Breaking News
Home / 2021 / ಏಪ್ರಿಲ್ (page 5)

Monthly Archives: ಏಪ್ರಿಲ್ 2021

ಚಿಕ್ಕೋಡಿ ಪಟ್ಟಣದ ಜ್ಯೋತಿ ಬಜಾರ್ ಸೀಲ್ ಮಾಡಿಸಿದ ಅಧಿಕಾರಿ ಅಪೂರ್ವ ಬೀದ್ರಿ

ಸಚಿವೆ ಶಶಿಕಲಾ ಜೊಲ್ಲೆ ಮತ್ತು ಸಂಸದ ಅಣ್ಣಾಸಾಹೇಬ ಜೊಲ್ಲೆ ಒಡೆತನ‌ದ‌ ಜ್ಯೋತಿ ಬಜಾರ್ ಅನ್ನು ಚಿಕ್ಕೋಡಿ ಪುರಸಭೆ ಮುಖ್ಯಾಧಿಕಾರಿ ಅಪೂರ್ವ ಬೀದ್ರಿ (KAS) ಅವರ ನೇತ್ರತ್ವದಲ್ಲಿ ದಾಳಿ ಮಾಡಿ ಜ್ಯೋತಿ ಬಜಾರ್ ಸೀಲ್ ಮಾಡಿಸಿದ ಅಧಿಕಾರಿ. ಬೆಳಗಾವಿ‌‌ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿರುವ ಜ್ಯೋತಿ ಬಜಾರ್ ಕೊರೊನಾ ನಿಯಮ ಗಾಳಿಗೆ ತೊರಿ ವ್ಯಾಪಾರ ನಡೆಸುತ್ತಿರುವ ಆರೋಪದ ಅಡಿ ಸೀಲ್ ಮಾಡಿಸಿದ ಅಧಿಕಾರಿ ಯಾಕೆ ಅಂಗಡಿ ತಗೆದಿದ್ದೀರಿ ಎಂದು ಜ್ಯೋತಿ ಬಜಾರ್ ಸಿಬ್ಬಂಧಿಗೆ …

Read More »

ರಾಜ್ಯದಲ್ಲಿಂದು 35024 ಪಾಸಿಟಿವ್ ಪ್ರಕರಣ, 270 ಜನರ ಸಾವು

ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ಹೊಸ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುಗತಿಯಲ್ಲಿಯೇ ಸಾಗಿದ್ದು, ಇಂದು ಕೂಡ 30 ಸಾವಿರ ಗಡಿ ದಾಡಿದೆ. ಇಂದು ( ಗುರುವಾರ) ಸಂಜೆ ಕರ್ನಾಟಕ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ವರದಿಗಳ ಪ್ರಕಾರ ರಾಜ್ಯದಲ್ಲಿ ಕಳೆದ 24 ಗಂಟೆಗಳ ( ದಿನಾಂಕ:28.04.2021, 00:00 ರಿಂದ 23:59 ) ಅವಧಿಯಲ್ಲಿ ಬರೋಬ್ಬರಿ 35024 ಜನರಿಗೆ ಕೋವಿಡ್ ಪಾಸಿಟಿವ್ ಸೋಂಕು ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು …

Read More »

ಆರ್‌ಎಸ್‌ಎಸ್‌ನಿಂದ ಕೋವಿಡ್ ನೆರವು ಕೇಂದ್ರ ಸ್ಥಾಪನೆ..!

ಹುಬ್ಬಳ್ಳಿ: ಪರಸ್ಪರ ಸಹಕಾರದಿಂದ ಮಾತ್ರ ಕೊರೊನಾ ಎರಡನೇ ಅಲೆಯನ್ನು ಎದುರಿಸಲು ಸಾಧ್ಯ ಎಂದು ಆರ್‍ಎಸ್‍ಎಸ್ ಹಿರಿಯ ಪ್ರಚಾರಕ ರಾಷ್ಟ್ರೀಯ ವ್ಯವಸ್ಥಾ ಪ್ರಮುಖ ಮಂಗೇಶ ಬೇಂಡೆ ಹೇಳಿದರು. ಸೇವಾ ಭಾರತಿ ಟ್ರಸ್ಟ್ ಹಾಗೂ ನೆರವು ಸಹಯೋಗದಲ್ಲಿ ಇಲ್ಲಿನ ಕಿಮ್ಸ್ ಎದುರು ಸ್ಥಾಪಿಸಲಾದ ಕೊರೊನಾ ಮಾಹಿತಿ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೊರೊನಾ ವಿಚಾರದಲ್ಲಿ ಭಾರತವನ್ನು ಇತರೆ ರಾಷ್ಟ್ರಗಳ ಜೊತೆಗೆ ಹೋಲಿಕೆ ಮಾಡುವುದು ಸರಿಯಲ್ಲ. ಅಮೆರಿಕ, ಇಂಗ್ಲೆಂಡ್ ಗೆ ಹೋಲಿಸಿದರೆ ಭಾರತ ಕೊರೊನಾ …

Read More »

ಬೆಳಗಾವಿ ಜಿಲ್ಲೆಯಲ್ಲಿ 360 ಜನರಿಗೆ ಕೊರೋನಾ ಸೋಂಕು

ಬೆಳಗಾವಿ – ರಾಜ್ಯದಲ್ಲಿ ಬುಧವಾರ 39,047 ಜನರಿಗೆ ಹೊಸದಾಗಿ ಕೊರೋನಾ ಸೋಂಕು ದೃಢಪಟ್ಟಿದೆ. 229 ಜನರು ಕಳೆದ 24 ಗಂಟೆಯಲ್ಲಿ ಸಾವಿಗೀಡಾಗಿದ್ದಾರೆ. 2,192 ಜನರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 11,833 ಜನರು ಡಿಸ್ಚಾರ್ಜ್ ಆಗಿದ್ದಾರೆ. ಬೆಂಗಳೂರು ನಗರದಲ್ಲಿ 22,596 ಜನರಿಗೆ ಕೊರೋನಾ ದೃಢಪಟ್ಟಿದೆ. ಬೆಳಗಾವಿ ಜಿಲ್ಲೆಯಲ್ಲಿ 360 ಜನರಿಗೆ ಸೋಂಕು ತಗುಲಿದ್ದು, ಬೆಳಗಾವಿ ನಗರದಲ್ಲೇ 291 ಜನರಿಗೆ ಕೊರೋನಾ ದೃಢಪಟ್ಟಿದೆ. ಅಥಣಿ 4, ಬೈಲಹೊಂಗಲ 15, ಚಿಕ್ಕೋಡಿ 2, ಗೋಕಾಕ …

Read More »

ಒಂದೇ ದಿನ ಸರ್ಕಾರಿ ಶಾಲೆಯ ಮೂವರು ಶಿಕ್ಷಕರು ಕೊರೊನಾ ಸೋಂಕಿಗೆ ಬಲಿ

ತುಮಕೂರು: ರಾಜ್ಯದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಒಂದೇ ದಿನ ಸರ್ಕಾರಿ ಶಾಲೆಯ ಮೂವರು ಶಿಕ್ಷಕರು ಕೊರೊನಾ ಸೋಂಕಿಗೆ ಬಲಿಯಾಗಿರುವ ಘಟನೆ ತುಮಕೂರಿನ ಕುಣಿಗಲ್ ತಾಲೂಕಿನಲ್ಲಿ ನಡೆದಿದೆ. ಕಿಣಿಗಲ್ ತಾಲೂಕಿನ ಉಜ್ಜಯನಿ ಪ್ರೌಢ ಶಾಲೆಯ ಶಿಕ್ಷಕ ಶಿವರಾಮೇಗೌಡ, ಮಲ್ಲಿಪಾಳ್ಯ ಪ್ರೌಢ ಶಾಲೆಯ ಪರಮೇಶ್ವರ್ ಆಚಾರ್ ಹಾಗೂ ತುರುಗೂರು ಪ್ರಾಥಮಿಕ ಶಾಲಾ ಶಿಕ್ಷಕ ಕೃಷ್ಣಪ್ಪ ಕೊರೊನ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಈ ನಡುವೆ ತುಮಕೂರು ಜಿಲ್ಲೆಯಲ್ಲಿ ಕೊರೊನಾ ಸೋಂಕು …

Read More »

ವೈದ್ಯಾಧಿಕಾರಿಗಳ ನೇಮಕಾತಿ ಕನಿಷ್ಟ ವಯೋಮಿತಿ ಹೆಚ್ಚಳ: ಸರ್ಕಾರದ ಕ್ರಮ ಎತ್ತಿಹಿಡಿದ ಹೈಕೋರ್ಟ್‌

ಬೆಂಗಳೂರು: ವೈದ್ಯಾಧಿಕಾರಿಗಳ ನೇಮಕಾತಿಗೆ ಕನಿಷ್ಠ ವಯೋಮಿತಿಯನ್ನು 21 ರಿಂದ 26 ವರ್‌ಷಕ್ಕೆ ಹೆಚ್ಚಿಸಿ ರಾಜ್ಯ ಸರ್ಕಾರ ಜಾರಿಗೆ ತಂದ ನಿಯಮವನ್ನು ಹೈಕೋರ್ಟ್‌ ಎತ್ತಿಹಿಡಿದಿದೆ. ಅಲ್ಲದೇ, ಅರ್ಜಿದಾರರು ಹೈಕೋರ್ಟ್‌ ಗೆ ಮೊರೆ ಹೋಗುವ ಮೊದಲು ಸರ್ಕಾರದ ನಿಯಮ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಜಾಗೊಳಿಸಿರುವ ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ)ಯ ಕ್ರಮ ಸರಿ ಇದೆ ಎಂದೂ ಸಹ ಹೈಕೋರ್ಟ್‌ ಹೇಳಿದೆ. ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶನಾಲಯ ಸೇವೆಗಳು (ಹಿರಿಯ ವೈದ್ಯಾಧಿಕಾರಿಗಳು/ಪರಿಣಿತರು, …

Read More »

ಸಂತಸ ಮೂಡಿಸಿದ ಲಾಕ್ ಡೌನ್: 22 ವರ್ಷಗಳ ನಂತರ ಮನೆಗೆ ಮಗ ಬಂದ!

ಹಾಸನ: ಕೋವಿಡ್ ನಿಯಂತ್ರಿಸಲು ವಿಧಿಸಲಾಗಿರುವ ಲಾಕ್ ಡೌನ್ ಬಹಳಷ್ಟು ಜನರ ನೆಮ್ಮದಿಗೆಡಿಸಿದೆ. ಕೆಲಸ ಕಾರ್ಯವಿಲ್ಲದೆ ದಿನದೂಡುವುದೇ ಕಷ್ಟವಾಗಿದೆ. ಆದರೆ ಇಲ್ಲೊಂದು ಮನೆಯಲ್ಲಿ ಲಾಕ್ ಡೌನ್ ಸಂತಸಕ್ಕೆ ಕಾರಣವಾಗಿದೆ. ಮನೆ ಬಿಟ್ಟು ಹೋಗಿದ್ದ ಮಗ 22 ವರ್ಷಗಳ ನಂತರ ಮನೆಗೆ ವಾಪಸ್ಸಾಗಿದ್ದು ಹೆತ್ತವರಲ್ಲಿ ಸಂತಸ ಮೂಡಿಸಿದೆ. ಹಾಸನ ತಾಲೂಕು ಶಾಂತಿಗ್ರಾಮ ಹೋಬಳಿ ಹೊಂಗರೆ ಗ್ರಾಮದ ರಾಜೇಗೌಡ ಮತ್ತು ಅಕ್ಕಯ್ಯಮ್ಮ ದಂಪತಿ ಪುತ್ರ ಶೇಖರ್‌ (38) ಮನೆಗೆ ವಾಪಸ್ಸಾದವ.   ಈತ, 18 …

Read More »

ಸರ್ಕಾರಿ, ಖಾಸಗಿ ಆಸ್ಪತ್ರೆಗಳಿಗೆ ರೆಮ್‌ಡಿಸಿವಿರ್ ಹಂಚಿಕೆಗೆ ಸಮಿತಿ: ಡಿ.ಸಿಡಾ.ಕೆ. ಹರೀಶ್ ಕುಮಾರ್

ಬೆಳಗಾವಿ: ‘ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ರೆಮ್‌ಡಿಸಿವಿರ್ ಸಮರ್ಪಕ ಹಂಚಿಕೆ, ಲಭ್ಯವಿರುವ ಹಾಸಿಗೆಗಳ ನಿರ್ವಹಣೆಗೆ ಸಂಬಂಧಿಸಿದಂತೆ ಹಲವು ಸುತ್ತಿನ ಸಭೆಗಳನ್ನು ನಡೆಸಲಾಗಿದೆ. ವಿವಿಧ ಸಮಿತಿಗಳನ್ನು ರಚಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಡಾ.ಕೆ. ಹರೀಶ್ ಕುಮಾರ್ ತಿಳಿಸಿದರು. ಇಲ್ಲಿನ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಜನಪ್ರತಿನಿಧಿಗಳು ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು, ‘ಲಸಿಕಾಕರಣ ಚುರುಕುಗೊಳಿಸಲು ಕ್ರಮ ಕೈಗೊಂಡಿದ್ದು, ಮಾರ್ಗಸೂಚಿ ಪ್ರಕಾರ ಅಕ್ಟೋಬರ್ ವೇಳೆಗೆ ಸಂಪೂರ್ಣ ಲಸಿಕೆಗೆ ಆದ್ಯತೆ ನೀಡಲಾಗುತ್ತಿದೆ’ ಎಂದರು. ‘ಬಿಮ್ಸ್ ಆಸ್ಪತ್ರೆಯಲ್ಲಿ ಊಟ, …

Read More »

BPL’ ಕಾರ್ಡ್ ಹೊಂದಿರುವ ಬಡವರಿಗೆ ಉಚಿತ ಕೋವಿಡ್ ಚಿಕಿತ್ಸೆ : ಸಚಿವ ಬಿ.ಸಿ.ಪಾಟೀಲ್

ಹಿರೇಕೆರೂರು : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಉಚಿತ ಕೋವಿಡ್ ಚಿಕಿತ್ಸೆ ನೀಡುವುದಾಗಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ. ಹೌದು, ಬಿಪಿಎಲ್ ಕಾರ್ಡ್ ಹೊಂದಿರುವ ತಮ್ಮ ಕ್ಷೇತ್ರದ ಬಡವರು ಕೋವಿಡ್ ಸೋಂಕಿತರಾಗಿ ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಮುಂದಾದರೆ ಅಂತವರಿಗೆ ಸಂಪೂರ್ಣ ಚಿಕಿತ್ಸಾ ವೆಚ್ಚ ಭರಿಸುವುದಾಗಿ ಹೇಳಿದ್ದಾರೆ. ಈ ಮೂಲಕ ತಮ್ಮ ಕ್ಷೇತ್ರದ ಬಿಪಿಎಲ್ ಕಾರ್ಡ್ ಹೊಂದಿದವರಿಗೆ …

Read More »

ಕಿಲ್ಲರ್ ಕೊರೊನಾ: ಆಯಂಬುಲೆನ್ಸ್ ಚಾಲಕರಿಂದಲೇ ಅಂತ್ಯಸಂಸ್ಕಾರ, ವಿಡಿಯೋ ನೋಡಿ ವಿದಾಯ ಹೇಳುತ್ತಿರುವ ಕುಟುಂಬಸ್ಥರು

ಬೆಂಗಳೂರು: ಕಿಲ್ಲರ್ ಕೊರೊನಾಗೆ ಜನ ಬಲಿಯಾಗುತ್ತಿದ್ದಾರೆ. ದಿನದಿಂದ ದಿನಕ್ಕೆ ಸೋಂಕಿತರ ಹಾಗೂ ಸಾಯುವವರ ಸಂಖ್ಯೆ ಏರಿಕೆಯಾಗುತ್ತಿದೆ. ದೇಶದಲ್ಲಿ ಗಂಭೀರ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ವಿಪರ್ಯಾಸವೆಂದರೆ ಸೋಂಕಿನಿಂದ ಮೃತಪಟ್ಟವರ ಕುಟುಂಬಸ್ಥರು ಮೃತರ ಅಂತ್ಯಸಂಸ್ಕಾರವನ್ನು ವಿಡಿಯೋ ಮೂಲಕ ವೀಕ್ಷಿಸುತ್ತಿದ್ದಾರೆ. ತಮ್ಮವರನ್ನು ವಿಡಿಯೋ ಮೂಲಕವೇ ವಿದಾಯ ಹೇಳುತ್ತಿದ್ದಾರೆ. ಹೌದು ಮಹಾಮಾರಿ ಕೊರೊನಾದಿಂದ ಮೃತಪಟ್ಟಂತಹ ವ್ಯಕ್ತಿಯ ಅಂತ್ಯಸಂಸ್ಕಾರದಲ್ಲಿ ಕುಟುಂಬಸ್ಥರು ಭಾಗಿಯಾಗುತ್ತಿಲ್ಲ. ಕೆಲವರು ಮೃತದೇಹವನ್ನೇ ಬಿಟ್ಟು ಹೋಗುತ್ತಿದ್ದಾರೆ. ಮತ್ತೆ ಕೆಲವರು ಮೊಬೈಲ್ ವಿಡಿಯೋದಲ್ಲೇ ಅಂತ್ಯಸಂಸ್ಕಾರವನ್ನು ವೀಕ್ಷಿಸಿ ದೂರದಿಂದಲೇ …

Read More »