Breaking News

Monthly Archives: ಏಪ್ರಿಲ್ 2026

ದಾವೂದ್ ಇಬ್ರಾಹಿಂನ ಆಪ್ತ ಸಲೀಂ ಡೋಲಾ ಈಗ IPS ವಶದಲ್ಲಿ! 

ಭಾರತದ ವಿರೋಧಿ ಶಕ್ತಿಗಳಿಗೆ ಮತ್ತು ಅಂತಾರಾಷ್ಟ್ರೀಯ ಡ್ರಗ್ ಮಾಫಿಯಾಗೆ ಭಾರತ ಸರ್ಕಾರ ಮತ್ತೊಂದು ಏಟು ಕೊಟ್ಟಿದೆ! ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಅತ್ಯಂತ ಆಪ್ತ ಸಹಚರ ಹಾಗೂ ಸಾವಿರಾರು ಕೋಟಿ ರೂಪಾಯಿಗಳ ಮಾದಕವಸ್ತು ಜಾಲದ ಸೂತ್ರಧಾರ ಸಲೀಂ ಡೋಲಾ (59) ಈಗ ಭಾರತದ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಏನಿದು ‘ಆಪರೇಷನ್ ಗ್ಲೋಬಲ್ ಹಂಟ್’? ಟರ್ಕಿಯ ಇಸ್ತಾಂಬುಲ್‌ನಲ್ಲಿ ಅಡಗಿ ಕುಳಿತಿದ್ದ ಈತನನ್ನು ಭಾರತೀಯ ಗುಪ್ತಚರ ಸಂಸ್ಥೆಗಳು ಮತ್ತು ಟರ್ಕಿ ಪೊಲೀಸರು ಜಂಟಿ …

Read More »

22 ಬೌದ್ಧ ಸನ್ಯಾಸಿಗಳ ಲಗೇಜ್ನಲ್ಲಿ ಗಾಂಜಾ ಪತ್ತೆ

ಶ್ರೀ ಲಂಕಾ: ಕೊಲಂಬೊದ ಬಂಡಾರನಾಯಕೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಥೈಲ್ಯಾಂಡ್ನಿಂದ ಆಗಮಿಸುತ್ತಿದ್ದ 22 ಬೌದ್ಧ ಸನ್ಯಾಸಿಗಳ ಲಗೇಜ್ನಲ್ಲಿ ಸುಮಾರು 110 ಕೆಜಿಗೂ ಹೆಚ್ಚು ಗಾಂಜಾ (Sri Lanka Drug Bust) ಇರುವುದು ಪತ್ತೆಯಾಗಿದ್ದು, ಅವರನ್ನು ಶ್ರೀಲಂಕಾದ ಅಧಿಕಾರಿಗಳು ಬಂಧಿಸಿರುವುದಾಗಿ ವರದಿಯಾಗಿದೆ. ಘಟನೆ ಏನು? ವರದಿಗಳ ಪ್ರಕಾರ, ಈ ಸನ್ಯಾಸಿಗಳ ಗುಂಪು ಥೈಲ್ಯಾಂಡ್ನಿಂದ ಕೊಲೊಂಬಾಗೆ ಆಗಮಿಸಿತ್ತು. ಈ ವೇಳೆ ಭದ್ರತಾ ಸಿಬ್ಬಂದಿ ನಡೆಸಿದ ಪರಿಶೀಲನೆಯಲ್ಲಿ ಪ್ರತಿಯೊಬ್ಬ ಸನ್ಯಾಸಿಯ ಬ್ಯಾಗ್ನಲ್ಲಿ 5 ಕೆಜಿಗಿಂತ …

Read More »

ಆಸ್ತಿ ತೆರಿಗೆ ಪಾವತಿದಾರರಿಗೆ ಶೇಕಡ 5%ರಷ್ಟು ರಿಯಾಯಿತಿ ನೀಡಿ ಮುಖ್ಯ ಆಯುಕ್ತರಿಗೆ ಎಮ್.ಶಿವರಾಜು, ಅಬ್ದುಲ್ ವಾಜಿದ್ ಮನವಿ

ಜಿಬಿಎ ಕೇಂದ್ರ ಕಛೇರಿ: ಮುಖ್ಯ ಆಯುಕ್ತರಾದ ಮಹೇಶ್ವರರಾವ್ ರವರನ್ನು ಆಡಳಿತ ಪಕ್ಷದ ಮಾಜಿ ನಾಯಕರಾದ ಎಮ್.ಶಿವರಾಜುರವರು, ವಿರೋಧ ಪಕ್ಷದ ಮಾಜಿ ನಾಯಕ ಅಬ್ದುಲ್ ವಾಜಿದ್ ರವರು ಭೇಟಿ ನೀಡಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿನ ಸ್ವತ್ತುಗಳಿಗೆ ಆಸ್ತಿ ತೆರಿಗೆ ಪಾವತಿಸುತ್ತಿರುವ ತೆರಿಗೆದಾರರಿಗೆ ಶೇ.5% ರಷ್ಟು ರಿಯಾಯತಿ ಅನ್ನು ವಿಸ್ತರಿಸಬೇಕು ಎಂದು ಮನವಿ ಸಲ್ಲಿಸಿದರು ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿನ ಸ್ವತ್ತುಗಳಿಗೆ ಪ್ರತಿ ವರ್ಷ ಏಪ್ರಿಲ್ ಮೇ ತಿಂಗಳಿನಲ್ಲಿ ಆಸ್ತಿ ತೆರಿಗೆಯನ್ನು …

Read More »

ಸಬ್ ಇನ್ಸ್ ಪೆಕ್ಟರ್ ಪತ್ನಿ ಆತ್ಮಹತ್ಯೆಗೆ ಶರಣು

  ಪ್ರೀತಿಸಿ ಮದುವೆಯಾಗಿದ್ದ ಸಬ್ ಇನ್ಸ್ ಪೆಕ್ಟರ್ ಪತ್ನಿ ಕೌಟುಂಬಿಕ ಕಲಹದಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬೀರೂರಿನಲ್ಲಿ ಈ ಘಟನೆ ನಡೆದಿದೆ. ಬೀರೂರು ಠಾಣೆಯ ಠಾಣಾಧಿಕಾರಿ ತಿಪ್ಪೇಶ್‌ರವರ ಪತ್ನಿ ಪದ್ಮ (34) ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಿಪ್ಪೇಶ್ ಹಾಗೂ ಪದ್ಮ ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಪದ್ಮಾ ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪೊಲೀಸರು …

Read More »

ಕೆಲಸದ ಅವಧಿಯಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಜಾಲಿ ರೈಡ್

ಕೆಲಸದ ಅವಧಿಯಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಒಬ್ಬರು ಬಂಡಿಪುರ ಅರಣ್ಯ ಪ್ರದೇಶದಲ್ಲಿ ಖಾಸಗಿ ಜೀಪ್ ನಲ್ಲಿ ತಮ್ಮ ಕುಟುಂಬ ಸಮೇತ ಜಾಲಿ ರೈಡ್ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಗುಂಡ್ಲುಪೇಟೆ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಜಯಕುಮಾರ್ ತಮ್ಮ ಕುಟುಂಬದೊಡನೆ ಖಾಸಗಿ ಜಿಪಿನಲ್ಲಿ ಮೋಜು ಮಸ್ತಿ ಮಾಡಿದವರಾಗಿದ್ದು, ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆಯ ವಾಹನಗಳಿಗೆ ಮಾತ್ರ ಅವಕಾಶವಿರಲಿದೆ. ಆದರೆ ಸರ್ಕಲ್ ಇನ್ಸ್ಪೆಕ್ಟರ್ ಅವರು ಅರಣ್ಯ ಇಲಾಖೆಯ ನಿಯಮವನ್ನು ಗಾಳಿಗೆ ತೂರಿ ಅಲ್ಲಿ …

Read More »

ಕೊಲ್ಹಾಪುರದಲ್ಲಿ ಭೀಕರ ಲೈಂಗಿಕ ದೌರ್ಜನ್ಯ ಪ್ರಕರಣ: 350 ಅಶ್ಲೀಲ ವಿಡಿಯೋಗಳು ಪತ್ತೆ….!!

​ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಅಮರಾವತಿ ಪ್ರಕರಣವನ್ನು ನೆನಪಿಸುವಂತಹ ಮತ್ತೊಂದು ಆಘಾತಕಾರಿ ಲೈಂಗಿಕ ದೌರ್ಜನ್ಯ ಪ್ರಕರಣ ಬೆಳಕಿಗೆ ಬಂದಿದೆ. ಯುವತಿಯರನ್ನು ಬಲೆಗೆ ಬೀಳಿಸಿ ಅವರ ಮೇಲೆ ದೌರ್ಜನ್ಯ ಎಸಗಿ, ವಿಡಿಯೋ ಚಿತ್ರೀಕರಿಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ​ಪ್ರಕರಣದ ವಿವರಗಳು: ​ಆರೋಪಿ: ಶಾಹಿದ್ ಸಮೀರ್ (22), ಫಾರ್ಮಸಿ ವಿದ್ಯಾರ್ಥಿ. ​ಕೃತ್ಯ: ಸಾಮಾಜಿಕ ಮಾಧ್ಯಮಗಳ ಮೂಲಕ ಯುವತಿಯರ ಸ್ನೇಹ ಬೆಳೆಸುತ್ತಿದ್ದ ಈತ, ಅವರನ್ನು ಲಾಡ್ಜ್‌ಗಳಿಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗುತ್ತಿದ್ದನು. ಆ ಸಮಯದಲ್ಲಿ ರಹಸ್ಯವಾಗಿ ವಿಡಿಯೋ …

Read More »

ಪಾಲಿಕೆ ಆಯುಕ್ತರಿಂದ ಪುಟ್‌ಪಾತ್ ತೆರವು ಕಾರ್ಯಾಚರಣೆ

ಬೆಳಗಾವಿ: ಇಲ್ಲಿನ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಆರ್‌ಪಿಡಿ ವೃತ್ತದಿಂದ ಗೋಮಟೇಶ ವಿದ್ಯಾಪೀಠದ ವರಗಿನ ರಸ್ತೆಯ ಎರಡು ಬದಿಗಳಲ್ಲಿ ಪುಟ್‌ಪಾತ್ ತೆರವು ಕಾರ್ಯಾಚರಣೆ ಮಂಗಳವಾರ ಪಾಲಿಕೆ ಅಧಿಕಾರಿಗಳು ನಡೆಸಿದರು.  ರಸ್ತೆಯ ಎರಡು ಕಡೆಯಲ್ಲಿ ಅಂಗಡಿಕಾರರು ಪುಟ್‌ಪಾತ್  ಒತ್ತುವರಿ ಮಾಡಿಕೊಂಡಿದ್ದರು. ತಳ್ಳುವ ಗಾಡಿಯವರು ಪುಟ್‌ಪಾತ್ ಮೇಲೆ ಹಣ್ಣು ಹೂವು, ತರಕಾರಿ, ಎಗ್ಗರೈಸ್ ಹೀಗೆ ವಿವಿಧ ಅಂಗಡಿಕಾರರ ವ್ಯಾಪಾರು ವಹಿವಾಟು ನಡೆಸುತ್ತಿದ್ದರು. ಇದರಿಂದ ಪಾದಚಾರಿಗಳಿಗೆ ತೊಂದರೆಯಾಗುತ್ತಿದ್ದ ಹಿನ್ನೆಲೆ ಪಾಲಿಕೆ ಅಧಿಕಾರಿಗಳು ಯಂತ್ರಗಳ ಮೂಲಕ …

Read More »

ಕುಡಿಯುವ ನೀರಿಗಾಗಿ ಖಾಸಗಿಯವರ ಕೊಳವೆ ಬಾವಿ ಗುರುತಿಸಿ

ಬೆಳಗಾವಿ: ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿರುವಂತ ಗ್ರಾಮಗಳಲ್ಲಿ ಕನಿಷ್ಠ ಮೂರು ಖಾಸಗಿ ಕೊಳವೆ ಬಾವಿ ಗುರುತಿಸಿಕೊಳ್ಳಬೇಕು. ಜಾನುವಾರಗಳಿಗೆ ನೀರು, ಸಮಸ್ಯೆ ಉದ್ಬವಿಸದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಈ ವಿಷಯದಲ್ಲಿ ನಿರ್ಲಕ್ಷೃ ವಹಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಪಂ ಸಿಇಒ ರಾಹುಲ ಶಿಂಧೆ ಎಚ್ಚರಿಕೆ ನೀಡಿದರು. ನಗರದ ಜಿಪಂ ಸಭಾಂಗಣದಲ್ಲಿ ಮಂಗಳವಾರ  ಕುಡಿಯುವ ನೀರು ಹಾಗೂ ಮೇವು ಪೂರೈಕೆ ಕುರಿತು ಜಿಲ್ಲಾ, ತಾಲೂಕು ಮತ್ತು ಗ್ರಾಪಂ ಮಟ್ಟದ ಅಧಿಕಾರಿಗಳ ಸಭೆಯಲ್ಲಿ …

Read More »

ಪಶ್ಚಿಮ ಬಂಗಾಳದಲ್ಲಿ ಇಂದು ಎರಡನೇ ಹಂತದ ಮತದಾನ

ಕೋಲ್ಕತ್ತಾ, ಏಪ್ರಿಲ್ 29: ಪಶ್ಚಿಮ ಬಂಗಾಳದ ಹದಿನಾರನೇ ವಿಧಾನಸಭೆ ಚುನಾವಣೆಯ ಅಬ್ಬರದ ಪ್ರಚಾರಕ್ಕೆ ತೆರೆ ಬಿದ್ದಿದ್ದು, ಈಗ ಎಲ್ಲರ ಕಣ್ಣು ಇಂದಿನ ಮತದಾನದ ಮೇಲೆ ನೆಟ್ಟಿದೆ. 142 ಕ್ಷೇತ್ರಗಳಲ್ಲಿ ನಡೆಯಲಿರುವ ಈ ಅಂತಿಮ ಹಂತದ ಚುನಾವಣೆಯು ರಾಜ್ಯದ ಮುಂದಿನ ಸರ್ಕಾರ ಯಾರದ್ದು ಎಂಬುದನ್ನು ನಿರ್ಧರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ. ಪ್ರಚಾರದ ಅಂತಿಮ ದಿನದಂದು ಉತ್ತರ 24 ಪರಗಣದ ಜಗತ್‌ದಲ್‌ನಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿಯ ಗೆಲುವಿನ ಬಗ್ಗೆ ಅಚಲ …

Read More »

ಬೆಳಗಾವಿ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಅಮಾನತು ಶಿಫಾರಸು: ಮೇಲ್ದರ್ಜೆಯ ‘ಪ್ರಭಾವ’ ಉಳಿಸಬಹುದೇ?

ಕೇಂದ್ರ ಸರ್ಕಾರದ ಆದೇಶದ ಮೇರೆಗೆ ನಡೆಯುತ್ತಿರುವ ಮ್ಯಾಪಿಂಗ್ ಕಾರ್ಯದಲ್ಲಿ ಬೆಳಗಾವಿ ಮಹಾನಗರ ಪಾಲಿಕೆಯ (ಬಿಎಂಸಿ) ರಾಜಸ್ವ ವಿಭಾಗದ ಅಧಿಕಾರಿಗಳಿಗೆ ಮಹತ್ವದ ಜವಾಬ್ದಾರಿಗಳನ್ನು ವಹಿಸಲಾಗಿತ್ತು. ಆದರೆ, ನಿಗದಿತ ಶೇಕಡಾವಾರು ಗುರಿಯನ್ನು ಸಾಧಿಸಲು ವಿಫಲವಾದ ಹಿನ್ನೆಲೆ, ರಾಜಸ್ವ ವಿಭಾಗದ ಮೂವರು ಅಧಿಕಾರಿಗಳ ವಿರುದ್ಧ ಅಮಾನತು ಕ್ರಮಕ್ಕೆ ಶಿಫಾರಸು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಮ್ಯಾಪಿಂಗ್ ಕಾರ್ಯದ ಪ್ರಗತಿ ಪರಿಶೀಲನೆಯ ಸಂದರ್ಭದಲ್ಲಿ ಬಿಎಂಸಿ ರಾಜಸ್ವ ವಿಭಾಗದ ಕೆಲ ಅಧಿಕಾರಿಗಳ ಕಾರ್ಯಕ್ಷಮತೆ ತೃಪ್ತಿಕರವಾಗಿಲ್ಲ ಎಂಬುದು ಗಮನಕ್ಕೆ …

Read More »