲಿಸಿರುವ ರಿಟ್ ಅರ್ಜಿಯಲ್ಲಿ ನಟ ಪ್ರಕಾಶ್ ರಾಜ್ ಅವರ ಹೆಸರು ಪ್ರಸ್ತಾಪವಾಗಿರುವ ಹಿನ್ನೆಲೆಯಲ್ಲಿ, ಬೆಳಗಾವಿಯಲ್ಲಿ ಶ್ರೀರಾಮ ಸೇನೆಯ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಳಗಾವಿ ಕನ್ನಡ ಸಾಹಿತ್ಯ ಭವನದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ, ಪ್ರಮೋದ್ ಮುತಾಲಿಕ್ ಅವರ ನೇತೃತ್ವದಲ್ಲಿ ಪ್ರಕಾಶ್ ರಾಜ್ ಅವರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಲಾಗಿದೆ. ಪ್ರತಿಭಟನಾಕಾರರು ಧರ್ಮದ್ರೋಹಿ ಪ್ರಕಾಶ್ ರಾಜ್ ಎಂಬ ಘೋಷಣೆಗಳನ್ನೂ ಕೂಗಿದ್ದಾರೆ. ಬಳಿಕ …
Read More »ಸಹಕಾರ ಸಂಘ ಉದ್ಘಾಟಿಸಿದ ಲಕ್ಷ್ಮೀ ಹೆಬ್ಬಾಳಕರ್
ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಸೋನೋಲಿಯಲ್ಲಿ ನೂತನವಾಗಿ ಆರಂಭಗೊಂಡಿರುವ “ಶ್ರೀ ಶಿವಶಂಭೋ ಕೋ-ಆಪ್ ಸೊಸೈಟಿ ನಿಯಮಿತ” ಸಂಸ್ಥೆಯನ್ನು ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಉದ್ಘಾಟಿಸಿದರು. ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ, ಸಂಘಕ್ಕೆ ಶುಭ ಹಾರೈಸಿದರು. ಗ್ರಾಮೀಣ ಭಾಗದ ಆರ್ಥಿಕ ಪ್ರಗತಿ ಹಾಗೂ ಸ್ವಾವಲಂಬಿ ಬದುಕಿಗೆ ಈ ಸಹಕಾರಿ ಸಂಸ್ಥೆಯು ಮುನ್ನುಡಿಯಾಗಲಿ ಎಂದು ಹಾರೈಸಿದರು. ಕಾರ್ಯಕ್ರಮದಲ್ಲಿ ಯುವರಾಜ ಕದಂ, ಬಾಳು ದೇಸೂರಕರ, ಸಾಗರ ಜಂಗ್ರೂಚೆ, ಜ್ಯೋತಿಬಾ ಕಿತ್ತೂರಕರ್, ಮನೋಹರ ಬೆಳಗಾಂವ್ಕರ್, …
Read More »4500ಕೋಟಿ ವಂಚನೆ ಪ್ರಕರಣ: ಆರೋಪಿ ಶಿವಾನಂದ ನೀಲಣ್ಣವರಗೆ ಜಾಮೀನು ಮಂಜೂರು
ಬೆಳಗಾವಿಯಲ್ಲಿ 4500 ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು ಮಾಡಲಾಗಿದೆ. ಬೆಂಗಳೂರು 92ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಿಂದ ಜಾಮೀನು ಶಿವಾನಂದ ನೀಲವಣ್ಣವರ್ ಗೆ ಮಧ್ಯಂತರ ಜಾಮೀನು ಮಂಜೂರಾಗಿದೆ. ದೇಶ ಬಿಟ್ಟು ಹೋಗಬಾರದು, ಸಾಕ್ಷಿ ನಾಶ ಮಾಡಬಾರದು, ಅರ್ಜಿದಾರರು ತಲೆಮರೆಸಿಕೊಂಡು ಹೋಗುವಂತಿಲ್ಲ ಎಂದು ಶಿವಾನಂದ ನೀಲಣ್ಣವರಗೆ ಕೋರ್ಟ್ ಸೂಚನೆ ನೀಡಿದೆ. ಜಾಮೀನು ಮಂಜೂರಾಗಿರುವ ಹಿನ್ನೆಲೆಯಲ್ಲಿ ಸೋಮವಾರ ಅಥವಾ ಮಂಗಳವಾರ ಶಿವಾನಂದ …
Read More »ಜೂನ್ 13 ರಂದು ಬೆಳಗಾವಿಯಲ್ಲಿ ವಿದ್ಯುತ್ ವ್ಯತ್ಯಯ
ಬೆಳಗಾವಿ: ಕ.ವಿ.ಪ್ರ.ನಿ.ನಿ. ವತಿಯಿಂದ ಮೊದಲನೇಯ ತ್ರೈಮಾಸಿಕ ಹಾಗೂ ಇತರೆ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ಜೂನ್ 13 2026 ರಂದು ಬೆಳಿಗ್ಗೆ 10 ಘಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. 33 ಕೆವಿ ಜಿಆಯ್‌ಎಸ್ ಶ್ರೀನಗರ ಉಪಕೇಂದ್ರದಿಂದ ಸರಬರಾಜು ಆಗುವ ಬ್ಯಾಂಕ ಆಫ ಮಹಾರಾಷ್ಟ್ರ, ರೇಡ್ಡಿ ಭವನ, ಜೈನ್ ಮಂದಿರ, ವಿವಿ ನಗರ, ನೀರು ಸರಬರಾಜು, ಶಂಕರನಾದ ಹೌಸ್, ಶಿ.ಇ.ಓ. ಕಮಿಷನರ್, ಹೌಸ್, ನೀರು ಸರಬರಾಜು ಬೋರ್ಡ, ಡಿ.ಸಿ …
Read More »
Laxmi News 24×7