ಬೆಂಗಳೂರು: 200 ರೂಪಾಯಿ ಕೊಡಲಿಲ್ಲ ಅಂತ ಮಂಗಳಮುಖಿಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.
ದೇವಿ ಕೊಲೆಯಾದ ಮಂಗಳಮುಖಿ. ಕೊಲೆ ಆರೋಪಿ ಗೌತಮ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಮುಂಜಾನೆ 3 ಗಂಟೆ ಸುಮಾರಿಗೆ ಕೊಲೆಯಾಗಿದೆ.
ಚಾಕುವಿನಿಂದ ಮಂಗಳಮುಖಿ ಕುತ್ತಿಗೆ ಸೀಳಿ ಕೊಲೆ ಮಾಡಲಾಗಿದೆ. ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
ರಾಮಮೂರ್ತಿ ನಗರ ನಿವಾಸಿಯಾಗಿರುವ ಗೌತಮ್ ರಾಬರಿ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದ. ದರೋಡೆ ಮಾಡುವುದಕ್ಕಾಗಿ ಬಂದಿದ್ದ. ಮಂಗಳಮುಖಿ 200 ರೂ. ಹಣ ಕೊಡದಿದ್ದಕ್ಕೆ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
Laxmi News 24×7