Breaking News
Home / ಜಿಲ್ಲೆ / 2020ಯ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿರೋ ‘ಪಾಪ್ ಕಾರ್ನ್ ಮಂಕಿ ಟೈಗರ್ ಇದೇ ಶುಕ್ರವಾರ ಬಿಡುಗಡೆ

2020ಯ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿರೋ ‘ಪಾಪ್ ಕಾರ್ನ್ ಮಂಕಿ ಟೈಗರ್ ಇದೇ ಶುಕ್ರವಾರ ಬಿಡುಗಡೆ

Spread the love

2020ಯ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿರೋ ‘ಪಾಪ್ ಕಾರ್ನ್ ಮಂಕಿ ಟೈಗರ್’ ಸಖತ್ ಕ್ರೇಜ್ ಹುಟ್ಟುಹಾಕಿದೆ. ಸುಕ್ಕಾ ಸೂರಿ ನಿರ್ದೇಶನದಲ್ಲಿ ಮೂಡಿಬಂದಿರೋ ಈ ಚಿತ್ರ ಫೆಬ್ರವರಿ 21ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಡಾಲಿ ಭಕ್ತ ವೃಂದವಂತೂ ಸಿನಿಮಾ ಬಿಡುಗಡೆಯನ್ನೇ ಎದುರು ನೋಡುತ್ತಿದ್ದಾರೆ. ಅಷ್ಟರ ಮಟ್ಟಿಗೆ ಡಾಲಿ ಅಭಿಮಾನಿಗಳ ಮನಸ್ಸನ್ನು ಕಾಡುತ್ತಿದೆ ಚಿತ್ರದ ಮಾಸ್ ಟೀಸರ್.

ಸುಕ್ಕಾ ಸೂರಿ ಸಿನಿಮಾ ಅಂದ್ರೆ ಔಟ್ ಆ್ಯಂಡ್ ಔಟ್ ಮಾಸ್ ರಾ ಫ್ಲೇವರ್ ಇರೋ ಸಿನಿಮಾ. ಈ ಸಿನಿಮಾ ಕೂಡ ಅದಕ್ಕೆ ಹೊರತಾಗಿಲ್ಲ. ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಟ್ರೇಂಡ್ ಸೃಷ್ಟಿಸಿರೋ ಈ ಚಿತ್ರ ಹೊಸದೊಂದು ಹವಾ ಸ್ಯಾಂಡಲ್ ವುಡ್ ನಲ್ಲಿ ಕ್ರಿಯೇಟ್ ಮಾಡೋದ್ರಲ್ಲಿ ದೂಸ್ರಾ ಮಾತೇ ಇಲ್ಲ ಅಂತಿದೆ ಗಾಂಧೀನಗರ. ಮಂಕಿ ಸೀನನ ಅವತಾರ ಟೀಸರ್ನಲ್ಲಿ ಕಮಾಲ್ ಮಾಡಿದ್ದು, ನಟ ಭಯಂಕರನಾಗಿ ಅಬ್ಬರಿಸಿದ್ದಾರೆ ಡಾಲಿ. ಮಾಸ್ ಸಿನಿಮಾ ಪ್ರಿಯರು ಈ ಚಿತ್ರದ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಕ್ರೈಂ ಥ್ರಿಲ್ಲರ್ ಜೊತೆಗೆ ಸೆಂಟಿಮೆಂಟ್ ಎಲಿಮೆಂಟ್ ಗಳು `ಪಾಪ್ ಕಾರ್ನ್ ಮಂಕಿ ಟೈಗರ್’ ಚಿತ್ರದಲ್ಲಿ ಸಿನಿರಸಿಕರಿಗೆ ಡಬಲ್ ಕಿಕ್ ಕೊಡಲಿದೆ.

ಟಗರು ಚಿತ್ರದ ಡಾಲಿ ಪಾತ್ರದ ಮೂಲಕ ಮನೆ ಮಾತಾಗಿರುವ ಸ್ಪೆಷಲ್ ಸ್ಟಾರ್ ಧನಂಜಯ್ ಇಲ್ಲಿ ಮಂಕಿ ಸೀನನಾಗಿ ಮಿಂಚಿದ್ದಾರೆ. ಒಂದೊಂದು ಲುಕ್ ಕೂಡ ಸಖತ್ ಕಿಕ್ ಕೊಡುತ್ತಿದೆ. ಸೂರಿ ಹಾಗೂ ಡಾಲಿ ರಾ ಕಾಂಬೀನೇಷನ್ ತೆರೆ ಮೇಲೆ ಯಾವ ರೀತಿ ಮಾಸ್ ಪ್ರಿಯರ ಮನತಣಿಸುತ್ತೆ ಅನ್ನೋದರತ್ತ ಈಗ ಎಲ್ಲರ ಚಿತ್ತ ನೆಟ್ಟಿದೆ. ಮಂಕಿ ಸೀನನ ಅಡ್ಡದಲ್ಲಿ ನಿವೇಧಿತಾ, ಅಮೃತ ಅಯ್ಯಂಗರ್, ಸಪ್ತಮಿ ಎಂಬ ಮೂರು ಹುಡುಗಿಯರು ನಾಯಕಿಯರಾಗಿ ಬಣ್ಣಹಚ್ಚಿದ್ದಾರೆ. ಸುಧಿ, ನವೀನ್ ಸೇರಿದಂತೆ ಹಲವು ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದಾರೆ.

ಟಗರು ಮೂಲಕ ಸೆನ್ಸೇಷನ್ ಕ್ರಿಯೇಟ್ ಮಾಡಿರೋ ಮ್ಯೂಸಿಕ್ ಡೈರೆಕ್ಟರ್ ಚರಣ್ ರಾಜ್ ಈ ಚಿತ್ರದಲ್ಲಿ ಮತ್ತೊಮ್ಮೆ ಕಮಾಲ್ ಮಾಡಲು ರೆಡಿಯಾಗಿದ್ದಾರೆ. ಮಾಸ್ ಸಿನಿಮಾಗಳಿಗೆ ಹೇಳಿ ಮಾಡಿಸಿದ ಚರಣ್ ರಾಜ್ ಮ್ಯೂಸಿಕ್ ಈ ಚಿತ್ರದಲ್ಲೂ ಒನ್ಸ್ ಅಗೈನ್ ಸೆನ್ಸೇಷನ್ ಕ್ರಿಯೇಟ್ ಮಾಡೋದ್ರಲ್ಲಿ ಡೌಟೇ ಇಲ್ಲ. ಶೇಖರ್ ಕ್ಯಾಮೆರಾ ಕೈಚಳಕದಲ್ಲಿ ‘ಪಾಪ್ ಕಾರ್ನ್ ಮಂಕಿ ಟೈಗರ್’ಚಿತ್ರ ಸೆರೆಯಾಗಿದ್ದು, ಸುಧೀರ್. ಕೆ.ಎಂ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸಾಕಷ್ಟು ಕ್ರೇಜ್ ಕ್ರಿಯೇಟ್ ಮಾಡಿರೋ ‘ಪಾಪ್ ಕಾರ್ನ್ ಮಂಕಿ ಟೈಗರ್’ ಇದೇ ಶುಕ್ರವಾರ ಬಿಡುಗಡೆಯಾಗಲಿದ್ದು, ಯಾವ ರೀತಿ ಟ್ರೆಂಡ್ ಕ್ರಿಯೇಟ್ ಮಾಡಲಿದೆ ಅನ್ನೋದನ್ನ ಕಾದುನೋಡ್ಬೇಕು.


Spread the love

About Laxminews 24x7

Check Also

ಕಾವೇರಿ’ದ ಬಂದ್: ಸ್ಯಾಂಡಲ್​ವುಡ್​ ನಟ-ನಟಿಯರಿಂದ ಪ್ರತಿಭಟನೆ.

Spread the love ಬೆಂಗಳೂರು: ರಾಜ್ಯದೆಲ್ಲೆಡೆ ವಿವಿಧ ಸಂಘಟನೆಗಳಿಂದ ಕಾವೇರಿ ನೀರಿಗಾಗಿ ನಡೆಯುತ್ತಿರುವ ಬಂದ್​ಗೆ ಚಿತ್ರರಂಗ ಕೂಡ ಬೆಂಬಲ ನೀಡಿದೆ. ಕಾವೇರಿಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ