Breaking News
Home / ಜಿಲ್ಲೆ / ತುಮಕೂರು:ಅಗತ್ಯ ವಿಲ್ಲದೆ ಆಚೆ ಬಂದರೆ ಲಾಠಿ ಚಾರ್ಜ್…..

ತುಮಕೂರು:ಅಗತ್ಯ ವಿಲ್ಲದೆ ಆಚೆ ಬಂದರೆ ಲಾಠಿ ಚಾರ್ಜ್…..

Spread the love

ತುಮಕೂರು : ಕೇಂದ್ರ ಸರ್ಕಾರವು ಲಾಕ್ ಡೌನ್ ಆದೇಶವನ್ನು ಮೇ 3ರ ರವರೆಗೆ ಮುಂದೂಡಲಾಗಿದೆ, ಹಾಗೆ ರಾಜ್ಯದ ಬಹುತೇಕ ನಗರಗಳಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗುತ್ತಿದೆ. ಆದ್ದರಿಂದ ಸಾರ್ವಜನಿಕರು ಮನೆಯಿಂದ ಹೊರಗೆ ಬರದಂತೆ ಅರಿವನ್ನು ಮೂಡಿಸಲು ತುಮಕೂರಿನಲ್ಲಿ
ವಿಶೇಷ ತರಬೇತಿ ಪಡೆದ ಡಿಎಆರ್ ಪೊಲೀಸರು

ಕರೋನವೈರಸ್ ತಡೆಗಟ್ಟಲು ಯೋಧರಂತೆ ಕೆಲಸ ಮಾಡುತ್ತಿರುವ ಪೊಲೀಸರು, ವೈದ್ಯರು, ಪೌರ ಕಾರ್ಮಿಕರು , ವಿಶೇಷ ತರಬೇತಿ ಪಡೆದ (ಡಿ.ಎ.ಆರ್) ಪೊಲೀಸರು ಓಡಾಡುವವರಿಗೆ ಲಾಠಿ ಏಟು ಖಂಡಿತ… ಆದ್ದರಿಂದ ಸಾರ್ವಜನಿಕರು ಅನಾವಶ್ಯಕವಾಗಿ ಓಡಾಡಬೇಡಿ ಕರೋನವೈರಸ್ ತಡೆಗಟ್ಟಲು ಸಹಕರಿಸಿ ಎಂದು ನಗರ ದಸದಾಶಿವನಗರ, ಮರಳೂರು ದಿಣ್ಣೆ, ಜೆಸಿಆರ್ ಕಾಲೋನಿ, ಗುಬ್ಬಿ ಗೇಟ್ ಸೇರಿದಂತೆ ನಗರದ ಪ್ರಮುಖ ಸ್ಥಳಗಳಲ್ಲಿ ಅರಿವು ಮೂಡಿಸುವ ಮೂಲಕ ಮಾರ್ಚ್ ಮಾಡಿದರು.

ಲಾಕ್ಡೌನ್ ನಿಂದ 2000 ಕ್ಕೂ ಹೆಚ್ಚು ವಾಹನಗಳನ್ನು ಸೀಸ್ ಮಾಡಲಾಗಿದೆ. ಅಗತ್ಯ ವಸ್ತುಗಳನ್ನು ಕೊಳ್ಳಲು ಮನೆಯಿಂದ ಒಬ್ಬರು ಮಾತ್ರ ಹೊರಗೆ ಬನ್ನಿ, ಬೈಕಿನಲ್ಲಿ ಒಬ್ಬರು ಮಾತ್ರ ಓಡಾಡಿ, ನಾಲ್ಕು ಚಕ್ರದ ವಾಹನದಲ್ಲಿ ಇಬ್ಬರಿಗೆ ಮಾತ್ರ ಅವಕಾಶ ನೀಡಲಾಗಿದೆ, ಅನಾವಶ್ಯಕವಾಗಿ ಓಡಾಡುವುದು ಕಂಡು ಬಂದರೆ ವಾಹನದ ಜೊತೆಗೆ ಮಾಲೀಕರಿಗೂ ಒಂದು ವರ್ಷಕ್ಕಿಂತ ಹೆಚ್ಚಿನ ಜೈಲುವಾಸ ಖಂಡಿತ.

ಕರೋನಾ ವೈರಸ್ ತಡೆಗಟ್ಟಲು
ಜಿಲ್ಲೆಯಲ್ಲಿ ಡ್ರೋನ್ ಕ್ಯಾಮೆರಾ ಓಡಾಡುತ್ತಿರುತ್ತದೆ ಇದನ್ನು ಪರಿಶೀಲನೆ ಮಾಡಿದರೆ ಇಡೀ ನಗರದ ಜನರ ಬಗ್ಗೆ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ, ಸಾರ್ವಜನಿಕರು ಸಂಯಮದಿಂದ ಸರ್ಕಾರ ನೀಡುವಂತಹ ಆದೇಶವನ್ನು ಪಾಲಿಸಿ, ಮೇ 2ರ ನಂತರ ತುಮಕೂರು ಜಿಲ್ಲೆ ರೆಡ್ ಜೋನ್ ಆಗಬಾರದು ಎಂದರೆ ದಯವಿಟ್ಟು ತುಮಕೂರಿನ ಸಾರ್ವಜನಿಕರೆಲ್ಲರೂ ಸಹಕರಿಸಿ ಎಂದು ಮನವಿ ಮಾಡಿದ್ದಾರೆ ಶಾಸಕ ಜ್ಯೋತಿ ಗಣೇಶ.

ಇದೇ ವೇಳೆ ಮಾತನಾಡಿದ ಮಹಾನಗರ ಪಾಲಿಕೆ ಸದಸ್ಯ ಫರಿದಾ ಬೇಗಮ್ ಪೋಲಿಸ್ ಡಿಪಾರ್ಟ್ಮೆಂಟ್, ಹೆಲ್ತ್ ಡಿಪಾರ್ಟ್ಮೆಂಟ್ ಸೇರಿದಂತೆ ಹಲವು ನಗರದ ಪ್ರಮುಖ ಜನಸಂದಣಿ ಇರುವಂತಹ ಪ್ರದೇಶಗಳಲ್ಲಿ ಮಾರ್ಚ್ ನಡೆಸಿ ಸಾರ್ವಜನಿಕರಲ್ಲಿ ಅರಿವನ್ನು ಮೂಡಿಸಿ ಯಾರು ಹೊರಗೆ ಬರದಂತೆ ಮನವಿ ಮಾಡಲಾಗಿದೆ


Spread the love

About Laxminews 24x7

Check Also

ಐಸ್ ಕ್ರೀಂ ತಿಂದು ಅವಳಿ ಮಕ್ಕಳು ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಹೆತ್ತ ಕಂದಮ್ಮಗಳನ್ನೇ ವಿಷಪ್ರಾಶನ ಮಾಡಿಸಿ ಕೊಂದ ತಾಯಿ

Spread the love ಮಂಡ್ಯ: ಐಸ್ ಕ್ರೀಂ ಸೇವಿಸಿದ್ದ ಅವಳಿ ಮಕ್ಕಳಿಬ್ಬರೂ ಮೃತಪಟ್ಟಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಹೆತ್ತ ತಾಯಿಯೇ ವಿಷವುಣಿಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ