Breaking News
Home / 2021 / ಮೇ / 01 (page 2)

Daily Archives: ಮೇ 1, 2021

ಉಮೇಶ್ ಜಾಧವ್ ಗೆ ಮೂಟೆಗಟ್ಟಲೇ ಲಸಿಕೆ; ಎಲ್ಲಿಂದ ಬಂತು :ಸಿದ್ದರಾಮಯ್ಯ

ಬೆಂಗಳೂರು: ಇಂದಿನಿಂದ 18 ವರ್ಷ ಮೇಲ್ಪಟ್ಟವರಿಗೆ ಸರ್ಕಾರ ಕೊರೊನಾ ಲಸಿಕೆ ನೀಡಿಕೆ ಅಭಿಯಾನ ಆರಂಭಿಸಿದೆ. ಆದರೆ ಲಸಿಕೆ ಲಭ್ಯತೆಯೇ ಇಲ್ಲದೇ ಅಭಿಯಾನ ಆರಂಭಿಸಿರುವುದಾದರೂ ಯಾಕೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ಕೇರ್ಸ್ ಅಭಿಯಾನದಡಿ ಕೋವಿಡ್ ಸೋಂಕಿತರ ನೆರವಿಗೆ ಆಂಬುಲೆನ್ಸ್ ಗಳಿಗೆ ಚಾಲನೆ ನೀಡಿ, ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಯಾವುದೇ ಪೂರ್ವತಯಾರಿಯಿಲ್ಲದೇ ಲಸಿಕೆ ಅಭಿಯಾನ ಘೋಷಿಸಿದ್ದಾರೆ. ರಾಜ್ಯದಲ್ಲಿ ಪ್ರತಿಯೊಬ್ಬರಿಗೂ ವ್ಯಾಕ್ಸಿನ್ ಸಿಗಬೇಕೆಂದರೆ ಆರುವರೆ ಕೋಟಿ ವ್ಯಾಕ್ಸಿನ್ ಬೇಕು. ರಾಜ್ಯದಲ್ಲಿ …

Read More »

ಕೋವಿಡ್ ಮಾಹಿತಿ ಹಂಚಿಕೆ ನಿರ್ಬಂಧಕ್ಕೆ ಗರಂ: ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ತರಾಟೆ

ನವದೆಹಲಿ: ಕೋವಿಡ್ ಸಾಂಕ್ರಾಮಿಕಕ್ಕೆ ಸಂಬಂಧಿಸಿದ ಮಾಹಿತಿಯನ್ನು ನಾಗರಿಕರು ಸಾಮಾಜಿಕ ತಾಣಗಳಲ್ಲಿ ಹಂಚಿಕೊಳ್ಳುವುದನ್ನು ಯಾವುದೇ ಸರ್ಕಾರ ಹತ್ತಿಕ್ಕುವಂತಿಲ್ಲ. ಈ ವಿಷಯದಲ್ಲಿ ನಾಗರಿಕರಿಗೆ ಕಿರುಕುಳ ನೀಡಿದರೆ ಅದನ್ನು ನ್ಯಾಯಾಂಗ ನಿಂದನೆ ಎಂದೇ ಪರಿಗಣಿಸಬೇಕಾಗುತ್ತದೆ ಎಂದು ಸುಪ್ರೀಂಕೋರ್ಟ್ ಸರ್ಕಾರಗಳಿಗೆ ಖಡಕ್ ಎಚ್ಚರಿಕೆ ನೀಡಿದೆ. ಕರೊನಾ ಸಾಂಕ್ರಾಮಿಕ ಕುರಿತಂತೆ ಜನರು ತಮ್ಮ ಕುಂದು-ಕೊರತೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡರೆ ಅದು ತಪುಪ ಮಾಹಿತಿ ಆಗುವುದಿಲ್ಲ. ಆಕ್ಸಿಜನ್ ಅಥವಾ ಬೆಡ್ ದೊರಕಿಲ್ಲ ಎಂದು ಹೇಳುವುದು ಸುಳ್ಳು ಸಂಗತಿಯಲ್ಲ. ಜನರು …

Read More »

ಕರೊನಾ ಸಂಕಷ್ಟದಲ್ಲಿ ತಲೆಎತ್ತಿದೆ ಮೆಡಿಕಲ್​ ಮಾಫಿಯಾ: ಬೆಚ್ಚಿಬೀಳಿಸುವ ವರದಿ ಇದು..!

ವಿಜಯವಾಡ: ಮಹಾಮಾರಿ ಕರೊನಾ ವೈರಸ್​ ನಡುವೆಯೇ ಆಂಧ್ರ ಪ್ರದೇಶದಲ್ಲಿ ಮೆಡಿಕಲ್​ ಮಾಫಿಯಾ ತಲೆಎತ್ತಿದೆ. ಈ ಬಗ್ಗೆ ಸ್ಥಳೀಯ 10ಟಿವಿ ಮಾಧ್ಯಮದ ತನಿಖಾವರದಿಯು ರಾಜ್ಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ಗಂಭೀರ ಸ್ಥಿತಿಯಲ್ಲಿರುವ ಕರೊನಾ ರೋಗಿಗಳಿಗೆ ಬಳಸುವ ಚುಚ್ಚುಮದ್ದನ್ನು ಡ್ರಗ್ಸ್​ ಮಾಫಿಯಾ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದೆ. ಇಡೀ ದೇಶವು ಕರೊನಾದಿಂದ ದಿಕ್ಕೆಟ್ಟಿರುವ ಸಂದರ್ಭದಲ್ಲಿ ಕರೊನಾದಿಂದ ಬದುಕುಳಿದ ರೋಗಿಗಳನ್ನು ಸಹಜ ಸ್ಥಿತಿಗೆ ತರಲು ತುರ್ತು ಚುಚ್ಚುಮದ್ದಿನ ಬೇಡಿಕೆ ಇದೆ. ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಕುಟುಂಬದ …

Read More »

ಅಕ್ರಮವಾಗಿ ರೆಮ್ಡೆಸಿವಿರ್ ಮಾರಾಟ ಮಾಡಿದ್ರೆ ಕ್ರಿಮಿನಲ್ ಕೇಸ್ : ಸಿಎಂ ಬಿಎಸ್ ವೈ ಎಚ್ಚರಿಕೆ

ಬೆಂಗಳೂರು : ರಾಜ್ಯದಲ್ಲಿ ಯಾರಾದ್ರೂ ರೆಮ್ಡೆಸಿವಿರ್ ಕಾಳಸಂತೆಯಲ್ಲಿ ಮಾರಾಟ ಮಾಡಿದರೆ ಅಂತಹವರ ವಿರುದ್ಧ ಶಿಸ್ತು ಕ್ರಮದ ಜೊತೆಗೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ. ಇಂದು ಬೆಂಗಳೂರಿನ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜಿನಲ್ಲಿ ನಡೆದ 18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕಾ ಅಭಿಯಾನ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಸಿಎಂ ಬಿ.ಎಸ್.ಯಡಿಯೂರಪ್ಪ, ಲಸಿಕೆಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದರೆ ಮತ್ತು …

Read More »

ಅಕ್ರಮ ಮದ್ಯ ಸಾಗಾಣಿಕೆ8 ಲಕ್ಷ ರೂ ಬೆಲೆ ಬಾಳುವ ಮಾಲನ್ನ ವಶಪಡಿಸಕೊಳ್ಳಲಾಗಿದೆ.: ಎ.ರವಿಶಂಕರ್

ಅಕ್ರಮ ಮದ್ಯ ಸಾಗಾಣಿಕೆ ಮಾಡುತ್ತಿದ್ದ ಆರೋಪಿಗಳನ್ನ ಬಂಧಿಸಿ, ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಮಾಲನ್ನ ವಶಪಡಿಸಕೊಳ್ಳಲಾಗಿದೆ. ಮಾನ್ಯ ಅಬಕಾರಿ ಜಂಟಿ ಆಯುಕ್ತರಾದ ಶ್ರೀಯುತ ಗಿರಿಯವರ ಮಾರ್ಗದರ್ಶನದಲ್ಲಿ ಅಬಕಾರಿ ಉಪ ಆಯುಕ್ತರಾದ ಶ್ರೀಯುತ ಎ.ರವಿಶಂಕರ್ ರವರ ನಿರ್ದೇಶನದ ಮೇರೆಗೆ ಮಾನ್ಯ ಅಬಕಾರಿ ಊಪ ಅಧೀಕ್ಷಕರು ಕೋಲಾರ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರಾದ ಎಂ. ನಟರಾಜ್ ರವರ ನೇತೃತ್ವದಲ್ಲಿ ಕೋಲಾರ ತಾಲ್ಲೂಕು ವ್ಯಾಪ್ತಿಯಲ್ಲಿ ಕೋವಿಡ್ ಲಾಕ್ ಡೋನ್ ಹಿನ್ನೆಲೆಯಲ್ಲಿ ಗಸ್ತು ನಿರ್ವಹಿಸುವಾಗ …

Read More »

ಪುತ್ತೂರು ನಿಡ್ಪಳ್ಳಿಯಲ್ಲಿ ನೇಣು‌ ಬಿಗಿದ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆ

ಪುತ್ತೂರು, ಮೇ 01: ಅವಿವಾಹಿತ ಯುವಕನೋರ್ವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಬಗ್ಗೆ‌ ನಿಡ್ಪಳ್ಳಿ ಗ್ರಾಮದ ಪೊಯ್ಯೆತ್ತಡ್ಕ ಎಂಬಲ್ಲಿ ವರದಿಯಾಗಿದೆ.‏ ನಿಡ್ಪಳ್ಳಿ ಪೊಯ್ಯೆತ್ತಡ್ಕ ಐತ್ತಪ್ಪ ನಾಯ್ಕರವರ ಪುತ್ರ ವಿಶ್ವನಾಥ ಮೃತಪಟ್ಟವರಾಗಿದ್ದಾರೆ. ಕೂಲಿ ಕಾರ್ಮಿಕರಾಗಿರುವ ವಿಶ್ವನಾಥರವರ ಮನೆಯ ಸಮೀಪದಲ್ಲಿರುವ ಕಟ್ಟಡದ ಹೊರ ಜಗಲಿಯ ಪಕ್ಕಾಸಿಗೆ ನೈಲಾನ್ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಮುಂಜಾನೆ ಪತ್ತೆಯಾಗಿದೆ. ತಲೆಯಲ್ಲಿ ಮುಂಡಾಸು ಕಟ್ಟಿದ ಹಾಗೆಯೇ ಇರುವುದಲ್ಲದೆ ಕೈಗಳು ಕಟ್ಟಡದ ಕಂಬಕ್ಕೆ ತಾಗು ರೀತಿಯಲ್ಲಿತ್ತು. …

Read More »

ವಿಡಿಯೋ ಕಾಲ್ ಮೂಲಕ ನವಜಾತ ಶಿಶುವನ್ನು ನೋಡಿ ಸಂತಸಪಟ್ಟು, ಮಡದಿಯನ್ನು ಸಂತೈಸಿ, ಮಗಳಿಗೆ ಧೈರ್ಯ ತುಂಬುತ್ತಿರುವ ಕೊಪ್ಪಳದ ಕೋವಿಡ್ ಹೀರೋ

ಕೊಪ್ಪಳ: ಈ ಕೊರೊನಾ ಕಾಲದಲ್ಲಿ ಸರ್ಕಾರಿ ವ್ಯವಸ್ಥೆ ಅದರಲ್ಲೂ ಸರ್ಕಾರಿ ವೈದ್ಯಕೀಯ ವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂಬುದು ಜನರ ಅನುಭವಕ್ಕೆ ಬಂದ ಸಂಗತಿಯಾಗಿದೆ. ಆದರೆ ಇಲ್ಲೊಬ್ಬ ಕೊವಿಡ್ ಹೀರೋ ಒಂದು ತಿಂಗಳಿಂದ ಆಸ್ಪತ್ರೆಯಲ್ಲೇ ಉಳಿದುಕೊಂಡು ತನ್ನವರನ್ನ ಬರೀ ವಿಡಿಯೋ ಕಾಲ್ ಮೂಲಕ ಸಂಪರ್ಕಿಸಿ, ಸಮಾಧಾನ ಪಟ್ಟುಕೊಳ್ಳುತ್ತಿರುವುದನ್ನ ನೋಡಿದರೆ ಕರುಳು ಕಿವುಚಿಬರುತ್ತದೆ; ಆತನ ತ್ಯಾಗಕ್ಕೆ ಕೃತಜ್ಞತೆ ಸೂಚಿಸೋಣ ಅನ್ನಿಸದಿರದು. ಎದುರಿಗೆ ಕೊವಿಡ್ ಡ್ಯೂಟಿ ಹರಡಿಕೊಂಡು, ಅದಾಗತಾನೇ ಹುಟ್ಟಿದ ತನ್ನ ಮಗುವನ್ನೂ ನೋಡದ …

Read More »

ಚುನಾವಣಾ ಕರ್ತವ್ಯಕ್ಕೆ ತೆರಳಿದ್ದ ಶಿಕ್ಷಕ ಕೋವಿಡ್ ಗೆ ಬಲಿ

ರಾಯಚೂರು: ಮಸ್ಕಿ ಉಪಚುನಾವಣೆ ಕರ್ತವ್ಯಕ್ಕೆ ಹಾಜರಾಗಿದ್ದ ಶಿಕ್ಷಕ ಕೋವಿಡ್ ಗೆ ಬಲಿಯಾಗಿದ್ದಾರೆ. ದೇವದುರ್ಗ ತಾಲೂಕಿನ ಸುಂಕೇಶ್ವರಹಾಳ ಪ್ರೌಢಶಾಲೆಯ ವಿಜ್ಞಾನ ವಿಷಯದ ಶಿಕ್ಷಕ ಕಟ್ಟೆಪ್ಪ (40) ಸಾವನ್ನಪ್ಪಿದವರು. ಸೋಂಕು ತಗುಲಿದ ಹಿನ್ನೆಲೆಯಲ್ಲಿ ರಾಯಚೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗೆ ಸಾವಿಗೀಡಾಗಿದ್ದಾರೆ.   ಶಿಕ್ಷಕ ಕಟ್ಟೆಪ್ಪ ಇತ್ತೀಚೆಗೆ ಮಸ್ಕಿ ಉಪಚುನಾವಣೆಯ ಕರ್ತವ್ಯಕ್ಕೆ ಹಾಜರಾಗಿದ್ದರು. ನಂತರ ಅವರಿಗೆ ಕೋವಿಡ್ ಲಕ್ಷಣಗಳು ಕಂಡು ಬಂದಿದ್ದರಿಂದ ಪರೀಕ್ಷೆಗೆ ಒಳಪಟ್ಟಾಗ ಕೋವಿಡ್ ಪಾಸಿಟಿವ್ ದೃಢವಾಗಿದೆ. …

Read More »

ಪತಿಗೆ ಕೋರೊನಾ ದೃಢ :ಹೆದರಿದ ಪತ್ನಿ ಆತ್ಮಹತ್ಯೆ

ಚಾಮರಾಜನಗರ : ತಾಲ್ಲೂಕಿನ ಹೆರವೆ ಹೋಬಳಿಯ ಗೋವಿಂದವಾಡಿ (ಕಲ್ಪುರ) ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದೇಶಿಗೌಡನಪುರ ಗ್ರಾಮದಲ್ಲಿ ಪತಿಗೆ ಕೋರೊನಾ ಸೋಂಕು ದೃಡವಾಗಿದ್ದನ್ನು ಕಂಡ ಪತ್ನಿ ಹೆದರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ದೇಶಿಗೌಡನಪುರ ಗ್ರಾಮದ ಚಿನ್ನಪ್ಪರವರಿಗೆ ಕೋರೊನಾ ಸೋಂಕು ದೃಡವಾಗಿರುವ ಬಗ್ಗೆ ಅಧಿಕೃತ ಮಾಹಿತಿ ಬಂದ ಹಿನ್ನಲೆಯಲ್ಲಿ ಕೋರೊನಾ ಮಹಾಮಾರಿಗೆ ಹೆದರಿದ ಅವರ ಪತ್ನಿಶಿವಮ್ಮ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದ್ದು, ಮೃತ ಶಿವಮ್ಮರವರ ಆಂತ್ಯ ಸಂಸ್ಕಾರವನು ಸ್ವತಃ ಜಿಲ್ಲಾ ಪಂಚಾಯ್ತಿ …

Read More »

9 ಮಕ್ಕಳಿದ್ದರೂ ಆಶ್ರಯವಿಲ್ಲದೆ ಬೀದಿ ಪಾಲಾದ ವೃದ್ಧೆ. ಮನೆಯಿದ್ದರೂ ಮರದ ಕೆಳಗೆ ವಾಸ.!

ಮೈಸೂರು : ಮೈಯೆಲ್ಲ ನರೆತು ಬಾಡಿದ ಮುಖ. 9 ಮಕ್ಕಳಿದ್ದರೂ ಆಶ್ರಯವಿಲ್ಲದೆ ಬೀದಿ ಪಾಲಾದ ವೃದ್ಧೆ. ಮನೆಯಿದ್ದರೂ ಮರದ ಕೆಳಗೆ ವಾಸ.! ಇದು ಮಕ್ಕಳಿಂದ ತಿರಸ್ಕೃತಳಾಗಿ ಬೀದಿಗೆ ಬಿದ್ದಿರುವ ವೃದ್ಧೆಯ ಕರುಣಾಜನಕ ಕಥೆ. ಪಟ್ಟಣದ ಭೀಮನಗರ ಬಡಾವಣೆಯ ಪಾಲ್ ಚಾವಡಿ ಬೀದಿ ನಿವಾಸಿ ಬಂಡರಸಮ್ಮ (80), ಹಲವು ದಿನಗಳಿಂದ ನಿರಾಶ್ರಿತರಾಗಿ 22ನೇ ವಾರ್ಡ್​ನ ಆಶ್ರಯ ಬಡಾವಣೆಯ ಬೀದಿಯಲ್ಲಿ ದಿನ ದೂಡುತ್ತಿದ್ದಾರೆ. ಪತಿ ನಾಗಯ್ಯ, ಪುತ್ರರಾದ ಸಿದ್ದರಾಜು, ಸುಂದರ್, ಸುರೇಶ್, ಪ್ರಕಾಶ್, …

Read More »