Breaking News
Home / 2021 / ಜುಲೈ / 19 (page 2)

Daily Archives: ಜುಲೈ 19, 2021

ಗೊಂದಲದಲ್ಲಿರುವ ಬಿಜೆಪಿ ಸರ್ಕಾರ ಬಹಳ ದಿನ ಉಳಿಯುವುದಿಲ್ಲ: ಎನ್.ಎಸ್.ಬೋಸರಾಜು

ರಾಯಚೂರು: ಬಿಜೆಪಿ ಪಕ್ಷದಲ್ಲಿ ಕಳೆದ ಒಂದು ವರ್ಷದಿಂದ ಬಹಳ ಗೊಂದಲಗಳಿವೆ. ಪಕ್ಷದ ಗೊಂದಲಗಳಿಂದ ಸರ್ಕಾರ ಅಭಿವೃದ್ಧಿ ಕೆಲಸಗಳನ್ನೂ ಮಾಡುತ್ತಿಲ್ಲ. ಗೊಂದಲದಲ್ಲಿರುವ ಪಕ್ಷದ ಸರ್ಕಾರ ಬಹಳ ದಿನ ಉಳಿಯುವುದಿಲ್ಲ ಅಂತ ವಿಧಾನ ಪರಿಷತ್ ಮಾಜಿ ಸದಸ್ಯ ಎನ್.ಎಸ್.ಬೋಸರಾಜು ಹೇಳಿದ್ದಾರೆ. ರಾಯಚೂರಿನಲ್ಲಿ ಮಾತನಾಡಿದ ಅವರು, ಆಡಳಿತ ಚುಕ್ಕಾಣಿ ಹಿಡಿದ ಪಕ್ಷ ಸ್ಥಿರ ಸರ್ಕಾರ ಕೊಡಬೇಕು. ಬಿಜೆಪಿ ರಾಜ್ಯಾಧ್ಯಕ್ಷರ ಮಾತುಗಳನ್ನ ನೋಡಿದರೆ ಪಕ್ಷದಲ್ಲಿ ಸರಿಯಿಲ್ಲ ಅನ್ನೋದು ಸ್ಪಷ್ಟವಾಗಿ ಕಾಣುತ್ತಿದೆ. ರಾಜ್ಯದ ಜನ ಸಂಕಷ್ಟದಲ್ಲಿದ್ದಾರೆ. ಪಕ್ಷದ …

Read More »

ಇಂದ್ರಜಿತ್‍ಗೆ ಬೆದರಿಕೆ ಕರೆ – ದರ್ಶನ್ ಹಿಂಬಾಲಕರ ವಿರುದ್ಧ ದೂರು

ಬೆಂಗಳೂರು: ಸ್ಯಾಂಡಲ್‍ವುಡ್ ನಟ ದರ್ಶನ್ ಹಾಗೂ ನಿರ್ದೇಶಕ ಇಂದ್ರಜಿತ್ ಲಂಕೇಶ್ ನಡುವಿನ ವಾಕ್ಸಮರದ ನಡುವೆ ಇದೀಗ ಇಂದ್ರಜಿತ್ ಗೆ ಬೆದರಿಕೆ ಕರೆಗಳು ಬರಲು ಆರಂಭಿಸಿವೆ. ಈ ಸಂಬಂಧ ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಇಂದ್ರಜಿತ್, ಕಳೆದ 24 ಗಂಟೆಗಳಿಂದ ಫೋನ್ ಕರೆಗಳು ನಿರಂತರವಾಗಿ ಬರುತ್ತಿವೆ. ಈ ಮೂಲಕ ದರ್ಶನ್ ಹಿಂಬಾಲಕರು ದುರ್ವರ್ತನೆ ತೋರುತ್ತಿದ್ದಾರೆ. 30 ರಿಂದ 35 ಜನರಿಂದ ರಾತ್ರಿ ಹಗಲು ಫೋನ್ ಮಾಡ್ತಿದ್ದಾರೆ ಎಂದು ದೂರಿದ್ದಾರೆ. ಬೆದರಿಕೆ ಕರೆಗಳು …

Read More »

ಕುಟುಂಬದಲ್ಲಿ ಆದ ಗೊಂದಲ ಬಗೆಹರಿದಿದೆ: ಮೇಘಾ ಶೆಟ್ಟಿ

ಬೆಂಗಳೂರು: ಸ್ಯಾಂಡಲ್‍ವುಡ್‍ನ ಕಿರುತೆರೆ ನಟಿ ಮೇಘಾ ಶೆಟ್ಟಿ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಜೊತೆ ಜೊತೆಯಲಿ ಧಾರಾವಾಹಿಯಿಂದ ಹೊರ ಬಂದಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಈಗ ಮೇಘಾ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ ನಾನು ಧಾರಾವಾಹಿಯಲ್ಲಿ ನಟಿಸುತ್ತಿಲ್ಲ ಎನ್ನುವ ಸುದ್ದಿ ನಾಲ್ಕೈದು ದಿನಗಳಿಂದ ಹರಿದಾಡಿತ್ತು. ಕುಟುಂಬ ಎಂದಾಗ ಗೊಂದಲ ಸಹಜವಾಗಿರುತ್ತದೆ. ಈಗ ಗೊಂದಲ ಬಗೆಹರಿದಿದೆ. ಜೊತೆ ಜೊತೆಯಲಿ ಧಾರಾವಾಹಿ ಮುಗಿಯುವ ತನಕ ಅನು ಸಿರಿಮನೆ ಪಾತ್ರವನ್ನು ನಾನೇ ಮಾಡುತ್ತೇನೆ. ಈ ಗೊಂದಲದಿಂದ ವೀಕ್ಷಕರಲ್ಲಿ …

Read More »

ಎಣ್ಣೆ ಬೇಕು ಎಣ್ಣೆ, ಬಾರ್ ಬಂದ್ ಮಾಡ್ಬೇಡಿ: ಬಿಜೆಪಿ ಮುಖಂಡನ ಪ್ರತಿಭಟನೆ

ಬೆಳಗಾವಿ/ಚಿಕ್ಕೋಡಿ: ಎಣ್ಣೆ ಬೇಕು ಎಣ್ಣೆ ಎಂದು ಬಿಜೆಪಿ ಮುಖಂಡ ಹಾಗೂ ಗ್ರಾಮ ಪಂಚಾಯತಿ ಸದಸ್ಯ ಚಿಕ್ಕೋಡಿಯಲ್ಲಿ ಪ್ರತಿಭಟನೆ ಮಾಡಿದ್ದಾರೆ. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಸಂಬರಗಿ ಗ್ರಾಮದಲ್ಲಿ ಬಾರ್ ಬಂದ್ ಮಾಡದಂತೆ ಮದ್ಯ ಪ್ರಿಯರ ಜೊತೆಗೆ ಗ್ರಾಮ ಪಂಚಾಯತಿ ಸದಸ್ಯ ಪ್ರತಿಭಟನೆ ನಡೆಸಿದ್ದಾರೆ. ಬಾರ್ ಎದುರೇ ಗುಂಪು ಕಟ್ಟಿಕೊಂಡು ಎಣ್ಣೆ ಬೇಕು ಎಣ್ಣೆ ಎಂದು ಪ್ರೊಟೆಸ್ಟ್ ಮಾಡಿದ್ದಾರೆ. ಸಂಬರಗಿ ಗ್ರಾಮ ಪಂಚಾಯತ ಸದಸ್ಯ ಅಶೋಕ್ ಭಾನುದಾಸೆ ಮಾನೆ ಹಾಗೂ ಕೆಲವು …

Read More »

ಶಿಕ್ಷಣ ಸಚಿವ ಸುರೇಶ್ ಕುಮಾರ್ ಪ್ರಬುದ್ಧರು, ಜೊತೆಗೆ ಉತ್ತಮ ವಾಗ್ಮಿಗಳಾಗಿದ್ದಾರೆ”: ಉಮೇಶ್ ಕತ್ತಿ

ಚಿಕ್ಕೋಡಿ: ಶಿಕ್ಷಣ ಸಚಿವ ಸುರೇಶ್ ಕುಮಾರ್ ಪ್ರಬುದ್ಧರು, ಜೊತೆಗೆ ಉತ್ತಮ ವಾಗ್ಮಿಗಳಾಗಿದ್ದಾರೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರನ್ನು ಆಹಾರ ಹಾಗೂ ನಾಗರಿಕ ಪೂರೈಕೆ ಸಚಿವ ಉಮೇಶ್ ಕತ್ತಿ ಅವರು ಚಿಕ್ಕೋಡಿಯಲ್ಲಿ ಹಾಡಿಹೊಗಳಿದ್ದಾರೆ. ಇಂದು ನಡೆದ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಕೇಂದ್ರಗಳಿಗೆ ಸಚಿವ ಉಮೇಶ್ ಕತ್ತಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮಾತನಾಡಿದ ಅವರು, ಶಿಕ್ಷಣ ಸಚಿವರು ಜವಾಬ್ದಾರಿಯುತ ಮಂತ್ರಿಯಾಗಿದ್ದಾರೆ. ಉತ್ತಮ ರೀತಿಯಿಂದ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ …

Read More »

ವಿಜಯೇಂದ್ರರಿಗೆ ಆಪ್ತರಿರೋರು ಸಿಸಿಬಿಯಲ್ಲಿದ್ದಾರೆ: ಯತ್ನಾಳ್

ವಿಜಯಪುರ: ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರಿಗೆ ಆಪ್ತರಾಗಿರುವವರು ಸಿಸಿಬಿಯಲ್ಲಿದ್ದಾರೆ ಎಂದು ಹೇಳುವ ಮೂಲಕ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಕಾಲೆಳೆದಿದ್ದಾರೆ, ಸಿಸಿಬಿಯವರು ಏನ್ ಮಾಡ್ತಿದ್ದಾರೆ? ಸಿಸಿಬಿ ಕೆಲಸವಿರದ ತನಿಖೆಗಳನ್ನೆಲ್ಲ ಮಾಡ್ತಾರೆ. ಡ್ರಗ್ಸ್ ಕೇಸ್, ಯುವರಾಜ್ ಕೇಸ್ ಅರ್ಧಕ್ಕೆ ಬಿಟ್ರು. ಸಿಸಿಬಿಯಲ್ಲಿರೋ ಹಿರಿಯ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸಲಿ. ವಿಜಯೇಂದ್ರರಿಗೆ ಆಪ್ತರಿರೋರು ಸಿಸಿಬಿಯಲ್ಲಿದ್ದಾರೆ, ಕಣ್ಣು ತೆರೆದು ನೋಡಲಿ ಎಂದು ಹೇಳಿದ್ದಾರೆ.   ಇದೇ ವೇಳೆ ಕಟೀಲ್ …

Read More »

ಬೆಳಗಾವಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿ ಅವೈಜ್ಞಾನಿಕ: ಸತೀಶ ಜಾರಕಿಹೊಳಿ

ಬೆಳಗಾವಿ: ಮುಖ್ಯಮಂತ್ರಿ ಹುದ್ದೆಯಿಂದ ಒಬ್ಬರು ಕೆಳಗಿಳಿಯುತ್ತಾರೆ; ಮತ್ತೊಬ್ಬರು ಆ ಹುದ್ದೆಗೇರುತ್ತಾರೆ. ಆದರೆ, ಕೆಳಗಿಳಿಯುವವರಿಂದ ಯಾವ ವಾಣಿ (ಸಂದೇಶ) ಹೊರಬರುತ್ತದೆ ಎಂದು ಕಾಯುತ್ತಿದ್ದೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು. ನಗರದ ಕಾಂಗ್ರೆಸ್ ಭವನದಲ್ಲಿ ಪತ್ರಕರ್ತರೊಂದಿಗೆ ಸೋಮವಾರ ಮಾತನಾಡಿದ ಅವರು, ಮುಖ್ಯಮಂತ್ರಿ ಬದಲಾವಣೆಯಿಂದ ಕಾಂಗ್ರೆಸ್‌ಗೆ ಯಾವ ಲಾಭವೂ ಇಲ್ಲ; ನಷ್ಟವೂ ಇಲ್ಲ. ಮುಖ್ಯಮಂತ್ರಿ ಬದಲಾದರೂ ಸರ್ಕಾರ ಅವರದ್ದೇ ಇರುತ್ತದೆ. ನಾವು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇವೆ ಎಂದರು. ಮಧ್ಯಂತರ ಚುನಾವಣೆ ಬಂದರೂ …

Read More »

ಮುಖ್ಯಮಂತ್ರಿ ಸ್ಥಾನದಿಂದ ಬಿ.ಎಸ್​ ಯಡಿಯೂರಪ್ಪರನ್ನು ತೆಗೆಯುತ್ತಾರೆ ಎಂದು ಮೊದಲೇ ಹೇಳಿದ್ದೇ. ನಾನು ಹೇಳಿದ್ದು ನೀವು ಯಾರು ನಂಬಲಿಲ್ಲ

ಬೆಂಗಳೂರು: ಸಿಎಂ ಯಡಿಯೂರಪ್ಪ ಬದಲಾವಣೆ ಬಗ್ಗೆ ಮೊದಲೇ ಮಾಹಿತಿ ಇತ್ತು ಎಂದ ಸಿದ್ದರಾಮಯ್ಯ ಹೇಳಿದ್ದೇನು? ಸಿಎಂ ಸ್ಥಾನದಿಂದ ಯಡಿಯೂರಪ್ಪರನ್ನು ಕೆಳಗಿಳಿಸುತ್ತಿರುವ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ಈ ಸಂಬಂಧ ಸುದ್ದಿಗಾರರೊಂದಿಗೆ ಮಾತಾಡಿದ ಸಿದ್ದರಾಮಯ್ಯ, ಮುಖ್ಯಮಂತ್ರಿ ಸ್ಥಾನದಿಂದ ಬಿ.ಎಸ್​ ಯಡಿಯೂರಪ್ಪರನ್ನು ತೆಗೆಯುತ್ತಾರೆ ಎಂದು ಮೊದಲೇ ಹೇಳಿದ್ದೇ. ನಾನು ಹೇಳಿದ್ದು ನೀವು ಯಾರು ನಂಬಲಿಲ್ಲ ಎಂದರು. ಮುಖ್ಯಮಂತ್ರಿ ಬದಲಾವಣೆ ಬಗ್ಗೆ ನನಗೆ ಮೊದಲೇ ಮಾಹಿತಿ ಇತ್ತು. ಅವಧಿಪೂರ್ವ ಚುನಾವಣೆ ಬರುತ್ತೆ ಅಂತ …

Read More »

KSRTC ಬಸ್ ಅಪಘಾತ : ಚಾಲಕ ಸಾವು, 15 ಜನರಿಗೆ ಗಾಯ

ಮಂಗಳೂರು: ಬೆಂಗಳೂರಿನಿಂದ ಕೇರಳದ ಕಣ್ಣೂರು ಜಿಲ್ಲೆಯ ಮಂಕುಟ್ಟಂಗೆ ಪ್ರಯಾಣಿಸುತ್ತಿದ್ದ ಬಸ್ ಮತ್ತೊಂದು ಬಸ್ʼಗೆ ಡಿಕ್ಕಿ ಹೊಡೆದಿದೆ. ಈ ಪರಿಣಾಮ ಚಾಲಕ ಮೃತಪಟ್ಟಿದ್ದು, ಸುಮಾರು 15 ಪ್ರಯಾಣಿಕರು ಗಾಯಗೊಂಡಿದ್ದಾರೆ. ಬಸ್ ಚಾಲಕ, ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ವೋಲ್ವೋ ಉದ್ಯೋಗಿಯಾಗಿದ್ದಾರೆ.   ಕೇರಳ-ಕರ್ನಾಟಕ ಗಡಿ ಬಳಿ ಮುಂಜಾನೆ ವಾಹನದ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿತ್ತು. ‘ಈ ಘಟನೆ ಸುಮಾರು 4.45ಕ್ಕೆ ಸಂಭವಿಸಿದೆ. ಪೆರುಂಬಾಡಿ ಚೆಕ್ ಪಾಯಿಂಟ್ ದಾಟಿ ಮರಕ್ಕೆ ಡಿಕ್ಕಿ …

Read More »

ನಿಂತಿದ್ದ ಲಾರಿಗೆ ಕಾರು ಡಿಕ್ಕಿ -4 ವರ್ಷದ ಬಾಲಕ ಸೇರಿ ಮೂವರು ಸ್ಥಳದಲ್ಲೇ ಸಾವು

ಚಿತ್ರದುರ್ಗ: ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೂವರು ಮೃತಪಟ್ಟು ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಹಿರಿಯೂರು ತಾಲೂಕಿನ ಐಮಂಗಲ ಬಳಿ ನಡೆದಿದೆ. ಜಯರಾಂ (28), ಸುಶೀಲಾ (26), ಆಕಾಶ್ (4) ಮೃತರು. ಅಪಘಾತದಲ್ಲಿ ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಚಿತ್ರದುರ್ಗ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.   ಮೃತರು ರಾಜಸ್ಥಾನ ಮೂಲದವರಾಗಿದ್ದು ರಾಜಸ್ಥಾನ ದಿಂದ ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು …

Read More »