Daily Archives: ಜೂನ್ 24, 2021

ಶೂನ್ಯಸಂಪಾದನ ಮಠದ ಪೀಠಾಧಿಪತಿಗಳ ಹುಟ್ಟುಹಬ್ಬದ ನಿಮಿತ್ಯ ಅನಾಥ ಮಕ್ಕಳಿಗೆ ಅನ್ನ ದಾಸೋಹ

ಗೋಕಾಕ ನಗರದ ಶೂನ್ಯಸಂಪಾದನ ಮಠದ ಪಿಠಾಧಿಪತಿಗಳಾದ ನಮ್ಮ ಪರಮಪೂಜ್ಯ ಮ.ನಿ.ಪ್ರ ಸ್ವ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಜೀ ಗುರುಗಳಿಗೆ ಜನ್ಮ ದಿನದ ಪ್ರಯುಕ್ತ ಕರವೇ ಕಾರ್ಯಾಕರ್ತರು ತಾಲೂಕಾಧ್ಯಕ್ಷರಾದ ಬಸವರಾಜ ಖಾನಪ್ಪನವರ ನೇತೃತ್ವದಲ್ಲಿ ನಗರದ ಶಿವಾ ಫೌಂಡೇಶನ್ ಅನಾಥ ಮಕ್ಕಳಿಗೆ ಒಂದು ದಿನದ ಅನ್ನ ದಾಸೋಹ ಮಾಡಿ ಶ್ರೀಗಳ ಹುಟ್ಟು ಹಬ್ಬವನ್ನು ಆಚರಿಸಿದರು.. ಈ ಸಂರ್ಧಭದಲ್ಲಿ ಕೃಷ್ಣಾ ಖಾನಪ್ಪನವರ , ದೀಪಕ ಹಂಜಿ , ಬಸವರಾಜ ಹತ್ತರಕ್ಕಿ , ರಾಜೇಂದ್ರ ಕೆಂಚನಗುಡ್ಡ , …

Read More »

ಗೋಕಾಕ್ ನಿಂದ ಬೆಂಗಳೂರು ಕಡೆಗೆ ಹೊರಟಿದ್ದಾರೆ ರಮೇಶ ಜಾರಕಿಹೊಳಿ

ಬೆಳಗಾವಿ – ಮಾಜಿ ಸಚಿವ ರಮೇಶ ಜಾರಕಿಹೊಳಿ ಮುಂಬೈನಿಂದ್ ವಾಪಸ್ಸಾದ ಬಳಿಕ ಇಂದು ಗೋಕಾಕ್ ನಿಂದ ಬೆಂಗಳೂರು ಕಡೆಗೆ ಹೊರಟಿದ್ದಾರೆ. ಬೆಂಗಳೂರಿಗೆ ಹೊರಡುವ ಮುನ್ನ ಮಾಧ್ಯಮಗಳ ಯಾವುದೇ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಅವರು, ಸಚಿವ ಸಂಪುಟ ಸೇರಬೇಕೆನ್ನುವ ಕಾರ್ಯತಂತ್ರವಿಟ್ಟುಕೊಂಡು ಪ್ರಯಾಣ ಬೆಳೆಸಿದ್ದಾರೆ. ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುವ ಮೂಲಕ ಸಚಿವಸ್ಥಾನ ಕುರಿತು ಒತ್ತಡ ಹೇರುವ ಯೋಜನೆ ಹಾಕಿಕೊಂಡಿದ್ದ ರಮೇಶ ಜಾರಕಿಹೊಳಿ ಮುಂಬೈನಲ್ಲಿ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಪಡ್ನವೀಸ್ ಜೊತೆ …

Read More »

‘ಕ್ರಿಶ್’ ಚಿತ್ರಕ್ಕೆ 15 ವರ್ಷದ ಸಂಭ್ರಮ: ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ ಹೃತಿಕ್

ಬಾಲಿವುಡ್ ನಟ ಹೃತಿಕ್ ರೋಷನ್ ನಟನೆಯ ಕ್ರಿಶ್ ಮೊದಲ ಸರಣಿ ಬಿಡುಗಡೆಯಾಗಿ 15 ವರ್ಷಗಳು ಕಳೆದಿವೆ. ಈಗಾಗಲೇ ಕ್ರಿಶ್ 3 ಸರಣಿಗಳನ್ನು ಯಶಸ್ವಿಯಾಗಿ ಮುಗಿಸಿದೆ. ಚಿತ್ರಾಭಿಮಾನಿಗಳ ನೆಚ್ಚಿನ ಸರಣಿಗಳಲ್ಲಿ ಕ್ರಿಶ್ ಕೂಡ ಒಂದು. 15 ವರ್ಷ ತುಂಬಿದ ಸಂತಸದಲ್ಲೇ ಹೃತಿಕ್ ಅಭಿಮಾನಿಗಳಿಗೆ ಮತ್ತೊಂದು ಸರ್ಪ್ರೈಸ್ ನೀಡಿದ್ದಾರೆ. ಕ್ರಿಶ್ 4 ಸಿನಿಮಾದ ಟೀಸರ್ ಬಿಡುಗಡೆ ಮಾಡಿದ್ದಾರೆ. ವಾರ್ ಸಿನಿಮಾ ಬಳಿಕ ಹೃತಿಕ್ ಅಧಿಕೃತವಾಗಿ ಯಾವುದೇ ಅನೌನ್ಸ್ ಮಾಡಿರಲಿಲ್ಲ. ಇದೀಗ ಕ್ರಿಶ್ 4ನೇ …

Read More »

ಅನ್​ಲಾಕ್ 2.O: ಮುಂಬೈ & ಪುಣೆ ಅಂತರ್ ರಾಜ್ಯ ಬಸ್ ಸಂಚಾರಕ್ಕೆ KSRTC ಗ್ರೀನ್ ಸಿಗ್ನಲ್

ಬೆಂಗಳೂರು: ರಾಜ್ಯದಲ್ಲಿ ಅನ್​ಲಾಕ್ 2.O​ ಘೋಷಣೆ ಹಿನ್ನೆಲೆ ಅಂತರ್​ ರಾಜ್ಯ ಬಸ್​ ಸಂಚಾರಕ್ಕೆ ಕೆಎಸ್​ಆರ್​ಟಿಸಿ ಗ್ರೀನ್ ಸಿಗ್ನಲ್ ಕೊಟ್ಟಿದೆ. ಬೆಂಗಳೂರು, ಶಿವಮೊಗ್ಗ ಮತ್ತು ಮಂಗಳೂರು ಜಿಲ್ಲೆಗಳಿಂದ ಬಸ್​ಗಳು ಸಂಚರಿಸಲಿದ್ದು ಮುಂಬೈ, ಪುಣೆ, ಮೀರಜ್, ಸೊಲ್ಲಾಪುರ್, ಪಂಡರಾಪುರ, ತುಳಜಾಪುರಕ್ಕೆ ಸೇವೆ ನೀಡಲಿವೆ. ಇನ್ನು ಈ ಬಸ್​ಗಳಲ್ಲಿ ಶೇ 50 ರಷ್ಟು ಸಾಮರ್ಥ್ಯದಷ್ಟು ಪ್ರಯಾಣಿಕರಿಗೆ ಅವಕಾಶವಿರಲಿದೆ. ಎರಡು ಅವಧಿಗಳಲ್ಲಿ ಅಂತರ್​ರಾಜ್ಯ ಕೆಎಸ್​​ಆರ್​ಟಿಸಿ ಬಸ್ ಸಂಚಾರ ನಡೆಸಲಿವೆ. ಮುಂಗಡವಾಗಿ ಬಸ್ ಟಿಕೆಟ್ ಬುಕ್ ಮಾಡಿಕೊಳ್ಳಲು …

Read More »

20 ವರ್ಷದ ಹಿಂದಿನ ಕೇಸ್ ಒಪನ್ ಮಾಡಿದ ಕೊಪ್ಪಳ ಪೊಲೀಸರು: ಆರೋಪಿ ಅಂದರ್

ಕೊಪ್ಪಳ: ಎರಡು ದಶಕಗಳ ಹಿಂದಿನ ಕೇಸ್ ಒಪನ್ ಮಾಡಿರುವ ಕೊಪ್ಪಳ ಪೊಲೀಸರು ಸುಮಾರು 175 ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಡಕಾಯಿತಿ, ಕಳ್ಳತನ, ಹಲ್ಲೆ, ಮತ್ತು ಕೊಲೆ ಹಾಗೂ ವಂಚನೆ ಕೇಸ್ ಗಳಲ್ಲಿ ಜಾಮೀನು ಪಡೆದು ನಾಪತ್ತೆಯಾಗಿದ್ದ ರಾಮಬಾಬು ಎಂಬ ಆರೋಪಿಯನ್ನು ಜೂನ್ 21 ರಂದು ಪೊಲೀಸರು ಬಂಧಿಸಿದ್ದಾರೆ. 2003ರಲ್ಲಿ ಕೊಪ್ಪಳದ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ನಡೆದ ಹಲ್ಲೆ ಪ್ರಕರಣದಲ್ಲಿ ಭಾಗಿಯಾಗಿದ್ದ. ಆತನನ್ನು ಬಳ್ಳಾರಿಯ ಗಾಂಧಿನಗರದಲ್ಲಿ ಬಂಧಿಸಲಾಗಿದೆ. …

Read More »

ಕಿಡಿಗೇಡಿಗಳಿಂದ ಬೆಂಕಿ; ಶಾಲಾ ಕೊಠಡಿಯಲ್ಲಿದ್ದ ಮಕ್ಕಳ ಸಮವಸ್ತ್ರ ಭಸ್ಮ

ಹೊಸನಗರ: ತಾಲ್ಲೂಕಿನ ಮಾರುತೀಪುರ ಪ್ರೌಢಶಾಲೆಯಲ್ಲಿ ಶಾಲಾ ಮಕ್ಕಳಿಗೆ ವಿತರಿಸಲು ಸಂಗ್ರಹಿಸಿಟ್ಟಿದ್ದ ಸಮವಸ್ತ್ರ ಸಂಪೂರ್ಣ ಬೆಂಕಿಗೆ ಆಹುತಿಯಾಗಿವೆ. ಸೋಮವಾರ ಬೆಳಿಗ್ಗೆ ಶಾಲಾ ಕೊಠಡಿ ತೆರೆದಾಗ ಸಮವಸ್ತ್ರದ ರಾಶಿಗೆ ಬೆಂಕಿ ಬಿದ್ದಿದ್ದು ಸುಟ್ಟು ಕರಕಲಾಗಿದ್ದವು. 2020- 21ನೇ ಸಾಲಿನ ಮಕ್ಕಳಿಗೆ ವಿತರಿಸಲು ಶಾಲಾಡಳಿತ ಕೊಠಡಿಯಲ್ಲಿ ಸಂಗ್ರಹಿಸಿಟ್ಟಿತ್ತು. ಶನಿವಾರ ಸಂಜೆಯವರೆಗೂ ಸುಸ್ಥಿತಿಯಲ್ಲಿದ್ದವು. ಕೊಠಡಿಯ ಒಂದು ಕಿಟಕಿಯ ಬಾಗಿಲು ಪೂರ್ಣವಾಗಿ ಮುಚ್ಚಲು ಬರುತ್ತಿರಲಿಲ್ಲ. ಇದನ್ನು ಬಳಸಿ ಕಿಡಿಗೇಡಿಗಳು ಹೊರಗಿನಿಂದ ಬಟ್ಟೆಗೆ ಬೆಂಕಿ ಹಚ್ಚಿದ್ದಾರೆ ಎಂದು ಶಾಲಾಡಳಿತ …

Read More »

ನಾಗರಹಾವು ಕಚ್ಚಿದ್ದರಿಂದ ಮೃತಪಟ್ಟ ಉರಗ ತಜ್ಞ

ಬಾಗಲಕೋಟೆ: ಹಾವುಗಳನ್ನ ಹಿಡಿಯುವಲ್ಲಿ ಪರಿಣಿತಿ ಪಡೆದಿದ್ದ ಬಾದಾಮಿ ತಾಲೂಕಿನ ಕಳಸಕೊಪ್ಪ ಗ್ರಾಮದ ಉರಗ ತಜ್ಞ ಸದಾಶಿವ ಕರಣಿ (30) ಅವರಿಗೆ ನಾಗರಹಾವು ಕಚ್ಚಿದ್ದರಿಂದ ಮೃತಪಟ್ಟಿದ್ದಾರೆ. ಸದಾಶಿವ ಕರಣಿ ಸ್ವಯಂ ಆಸಕ್ತಿಯಿಂದ ಹಾವು ಹಿಡಿಯುವುದನ್ನು ಅಭ್ಯಾಸ ಮಾಡಿಕೊಂಡಿದ್ದರು. ಹೀಗಾಗಿ ಬಾದಾಮಿ ಪಟ್ಟಣ ಸೇರಿದಂತೆ ಕಳಸಕೊಪ್ಪದ ಸುತ್ತಲಿನ ಹಳ್ಳಿಗಳಲ್ಲಿ ಹಾವು ಕಂಡರೆ ಹಿಡಿಯಲು ಜನರು ಸದಾಶಿವ ಅವರಿಗೆ ಕರೆ ಮಾಡುತ್ತಿದ್ದರು. ಹಿಡಿದ ಹಾವನ್ನು ನಂತರ ಸುರಕ್ಷಿತವಾಗಿ ಕಾಡಿಗೆ ಬಿಟ್ಟು ಬರುತ್ತಿದ್ದರು. ಕಳಸಕೊಪ್ಪದ ಹೊಲವೊಂದರಲ್ಲಿ …

Read More »

ಕಾಂಗ್ರೆಸ್ ಯುವ ನಾಯಕಿ ಪ್ರಿಯಾಂಕಾ ಜಾರಕಿಹೊಳಿ ಮುರುಘರಾಜೇಂದ್ರ ಸ್ವಾಮೀಜಿಗಳಿಗೆ ಜನ್ಮದಿನದ ಶುಭಾಶಯ ಕೋರಿ ಆಶೀರ್ವಾದ ಪಡೆದರು.

ಗೋಕಾಕ: ಇಲ್ಲಿನ ಶೂನ್ಯ ಸಂಪಾದನಾ ಮಠದ ಮುರುಘರಾಜೇಂದ್ರ ಸ್ವಾಮೀಜಿ ಅವರ ಜನ್ಮದಿನದ ಅಂಗವಾಗಿ ಕಾಂಗ್ರೆಸ್ ಯುವ ನಾಯಕಿ ಪ್ರಿಯಾಂಕಾ ಜಾರಕಿಹೊಳಿ ಅವರು ಇಂದು ಮಠಕ್ಕೆ ಭೇಟಿ ನೀಡಿ ಸ್ವಾಮೀಜಿಗಳಿಗೆ ಶುಭ ಕೋರಿ, ಆಶೀರ್ವಾದ ಪಡೆದರು. ಪ್ರಿಯಾಂಕಾ ಅವರು ಜನ್ಮದಿನದ ಅಂಗವಾಗಿ ಸ್ವಾಮೀಜಿಗಳನ್ನು ಸತ್ಕರಿಸಿ, ಗೌರವ ಸಲ್ಲಿಸಿದರು. ಸ್ವಾಮೀಜಿಗಳು ಕೂಡ ಪ್ರಿಯಾಂಕಾ ಅವರನ್ನು ಆತ್ಮೀಯತೆಯಿಂದ ಬರಮಾಡಿಕೊಂಡು, ಆಶೀರ್ವಾದ ಮಾಡಿದರು. ಮುಖಂಡರಾದ ವಿವೇಕ ಜತ್ತಿ, ಶಿವಾನಂದ ಕಿಲಾರಿ, ಪಾಂಡು ರಂಗಸುಬೆ ಸೇರಿ ಇನ್ನಿತರರು …

Read More »

ಗಾಳಿಪಟದ ದಾರದಿಂದ ವ್ಯಕ್ತಿಗೆ ಗಾಯ, ನೆಲಕ್ಕೆ ಚಿಮ್ಮಿದ ನೆತ್ತರು

ಗದಗ: ಗಾಳಿಪಟದ ದಾರ ಸಿಲುಕಿ ವ್ಯಕ್ತಿಯೋರ್ವನ ಕೈ ಬೆರಳು ಹಾಗೂ ಕುತ್ತಿಗೆಗೆ ಗಾಯವಾದ ಘಟನೆ ನಗರದ ಟಾಂಗಾ ಕೂಟ ಬಳಿ ನಡೆದಿದೆ. ಕಾರಹುಣ್ಣಿಮೆ ನಿಮಿತ್ತ ಮಕ್ಕಳು, ಯುವಕರು ಗಾಳಿಪಟ ಹಾರಿಸುವುದೇ ಒಂದು ಸಂಭ್ರಮ. ಇಂದು ಸಾಕಷ್ಟು ಬ್ರಹತ್ ಗಾತ್ರದ ಬಣ್ಣ ಬಣ್ಣದ ಪಟಗಳು ಬಾನಂಗಳದಲ್ಲಿ ಹಾರಾಡುತ್ತವೆ. ಅನೇಕ ಪಟಗಳು ಹರಿದು ಎಲ್ಲಂದರಲ್ಲಿ ಬಿದ್ದು ಸಾಕಷ್ಟು ಅವಾಂತರ ಸೃಷ್ಟಿಸುತ್ತಿವೆ. ಇಂದು ಸಹ ಗಾಳಿಪಟವೊಂದು ಹರಿದು ವೇಗವಾಗಿ ಬಂದಿದೆ. ಅದನ್ನು ಗಮನಿಸದ ಬೈಕ್ …

Read More »

ಮಳೆ ಬಿಡುವು: ತಗ್ಗಿದ ಜಲಾಶಯಗಳ ಒಳಹರಿವು

ಶಿವಮೊಗ್ಗ: ಜಿಲ್ಲೆಯಲ್ಲಿ ಮೂರು ದಿನದಿಂದ ಮಳೆ ಕ್ಷೀಣಿಸಿದ್ದು, ಜಲಾಶಯಗಳ ಒಳಹರಿವು ಪ್ರಮಾಣವೂ ತಗ್ಗಿದೆ. ತುಂಗಾ ಜಲಾಶಯದ ಒಳಹರಿವು 15,414 ಕ್ಯುಸೆಕ್‍ಗೆ ಇಳಿಕೆಯಾಗಿದೆ. ಜಲಾಶಯ ಈಗಾಗಲೇ ಭರ್ತಿ ಆಗಿರುವುದರಿಂದ, ಒಳ ಹರಿವಿನ ಪ್ರಮಾಣದಷ್ಟೇ ನೀರನ್ನು ಹೊಳೆಗೆ ಬಿಡಲಾಗುತ್ತಿದೆ. ‌ಭದ್ರಾ ಜಲಾಶಯಕ್ಕೆ ಪ್ರಸ್ತುತ 9,581 ಕ್ಯುಸೆಕ್ ಒಳಹರಿವು ಇದೆ. ಹಾಗಾಗಿ, ಜಲಾಶಯದ ನೀರಿನ ಮಟ್ಟ 152.6 ಅಡಿಗೆ ಏರಿಕೆಯಾಗಿದೆ. ಲಿಂಗನಮಕ್ಕಿ ಹಿನ್ನೀರು ಭಾಗದಲ್ಲಿ ಮಳೆ ಪ್ರಮಾಣ ಸಂಪೂರ್ಣ ತಗ್ಗಿದೆ. ಜಲಾಶಯಕ್ಕೆ 10,827 ಕ್ಯುಸೆಕ್ …

Read More »