Breaking News

ಟೈರ್ ಬ್ಲಾಸ್ಟ್ ಆಗಿ ಬಸ್ಸಿಗೆ ಟಿಪ್ಪರ್ ಡಿಕ್ಕಿ – ಮೂವರು ದುರ್ಮರಣ, 10 ಮಂದಿಗೆ ಗಾಯ

Spread the love

ವಿಜಯಪುರ: ಟೈರ್ ಬ್ಲಾಸ್ಟ್  ಆಗಿ ಟಿಪ್ಪರ್  ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, 10 ಮಂದಿ ಪ್ರಯಾಣಿಕರು ಗಂಭೀರ ಗಾಯಗೊಂಡಿರುವ ಘಟನೆ ವಿಜಯಪುರ  ಜಿಲ್ಲೆಯ ಚಡಚಣ ತಾಲೂಕಿನ ಲೋಣಿ ಕ್ರಾಸ್ ಬಳಿ ನಡೆದಿದೆ.

ಟಿಪ್ಪರ್ ಟೈರ್ ಬ್ಲಾಸ್ಟ್ ಆದ ಕಾರಣ ಅಪಘಾತ ಉಂಟಾಗಿದೆ. ಭೀಕರ ಅಪಘಾತದಲ್ಲಿ ಟಿಪ್ಪರ್‌ನಲ್ಲಿದ್ದ ಚಾಲಕ ಹಾಗೂ ಆತನ ಪತ್ನಿ, ಸರ್ಕಾರಿ ಬಸ್ ಚಾಲಕ ಮೃತಪಟ್ಟಿದ್ದಾರೆ. ಟಿಪ್ಪರ್ ಚಾಲಕ ಅಶೋಕ ಉಟಗಿ ಹಾಗೂ ಪತ್ನಿ ರಾಧಾಬಾಯಿ, ಬಸ್ ಚಾಲಕ ಹನುಮಂತ ಛವಲಾದಿ ಮೃತರು.

ಟಿಪ್ಪರ್ ಚಡಚಣದತ್ತ ಹೊರಟಿತ್ತು. ಸರ್ಕಾರಿ ಬಸ್ ಚಡಚಣದಿಂದ ವಿಜಯಪುರದತ್ತ ಹೊರಟಿದ್ದ ವೇಳೆ ದುರಂತ ನಡೆದಿದೆ. ಪಿಎಸ್‌ಐ ಸೊಮೇಶ ಗೆಜ್ಜಿ ಹಾಗೂ ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಧ ಚಡಚಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

ಶಿಕ್ಷಿಸುವುದಕ್ಕಿಂತ ಸರಿಯಾದ ದಾರಿಗೆ ತರೋದೇ ನಮ್ಮ ಧರ್ಮ: ನಿಂದಿಸಿದ ಮಕ್ಕಳನ್ನು ಕ್ಷಮಿಸಿದ ಮೋದಿ

Spread the loveನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಘಟನೆ ಮತ್ತು ತಮ್ಮ ಹಾಗೂ ತಮ್ಮ ದಿವಂಗತ ತಾಯಿಯವರ ವಿರುದ್ಧ ವ್ಯಕ್ತವಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ