Breaking News

ಅದ್ಧೂರಿಯಾಗಿ ನಡೆದ ಕೋಣ ಬಿಡುವ ಕಾರ್ಯಕ್ರಮ

Spread the love

ಸಂಕೇಶ್ವರ: ಬರುವ ವರ್ಷ ನಡೆಯುವ ಮಹಾಲಕ್ಷ್ಮಿ ದೇವಿ ಜಾತ್ರೆಯ ಅಂಗವಾಗಿ ಸಾಂಪ್ರದಾಯಿಕ ‘ಕೋಣ ಬಿಡುವ’ ಕಾರ್ಯಕ್ರಮ ವಿವಿಧ ಧಾರ್ಮಿಕ ಕಾರ್ಯಗಳಿಂದ ಮಂಗಳವಾರ ನಡೆಯಿತು.
೧೧ ವರ್ಷಗಳಿಗೊಮ್ಮೆ ಅದ್ದೂರಿಯಾಗಿ ನಡೆಯುವ ಸಂಕೇಶ್ವರ ಮಹಾಲಕ್ಷ್ಮಿ ಜಾತ್ರಾ ಮಹೋತ್ಸವ ಪೂರ್ವದಲ್ಲಿ ಜಾತ್ರೆಗೆ ಕೋಣ ಬಿಡುವ ಪ್ರತೀತಿಯಿದ್ದು, ಅದರಂತೆ ಹಕ್ಕುದಾರರಾದ ಸಂತೋಷ ಹವಾಲ್ದಾರ್ ನಿವಾಸದಲ್ಲಿ ಕೋಣಕ್ಕೆ ವಿಶೇಷ ಪೂಜೆ ಸಲ್ಲಿಸಿ, ಎಣ್ಣೆ ಹಚ್ಚುವ ಸಂಪ್ರದಾಯವನ್ನು ವಿಧಿವತ್ತಾಗಿ ನೆರವೇರಿತು.
ನಂತರ ಬುಸಾರ ಲಕ್ಷಿö್ಮ ಮಂದಿರ, ಹಕ್ಕುದಾರರು ಹಾಗೂ ಖಾತೆದಾರ ಗೌಡರ ಮನೆ, ಶ್ರೀ ಶಂಕರಲಿಆಗ ದೇವಸ್ಥಾನ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಕೋಣವನ್ನು ಮೆರವಣಿಗೆಯೊಂದಿಗೆ ಕರೆತರಲಾಯಿತು.
ಜಾತ್ರೆಯ ಸೂತ್ರಧಾರ ದಿಲೀಪ ಅಸೂಯೆ ಅವರು ಚೌಕಾ ಹೊಯ್ದು ಗಾಯರಾಣಿ ಹಾಕುವ ಸಾಂಪ್ರದಾಯಿಕ ವಿಧಿವಿಧಾನಗಳನ್ನು ನೆರವೇರಿಸಿದರು ಕೋಣಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಪಟ್ಟಾಭಿಷೇಕ ಸೇರಿದಂತೆ ಎಲ್ಲಾ ಧಾರ್ಮಿಕ ವಿಧಿಗಳನ್ನು ಪೂರ್ಣಗೊಳಿಸಿ, ಸಂಪ್ರದಾಯದ ಅಂತ್ಯವನ್ನು ಬಿಡಲಾಯಿತು.
ಜಾತ್ರಾ ಸಮಿತಿ ಅಧ್ಯಕ್ಷ ಅಪ್ಪಾಸಾಹೇಬ ಶಿರಕೊಳಿ, ಕಾರ್ಯಾಧ್ಯಕ್ಷ ಸುನೀಲ ಪರ್ವತರಾವ, ಉಪಾಧ್ಯಕ್ಷ ಅಮರ ನಲವಡೆ, ಕಾರ್ಯದರ್ಶಿ ಬಸನಗೌಡ ಪಾಟೀಲ, ಸಹಕಾರ್ಯದರ್ಶಿ ರಾವಸಾಹೇಬ ದೇಸಾಯಿ, ಹಕ್ಕುದಾರರಾದ ಕುನಾಲ ಪಾಟೀಲ, ನಿಕೇತ್ ಕುಲಕರ್ಣಿ, ಬಸವಣ್ಣಪ್ಪ ಕರ್ದೇಗೌಡ, ಗಿರೀಶ ಕುಲಕರ್ಣಿ, ಅಪ್ಪಾಸಾಹೇಬ ಶೆಟ್ಟಿಮನಿ, ಮುಖಂಡರಾದ ಶಿವಾನಂದ ಮುಡಶಿ, ಗಜಾನನ ಕ್ವಳ್ಳಿ, ಸಂಜಯ ಶಿರಕೋಳಿ, ಶ್ರೀಕಾಂತ ಹತನೂರಿ, ಅಮರ ನಲವಡೆ, ಶಂಕರರಾವ ಹೆಗಡೆ, ಅಜಿತ ಕರಜಗಿ, ರೋಹನ ನೇಸರಿ, ಆನಂದ ಸಂಸುದ್ದಿ, ಚಿದಾನಂದ ಕರದನ್ನವರ, ಕುಮಾರ ಬಸ್ತವಾಡಿ ಇತರರು ಇದ್ದರು.

Spread the love

About Laxminews 24x7

Check Also

ಎಲ್ ನಿನೋ ಎಫೆಕ್ಟ್ – ರಾಜ್ಯದ 25 ಜಿಲ್ಲೆಗಳಲ್ಲಿ ಮಳೆ ಕೊರತೆ

Spread the loveಬೆಂಗಳೂರು: ಎಲ್‌ನಿನೋ ಎಫೆಕ್ಟ್‌ನಿಂದ ರಾಜ್ಯದಲ್ಲಿ ಮಳೆ ಕೊರತೆಯಾಗಿದೆ. ದಕ್ಷಿಣ ಕನ್ನಡ, ಮೈಸೂರು, ಕೊಡಗು, ಉತ್ತರ ಕನ್ನಡ, ಉಡುಪಿ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ