Home / 2021 / ಜೂನ್ (page 5)

Monthly Archives: ಜೂನ್ 2021

ವಿಧಾನ ಪರಿಷತ್ ಗೆ ಎಂಟ್ರಿ ಕೊಡ್ತಾರ ಚಿಕ್ಕ ಸಾಹುಕಾರ ಏನಿದು game ಪ್ಲಾನ್..?

ಗೋಕಾಕ: ರಾಜ್ಯ ರಾಜಕಾರಣದಲ್ಲಿ ಪ್ರತಿದಿನ ಯಾವುದಾದರೂ ಒಂದು ಸುದ್ದಿಯ ಮೂಲಕ ಜಾರಕಿಹೊಳಿ ಬ್ರದರ್ ಸ ಚರ್ಚೆ ಯಲಿರುತ್ತಾರೆ. ಇನ್ನು ಇದೊಂದು ಹೊಸ ಸುದ್ದಿ ಸಂಚಲನ ಮೂಡಿಸುತ್ತಿದೆ ,ಇನ್ನೇನು ಡಿಸೆಂಬರ್ ತಿಂಗಳಲ್ಲಿ ಬರುವ ವಿಧಾನ ಪರಿಷತ್ ಚುನಾವಣೆಗೆ. ಲ ಖನ್ ಜಾರಕಿಹೊಳಿ ಅವರನ್ನ ನೇಮಿಸುವ ಸಾಧ್ಯತೆ ಇದೆ ಎಂದು ಮಾಹಿತಿ ಲಭ್ಯ ವಾಗಿದೆ. ಈಗಾಗಲೇ ಮಹಾಂತೇಶ್ ಕವಟಗಿಮಠ ಹಾಗೂ ವಿವೇಕ್ ರಾವ ಪಾಟೀಲ ವಿಧಾನ ಪರಿಷತ್ ಸದಸ್ಯರು ಇದ್ದಾರೆ ಆದ್ರೆ ಇನ್ನು …

Read More »

ಜುಲೈ ಎರಡನೇ ವಾರ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ: ಸುರೇಶ್ ಕುಮಾರ್

ಬೆಂಗಳೂರು: ‘ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶವನ್ನು ಜುಲೈ ಎರಡನೇ ವಾರದಲ್ಲಿ ಪ್ರಕಟಿಸಲಾಗುವುದು’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ತಿಳಿಸಿದರು. ‘ಈ ಫಲಿತಾಂಶದಿಂದ ಸಮಾಧಾನ ಇಲ್ಲದೇ ಇದ್ದರೆ, ಅಂಥ ವಿದ್ಯಾರ್ಥಿಗಳಿಗೆ ಹೆಚ್ಚು ಅಂಕ ಪಡೆಯಲು ಮತ್ತೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು’ ಎಂದರು. ‘ಸ್ಥಗಿತಗೊಂಡಿದ್ದ 2020-21ನೇ ಸಾಲಿನ ಶಿಕ್ಷಕರ ವರ್ಗಾವಣಾ ಪ್ರಕ್ರಿಯೆಗೆ ಹೊಸ ಅಧಿಸೂಚನೆ ಬುಧವಾರ (ಜೂನ್‌ 30) ಪ್ರಕಟವಾಗಲಿದೆ. ಅಂದೇ ವರ್ಗಾವಣೆ ಪ್ರಕ್ರಿಯೆ …

Read More »

ರೇಣುಕಾಚಾರ್ಯ ಸೇವೆಗೆ ಭಾವುಕರಾದ ಜನ: ಕಾಲಿಗೆ ಹೂ ಸುರಿದು ನಮಸ್ಕರಿಸಿದ್ರು

ದಾವಣಗೆರೆ: ಕೊರೊನಾ ಸಮಯದಲ್ಲಿ ಜಿಲ್ಲೆಯಲ್ಲಿ ಶಾಸಕ ರೇಣುಕಾಚಾರ್ಯ ಮಾಡಿರೋ ಕೆಲಸಗಳು, ಸಹಾಯಗಳ ಲೆಕ್ಕ ಅಷ್ಟಿಷ್ಟಲ್ಲ. ತಾವೇ ಸ್ವತಃ ಹೋಗಿ ಕೊರೊನಾ ಸೋಂಕಿತರಿಗೆ ಸೇವೆ ಮಾಡಿದ್ರು. ಇದರ ಫಲಶೃತಿಯಾಗಿ ಕೋವಿಡ್ ಗುಣಮುಖರಾದವ್ರು ಶಾಸಕ ರೇಣುಕಾಚಾರ್ಯರ ಕಾಲಿಗೆ ಹೂ ಸುರಿದು ಧನ್ಯವಾದ ಹೇಳಿದ್ದಾರೆ. ಜಿಲ್ಲೆಯ ಹೊನ್ನಾಳಿ ತಾಲೂಕಿನ ಅರಬಗಟ್ಟೆ ಕೋವಿಡ್ ಕೇರ್ ಸೆಂಟರ್​ನಲ್ಲಿ ಕೋವಿಡ್​ ಗುಣಮುಖರು ಈ ರೀತಿ ಮಾಡಿದ್ದಾರೆ. ಅರಬಗಟ್ಟೆ ಕೋವಿಡ್ ಕೇರ್ ಸೆಂಟರ್​ನಲ್ಲಿ 27 ಜನ ಕೊರೊನಾದಿಂದ ಗುಣಮುಖರಾಗಿದ್ರು, ಈ …

Read More »

ಕ್ಷಣಕಾಲ ಬೆಂಗಳೂರನ್ನೇ ಬೆಚ್ಚಿಬೀಳಿಸಿದ ಸೂಟ್​ ಕೇಸ್​: ಕೊನೆಗೂ ನಿಟ್ಟುಸಿರು ಬಿಟ್ಟ ಜನ

ಬೆಂಗಳೂರು: ನಗರದ ಮಲ್ಲೇಶ್ವರಂ ಕ್ರಾಸ್ ಬಳಿ ಅನುಮಾನಾಸ್ಪದ ಸೂಟ್​ ಕೇಸ್ ​​ಒಂದು ಪತ್ತೆಯಾಗಿದ್ದು ಸೂಟ್​ಕೇಸ್​ ನೋಡಿ ಜನರು ಕಂಗಾಲಾದ ಘಟನೆ ನಡೆದಿದೆ.. ಸೂಟ್​ಕೇಸ್​​ ನೋಡಿ ಗಾಬರಿಯಾದ ಜನರು ಕಂಟ್ರೋಲ್​ ರೂಂಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಮಾಹಿತಿ ಸಿಗುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಬಾಂಬ್ ನಿಷ್ಕ್ರಿಯ ದಳದ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಅದರಲ್ಲಿ ಕೇವಲ ಬಟ್ಟೆಗಳಷ್ಟೇ ಪತ್ತೆಯಾಗಿದ್ದು ಜನರು ನಿಟ್ಟುಸಿರು ಬಿಟ್ಟಿದ್ದಾರೆ.

Read More »

ಒಂದೇ ದಿನ 8 ಅಂಗಡಿಗಳ ಕಳ್ಳತನ: ಮೆಡಿಕಲ್​ ಶಾಪ್​ಗಳೇ ಇವ್ರಿಗೆ ಟಾರ್ಗೆಟ್​

ಹಾವೇರಿ: ಒಂದೇ ದಿನ ಎಂಟು ಅಂಗಡಿಗಳಲ್ಲಿ ಸರಣಿ ಕಳ್ಳತನ ಮಾಡಿದ್ದಾರೆ ಕಳ್ಳರು. ಮೆಡಿಕಲ್ ಅಂಗಡಿಗಳನ್ನೇ ಟಾರ್ಗೆಟ್ ಮಾಡಿ ಹಣ ದೋಚಲು ಯತ್ನ ಮಾಡುತ್ತಿದ್ದ ಕಳ್ಳರ ಆಟಗಳು, ಸಿಸಿಟಿವಿಯಲ್ಲಿ ಸೆರೆಯಾಗಿದೆ. ಜಿಲ್ಲೆಯ ಹಾನಗಲ್ ಪಟ್ಟಣ ಹಾಗೂ ಅಕ್ಕಿಆಲೂರು ಗ್ರಾಮದಲ್ಲಿ ಈ ಸರಣಿ ಕಳ್ಳತನ ನಡೆದಿದೆ. ಎಂಟು ಅಂಗಡಿಗಳ ಪೈಕಿ ಎರಡು ಕಡೆ 1 ಸಾವಿರ ಹಾಗೂ 5 ಸಾವಿರ ಕದ್ದು ಎಸ್ಕೇಪ್​ ಆಗಿದ್ದಾರೆ ಖದೀಮರು. ಮಾಹಿತಿ ಸಿಕ್ಕ ಕೂಡಲೇ ಶ್ವಾನ ಹಾಗೂ …

Read More »

SSLC ವಾರ್ಷಿಕ ಪರೀಕ್ಷೆ’ಯ ಪರಿಷ್ಕೃತ ವೇಳಾಪಟ್ಟಿ ಅಧಿಕೃತವಾಗಿ ಪ್ರಕಟ : ಹೀಗಿದೆ ‘ವಿಷಯವಾರು ವೇಳಾಪಟ್ಟಿ’

ಬೆಂಗಳೂರು : ಕೊರೋನಾ ಸೋಂಕಿನ ಭೀತಿಯ ನಡುವೆಯೂ ರಾಜ್ಯ ಸರ್ಕಾರದಿಂದ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯನ್ನು ಬಹುಆಯ್ಕೆ ಉತ್ತರದ ಮಾದರಿಯಲ್ಲಿ ನಡೆಸಲು ನಿರ್ಧರಿಸಲಾಗಿದೆ. ಇಂತಹ ಪರೀಕ್ಷೆಯನ್ನು ಜುಲೈ.19 ಹಾಗೂ ಜುಲೈ.22ರಂದು ನಡೆಸಲಾಗುತ್ತದೆ ಎಂಬುದಾಗಿ ಘೋಷಣೆ ಮಾಡಲಾಗಿದೆ. ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿಯನ್ನು ಇದೀಗ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಪ್ರಕಟಿಸಿದೆ.   ಈ ಕುರಿತಂತೆ ಪ್ರಕಟಣೆಯನ್ನು ಕರ್ನಾಟ ಪ್ರೌಢ ಶಿಕ್ಷಣ …

Read More »

ಅಂಗನವಾಡಿ ಕೇಂದ್ರಗಳಿಗೆ ಮೊಟ್ಟೆ ಸರಬರಾಜು 30 ಗ್ರಾಂ ತೂಕದ ಕಳಪೆ ಗುಣಮಟ್ಟದ ಮೊಟ್ಟೆಗಳು ಪೂರೈಕೆ

ರಾಯಚೂರು: ಜಿಲ್ಲೆಯಾದ್ಯಂತ ಅಂಗನವಾಡಿ ಕೇಂದ್ರಗಳಿಗೆ ಮೊಟ್ಟೆ ಸರಬರಾಜು ಮಾಡಲಾಗುತ್ತಿದೆ. ಮಕ್ಕಳ ಪೌಷ್ಠಿಕತೆಗೆ, ಆರೋಗ್ಯದ ಹಿತದೃಷ್ಟಿಯಿಂದ ಸರ್ಕಾರ ಪ್ರತಿ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಮೊಟ್ಟೆಗಳನ್ನ ಪೂರೈಕೆ ಮಾಡುತ್ತಿದೆ. ಕಡ್ಡಾಯವಾಗಿ ಪ್ರತಿ ಮಗುವಿಗೂ 60 ಗ್ರಾಂ ತೂಕದ ಮೊಟ್ಟೆ ನೀಡಬೇಕು. ಆದ್ರೆ ರಾಯಚೂರು ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲೂ ಕೇವಲ 30 ಗ್ರಾಂ ತೂಕದ ಕಳಪೆ ಗುಣಮಟ್ಟದ ಮೊಟ್ಟೆಗಳು ಪೂರೈಕೆಯಾಗುತ್ತಿದ್ಯಂತೆ. ಹೀಗಾಗಿ ಅಂಗನವಾಡಿ ಮಕ್ಕಳಿಗೆ ಪೂರೈಕೆ ಆಗ್ತಿರೋ ಮೊಟ್ಟೆಯಲ್ಲೂ ಹಣ ಲೂಟಿ ಮಾಡ್ತಿದ್ದಾರೆ …

Read More »

ಕೊಪ್ಪಳ; ರೈತ ಮಾರುವಾಗ ಭತ್ತಕ್ಕೆ ರೇಟಿಲ್ಲ, ವ್ಯಾಪಾರಿಗಳಿಗೆ ಮಾತ್ರ ದುಬಾರಿ ಲಾಭ

ಕೊಪ್ಪಳ: ಇದೊಂದು ನಾಣ್ನುಡಿ ಘಟನೆ ಇದ್ದಂತೆ ಇದೆ. ಹಲ್ಲು ಇದ್ದಾಗ ಕಡಲೆ ಇಲ್ಲ, ಕಡಲೆ ಇದ್ದಾಗ ಹಲ್ಲು ಇಲ್ಲ ಎಂಬಂತೆ ರೈತರಲ್ಲಿ ಭತ್ತವಿದ್ದಾಗ ರೇಟು ಇರಲಿಲ್ಲ. ಈಗ ರೈತರಲ್ಲಿ ಭತ್ತವಿಲ್ಲ ಆದರೆ ಭತ್ತ ದುಬಾರಿಯಾಗಿದೆ. ಇದರಿಂದಾಗಿ ರೈತರಿಗಿಂತ ಅಧಿಕವಾಗಿ ವ್ಯಾಪಾರಿಗಳಿಗೆ ಲಾಭವಾಗುತ್ತಿದೆ. ಲಾಕ್​ಡೌನ್ ನಿಂದಾಗಿ ಭತ್ತದ ದರ ಇಳಿಕೆಯಾಗಿತ್ತು, ಆದರೆ, ಅನ್​ಲಾಕ್ ಆಗುತ್ತಿದ್ದಂತೆ ಭತ್ತದ ದರ ಏರಿಕೆಯಾಗಿದೆ. ಕಡಿಮೆ ದರದಲ್ಲಿ ಖರೀದಿಸಿದ ಭತ್ತವನ್ನು ಈಗ ದುಬಾರಿ ದರಕ್ಕೆ ವ್ಯಾಪಾರಿಗಳು ಮಾರಾಟ …

Read More »

ಒಂದೂವರೆ ವರ್ಷದಲ್ಲಿ 150ಕ್ಕೂ ಹೆಚ್ಚು ಕೃಷಿ ಹೊಂಡಗಳ ನಿರ್ಮಾಣ; ಧಾರವಾಡ ಜಿಲ್ಲೆಯ ರೈತರ ಮೊಗದಲ್ಲಿ ಮಂದಹಾಸ

ಧಾರವಾಡ: ನೀರು ಭೂಮಿಯ ಮೇಲಿನ ಅತ್ಯಮೂಲ್ಯ ಸಂಪನ್ಮೂಲ. ಗಿಡಗಳಿಂದ ಹಿಡಿದು ಕಣ್ಣಿಗೆ ಕಾಣದ ಜೀವಿಗಳವರೆಗೆ ಈ ನೀರೆ ಆಸರೆ. ಅದರಲ್ಲೂ ರೈತರ ಪಾಲಿಗೆ ನೀರು ಎನ್ನುವುದು ಬಹು ಮುಖ್ಯವಾದ ಸಂಪನ್ಮೂಲ. ನೀರಿಲ್ಲದೆ ಕೃಷಿ ಮಾಡಲು ಸಾಧ್ಯವೇ ಇಲ್ಲ. ಇತ್ತೀಚಿನ ದಿನಗಳಲ್ಲಿ ಮನುಷ್ಯನ ಸ್ವಾರ್ಥದಿಂದಾಗಿ ಈ ಸಂಪನ್ಮೂಲದ ಕೊರತೆಯುಂಟಾಗುತ್ತಿದೆ. ನೀರನ್ನು ಹಿಡಿದಿಡುವ ಪ್ರಯತ್ನ ನಡೆಯದೇ ಇರುವುದು ಇದಕ್ಕೆ ಒಂದು ಕಾರಣವಾಗಿದ್ದರೆ, ನೀರನ್ನು ಅವಶ್ಯಕತೆಗಿಂತ ಹೆಚ್ಚು ಬಳಸುತ್ತಿರುವುದು ಮತ್ತೊಂದು ಕಾರಣ. ಈ ನಿಟ್ಟಿನಲ್ಲಿ …

Read More »

ನಾನು 8 ಬಾರಿ ಶಾಸಕನಾಗಿದ್ದೇನೆ. ನನಗೂ ಸಹ ಸಿಎಂ ಆಗುವ ಅರ್ಹತೆ ಇದೆ. ಆದರೆ.? ಉಮೇಶ ಕತ್ತಿ

ವಿಜಯಪುರ: ‘ನಾನು 8 ಬಾರಿ ಶಾಸಕನಾಗಿದ್ದೇನೆ. ನನಗೂ ಸಹ ಸಿಎಂ ಆಗುವ ಅರ್ಹತೆ ಇದೆ. ಆದರೆ ಸಿಎಂ ಕುರ್ಚಿ ಸದ್ಯಕ್ಕೆ ಖಾಲಿ ಇಲ್ಲ. ಸದ್ಯ ಬಿ.ಎಸ್. ಯಡಿಯೂರಪ್ಪ ಸಿಎಂ ಆಗಿದ್ದಾರೆ. ಅವರ ಕುರ್ಚಿ ಖಾಲಿಯಾದ ಮೇಲೆ ನೋಡೋಣ’ ಎಂದಿದ್ದಾರೆ ಆಹಾರ ಸಚಿವ ಉಮೇಶ ಕತ್ತಿ ಹೇಳಿಕೆ ನೀಡಿದ್ದಾರೆ. ಈ ಮೂಲಕ ತಮಗೂ ಮುಂದಿನ ದಿನಗಳಲ್ಲಿ ರಾಜ್ಯದ ಮುಖ್ಯಮಂತ್ರಿ ಆಗಬೇಕೆಂದ ಮಹದಿಚ್ಛೆ ಇರುವುದನ್ನು ಅವರು ತೆರೆದಿಟ್ಟಿದ್ದಾರೆ. ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ …

Read More »