Home / 2021 / ಏಪ್ರಿಲ್ / 01 (page 3)

Daily Archives: ಏಪ್ರಿಲ್ 1, 2021

ಇಂದಿನಿಂದ ‘ಯುವರತ್ನ’ನ ಯುವಘರ್ಜನೆ ಶುರು

ಬೆಂಗಳೂರು: ಪುನೀತ್ ರಾಜಕುಮಾರ್ ಅಭಿನಯದ ‘ಯುವರತ್ನ’ ಇಂದು (ಏ.1) ಬಿಡುಗಡೆಯಾಗುತ್ತಿದೆ. 2019ರಲ್ಲಿ ಬಂದ ‘ನಟಸಾರ್ವಭೌಮ’ ನಂತರ ಪುನೀತ್ ಅಭಿನಯದ ಯಾವುದೇ ಚಿತ್ರ ಬಿಡುಗಡೆಯಾಗಿರಲಿಲ್ಲ. ಎರಡು ವರ್ಷಗಳ ನಂತರ ಅವರ ಚಿತ್ರವೊಂದು ಬಿಡುಗಡೆಯಾಗುತ್ತಿರುವುದರಿಂದ ಅಭಿಮಾನಿಗಳ ವಲಯದಲ್ಲಿ ಕುತೂಹಲ ಮತ್ತು ನಿರೀಕ್ಷೆಗಳು ಎರಡೂ ಹೆಚ್ಚಿವೆ. ‘ಯುವರತ್ನ’ ಚಿತ್ರವು ಕರ್ನಾಟಕದಲ್ಲಿ 400ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಇನ್ನು ಆಂಧ್ರ ಮತ್ತು ತೆಲಂಗಾಣಗಳೆರೆಡೂ ಸೇರಿ 200 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದ್ದು, ಒಟ್ಟಾರೆ 600 ಚಿತ್ರಮಂದಿರಗಳಿಂದ ಪ್ರತಿದಿನ 2800ಕ್ಕೂ …

Read More »

ಎಪ್ರೀಲ್ 1: ಮೂರ್ಖರ ದಿನವಲ್ಲ, ಹೊಸತನದ ದಿನ

ಸಕಾಲಿಕ ಸಂತೋಷಕುಮಾರ್ ಮೆಹಂದಳೆ ಅಂದು 2004 ಏಪ್ರಿಲ್ 1. ಗೂಗಲ್ ಹೊಸ ಕೊಡುಗೆಯನ್ನು ಘೊಷಿಸಿತ್ತು. ಅದನ್ನು ‘ಜಗತ್ತಿನ ಅತಿ ದೊಡ್ಡ ಜೋಕ್’ ಎಂದೇ ಜಾಗತಿಕ ತಮಾಷೆಯಾಗಿ ದಾಖಲೆಯಾಗುವ ಮಟ್ಟಿಗೆ ಜನರು ಆಡಿಕೊಂಡಿದ್ದರು. ಗೂಗಲ್ ಗಿಗಾಬೈಟ್ ಸಾಮರ್ಥ್ಯದ ‘ಜೀ ಮೇಲ್’ ಎಂಬ ಅದ್ಭುತವನ್ನು ಘೊಷಿಸಿದ್ದು ಏಪ್ರಿಲ್ 1ರ ತಡರಾತ್ರಿ. ಮೊದಲ ಗಳಿಗೆಯಲ್ಲಿ ಅದನ್ನು ಟೀಕಿಸಿ, ಮಾಹಿತಿ ಹಂಚಿಕೊಂಡಿದ್ದು ಯಾಹೂ. ಜೊತೆಗೆ ಹಾಟ್​ವೆುೕಲ್ ಮತ್ತು ರಿಡಿಫ್​ನಲ್ಲಿ. ಕಾರಣ ಇವೆರಡೂ ಗ್ರಾಹಕರಿಗೆ ಕೊಡುತ್ತಿದ್ದುದು 2-4 …

Read More »

ರಾಜ್ಯ ಹೆದ್ದಾರಿ ಟೋಲ್ ದರ ಬದಲಾವಣೆ ಸದ್ಯಕ್ಕಿಲ್ಲ

ಬೆಂಗಳೂರು: ರಾಜ್ಯ ಹೆದ್ದಾರಿಗಳ ಟೋಲ್ ದರದಲ್ಲಿ ಸದ್ಯಕ್ಕೆ ಯಾವುದೇ ಬದಲಾವಣೆಯಿಲ್ಲ. ಹೊಸ ಆರ್ಥಿಕ ವರ್ಷ ಮೊದಲ ದಿನದಿಂದ ಹೆಚ್ಚಿನ ಹೊರಬೀಳಲಿದೆ ಎಂದುಕೊಂಡವರಿಗೆ ತಾತ್ಕಾಲಿಕ ನಿರಾಳತೆ ದೊರೆತಿದೆ. ಒಪ್ಪಂದ ಕಾಲಮಿತಿ ಅನ್ವಯ ಕೆಲವು ಹೆದ್ದಾರಿಗಳ ಟೋಲ್ ದರ ಪರಿಷ್ಕರಣೆಗೆ ಪ್ರಸ್ತಾವನೆಗಳು ಲೋಕೋಪಯೋಗಿ ಇಲಾಖೆಗೆ ಸಲ್ಲಿಕೆಯಾಗಿದ್ದು, ಇನ್ನೂ ಪರಿಶೀಲನೆ ಹಂತದಲ್ಲಿದೆ. ಪ್ರಸ್ತಾವನೆ ಸಲ್ಲಿಸಿದ ಸಂಸ್ಥೆಗಳಿಗೆ ಕೆಲವೊಂದು ಸ್ಪಷ್ಟೀಕರಣ ಪತ್ರ ಬರೆಯಲಾಗಿದೆ. ಇದಾದ ಬಳಿಕ ಮತ್ತೊಮ್ಮೆ ಪರಾಮಶಿಸಿ ಪರಿಷ್ಕೃತ ಕೋರಿಕೆಯನ್ನು ಸರ್ಕಾರದ ಮುಂದಿಡಲಾಗುತ್ತದೆ. ಟೋಲ್ …

Read More »

ಬ್ಯಾಂಕ್ ಗ್ರಾಹಕರೇ ಗಮನಿಸಿ.! ಸಾಲು ಸಾಲು ರಜೆ ಸೇರಿ ಈ ತಿಂಗಳು ಬರೋಬ್ಬರಿ 15 ದಿನ ಬ್ಯಾಂಕ್ ಗಳು ಬಂದ್

ನವದೆಹಲಿ: ಏಪ್ರಿಲ್ ತಿಂಗಳಲ್ಲಿ ಬರೋಬ್ಬರಿ 15 ದಿನ ಬ್ಯಾಂಕುಗಳಿಗೆ ರಜೆ ಇರುತ್ತದೆ. ಎರಡನೇ ಮತ್ತು ನಾಲ್ಕನೇ ಶನಿವಾರ ಹಾಗೂ ಭಾನುವಾರದ ರಜೆ ಸೇರಿದಂತೆ ದೇಶಾದ್ಯಂತ ಎಲ್ಲಾ ಖಾಸಗಿ ಮತ್ತು ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಏಪ್ರಿಲ್ ತಿಂಗಳಲ್ಲಿ 15 ದಿನ ರಜೆ ಇರುತ್ತದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರಜಾದಿನಗಳ ಕ್ಯಾಲೆಂಡರ್ ತಿಳಿಸಿದೆ. ಆದರೆ, ಈ ರಜೆಗಳು ಆಯಾ ಪ್ರದೇಶ ಮತ್ತು ರಾಜ್ಯಗಳಿಗೆ ಅನ್ವಯವಾಗುವಂತೆ ಬದಲಾವಣೆಗೆ ಒಳಪಟ್ಟಿರುತ್ತವೆ ಎಂದು ಹೇಳಲಾಗಿದೆ. …

Read More »

ಸಣ್ಣ ಉಳಿತಾಯಗಳ ಮೇಲಿನ ಬಡ್ಡಿದರ ಕಡಿತ: ಆದೇಶ ಹಿಂಪಡೆದ ಕೇಂದ್ರ ಸರ್ಕಾರ

ನವದೆಹಲಿ: ಸಣ್ಣ ಉಳಿತಾಯಗಳ ಮೇಲಿನ ಬಡ್ಡಿದರ ಕಡಿತವನ್ನು ಕೇಂದ್ರ ಸರ್ಕಾರ ಹಿಂತೆಗೆದುಕೊಂಡಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಸಣ್ಣ ಉಳಿತಾಯ ಯೋಜನೆಗಳ ಮೇಲೆ ಬಡ್ಡಿದರ ಕಡಿತ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ನಿನ್ನೆ ಪ್ರಕಟಿಸಿತ್ತು. ಬ್ಯಾಂಕ್ ಗಳಲ್ಲಿ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿದರ ಕಡಿತದಂತೆಯೇ 2021-22ನೇ ಆರ್ಥಿಕ ಸಾಲಿನ ಮೊದಲ ತ್ರೈಮಾಸಿಕದಲ್ಲಿ ಎನ್ ಎಸ್ ಸಿ ಮತ್ತು ಪಿಪಿಎಫ್ ಸೇರಿದಂತೆ ಸಣ್ಣ ಉಳಿತಾಯಗಳ ಮೇಲೆ ಬಡ್ಡಿದರವನ್ನು ಶೇಕಡಾ …

Read More »

ಸಿ.ಡಿ. ಪ್ರಕರಣ: ವಿಡಿಯೊ ಚಿತ್ರೀಕರಿಸಿದ್ದು ನಾನೇ ಎಂದ ಯುವತಿ

ಬೆಂಗಳೂರು: ಸಿ.ಡಿ.ಯಲ್ಲಿರುವ ವಿಡಿಯೊ ಮೂಲದ ಬಗ್ಗೆ ಸಂತ್ರಸ್ತ ಯುವತಿ ತನಿಖಾಧಿಕಾರಿಗೆ ವಿವರ ನೀಡಿದ್ದಾರೆ. ತಾನೇ ವಿಡಿಯೊ ಚಿತ್ರೀಕರಿಸಿರುವುದಾಗಿ ಹೇಳಿಕೆ ನೀಡಿದ್ದಾರೆ. ಬುಧವಾರ ತನಿಖಾಧಿಕಾರಿ ಎಂ.ಸಿ. ಕವಿತಾ ವಿಚಾರಣೆ ನೀಡಿದ್ದು, ‘ಸಿ.ಡಿ.ಯಲ್ಲಿರುವ ವಿಡಿಯೊ ಅಸಲಿ. ನನಗೆ ಕೆಲಸ ಕೊಡಿಸಲಾಗದು ಎಂದಿದ್ದ ರಮೇಶ ಜಾರಕಿಹೊಳಿ, ಅಶ್ಲೀಲ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆಯೊಡ್ಡಿದ್ದರು. ಅದರಿಂದ ತುಂಬಾ ನೋವಾಗಿತ್ತು. ಅದಕ್ಕೆ ನಾನೇ, ಇಬ್ಬರು ಸೇರುವ ದೃಶ್ಯಗಳನ್ನು ಚಿತ್ರೀಕರಣ ಮಾಡಿಕೊಂಡಿದ್ದೆ. ಮೂಲ ದೃಶ್ಯವನ್ನೂ ನಿಮಗೆ ನೀಡುತ್ತೇನೆ’ ಎಂದು …

Read More »

ಕುತೂಹಲ ಮೂಡಿಸಿದ ಮಾಜಿ ಸಚಿವ ‘ರಮೇಶ್ ಜಾರಕಿಹೊಳಿ’ ಸಹೋದರರ ಮಾತುಕತೆ..!

ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾದ ಸಿಡಿ ಬಗ್ಗೆ ಎಸ್ ಐ ಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಇದರ ನಡುವೆ ತಮ್ಮ ಮುಂದಿನ ನಡೆ ಬಗ್ಗೆ ರಮೇಶ್ ಜಾರಕಿಹೊಳಿ ಸಹೋದರರು ಪರಸ್ಪರ ಚರ್ಚೆಯಲ್ಲಿ ತೊಡಗಲಿದ್ದಾರೆ. ಹೌದು, ಪ್ರಕರಣದ ಸಂಬಂಧ ತಮ್ಮ ಮುಂದಿನ ನಡೆಯ ಬಗ್ಗೆ ರಮೇಶ್ ಜಾರಕಿಹೊಳಿ ಸಹೋದರರಾದ ಬಾಲಚಂದ್ರ ಜಾರಕಿಹೊಳಿ, ಲಖನೌ ಜಾರಕಿಹೊಳಿ ಮಾತುಕತೆ ನಡೆಸಲಿದ್ದು, ರಮೇಶ್ ಭೇಟಿಗೆ ಸಹೋದರ ಲಖನೌ ಜಾರಕಿಹೊಳಿ ಈಗಾಗಲೇ …

Read More »

ಸಿಡಿ ಪ್ರಕರಣದಲ್ಲಿ ಕಾಂಗ್ರೆಸ್‌ ನಾಯಕನ ಹೆಸರು ಬಹಿರಂಗ ಇನ್ನೊಬ್ಬ ಸೂತ್ರಧಾರನಾದ ಸಿಎಂ ಪುತ್ರನ ಹೆಸರು ಹೊರ ಬಂದಿಲ್ಲ: ಶಾಸಕ ಯತ್ನಾಳ

ವಿಜಯಪುರ: ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ಸಿಡಿ ಪ್ರಕರಣದ ಹಿಂದೆ ಬಿಜೆಪಿ, ಕಾಂಗ್ರೆಸ್‌ ನಾಯಕರೇ ಇದ್ದಾರೆ ಎಂಬುದು ಇದೀಗ ಸ್ಪಷ್ಟವಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಹೆಸರು ಮಾತ್ರ ಹೊರ ಬಂದಿದ್ದು, ಒಳ ಒಪ್ಪಂದದ ಕಾರಣ ಇನ್ನೊಬ್ಬ ಸೂತ್ರಧಾರನಾದ ಸಿಎಂ ಪುತ್ರನ ಹೆಸರು ಹೊರ ಬಂದಿಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ಮಂಗಳವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ ಹಾಗೂ ಸಿಎಂ …

Read More »

ಮುನಿಸು ಬಿಟ್ಟು ಒಗ್ಗಟ್ಟು ಪ್ರದರ್ಶಿಸಿದ ಸತೀಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ್..!

ಬೆಳಗಾವಿ/ರಾಯಚೂರು: ಲೋಕಸಭಾ ಚುನಾವಣೆಗೆ ಬೆಳಗಾವಿ ಕಾಂಗ್ರೆಸ್ಸಿನಲ್ಲಿ ಈಗ ಒಗ್ಗಟ್ಟಿನ ಪ್ರದರ್ಶನ ಆಗ್ತಿದೆ. ಕಳೆದ ಬಾರಿ ಪಿಎಲ್‍ಡಿ ಬ್ಯಾಂಕ್ ಚುನಾವಣೆಯಲ್ಲಿ ವೈಮನಸ್ಸು ಹೊಂದಿದ್ದ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಸತೀಶ್ ಜಾರಕಿಹೊಳಿ ಈಗ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಸತೀಶ್ ಜಾರಕಿಹೊಳಿ ನಿವಾಸಕ್ಕೆ ಭೇಟಿ ನೀಡಿದ್ದ ಲಕ್ಷ್ಮೀ ಹೆಬ್ಬಾಳ್ಕರ್ ಕೆಲ ಹೊತ್ತು ಸಮಾಲೋಚನೆ ಮಾಡಿದ್ದಾರೆ. ಬಳಿಕ ಸತೀಶ್ ಜಾರಕಿಹೊಳಿ ಪರ ಲಕ್ಷ್ಮಿ ಹೆಬ್ಬಾಳ್ಕರ್ ಬೆಳಗಾವಿ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ರು. ಪ್ರಚಾರ ಭಾಷಣದ ವೇಳೆಯೂ ಸತೀಶ್ ಜಾರಕಿಹೊಳಿಯರನ್ನೂ …

Read More »

ಯುವತಿಗೆ ಕೊರೊನಾ ನೆಗೆಟಿವ್ – ಧ್ವನಿ ಪರೀಕ್ಷೆ ವೇಳೆ ಯುವತಿ ಹೇಳಿದ್ದೇನು..?

ಬೆಂಗಳೂರು: ಸಿಡಿ ರಾಡಿ ಎಪಿಸೋಡ್ ಮುಂದುವರಿದಿದೆ. ಸಿಡಿ ಯುವತಿಗೆ ಇಂದು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಯಿತು. ಮುಕ್ತ ಅನ್ನೋ ಮೆಡಿಕಲ್ ಟೀಂ 3 ಗಂಟೆಗಳ ಕಾಲ ತಪಾಸಣೆ ನಡೆಸ್ತು. ಅತ್ಯಾಚಾರ, ಹಲ್ಲೆ, ದೇಹದ ಪರಿಶೀಲನೆ, ಮಾಸಿಕ ಖಿನ್ನತೆ ಸೇರಿದಂತೆ ಬೇರೆ ಖಾಯಿಲೆ ಬಗ್ಗೆ ಪರಿಶೀಲನೆ ಮಾಡಲಾಯಿತು. ಈ ಮುಕ್ತ ತಂಡದಲ್ಲಿ ಸ್ತ್ರೀ ರೋಗ ತಜೆ, ತುರ್ತ ಚಿಕಿತ್ಸಾ ವಿಭಾಗ ವೈದ್ಯರು, ಮಾನಸಿಕ ರೋಗ ತಜ್ಞರು ಮತ್ತು ಮೆಡಿಸನ್ …

Read More »