Breaking News

ಪರಿಷತ್‌ ಚುನಾವಣೆಗೆ ʻಆಪರೇಷನ್‌ ಹಸ್ತʼದ ಭೀತಿ – ರೆಸಾರ್ಟ್‌ಗೆ ಜೆಡಿಎಸ್ ಶಾಸಕರು ಶಿಫ್ಟ್?

Spread the love

ಬೆಂಗಳೂರು: ರಾಜ್ಯ ವಿಧಾನ ಪರಿಷತ್‌ ಚುನಾವಣೆಗೆ ದಿನಾಂಕ ಸಮೀಪಿಸುತ್ತಿದೆ. ಈ ಹಿನ್ನೆಲೆ ಕುದುರೆ ವ್ಯಾಪಾರದ ಭೀತಿ ಹೆಚ್ಚಾಗಿದ್ದು, ವಿಪಕ್ಷಗಳು ತಮ್ಮ ಶಾಸಕರನ್ನ ಹಿಡಿದಿಟ್ಟುಕೊಳ್ಳಲು ರೆಸಾರ್ಟ್‌ ರಾಜಕಾರಣಕ್ಕೆ ಮುಂದಾಗುತ್ತಿವೆ.

ಜೂನ್‌ 18 ರಂದು ಪರಿಷತ್‌ ಚುನಾವಣೆ ಇರುವ ಕಾರಣ ತಮ್ಮ ಶಾಸಕರನ್ನ ಹಿಡಿದಿಟ್ಟುಕೊಳ್ಳಲು ಜೆಡಿಎಸ್‌  ಪ್ಲ್ಯಾನ್‌ ಮಾಡಿದೆ. ಜೂನ್‌ 16 ರಂದೇ ಶಾಸಕರನ್ನ ರೆಸಾರ್ಟ್ ಅಥವಾ ಹೋಟೆಲ್‌ಗಳಿಗೆ ಶಿಫ್ಟ್‌ ಮಾಡಲು ತೀರ್ಮಾನಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಸದ್ಯ ಕಾಂಗ್ರೆಸ್‌ನ 5ನೇ ಅಭ್ಯರ್ಥಿ ಗೆಲುವಿಗೆ 2 ಮತಗಳ ಕೊರತೆಯಿದೆ. ಆದ್ದರಿಂದ ಆಪರೇಷನ್‌ ಹಸ್ತ ನಡೆಸುವ ಸಾಧ್ಯತೆಯಿದೆ ಅನ್ನೋದು ಜೆಡಿಎಸ್‌ನ ಆರೋಪ. ಆದ್ದರಿಂದ ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನೇತತ್ವದಲ್ಲಿ ದಳದ ಶಾಸಕರನ್ನ ರೆಸಾರ್ಟ್‌ಗಳಿಗೆ ಶಿಫ್ಟ್‌ ಮಾಡೋದಕ್ಕೆ ನಿರ್ಧರಿಸಲಾಗಿದೆ.

ಕೋಲಾರ ಅಥವಾ ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್‌ಗಳಲ್ಲಿ ವಾಸ್ತವ್ಯಕ್ಕೆ ಶುಕ್ರವಾರ ನಡೆದ ಪಕ್ಷದ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಇದನ್ನೂ 

2024 ರಲ್ಲಿ ನಡೆದ ರಾಜ್ಯಸಭಾ ಚುನಾವಣೆ ವೇಳೆ ಬಿಜೆಪಿ ಶಾಸಕ ಎಸ್‌.ಟಿ ಸೋಮಶೇಖರ್‌ ಕಾಂಗ್ರೆಸ್‌ ಪರ ಮತ ಚಲಾಯಿಸಿದ್ದರು. ಈ ಬಾರಿ ಅಡ್ಡ ಮತದಾನ,ಆಪರೇಷನ್ ಹಸ್ತ ತಡೆಯೋದಕ್ಕೆ ಮುಂದಾಗಿರುವ ಜೆಡಿಎಸ್‌ ರೆಸಾರ್ಟ್‌ಗೆ ಶಿಫ್ಟ್‌ ಮಾಡಲು ನಿರ್ಧರಿಸಿದೆ.


Spread the love

About Laxminews 24x7

Check Also

ಶಿಕ್ಷಿಸುವುದಕ್ಕಿಂತ ಸರಿಯಾದ ದಾರಿಗೆ ತರೋದೇ ನಮ್ಮ ಧರ್ಮ: ನಿಂದಿಸಿದ ಮಕ್ಕಳನ್ನು ಕ್ಷಮಿಸಿದ ಮೋದಿ

Spread the loveನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಘಟನೆ ಮತ್ತು ತಮ್ಮ ಹಾಗೂ ತಮ್ಮ ದಿವಂಗತ ತಾಯಿಯವರ ವಿರುದ್ಧ ವ್ಯಕ್ತವಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ