Home / 2021 / ಜುಲೈ / 03 (page 3)

Daily Archives: ಜುಲೈ 3, 2021

ಮಗನ ಮೇಲೆಯೇ ತಾಯಿಯ ಲೈಂಗಿಕ ದೌರ್ಜನ್ಯ: ಪೊಲೀಸರು ಇಂತಹ ಕೀಳು ಮಟ್ಟಕ್ಕೆ ಇಳಿದರಾ?

ತಿರುವನಂತಪುರಂ: ಕಡಕ್ಕವೂರ್​ ಪೊಕ್ಸೊ ಪ್ರಕರಣದಲ್ಲಿ ತಾಯಿಯೊಬ್ಬಳು ತನ್ನ ಮಗನ ಮೇಲೆಯೇ ಲೈಂಗಿಕ ದೌರ್ಜನ್ಯ ನಡೆಸಿದ್ದಾಳೆಂದು ತಪ್ಪಾಗಿ ಆರೋಪಿಸಲಾಗಿದ್ದು, ಘಟನೆಯ ಬಗ್ಗೆ ಪೊಲೀಸ್​ ವರದಿ ಮೇಲೆಯೇ ಅನುಮಾನ ಮೂಡಿದೆ. ಸಂತ್ರಸ್ತ ಮಹಿಳೆ ಮಾಧ್ಯಮಗಳೊಂದಿಗೆ ಮಾತನಾಡಿ, ಪ್ರಕರಣದಿಂದ ನನ್ನನ್ನು ಖುಲಾಸೆಗೊಳಿಸಲಾಗಿದೆ. ಆದರೆ, ನನ್ನ ಮಗನನ್ನು ಅಪರಾಧಿ ಎಂಬಂತೆ ವರದಿಯಲ್ಲಿ ಬಿಂಬಿಸಲಾಗಿದೆ ಎಂದು ತಿಳಿಸಿದ್ದಾರೆ. ನನ್ನ ವಿರುದ್ಧ ನಕಲಿ ಪ್ರಕರಣ ದಾಖಲಿಸಿದವರ ಬಗ್ಗೆ ವರದಿಯಲ್ಲಿ ಯಾವುದೇ ಉಲ್ಲೇಖ ಇರಲಿಲ್ಲ. ಹೀಗಾಗಿ ಕಡಕ್ಕವೂರ್ ಪೊಲೀಸರ ವಿರುದ್ಧ …

Read More »

ಬಾಂಬೆ ಟೀಂಗೆ ಆಹ್ವಾನ; ಕಾಂಗ್ರೆಸ್ – ಬಿಜೆಪಿಯಲ್ಲಿ ಭಾರಿ ಸಂಚಲನ ತಂದ ಡಿಕೆಶಿ ಹೇಳಿಕೆ

ಬೆಂಗಳೂರು: ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ ಶಾಸಕರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪರೋಕ್ಷ ಸಂದೇಶ ರವಾನಿಸಿ ಪಕ್ಷಕ್ಕೆ ಸೇರಲು ಆಹ್ವಾನಿಸಿದ್ದಾರೆ. ವಲಸಿಗರು ಕೂಡ ಅರ್ಜಿ ಹಾಕಬಹುದು ಎಂದು ಅವರು ಹೇಳಿದ್ದಾರೆ. ಡಿ.ಕೆ. ಶಿವಕುಮಾರ್ ನೀಡಿದ ಹೇಳಿಕೆ ಕಾಂಗ್ರೆಸ್ ಮತ್ತು ಬಿಜೆಪಿ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ರಾಜ್ಯದಲ್ಲಿ ಮೈತ್ರಿ ಸರ್ಕಾರ ಬೀಳಿಸಿ ಬಿಜೆಪಿ ಸರ್ಕಾರ ರಚನೆಗೆ ಕಾರಣರಾಗಿದ್ದ ಮುಂಬೈ ಟೀಮ್ ಗೆ ಡಿ.ಕೆ. ಶಿವಕುಮಾರ್ ಪರೋಕ್ಷವಾಗಿ ಆಹ್ವಾನ ನೀಡಿದ್ದಾರೆ. …

Read More »

ಚಿತ್ರಮಂದಿರ, ಮಾಲ್ ಓಪನ್ ಗೆ ಸಿಎಂ ನೇತೃತ್ವದಲ್ಲಿ ಅನ್ಲಾಕ್ 3.0 ಬಗ್ಗೆ ಮಹತ್ವದ ಸಭೆ

ಬೆಂಗಳೂರು: ರಾಜ್ಯದಲ್ಲಿ ಮತ್ತಷ್ಟು ಅನ್ಲಾಕ್ ಮಾಡುವ ಕುರಿತಂತೆ ಕೋವಿಡ್ ಉಸ್ತುವಾರಿ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಸಭೆ ನಡೆಸಲಿದ್ದಾರೆ. ಸಂಜೆ 5.30 ಕ್ಕೆ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಯಲ್ಲಿ ನಡೆಯಲಿರುವ ಸಭೆಯಲ್ಲಿ ಮೂರನೇ ಹಂತದ ಪ್ರಕ್ರಿಯೆ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ. ಅನ್ಲಾಕ್ ಬಳಿಕ ರಾಜ್ಯದಲ್ಲಿ ವಿವಿಧ ಚಟುವಟಿಕೆಗಳು ಆರಂಭವಾಗಿದೆ‌. ಇದರ ಮುಂದುವರೆದ ಭಾಗವಾಗಿ ಮತ್ತಷ್ಟು ಚಟುವಟಿಕೆಗಳಿಗೆ ಅವಕಾಶ ನೀಡಲಾಗುವುದು. ಬಾರ್ ಅಂಡ್ ರೆಸ್ಟೋರೆಂಟ್, ಸ್ವಿಮ್ಮಿಂಗ್ ಪೂಲ್, …

Read More »

ಮಂಗಳೂರು; ಗುಂಡು ಹಾರಿಸಿ ಬೀದಿ ನಾಯಿ ಹತ್ಯೆ

ಮಂಗಳೂರು, ಜುಲೈ 02; ಬೀದಿ ನಾಯಿಗೆ ಗುಂಡು ಹಾರಿಸಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಮಂಗಳೂರು ನಗರದ ಕದ್ರಿ ಶಿವಭಾಗ್ ಎಂಬಲ್ಲಿ ನಡೆದಿದೆ. ನಾಯಿಯ ಮರಣೋತ್ತರ ಪರೀಕ್ಷೆಯಲ್ಲಿ ಗುಂಡು ಪತ್ತೆಯಾಗಿದ್ದು, ಸ್ಥಳೀಯ ವ್ಯಕ್ತಿಯ ಮೇಲೆ ಸಂಶಯ ವ್ಯಕ್ತಪಡಿಸಲಾಗಿದೆ. ಗುಂಡೇಟು ತಿಂದ ನಾಯಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಜನರು ಶಕ್ತಿನಗರದ ಆನಿಮಲ್ ಕೇರ್ ಟ್ರಸ್ಟ್‌ಗೆ ಮಾಹಿತಿ ನೀಡಿದ್ದಾರೆ. ಆನಿಮಲ್ ಕೇರ್ ಟ್ರಸ್ಟ್‌ನ ಸದಸ್ಯರು ಸ್ಥಳಕ್ಕೆ ಬಂದ ಸಂದರ್ಭದಲ್ಲಿ ‌ಬುಲೆಟ್ ಗಾಯ ನಾಯಿಯ ಬೆನ್ನ …

Read More »

18 ಮೀ. ಆಳಕ್ಕೆ ಕುಸಿದ ಮಣ್ಣು; ತಪ್ಪಿದ ಅವಘಡ

ಹುಬ್ಬಳ್ಳಿ: ಕೋರ್ಟ್‌ ವೃತ್ತದ ಸಾಯಿ ಮಂದಿರದ ಎದುರು ನಿರ್ಮಾಣ ಹಂತದಲ್ಲಿರುವ ಬಹುಮಹಡಿ ಕಾರ್‌ ಪಾರ್ಕಿಂಗ್‌ ಕಟ್ಟಡದ ನಿರ್ಮಾಣ ಹಂತದ ತಡೆಗೋಡೆ ಮೇಲೆ ಗುರುವಾರ ರಾತ್ರಿ 18 ಮೀಟರ್‌ ಎತ್ತರದಿಂದ ಮಣ್ಣು ಕುಸಿದಿದ್ದು, ಅವಘಡವೊಂದು ತಪ್ಪಿದಂತಾಗಿದೆ. ಮಣ್ಣು ಕುಸಿಯದಂತೆ 50 ಮೀಟರ್‌ ಅಗಲ ಪ್ಲಾಸ್ಟರ್‌ ಮಾಡಲಾಗಿತ್ತು. 30 ಮೀಟರ್‌ ಅಗಲದ ಪ್ಲಾಸ್ಟರ್‌ ಸಮೇತ ಮಣ್ಣು ತಡೆಗೋಡೆ ಮೇಲೆ ಬಿದ್ದಿದೆ. ಮಧ್ಯರಾತ್ರಿ ಘಟನೆ ನಡೆದಿರುವುದರಿಂದ ಯಾವುದೇ ಪ್ರಾಣಾಪಾಯವಾಗಿಲ್ಲ. ಶುಕ್ರವಾರ ಬೆಳಿಗ್ಗೆ ಸ್ಮಾರ್ಟ್‌ ಸಿಟಿ …

Read More »

ಮಾನಕ್ಕೆ ಹಾನಿ ವರದಿ ಪ್ರಕಟಿಸದಂತೆ ಕೇಂದ್ರ ಸಚಿವ ಡಿವಿಎಸ್‌ ತಡೆಯಾಜ್ಞೆ

ಬೆಂಗಳೂರು: ತಮ್ಮ ಮಾನಕ್ಕೆ ಹಾನಿ ತರುವ ಯಾವುದೇ ಸುದ್ದಿಯನ್ನು ಪ್ರಕಟಿಸಬಾರದು ಎಂದು ಮಾಧ್ಯಮಗಳ ವಿರುದ್ಧ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರು ಬೆಂಗಳೂರು ಸಿಟಿ ಸಿವಿಲ್‌ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಇದು ಈಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಹಿಂದೆ ಬಿಜೆಪಿಯ ರಮೇಶ ಜಾರಕಿಹೊಳಿ ವಿರುದ್ಧ ಸಿ.ಡಿ ಬಿಡುಗಡೆ ಮಾಡಿದ್ದರಿಂದ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಅದರ ಬೆನ್ನಲ್ಲೇ ಹಲವು ಸಚಿವರು ತಮ್ಮ ವಿರುದ್ಧ ಸಿ.ಡಿ ಬಿಡುಗಡೆ …

Read More »