ನವದೆಹಲಿ: ಮಗುವಿಗೆ ಔಷಧಿ ನೀಡುವ ವಿಚಾರದಲ್ಲಿ ಗಂಡ-ಹೆಂಡತಿ ನಡುವೆ ಜಗಳವಾಗಿದ್ದು, ಪತ್ನಿ ಕುಟುಂಬಸ್ಥರಿಂದ ಮಾರಣಾಂತಿಕ ಹಲ್ಲೆಗೊಳಗಾಗಿ ಟೆಕ್ಕಿ ಸಾವನ್ನಪಿರುವ ಘಟನೆ ದೆಹಲಿಯಲ್ಲಿ ನಡೆದಿದೆ
31 ವರ್ಷದ ಸಾಫ್ಟ್ವೇರ್ ಎಂಜಿನಿಯರ್ ವಿನಯ್ ಗುಪ್ತಾ ಕೊಲೆಯಾದ ಟೆಕ್ಕಿ. ಅವರ ಅತ್ತೆ-ಮಾವ ಹೊಡೆದು ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ.
ವಿನಯ್ ಗುಪ್ತಾ ಮತ್ತು ಅವರ ಪತ್ನಿ ರೇಖಾ ನಡುವೆ ತಮ್ಮ ಮಗುವಿಗೆ ಔಷಧಿ ನೀಡುವ ಬಗ್ಗೆ ವಾಗ್ವಾದ ನಡೆದಿದೆ. ಈ ಸಮಯದಲ್ಲಿ, ರೇಖಾ ತನ್ನ ಕುಟುಂಬ ಸದಸ್ಯರನ್ನು ಸಂಪರ್ಕಿಸಿ ಮನೆ ಬಿಟ್ಟು ಹೋದರು. ನಂತರ ಅವರು ತಮ್ಮ ಇಬ್ಬರು ಸಹೋದರರು, ಅತ್ತಿಗೆ, ತಂದೆ, ಚಿಕ್ಕಪ್ಪ ಮತ್ತು ಇತರ ಕುಟುಂಬ ಸದಸ್ಯರೊಂದಿಗೆ ವಾಪಸ್ ಆದರು. ಕುಟುಂಬಸ್ಥರನ್ನು ಕರೆತಂದು ಪತಿ ಮೇಲೆ ಹಲ್ಲೆ ನಡೆಸಿದ್ದಾರೆ.
ಮನೆಗೆ ಬಂದ ಅತಿಥಿಗಳಿಗೆ ವಿನಯ್ ತಾಯಿ ಪಾನೀಯ ತರಲು ಅಡುಗೆ ಕೋಣೆಗೆ ಹೋದರು. ಈ ವೇಳೆ ಪತ್ನಿ ಕುಟುಂಬಸ್ಥರು ಸೇರಿಕೊಂಡು ಟೆಕ್ಕಿ ಮೇಲೆ ಹಲ್ಲೆ ನಡೆಸಿದ್ದಾರೆ. ಟೆಕ್ಕಿ ತಾಯಿ ಬೇಡಿಕೊಂಡರೂ ಬಿಡದೇ ಹೊಡೆದಿದ್ದಾರೆ.
ಗಂಭೀರ ಗಾಯಗೊಂಡಿದ್ದ ವಿನಯ್ನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರು. ಆದರೆ, ಆತ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಪ್ರಕರಣ ಸಂಬಂಧ ವಿನಯ್ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ.
ವಿನಯ್ ನೋಯ್ಡಾ ಮೂಲದ ಸಾಫ್ಟ್ವೇರ್ ಕಂಪನಿಯಾದ ಅಡೋಬ್ನಲ್ಲಿ ಕೆಲಸ ಮಾಡುತ್ತಿದ್ದರು. ವಾರ್ಷಿಕ ಸುಮಾರು 60 ಲಕ್ಷ ರೂ. ಪ್ಯಾಕೇಜ್ ಹೊಂದಿದ್ದರು. ಅವರು ಸುಮಾರು ಮೂರುವರೆ ವರ್ಷಗಳ ಹಿಂದೆ ರೇಖಾ ಅವರನ್ನು ವಿವಾಹವಾದರು. ದಂಪತಿಗೆ ಒಂದು ಗಂಡು ಮತ್ತು ಒಂದು ಹೆಣ್ಣುಮಕ್ಕಳಿದ್ದರು.
Laxmi News 24×7