Breaking News

Monthly Archives: ಏಪ್ರಿಲ್ 2026

ಬೆಳಗಾವಿ ಭಕ್ತರಿಗೆ ಸೋಮನಾಥ ಜ್ಯೋತಿರ್ಲಿಂಗ ದರ್ಶನ ಭಾಗ್ಯ: ಏಪ್ರಿಲ್ 12 ರಿಂದ ಮೂರು ದಿನ ಸಂಚಾರ

ಏ.12 ರಿಂದ 14ರವರೆಗೆ ಬೆಳಗಾವಿ ನಗರದಲ್ಲಿ ಸೋಮನಾಥ ಜ್ಯೋರ್ತಿಲಿಂಗ ಭಕ್ತರಿಗೆ ದರ್ಶನ ಕೊಡಲಿದೆ ಎಂದು ರವಿ ಶಂಕರ ಗುರೂಜಿ ಮಠದ ಮಹೇಶ್ ಕೇರಕರ್ ಹೇಳಿದರು. ಶುಕ್ರವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ನೂರಾರು ವರ್ಷಗಳ ಹಿಂದಿನ ಧಾರ್ಮಿಕ ಜ್ಯೋರ್ತಿಲಿಂಗ ಬೆಳಗಾವಿಯ ಭಕ್ತರಿಗೆ ದರ್ಶನ ಕೊಡಲು ಮೂರು ದಿನಗಳ ಕಾಲ ಸಂಚರಿಸಲಿದೆ. ಶಂಕರಾಚಾರ್ಯರು ರವಿ ಶಂಕರ ಗುರೂಜಿ ಅವರಿಗೆ ಜ್ಯೋರ್ತಿಲಿಂಗ ಸೇರಬೇಕು ಎಂಬ ಉಲ್ಲೇಖ ಮಾಡಿದ ಹಿನ್ನೆಲೆಯಲ್ಲಿ ಅರು ಇವರ ಬಳಿ ಬಂದಿದೆ …

Read More »

ಮಗಳ ಸಾವಿನಲ್ಲೂ ಸಾರ್ಥಕತೆ ಮೆರೆದ ಪೋಷಕರು – ಅಪಘಾತದಿಂದ ಬ್ರೈನ್ ಡೆಡ್ ಆಗಿದ್ದ ಯುವತಿಯ ಅಂಗಾಂಗ ದಾನ

ಹಾಸನ: ಅಪಘಾತದಿಂದ ಮೆದುಳು ನಿಷ್ಕ್ರಿಯವಾಗಿದ್ದ  ಮಗಳ ಅಂಗಾಂಗ ದಾನ ಮಾಡಿ ಪೋಷಕರು ಸಾವಿನಲ್ಲೂ ಸಾರ್ಥಕತೆ ಮೆರೆದಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ. ಅರಸೀಕೆರೆ ತಾಲ್ಲೂಕಿನ, ಕಾರೇಹಳ್ಳಿ ಗ್ರಾಮದ ನಿವಾಸಿ ಮೋನಿಕಾ (18) ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದರು. ಏಪ್ರಿಲ್ 5 ರಂದು ಸಂಜೆ ಸುಮಾರು 6.30 ರ ಸಮಯದಲ್ಲಿ ಬಿ.ಹೆಚ್ ರಸ್ತೆಯ ಎಪಿಎಂಸಿ ಮಾರುಕಟ್ಟೆ ಸಮೀಪ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ತಲೆಗೆ ತೀವ್ರ ಪೆಟ್ಟಾಗಿದ್ದು, ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. …

Read More »

ಕೊಡಗಿನಲ್ಲಿ ಭೀಕರ ರಸ್ತೆ ಅಪಘಾತ – ಚಿತ್ರನಟ ಹರೀಶ್ ಸ್ಥಳದಲ್ಲೇ ಸಾವು

ಮಡಿಕೇರಿ: ತಡರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಚಲನಚಿತ್ರ ಹಾಗೂ ಕಿರುತೆರೆ ಸಹ ಕಲಾವಿದ ಹರೀಶ್ (40) ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಆನೆಕಾಡು ಅರಣ್ಯ ಪ್ರದೇಶದ ಬಳಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 275 ರ ಆನೆಕಾಡು ಸಮೀಪದಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ. ನಿನ್ನೆ ಕೆಲಸ ಮುಗಿಸಿಕೊಂಡು ತಡರಾತ್ರಿ ಹರೀಶ್ ಅವರು ಕುಶಾಲನಗರದಿಂದ ತಮ್ಮ ಸ್ವಗ್ರಾಮವಾದ ಹೊಸಕೋಟೆಗೆ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ರಸ್ತೆ …

Read More »

ಆಶಾ ಭೋಸ್ಲೆ ಅಗಲಿಕೆಯಿಂದ ಸಂಗೀತದ ಒಂದು ಸುವರ್ಣ ಯುಗ ಅಂತ್ಯ: ಜೋಶಿ ಕಂಬನಿ

ಬೆಂಗಳೂರು: ಖ್ಯಾತ ಹಿನ್ನೆಲೆ ಗಾಯಕಿ , ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತೆ ಆಶಾ ಭೋಸ್ಲೆ ಅಗಲಿಕೆಯಿಂದ ಸಂಗೀತದ ಒಂದು ಸುವರ್ಣ ಯೋಗವೇ ಅಂತ್ಯಗೊಂಡಂತಾಗಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್‌ ಜೋಶಿ ಕಂಬನಿ ಮಿಡಿದಿದ್ದಾರೆ. ಆಶಾ ಭೋಸ್ಲೆ ಅವರು ಭಾರತೀಯ ಸಂಗೀತ ಲೋಕದ ಅಪ್ರತಿಮ ಹಿನ್ನೆಲೆ ಗಾಯಕಿಯಾಗಿದ್ದು, ಇವರ ನಿಧನದ ಸುದ್ದಿ ಕೇಳಿ ತೀವ್ರ ದುಃಖವಾಗಿದೆ. ಗಾನ ಕೋಗಿಲೆ ಅಗಲಿಕೆ ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಉಂಟು …

Read More »

ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಶ್ರೀಮಂತಗೊಳಿಸಿದವರು ಆಶಾ ಭೋಸ್ಲೆ: ಮೋದಿ ಕಂಬನಿ

ನವದೆಹಲಿ: ಆಶಾ ಭೋಸ್ಲೆ ಅವರ ದಶಕಗಳ ಕಾಲದ ಸಂಗೀತ ಪ್ರಯಾಣವು ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಶ್ರೀಮಂತಗೊಳಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ. ಭಾರತ ಕಂಡ ಅತ್ಯಂತ ಪ್ರತಿಮಾರೂಪದ ಮತ್ತು ಬಹುಮುಖ ಪ್ರತಿಭೆಯ ಧ್ವನಿಗಳಲ್ಲಿ ಒಬ್ಬರಾದ ಆಶಾ ಭೋಸ್ಲೆ ಜಿ ಅವರ ನಿಧನದಿಂದ ತೀವ್ರ ದುಃಖವಾಗಿದೆ ಎಂದು ಎಕ್ಸ್‌ನಲ್ಲಿ ಕಂಬನಿ ಮಿಡಿದಿದ್ದಾರೆ. ಭೋಸ್ಲೆ ಅವರ ಸಂಗೀತ ವಿಶ್ವಾದ್ಯಂತ ಲೆಕ್ಕವಿಲ್ಲದಷ್ಟು ಹೃದಯಗಳನ್ನು ತಲುಪಿತ್ತು. ಅದು ಅವರ ಭಾವಪೂರ್ಣ ಮಧುರ ಅಥವಾ ರೋಮಾಂಚಕ …

Read More »

ಹೃದಯ ಸ್ತಂಭನದಿಂದ ಖ್ಯಾತ ಗಾಯಕಿ ಆಶಾ ಭೋಸ್ಲೆ ನಿಧನ

ಮುಂಬೈ: ಖ್ಯಾತ ಗಾಯಕಿ ಆಶಾ ಭೋಸ್ಲೆ (92) ಅವರು ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಆಶಾ ಭೋಸ್ಲೆ ಅವರಿಗೆ ಶನಿವಾರ ಹೃದಯಾಘಾತವಾಗಿತ್ತು. ತಕ್ಷಣ ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ಪುತ್ರ ಆನಂದ್ ಭೋಸ್ಲೆ ಅವರು ತಾಯಿಯ ಸಾವನ್ನು ದೃಢಪಡಿಸಿದ್ದಾರೆ. ‘ಅಮ್ಮ ಇನ್ನಿಲ್ಲ. ಅವರ ಅಂತ್ಯಕ್ರಿಯೆ ನಾಳೆ ಸಂಜೆ 4 ಗಂಟೆಗೆ ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ನಡೆಯಲಿದೆ’ ಎಂದು ತಿಳಿಸಿದ್ದಾರೆ. ಪಿಯಾ ತು ಅಬ್ …

Read More »

ಡಾ. ಅಂಬೇಡ್ಕರ್ ಕೇವಲ ಒಬ್ಬ ನಾಯಕ ಅಲ್ಲ, ಅವರು ಒಂದು ಶಕ್ತಿ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಮಹಿಳೆಯರ ಸಬಲೀಕರಣ, ಮಕ್ಕಳ ಶಿಕ್ಷಣ, ಎಲ್ಲರಿಗೂ ಗುಣಮಟ್ಟದ ಬದುಕು ಇವು ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ ಉದ್ದೇಶವಾಗಿತ್ತು. ಅವರು ಕೇವಲ ಒಬ್ಬ ನಾಯಕ ಅಲ್ಲ, ಅವರು ಒಂದು ಶಕ್ತಿ, ಅವರು ಒಂದು ಚಳವಳಿ. ಪ್ರತಿಯೊಬ್ಬ ಭಾರತೀಯನ ಆಶಾಕಿರಣ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ. ಶನಿವಾರ, ಬೆಳವಟ್ಟಿ ಗ್ರಾಮದಲ್ಲಿ ಮಹಾ ಮಾನವತಾವಾದಿ, ಸಂವಿಧಾನ ಶಿಲ್ಪಿ, ಮಹಾನಾಯಕ ಡಾ. ಬಿ.ಆರ್. ಅಂಬೇಡ್ಕರ್ ಅವರ ನೂತ‌ನ ಮೂರ್ತಿಯನ್ನು …

Read More »

ಫುಟ್ಬಾಲ್ ಟೂರ್ನಮೆಂಟ್ ಚಾಂಪಿಯನ್ ಆಗಿ ಹೊರಹೊಮ್ಮಿದ ಗೋಗಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ

ಬೆಳಗಾವಿ: ಬೆಳಗಾವಿಯ ಕೆಎಲ್‌ಎಸ್ ಗೋಗಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (KLS GIT) ವಿಟಿಯು ಬೆಳಗಾವಿ ವಿಭಾಗದ ಫುಟ್ಬಾಲ್ ಟೂರ್ನಮೆಂಟ್ 2026 ರಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಅಂತಿಮ ಪಂದ್ಯದಲ್ಲಿ, KLS GIT ತಂಡವು ಅಂಗಡಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವಿರುದ್ಧ 2–0 ಅಂಕಗಳಿಂದ ಜಯ ಸಾಧಿಸಿ ಪ್ರಶಸ್ತಿಯನ್ನು ಗೆದ್ದಿತು. ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ KLS GIT ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಜಾರ್ಜ್ ರೊಡ್ರಿಗ್ಸ್, ಅವರು ಬಹುಮಾನಗಳನ್ನು ವಿತರಿಸಿದರು. …

Read More »

ಸ್ತ್ರೀ ಶಿಕ್ಷಣದ ಹರಿಕಾರರ ಆಶಯಗಳು ಇಂದಿನ ಪ್ರಗತಿಗೆ ಮೂಲಾಧಾರ: ಉಪ ಆಯುಕ್ತ ಉದಯಕುಮಾರ್

ಬೆಳಗಾವಿ: ನಗರದ ಡಾ. ಬಿ.ಆರ್. ಅಂಬೇಡ್ಕರ್ ಉದ್ಯಾನವನದಲ್ಲಿ ಶನಿವಾರ ಮಹಾತ್ಮಾ ಜ್ಯೋತಿರಾವ್ ಫುಲೆ ಅವರ 200ನೇ ಜನ್ಮ ವಾರ್ಷಿಕೋತ್ಸವವನ್ನು ಸಡಗರದಿಂದ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಆಧುನಿಕ ಶಿಕ್ಷಣದ ತಾಯಿ ಸಾವಿತ್ರಿಬಾಯಿ ಫುಲೆ ಅವರ ಸ್ತ್ರೀಪರ ಹೋರಾಟ ಹಾಗೂ ಸಾಮಾಜಿಕ ಕ್ರಾಂತಿಯ ಸ್ಮರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮಹಾನಗರ ಪಾಲಿಕೆಯ ಉಪ ಆಯುಕ್ತ ಉದಯಕುಮಾರ ತಳವಾರ, “1848ರಲ್ಲಿ ಮಹಿಳಾ ಶಿಕ್ಷಣಕ್ಕಾಗಿ ಸಾವಿತ್ರಿಬಾಯಿ ಫುಲೆ ಕಂಡ ಕನಸು ಇಂದು ನನಸಾಗಿದೆ. ಅಂದು …

Read More »

ಈ ಎರಡು ದಿನ ಬೆಳಗಾವಿಯಲ್ಲಿ ಕಸಾಯಿಖಾನೆ/ಮಾಂಸಾಹಾರಿ ಅಂಗಡಿಗಳು ಬಂದ್

ಬೆಳಗಾವಿ: ಡಾ. ಬಿ. ಆರ್. ಅಂಬೇಡ್ಕರ ಜಯಂತಿ ಹಾಗೂ ಬಸವ ಜಯಂತಿ ಅಂಗವಾಗಿ ಬೆಳಗಾವಿ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಎಲ್ಲ ಕಸಾಯಿಖಾನೆ/ಮಾಂಸಾಹಾರಿ ಅಂಗಡಿಗಳನ್ನು ಏ.14, ಏ.20 ರಂದು ಬಂದ್ ಮಾಡುವದು ಕಡ್ಡಾಯವಾಗಿರುತ್ತದೆ. ಜಯಂತಿ ನಿಮಿತ್ತ ಕಸಾಯಿಖಾನೆ/ಮಾಂಸಾಹಾರಿ ಅಂಗಡಿಗಳ ಮಾಲೀಕರುಗಳು ತಮ್ಮ ಅಂಗಡಿಗಳನ್ನು ಬಂದ್ ಮಾಡಿ ಸಹಕರಿಸಬೇಕು, ಈ ದಿನಗಳಂದು ಕಸಾಯಿಖಾನೆ/ಮಾಂಸಾಹಾರಿ ಅಂಗಡಿ ಮಾಲೀಕರು ಉಲ್ಲಂಘನೆ ಮಾಡಿರುವದು ಕಂಡು ಬಂದಲ್ಲಿ ಅಂತಹ ಮಾಲೀಕರುಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು …

Read More »