Breaking News

Daily Archives: ಏಪ್ರಿಲ್ 20, 2026

ದರ್ಗಾಗೆ ಬಂದಿದ್ದಾಗ ಅವಘಡ – ಕಾವೇರಿ ನದಿಗೆ ಇಳಿದಿದ್ದ 6 ಮಂದಿ ಜಲಸಮಾಧಿ

ಮೈಸೂರು: ಈಜಲು ಕಾವೇರಿ ನದಿಗೆ ಇಳಿದಿದ್ದ 6 ಮಂದಿ ಜಲಸಮಾಧಿಯಾಗಿರುವ ಘಟನೆ ಕೆ.ಆರ್ ನಗರದ ಅರ್ಕೇಶ್ವರ ದೇಗುಲದ  ಬಳಿ ನಡೆದಿದೆ. ದರ್ಗಾಕ್ಕೆ ಬಂದಿದ್ದ ಮುಸ್ಲಿಂ ಕುಟುಂಬದ  8 ಜನರು ನದಿಗೆ ಇಳಿದಿದ್ದರು. ಈ ವೇಳೆ ನೀರಿನ ರಭಸಕ್ಕೆ ಸಿಲುಕಿ 6 ಮಂದಿ ಜಲಸಮಾಧಿಯಾಗಿದ್ದಾರೆ. ಉಳಿದ ಇಬ್ಬರನ್ನ ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಯಾಸಿನ್ (23), ಫಾತಿಮ್ (30), ನೇಹಾನ್(19), ಅಲೀಂ (13), ಹುಮಾಯೂನ್ (7), ವರ್ಷ ಮೃತ ದುರ್ದೈವಿಗಳೆಂದು ಗುರುತಿಸಲಾಗಿದೆ. ಘಟನೆ …

Read More »

ಅಥಣಿಯಲ್ಲಿ ಗಾಳಿ ಮಳೆ ಅಬ್ಬರ – ಧರೆಗುರುಳಿದ 40ಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು

ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಅಥಣಿ  ತಾಲೂಕಿನಲ್ಲಿ ಅಕಾಲಿಕ‌ ಮಳೆ ಅವಾಂತರ ಸೃಷ್ಟಿಸಿದೆ. ಬಿರುಗಾಳಿ ಮಳೆ  ಅಬ್ಬರಕ್ಕೆ ತಾಲೂಕಿನ ಬೇವನೂರ ಗ್ರಾಮದಲ್ಲಿ 40ಕ್ಕೂ ಅಧಿಕ ಕಂಬಗಳು  ಧರೆಗುರಳಿವೆ. ಪರಿಣಾಮ ತಾಲೂಕಿನ ವಿವಿಧ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಹಲವೆಡೆ ಆಲಿಕಲ್ಲು ಸಹಿತ ಮಳೆಯಾಗಿದೆ. ಕೊಹಳ್ಳಿ ಗ್ರಾಮದಲ್ಲಿ ರಸ್ತೆ ಮಧ್ಯೆ ಮರ ಬಿದ್ದಿದೆ. ಗಾಳಿಯ ಅಬ್ಬರಕ್ಕೆ ಗ್ರಾಮದ ಶಾಲೆಯ ಮೇಲ್ಛಾವಣಿ ಕಿತ್ತು ಹೋಗಿದೆ. ತಾಲೂಕಿನ, ತಾವಂಶಿ, ಮದಭಾವಿ, ಮಲಬಾದ ಸೇರಿದಂತೆ ಹಲವು ಗ್ರಾಮಗಳಲ್ಲಿ …

Read More »

ಗದಗದ ಮುಕ್ತಿಮಂದಿರ ಮಠಕ್ಕೆ ಡಿಕೆಶಿ ದಿಢೀರ್ ಭೇಟಿ

ಗದಗ: ರಾಜ್ಯ ರಾಜಕಾರಣದಲ್ಲಿ ಸಿಎಂ ಬದಲಾವಣೆ ಚರ್ಚೆ ಜೋರಾಗಿದೆ. ಡಿಸಿಎಂ ಡಿ.ಕೆ ಶಿವಕುಮಾರ್  ಮುಂದಿನ ಸಿಎಂ ಆಗುತ್ತಾರೆ ಎಂಬ ಚರ್ಚೆ ಹಲವು ದಿನಗಳಿಂದ ನಡೆಯುತ್ತಿದೆ. ಹೀಗಾಗಿ ಸಿಎಂ ಸ್ಥಾನಕ್ಕೆ ಬಂದ ಕಂಟಕ ದೂರ ಮಾಡಲು ಡಿಕೆಶಿ ತಮ್ಮ ಆರಾಧ್ಯ ದೈವ ಲಕ್ಷ್ಮೇಶ್ವರದ   ಮುಕ್ತಿಮಂದಿರ ಮಠ ಲಿಂಗೈಕ್ಯ ವೀರಗಂಗಾಧರ್ ಜಗದ್ಗುರುಗಳಿಗೆ (ಅಜ್ಜಯ್ಯ) ವಿಶೇಷ ಪೂಜೆ ಸಲ್ಲಿಸಿದ್ದಾರೆ. ಮಠದಲ್ಲಿ ಯಾರಿಗೂ ಅವಕಾಶ ನೀಡದೇ ಒಂದು ಗಂಟೆಗಳ ಕಾಲ ಜಪ-ತಪ ಮಾಡುವ ಮೂಲಕ ಪ್ರಾರ್ಥನೆ …

Read More »

ಪತ್ನಿಯ ಸಹೋದರಿಯನ್ನು ಮದುವೆಯಾಗಬೇಕಿದ್ದ ವೈದ್ಯನ ಹತ್ಯೆ

ಕಾರವಾರ: ಮೃತ ಪತ್ನಿಯ ಸಹೋದರಿಯನ್ನೇ ವಿವಾಹವಾಗಲು ಸಿದ್ದವಾಗಿದ್ದ ವೈದ್ಯನನ್ನು ಬರ್ಬರವಾಗಿ ಹತ್ಯೆ  ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ಕೆಹೆಚ್‌ಬಿ ಕಾಲೋನಿಯಲ್ಲಿ ನಡೆದಿದೆ. ಡಾ. ರಮೇಶ್ ಕಲಗುಟಕರ್ (51) ಹತ್ಯೆಯಾದ ವೈದ್ಯ. ಕಳೆದ ಎಂಟು ತಿಂಗಳ ಹಿಂದೆ ಇವರ ಪತ್ನಿ ಮೃತಪಟ್ಟಿದ್ದರು. ದಂಪತಿಯ ಇಬ್ಬರು ಗಂಡು ಮಕ್ಕಳ ಪೈಕಿ ಓರ್ವ ವೈದ್ಯನಾಗಿದ್ದರೆ ಮತ್ತೊಬ್ಬ ಎಂಜಿನಿಯರಿಂಗ್‌ ಓದುತ್ತಿದ್ದಾನೆ.  ತನ್ನ ಮನೆಯಲ್ಲಿ ವಾಸವಿದ್ದ ರಮೇಶ್‌ ಪತ್ನಿಯ ಸಹೋದರಿಯನ್ನೇ ಸೋಮವಾರ(ಏ.20) ವಿವಾಹವಾಗಬೇಕಿತ್ತು. …

Read More »

ಮಕ್ಕಳ ಕೌನ್ಸಿಲಿಂಗ್ ಪ್ರಕ್ರಿಯೆ ಪೂರ್ಣ – ಇಂದು ವಚನಾನಂದ ಶ್ರೀಗಳ ಭವಿಷ್ಯ ನಿರ್ಧಾರ

ದಾವಣಗೆರೆ: ಜಿಲ್ಲೆಯ ಹರಿಹರ ಪಂಚಮಸಾಲಿ ಪೀಠದ  ವಿವಾದ ಅತ್ಯಂತ ಕ್ಲಿಷ್ಟಕರ ಹಂತಕ್ಕೆ ತಲುಪಿದೆ. ಉಚ್ಚಾಟಿತ ವಚನಾನಂದ ಸ್ವಾಮೀಜಿ  ವಿರುದ್ಧ ಕೇಳಿ ಬಂದಿರುವ ವಿಕೃತ ಆರೋಪದ ಸತ್ಯಾಸತ್ಯತೆ ಬಯಲಾಗಲಿದೆ. ಮಠದ ಮೂವರು ಮಕ್ಕಳು ನೀಡಿದ್ದ ದೂರಿನ ಅನ್ವಯ ನಡೆದಿದ್ದ ಕೌನ್ಸಿಲಿಂಗ್ ವರದಿ ಇನ್ನೇನು ಸಿಡಬ್ಲ್ಯೂಸಿ ಕೈಸೇರಲಿದೆ. ಮಕ್ಕಳ ಹೇಳಿಕೆಯಲ್ಲಿ ಏನಿದೆ? ಶ್ರೀಗಳ ಮೇಲೆ ಪೋಕ್ಸೋ ಕೇಸ್ ದಾಖಲಾಗುತ್ತಾ ಎಂಬುದು ಇಂದು ನಿರ್ಧಾರವಾಗಲಿದೆ. ಹರಿಹರ ಪಂಚಮಸಾಲಿ ಪೀಠದ ಆವರಣದಲ್ಲಿ ಮೌನ ಆವರಿಸಿದೆ. ಅನಾಥ …

Read More »