Breaking News

Daily Archives: ಜೂನ್ 5, 2026

ಡಿಕೆ ಸಂಪುಟದ ನೂತನ ಸಚಿವರಿಗೆ ಖಾತೆ ಹಂಚಿಕೆ – ಯಾರಿಗೆ ಯಾವ ಖಾತೆ? ಇಲ್ಲಿದೆ ಲಿಸ್ಟ್‌

ಬೆಂಗಳೂರು: ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಸಂಪುಟದ ನೂತನ ಸಚಿವರಿಗೆ ಕೊನೆಗೂ ಖಾತೆ ಹಂಚಿಕೆ ಮಾಡಲಾಗಿದೆ. ಡಿಕೆಶಿ, ಡಿಸಿಎಂ ಡಾ.ಜಿ ಪರಮೇಶ್ವರ್, ಡಾ.ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ತಮ್ಮೊಂದಿಗೆ ಬುಧವಾರ ಸಚಿವರಾಗಿ ಪ್ರಮಾಣ ಸ್ವೀಕರಿಸಿದ 13 ಸಚಿವರಿಗೆ ಗುರುವಾರ ಖಾತೆ ಹಂಚಿಕೆ ಮಾಡಿದ್ದಾರೆ. ಈ ಮೂಲಕ ಹಣಕಾಸು, ಗೃಹ, ಕಂದಾಯ, ಜಲಸಂಪನ್ಮೂಲ, ಬೆಂಗಳೂರು ನಗರಾಭಿವೃದ್ಧಿ ಸೇರಿದಂತೆ ಯಾರಿಗೆ ಯಾವ ಖಾತೆ ಸಿಗಲಿದೆ ಎಂಬ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಸಿಎಂ ಡಿಕೆ ಶಿವಕುಮಾರ್‌ …

Read More »

ರಾಜ್ಯಸಭೆ ಚುನಾವಣೆಗೆ ʻಕೈʼ ಅಭ್ಯರ್ಥಿಗಳ‌ ಪಟ್ಟಿ ಪ್ರಕಟ – ಖರ್ಗೆ ಸೇರಿ ರಾಜ್ಯದಿಂದ ಮೂವರು ಸ್ಪರ್ಧೆ

ಬೆಂಗಳೂರು: ರಾಜ್ಯಸಭೆ ಚುನಾವಣೆಗೆ ರಾಷ್ಟ್ರೀಯ ಕಾಂಗ್ರೆಸ್ ಕೊನೆಗೂ ತನ್ನ ಅಭ್ಯರ್ಥಿಗಳ ಪಟ್ಟಿಯನ್ನ ಪ್ರಕಟ ಮಾಡಿದೆ. ರಾಜ್ಯಸಭಾ ಚುನಾವಣೆ ಕರ್ನಾಟಕದಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ , ಮನ್ಸೂರ್ ಅಲಿಖಾನ್, ಪವನ್ ಖೇರಾ ಮೂವರು ಸ್ಪರ್ಧಿಸುತ್ತಿದ್ದಾರೆ ಎಂದು ಎಐಸಿಸಿ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಮೂವರು ಅಭ್ಯರ್ಥಿಗಳು ಶುಕ್ರವಾರ (ಜೂ.5) ರಂದು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಇದರೊಂದಿಗೆ ಮಧ್ಯಪ್ರದೇಶದಿಂದ ಮೀನಾಕ್ಷಿ ನಟರಾಜನ್‌, ರಾಜಸ್ಥಾನದಿಂದ ನೀರಜ್ ಡಾಂಗಿ, ತಮಿಳುನಾಡಿನಿಂದ ಪ್ರವೀಣ್‌ ಚಕ್ರವರ್ತಿ ಹಾಗೂ ಜಾರ್ಖಂಡ್‌ನಿಂದ …

Read More »

ನೂತನ ಸಚಿವರಿಗೆ ಖಾತೆ ಹಂಚಿಕೆ ಫೈನಲ್‌ ಆಗಿದೆ: ಸಿಎಂ ಡಿಕೆಶಿ

ಬೆಂಗಳೂರು: ನೂತನ ಸಚಿವರಿಗೆ ಖಾತೆ ಹಂಚಿಕೆ ಆಗಿದ್ದು, ಪಟ್ಟಿಯನ್ನ ಹೈಕಮಾಂಡ್‌ಗೆ ಕಳಿಸಿದ್ದೇವೆ. ಶೀಘ್ರವೇ ಪಟ್ಟಿ ಬಿಡುಗಡೆ ಆಗಲಿದೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ತಿಳಿಸಿದರು. ಇಂದು ಸಂಜೆ ವಿಧಾನಸೌಧಕ್ಕೆ ತೆರಳಿದ್ದ ಸಿಎಂ ಹಲವು ಗಣ್ಯಾತಿಗಣ್ಯರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದರು. ವಿಧಾನಸೌಧದಲ್ಲಿರೊ ಭುವನೇಶ್ವರಿ ತಾಯಿ, ದಿ. ದೇವರಾಜ ಅರಸ್, ಕೆ.ಸಿ ರೆಡ್ಡಿಯವರ, ಎಸ್‌. ನಿಜಲಿಂಗಪ್ಪ, ಡಾ. ಬಾಬು ಜಗಜೀವನ್ ರಾಂ, ಕೆಂಗಲ್ ಹನುಮಂತಯ್ಯ, ಲಾಲ್ ಬಹುದ್ದೂರ್ ಶಾಸ್ತ್ರಿ ಹಾಗೂ ಸುಭಾಷ್ ಚಂದ್ರ ಭೋಸ್ …

Read More »

ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಕಾಲು ಜಾರಿ ಬಿದ್ದು ವ್ಯಕ್ತಿ ಸಾವು

ಬೆಂಗಳೂರು: ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಕಾಲು ಜಾರಿ ರೈಲಿನಡಿ ಸಿಲುಕಿ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ  ಜ್ಞಾನಭಾರತಿ ನಿಲ್ದಾಣದಲ್ಲಿ ನಡೆದಿದೆ. ಮೆಜೆಸ್ಟಿಕ್‌ನಿಂದ ಮೈಸೂರು ಕಡೆ ತೆರಳುತ್ತಿದ್ದ ಬೆಂಗಳೂರು – ಮೈಸೂರು ಪ್ಯಾಸೆಂಜರ್ ರೈಲಿನಲ್ಲಿ ಘಟನೆ ನಡೆದಿದೆ. ಮೃತ ವ್ಯಕ್ತಿ ರಾಮನಗರದ ಕೂಟಗಲ್ ಗ್ರಾಮದ ನಿವಾಸಿ ಹರೀಶ್ ಎಂದು ತಿಳಿದುಬಂದಿದೆ. ನಿಧಾನಕ್ಕೆ ಚಲಿಸುತ್ತಿದ್ದ ವೇಳೆ ರೈಲು ಹತ್ತಲು ವ್ಯಕ್ತಿ ಯತ್ನಿಸಿದ್ದಾನೆ. ಈ ವೇಳೆ ಕಾಲು ಜಾರಿ ರೈಲಿನ ಚಕ್ರದಡಿ ಬಿದ್ದಿದ್ದಾನೆ. …

Read More »

ಮುಂಗಾರು ಅಧಿವೇಶನದಲ್ಲಿ ಮತ್ತೆ ಡಿಲಿಮಿಟೇಷನ್ ಬಿಲ್ ಮಂಡನೆಗೆ ಕೇಂದ್ರ ಸರ್ಕಾರ ಸಿದ್ಧತೆ

ನವದೆಹಲಿ: ಲೋಕಸಭೆಯಲ್ಲಿ ಈ ಹಿಂದೆ ತಿರಸ್ಕೃತಗೊಂಡಿದ್ದ ಡಿಲಿಮಿಟೇಷನ್ ಬಿಲ್ ಅನ್ನು ಮುಂಗಾರು ಅಧಿವೇಶನದಲ್ಲಿ  ಮತ್ತೆ ಪ್ರಸ್ತುತಪಡಿಸಲು ಕೇಂದ್ರ ಸರ್ಕಾರ  ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದಕ್ಕಾಗಿ ಪ್ರಮುಖ ಪ್ರಾದೇಶಿಕ ಪಕ್ಷಗಳಾದ ಡಿಎಂಕೆ, ಟಿಎಂಸಿ ಜೊತೆಗೆ ಕೇಂದ್ರ ಸರ್ಕಾರ ಮಾತುಕತೆ ನಡೆಸಿದೆ. ಟಿಎಂಸಿ ಸಂಸದರು ಸರ್ಕಾರದ ಪ್ರಸ್ತಾಪಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದು, ಕ್ಷೇತ್ರ ಪುನರ್ ವಿಂಗಡಣೆ ವಿಷಯದಲ್ಲಿ ಚರ್ಚೆಗೆ ತಯಾರಿದ್ದಾರೆ ಎಂದು ಮೂಲಗಳು ಹೇಳಿವೆ. ಇದೇ ವೇಳೆ, ಬಿಲ್‌ಗೆ ತೀವ್ರ ಆತಂಕ ವ್ಯಕ್ತಪಡಿಸುತ್ತಿದ್ದ ಡಿಎಂಕೆ …

Read More »

ಮತ್ತೆ ಭುಗಿಲೆದ್ದ ಮುರಿನಕಟ್ಟೆ ವಿವಾದ – ಶುಕ್ರವಾರ ಭಟ್ಕಳ ಸ್ವಯಂ ಪ್ರೇರಿತ ಬಂದ್‌ಗೆ ಕರೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ  ಮೇ 24ರಂದು ಮುಸ್ಲಿಂ ಯುವಕರು ಮುರಿನಕಟ್ಟೆ  ಧ್ವಂಸ ಮಾಡಿದ್ದ ಪ್ರಕರಣ ಸಂಬಂಧ ಇದೀಗ ಹಿಂದೂಪರ ಸಂಘಟನೆಗಳು ಭಟ್ಕಳ ಬಂದ್‌ಗೆ ಕರೆ ಕೊಟ್ಟಿದ್ದು ಮತ್ತೆ ವಿವಾದ ಭುಗಿಲೆದ್ದಿದೆ. ಮೇ 24ರಂದು ಭಟ್ಕಳದ ಶಿರಾಲಿಯ ವೆಂಕಟಾಪುರ ನದಿ ತೀರದ ಬಳಿ ಕಪ್ಪೆಚಿಪ್ಪು ಹೆಕ್ಕಲು ಹೋದ ಮಹಿಳೆಯರೂ ಸೇರಿ 11 ಜನ ಮೃತಪಟ್ಟಿದ್ದರು. ಇಡೀ ಭಟ್ಕಳಕ್ಕೆ ದೊಡ್ಡ ಶಾಕ್ ತಂದಿದ್ದ ಈ ಘಟನೆ ಜನರು ದುಃಖದಲ್ಲಿ ಇರುವಂತೆ …

Read More »