Breaking News

Daily Archives: ಏಪ್ರಿಲ್ 4, 2026

ಮೂರು ವರ್ಷದಲ್ಲಿ 2809 ಜನ ರೈತರ ಸಾವು

ಸ್ವಂತ, ಸ್ವಾರ್ಥಕ್ಕೋಸ್ಕರ ರಾಜ್ಯದ ಜನರಿಗೆ ವಂಚನೆ: ವಿ.ಸೋಮಣ್ಣ ಬಾಗಲಕೋಟೆ: ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯನವರು ತಮ್ಮ ಅಧಿಕಾರವನ್ನು ಸ್ವಂತಕ್ಕೋಸ್ಕರ, ಸ್ವಾರ್ಥಕ್ಕೋಸ್ಕರ ಮತ್ತು ರಾಜ್ಯದ ಜನರಿಗೆ ವಂಚನೆ ಮಾಡುವ ಕೆಲಸ ಮಾಡಿ, ಈ ರಾಜ್ಯವನ್ನು ಕತ್ತಲೆ ಕೋಣೆಯಲ್ಲಿಡುವ ಕೆಲಸ ಮಾಡಿದ್ದಾರೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಅವರು ಆರೋಪಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವು ಬೆಂಗಳೂರು ನಗರದ ಅಭಿವೃದ್ಧಿಯಲ್ಲಿ ನಮ್ಮದೇ ಆದ ಪಾಲುದಾರಿಕೆಯನ್ನು ಕೊಟ್ಟಿದ್ದೇವೆ ಎಂದು ತಿಳಿಸಿದರು. ಯಾವುದೇ ಶಾಸಕರೂ ತನ್ನ …

Read More »

ಬಸನಗೌಡ ಯತ್ನಾಳ ಭರ್ಜರಿ ಪ್ರಚಾರ

ಬಾಗಲಕೋಟೆ: ಉಪಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಲೇ ಇದ್ದು ಬಿಜೆಪಿ ಪ್ರಚಾರಕ್ಕೆ ಜನ ಬೆಂಬಲ ಪ್ರವಾಹದಂತೆ ಹರಿಯುತ್ತಿದೆ. ಇಂದು ಶಾಸಕ ಬಸನಗೌಡ ಯತ್ನಾಳ ಅವರು ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರ ಪರವಾಗಿ ಗ್ರಾಮೀಣ ಪ್ರದೇಶಗಳಾದ ಸುತಗುಂಡಾರ, ಮುಗಳೊಳ್ಳಿ, ಚಿಕ್ಕಮ್ಯಾಗೇರಿ, ಹಿರೇಮ್ಯಾಗೇರಿಗಳಲ್ಲಿ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು ಕಾಂಗ್ರೆಸ್ ಸರ್ಕಾರದ ದುರಾಡಳಿತ, ಒಂದು ಕೋಮಿನವರಿಗೆ ಆದ್ಯತೆ ನೀಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದೂಳಿದ …

Read More »

ಬಿಜೆಪಿ ಆಯ್ಕೆಯಿಂದ ಭ್ರಷ್ಟ ಆಡಳಿತಕ್ಕೆ ಚಾಟಿ ಏಟು: ವಿ.ಸೋಮಣ್ಣ

ಬಿಜೆಪಿ ಸಭೆಗೆ ಕಾಂಗ್ರೆಸ್ ಕಾರ್ಯಕರ್ತರ ಅಡ್ಡಿ ಬಾಗಲಕೋಟೆ: ಭ್ರಷ್ಟ ಆಡಳಿತಕ್ಕೆ ಚಾಟಿ ಏಟು ಕೊಡಲು ಸೂಕ್ತ ಅವಕಾಶ ಒದಗಿ ಬಂದಿದ್ದು ಐಹೊಳೆ ಅಭಿವೃದ್ಧಿಗೆ ಮಾರಕವಾದ ಕಾಂಗ್ರೆಸ್ ತೊಲಗಿಸಿ ಬಿಜೆಪಿ ಗೆಲ್ಲಿಸಿ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದರು. ಉಪಚುನಾವಣೆ ಹಿನ್ನೆಲೆ ಐಹೊಳೆಯಲ್ಲಿ ಹಮ್ಮಿಕೊಂಡ ಮತಯಾಚನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಐಹೊಳೆ ಸ್ಥಳಾಂತರಕ್ಕೆ ಸರಕಾರ ಆದೇಶ ಮಾಡಿದರೂ ಅದನ್ನು ನಿಲ್ಲಿಸಿ ಕಾಂಗ್ರೆಸ್ ಮೋಸ ಮಾಡಿದೆ. ಉಪಚುನಾವಣೆ ಮುಗದ ತಕ್ಷಣವೇ ಕೇಂದ್ರ ಸರಕಾರದಿಂದ …

Read More »

ಬೆಂಗಳೂರಿಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಆಗಮನ

ಬೆಂಗಳೂರು: ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಕೇಂದ್ರ ಗೃಹ ಸಚಿವರಾದ ಅಮಿತ್‌ ಶಾ ಬೆಂಗಳೂರಿಗೆ ಆಗಮಿಸಿದರು. ಅವರನ್ನು ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೆಚ್.ಎ.ಎಲ್ ವಿಮಾನ ನಿಲ್ದಾಣದಲ್ಲಿ ಆತ್ಮೀಯವಾಗಿ ಸ್ವಾಗತಿಸಿ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷ ನಾಯಕರಾದ ಚಲವಾದಿ ನಾರಾಯಣಸ್ವಾಮಿ, ಸಂಸದ ಪಿ.ಸಿ ಮೋಹನ್‌ ಸೇರಿದಂತೆ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

Read More »

ಎರಡು ಗುಂಪುಗಳ ನಡುವೆ ಮಾರಾಮಾರಿ – ಮಹಿಳೆಯನ್ನ ಬೆತ್ತಲುಗೊಳಿಸಿ ಹಲ್ಲೆಗೆ ಯತ್ನ

ಹಾಸನ: ದಾರಿ ವಿಚಾರಕ್ಕೆ ಗ್ರಾಮದ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು, ಈ ವೇಳೆ ಮಹಿಳೆಯನ್ನ ಬೆತ್ತಲೆಗೊಳಿಸಿ ಹಲ್ಲೆಗೆ ಯತ್ನಿಸಿರುವ ಘಟನೆ ಹಾಸನ  ಜಿಲ್ಲೆಯ ಬೇಲೂರು  ತಾಲ್ಲೂಕಿನ ಹಂಚಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಮಾ.22ರಂದು ಬೆಳಿಗ್ಗೆ ಗ್ರಾಮದ ಗೋವಿಂದಪ್ಪ, ಕುಮಾರ್ ಹಾಗೂ ಇತರರ ಮನೆಗೆ ತೆರಳಲು ದಾರಿ ನಿರ್ಮಾಣ ವಿಚಾರದಲ್ಲಿ ಗಲಾಟೆ ನಡೆದಿದೆ. ಈ ವೇಳೆ ಗೋವಿಂದಪ್ಪನ ಸಂಬಂಧಿ ಮಹಿಳೆಯನ್ನ ವಿವಸ್ತ್ರಗೊಳಿಸಿ ಹಲ್ಲೆಗೆ ಮುಂದಾಗಿದ್ದು, ಘಟನೆ ಸಂಬಂಧ ಹಳೆಬೀಡು ಪೊಲೀಸ್ ಠಾಣೆಯಲ್ಲಿ …

Read More »

ಅತ್ತೆ, ಮಾವನ ಕಿರುಕುಳಕ್ಕೆ ಬೇಸತ್ತು ಗರ್ಭಿಣಿ ನರ್ಸ್‌ ಆತ್ಮಹತ್ಯೆ – ನಾಲ್ವರು ಅರೆಸ್ಟ್‌

ಶಿವಮೊಗ್ಗ: ಅತ್ತೆ, ಮಾವನ ಕಿರುಕುಳಕ್ಕೆ 4 ತಿಂಗಳ ಗರ್ಭಿಣಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಸೊರಬ (Soraba) ತಾಲೂಕಿನ ಹೊಡಬಟ್ಟೆ ಗ್ರಾಮದಲ್ಲಿ ನಡೆದಿದೆ. ಆತ್ಮಹತ್ಯೆಗೆ ಶರಣಾದ ಮಹಿಳೆಯನ್ನು ಶ್ವೇತಾ (30) ಎಂದು ಗುರುತಿಸಲಾಗಿದೆ. ಮಹಿಳೆ ಸ್ಟಾಫ್‌ ನರ್ಸ್ (Nurse) ಆಗಿ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಮಾರ್ಚ್ 29 ರಂದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಮನೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದರು. ಸಾಗರದ ಖಾಸಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, …

Read More »

ಬೆಳಗಾವಿ: ಗ್ರಾಹಕರ ಹಣ ಮರಳಿಸದ ಸೊಸೈಟಿ ಅಧ್ಯಕ್ಷನಿಗೆ ಒಂದು ವರ್ಷ ಜೈಲು ಶಿಕ್ಷೆ

ಗ್ರಾಹಕರ ಠೇವಣಿ ಮರಳಿಸುವಂತೆ ನೀಡಿದ್ದ ಆದೇಶ ಪಾಲಿಸದ ಬೆಳಗಾವಿಯ ರಿದ್ದಿಸಿದ್ಧಿ ವಿವಿಧೋದ್ದೇಶ ಕೋ-ಆಪ್ ಸೊಸೈಟಿ ಅಧ್ಯಕ್ಷ ಶ್ಯಾಮ ಜಾಧವಗೆ 1 ವರ್ಷ ಜೈಲು ಶಿಕ್ಷೆ ಹಾಗೂ 25 ಸಾವಿರ ರೂ. ದಂಡ ವಿಧಿಸಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ತೀರ್ಪು ಪ್ರಕಟಿಸಿದೆ ಎಂದು ನ್ಯಾಯವಾದಿ ಎನ್.ಆರ್.ಲಾತೂರ್ ತಿಳಿಸಿದರು. ಶುಕ್ರವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಠೇವಣಿ ಅವಧಿ ಮುಗಿದರೂ ಹಣ ಮರಳಿಸುತ್ತಿಲ್ಲ ಎಂದು ಸೊಸೈಟಿ ಗ್ರಾಹಕರಾದ ಸ್ನೇಹಾ ನಾದ ಮತ್ತು …

Read More »