Breaking News

Daily Archives: ಜೂನ್ 9, 2021

ಮಾಜಿ ಸಿಎಂ ಕುಮಾರಸ್ವಾಮಿ ಪಲ್ಟಿ ಗಿರಾಕಿ; ಶಾಸಕ ಜಮೀರ್ ಅಹ್ಮದ್ ವಾಗ್ದಾಳಿ

ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿರುವ ಶಾಸಕ ಜಮೀರ್ ಅಹ್ಮದ್, ಕುಮಾರಸ್ವಾಮಿ ಪಲ್ಟಿ ಗಿರಾಕಿ, ಅವರು ಯಾವಾಗ ಬೇಕಿದ್ದರೂ ಪಲ್ಟಿ ಹೊಡೆಯುತ್ತಾರೆ ಎಂದು ಕಿಡಿಕಾರಿದ್ದಾರೆ.   ಕುಮಾರಸ್ವಾಮಿ ಅಧಿಕಾರಕ್ಕಾಗಿ ಯಾರ ಕಾಲು ಬೇಕಾದರೂ ಹಿಡಿಯುತ್ತಾರೆ. ಆದರೆ ಹೆಚ್.ಡಿ.ದೇವೇಗೌಡರು ಹಾಗಲ್ಲ, ಅವರಿಗೆ ಸಿದ್ಧಾಂತವಿದೆ. ಕುಮಾರಸ್ವಾಮಿಗೆ ಸಿದ್ಧಾಂತಗಳಿಲ್ಲ. ಅಧಿಕಾರ ಸಿಕ್ಕ ಬಳಿಕ ಪಲ್ಟಿ ಹೊಡೆಯುತ್ತಾರೆ ಎಂದರು. ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ಧವೂ ವಾಗ್ದಾಳಿ ನಡೆಸಿದ ಜಮೀರ್ ಅಹ್ಮದ್, ಸರ್ಕಾರದ …

Read More »

ರವಿ ಚನ್ನಣ್ಣನವರ್, ಮೈಸೂರು ಎಸ್‍ಪಿ ಸೇರಿ 12 ಐಪಿಎಸ್ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು: ರವಿ.ಡಿ.ಚನ್ನಣ್ಣನವರ್, ಮೈಸೂರು ಎಸ್‍ಪಿ ಸೇರಿ 12 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಸ್‍ಪಿಯಾಗಿದ್ದ ರವಿ.ಡಿ.ಚನ್ನಣ್ಣನವರ್ ಅವರನ್ನು ಸಿಐಡಿ ಎಸ್‍ಪಿಯಾಗಿ ವರ್ಗಾವಣೆಗೊಳಿಸಲಾಗಿದೆ. ಉಡುಪಿಯಲ್ಲಿ ಕರಾವಳಿ ಭದ್ರತಾ ಪೊಲೀಸ್ ಪಡೆಯ ಎಸ್‍ಪಿಯಾಗಿದ್ದ ಆರ್.ಚೇತನ್ ಅವರನ್ನು ಮೈಸೂರು ಎಸ್‍ಪಿಯಾಗಿ ತಕ್ಷಣಕ್ಕೆ ಜಾರಿಗೆ ಬರುವಂತೆ ವರ್ಗಾವಣೆಗೊಳಿಸಲಾಗಿದೆ. ಕೋಲಾರ ಎಸ್‍ಪಿಯಾಗಿದ್ದ ಕಾರ್ತಿಕ್ ರೆಡ್ಡಿಯವರನ್ನು ಬೆಂಗಳೂರಿನ ವೈರ್‍ಲೆಸ್ ವಿಭಾಗಕ್ಕೆ, ಸಿಐಡಿ ಎಸ್‍ಪಿಯಾಗಿದ್ದ ರಾಹುಲ್ ಕುಮಾರ್ ಶಹಪೂರ್‍ವಾಡ್ ಅವರನ್ನು ತುಮಕೂರು …

Read More »

ಬೆಂಗಳೂರು: ವೀರ್ಯ ತಿಮಿಂಗಲದ ಅಂಬರ್ ಗ್ರೀಸ್ ಮಾರಾಟ-ನಾಲ್ವರ ಬಂಧನ

ಬೆಂಗಳೂರು: ನಗರದಲ್ಲಿ ಅಕ್ರಮವಾಗಿ ವೀರ್ಯ ತಿಮಿಂಗಲದ ಅಂಬರ್ ಗ್ರೀಸ್ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಪೂರ್ವ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಸೈಯದ್ ತಜ್ಮುಲ್ (54), ಸಲೀಂ ಪಾಷಾ (48), ರಫೀ ಉಲ್ಲಾ ಶರೀಫ್ (45) ಹಾಗೂ ನಾಸೀರ್ ಪಾಷಾ (34) ಬಂಧಿತ ಆರೋಪಿಗಳು. ಬಂಧಿತರಿಂದ ಅಂದಾಜು 8 ಕೋಟಿ ರೂ ಬೆಲೆಬಾಳುವ 6ಕೆಜಿ 700 ಗ್ರಾಂ ತೂಕದ ವೀರ್ಯ ತಿಮಿಂಗಲದ ಅಂಬರ್ ಗ್ರೀಸ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾಡುಗೊಂಡನಹಳ್ಳಿ …

Read More »

ಪೊಲೀಸರಿಗೆ ಹಾಫ್ ಡೋಸ್ ಹಾಕಿ ಡಾಕ್ಟ್ರಮ್ಮ ದೋಖಾ- ಲಸಿಕೆ ಹಾಕಿಸಿಕೊಂಡವರಿಗೆ ಆತಂಕ

ಕೊರೊನಾ ವ್ಯಾಕ್ಸಿನ್ ಅನ್ನ ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ವೈದ್ಯೆ ಪುಷ್ಪಿತಾಳ ಇನ್ನೊಂದು ಕರ್ಮಕಾಂಡ ಬಯಲಾಗಿದೆ. ಮಂಜುನಾಥ ನಗರ ಆರೋಗ್ಯಕೇಂದ್ರದಲ್ಲಿ ವ್ಯಾಕ್ಸಿನ್ ಹಾಕಿಸಿಕೊಂಡ ಕೊರೊನಾ ವಾರಿಯರ್ ಗಳಿಗೆ ಮತ್ತು ನಾಗರೀಕರಿಗೆ ಭಯ ಅವರಿಸಿದೆ. ಬೆಂಗಳೂರಿನಲ್ಲಿ ಹಾಫ್ ಡೋಸ್ ಇಂಜೆಕ್ಷನ್ ಕರ್ಮಕಾಂಡ ಬಯಲಾಗಿದೆ. ಕೊರೊನಾ ವಾರಿಯರ್ಸ್ ಪೊಲೀಸರಿಗೂ ಹಾಫ್ ಡೋಸ್ ವ್ಯಾಕ್ಸಿನ್ ಹಾಕಿರೋ ಗಂಭೀರ ಆರೋಪ ಕೇಳಿ ಬಂದಿದೆ. ಹಗಲಿರುಳೆನ್ನದೇ ಜೀವ ಒತ್ತೆಯಿಟ್ಟು ಕೆಲಸ ಮಾಡೋ ಕೊರೊನಾ ವಾರಿಯರ್ಸ್​​​ಗೆ ದೋಖಾ ಮಾಡಲಾಗಿದೆ. …

Read More »

ನಿತ್ಯಾನಂದ ಭಾರತದಲ್ಲಿ ಕಾಲಿಟ್ಟ ಬಳಿಕವೇ ಕೊರೊನಾ ನಿರ್ಮೂಲನೆ; ಕೈಲಾಸವಾಸಿ ಭವಿಷ್ಯವಾಣಿ..!

ನವದೆಹಲಿ: ಭಾರತ ಕೊರೊನಾ ಎರಡನೇ ಅಲೆಯ ವಿರುದ್ಧ ಹೋರಾಟ ನಡೆಸುತ್ತಿದ್ದರೆ ಸ್ವಯಂ ಘೋಷಿತ ದೇವ ಮಾನವ ಮತ್ತೊಮ್ಮೆ ವಿವಾದತ್ಮಾಕ ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ. 2019ರಲ್ಲಿ ಭಾರತದಿಂದ ಪರಾರಿಯಾಗಿದ್ದ ಅತ್ಯಾಚಾರ ಆರೋಪಿ ನಿತ್ಯಾನಂದ ಸದ್ಯ ಈಕ್ವೆಡಾರ್​ ದ್ವೀಪವೊಂದನ್ನು ಖರೀದಿ ಮಾಡಿ ಅದಕ್ಕೆ ಕೈಲಾಸ ಎಂದು ನಾಮಕರಣ ಮಾಡಿ ಅಲ್ಲಿಯೇ ನೆಲೆಸಿದ್ದಾರೆ. ಈ ನಡುವೆ ನಿತ್ಯಾನಂದ ತನ್ನ ಹೊಸ ವೀಡಿಯೊ ಒಂದನ್ನ ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ನಾನು ಭಾರತಕ್ಕೆ ಕಾಲಿಟ್ಟರೆ ಮಾತ್ರ ದೇಶದಲ್ಲಿ …

Read More »

ಶಾಲಾರಂಭಕ್ಕೆ ದಿನ ನಿಗದಿ, ನಿರ್ಧಾರವಾಗದ ಶುಲ್ಕ : ಜೂ. 15ರಿಂದ ದಾಖಲಾತಿ; ಜು.1ರಿಂದ ತರಗತಿ

ಬೆಂಗಳೂರು : ಮುಂದಿನ ಶೈಕ್ಷಣಿಕ ವರ್ಷದ ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆ ಮಾಡಿ, ದಾಖಲಾತಿ, ಶಾಲಾರಂಭದ ದಿನಾಂಕ ಪ್ರಕಟಿಸಿದ್ದರೂ ಶುಲ್ಕದ ಗೊಂದಲವನ್ನು ಮಾತ್ರ ಸರಕಾರ ಬಗೆಹರಿಸಿಲ್ಲ. 2020-21ನೇ ಶೈಕ್ಷಣಿಕ ಸಾಲಿಗೆ ಸೀಮಿತವಾಗಿ ಬೋಧನ ಶುಲ್ಕದಲ್ಲಿ ಶೇ. 30ರಷ್ಟು ಕಡಿತ ಮಾಡಿ ಆದೇಶ ಹೊರಡಿಸಲಾಗಿದೆ. ಜೂ. 15ರಿಂದ ದಾಖಲಾತಿ ಆರಂಭವಾಗಿ, ಜು. 1ರಿಂದ ತರಗತಿಗಳು ಪ್ರಾರಂಭ ವಾಗಲಿವೆ. ಆದರೆ ಹೆತ್ತವರು ಶುಲ್ಕ ಪಾವತಿಗೆ ಹಿಂದೇಟು ಹಾಕುತ್ತಿದ್ದಾರೆ. ಪ್ರತ್ಯಕ್ಷ ತರಗತಿಗಳು ನಡೆಯದೆ ಇರುವುದರಿಂದ ಪೂರ್ಣ ಶುಲ್ಕ …

Read More »

ಸುಪ್ರೀಂ ಕೋರ್ಟ್‌ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೃಷಿ ಪ್ರೀತಿ

ಬೆಂಗಳೂರು: ಸುಪ್ರೀಂ ಕೋರ್ಟ್‌ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿರುವ ಕೆ.ಎಂ. ನಟರಾಜ್ ಅವರು ಉನ್ನತ ಹುದ್ದೆಯಲ್ಲಿದ್ದರೂ ತಮ್ಮ ಜಮೀನಿನಲ್ಲಿ ಕೃಷಿ ಮಾಡುವ ಕಾಯಕ ಮರೆತಿಲ್ಲ. ಸುಪ್ರೀಂ ಕೋರ್ಟ್‌ ರಜೆ ಅವಧಿಯಲ್ಲಿ ತಮ್ಮ ಕೃಷಿ ಪ್ರೀತಿ ಮುಂದುವರಿಸಿದ್ದಾರೆ. ಪುತ್ತೂರು ತಾಲ್ಲೂಕಿನ ಈಶ್ವರಮಂಗಲದ ಕೊನೆತೋಟ ಮಹಾಬಲೇಶ್ವರ ನಟರಾಜ್ ಅವರು ಕೃಷಿ ಕುಟುಂಬದಲ್ಲಿ ಹುಟ್ಟಿ ಬೆಳೆದು ವಕೀಲ ವೃತ್ತಿಯಲ್ಲಿ ದೇಶದಲ್ಲೇ ಹೆಸರು ಮಾಡಿದ್ದಾರೆ. ಮಂಗಳೂರಿನ ಎಸ್‌ಡಿಎಂ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದ ಇವರು …

Read More »

ರಾಜ್ಯದಲ್ಲಿ 10 ಸಾವಿರಕ್ಕಿಂತ ಕಡಿಮೆ ಪ್ರಕರಣ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಹೊಸ ಪ್ರಕರಣಗಳ ಸಂಖ್ಯೆ ಇಳಿಮುಖ ಮಾಡಿದ್ದು, ಕಳೆದ 55 ದಿನಗಳಲ್ಲಿ ಇದೇ ಮೊದಲ ಬಾರಿಗೆ 24 ಗಂಟೆಗಳ ಅವಧಿಯಲ್ಲಿ 10 ಸಾವಿರಕ್ಕಿಂತ (9,808) ಕಡಿಮೆ ಸಂಖ್ಯೆಯ ಪ್ರಕರಣ ಮಂಗಳವಾರ ವರದಿಯಾಗಿದೆ. ಕಳೆದ ಏ.14ರಂದು ಪ್ರಕರಣ ಗಳ ಸಂಖ್ಯೆ 10 ಸಾವಿರದ ಗಡಿ ದಾಟಿತ್ತು. ಬಳಿಕ ಏರುಗತಿ ಪಡೆದು, 50 ಸಾವಿರದ ಗಡಿಯ ಆಸುಪಾಸಿಗೆ ಏರಿಕೆ ಕಂಡಿತ್ತು. ಈಗ ಎರಡು ವಾರಗಳಿಂದ ಇಳಿಮುಖ ಕಂಡಿದ್ದು, ಸೋಂಕು ದೃಢ …

Read More »

ಬಿಜೆಪಿ ಸರ್ಕಾರ ನೀಡಬಹುದಾದ ಅತಿದೊಡ್ಡ ಪರಿಹಾರ ಪ್ಯಾಕೇಜ್ ಎಂದರೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ‌ ತೆರಿಗೆ ತಗ್ಗಿಸುವುದು : ಡಿ. ಕೆ. ಶಿ

ಬೆಂಗಳೂರು : ಬಿಜೆಪಿ ಸರ್ಕಾರ ನೀಡಬಹುದಾದ ಅತಿದೊಡ್ಡ ಪರಿಹಾರ ಪ್ಯಾಕೇಜ್ ಎಂದರೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ‌ ತೆರಿಗೆ ತಗ್ಗಿಸುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ತೈಲ ಬೆಲೆ ಏರಿಕೆ ಖಂಡಿಸಿ ಟ್ವೀಟ್ ಮಾಡಿರುವ ಡಿಕೆಶಿ, ಬಿಜೆಪಿ ಸರ್ಕಾರ ನೀಡಬಹುದಾದ ಅತಿದೊಡ್ಡ ಪರಿಹಾರ ಪ್ಯಾಕೇಜ್ ಎಂದರೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ‌ ತೆರಿಗೆ ತಗ್ಗಿಸುವುದು. ನಿರುದ್ಯೋಗ ಹೆಚ್ಚುತ್ತಿರುವ ಸಂದರ್ಭದಲ್ಲಿ ಇಂಧನ ತೆರಿಗೆಯ ಭಾರದಿಂದಾಗಿ ಮಧ್ಯಮ ವರ್ಗದ ಜನರು …

Read More »

ನವದೆಹಲಿ : 3ನೇ ಅಲೆ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರಲ್ಲ; ಏಮ್ಸ್ ನಿರ್ದೇಶಕ ಡಾ. ರಂದೀಪ್ ಗುಲೇರಿಯಾ

ನವದೆಹಲಿ : ಹೆಮ್ಮಾರಿ ಸೋಂಕಿಗೆ ಹೆದರದವರಿಲ್ಲ. ಡೆಡ್ಲಿ ಸೋಂಕಿನ 3ನೇ ಅವತಾರ ಮಕ್ಕಳಿಗೆ ಮಾರಕ ಎನ್ನುವ ಮಾತುಗಳು ಎಲ್ಲೇಡೆ ಸಾಮಾನ್ಯವಾಗದೆ. ಈ ಆತಂಕಕ್ಕೆ ಏಮ್ಸ್ ನಿರ್ದೇಶಕ ಡಾ. ರಂದೀಪ್ ಗುಲೇರಿಯಾ ತೆರೆ ಎಳೆದಿದ್ದಾರೆ. ಕೇಂದ್ರ ಆರೋಗ್ಯ ಇಲಾಖೆ ನಡೆಸಿದ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು ಕೋಟ್ಯಾಂತರ ಪೋಷಕರಲ್ಲಿ ನೆಮ್ಮದಿ ತಂದಿದೆ. ಕೊರೋನಾ 3ನೇ ಅಲೆ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರುವುದಿಲ್ಲ ಎಂದು ಗುಲೆರಿಯಾ ಹೇಳಿದ್ದಾರೆ. ಆದರೆ ಮುಂಜಾಗ್ರತ ಕ್ರಮವಾಗಿ ಮಾಸ್ಕ್ …

Read More »