Breaking News
Home / new delhi / ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯ ಮಾಡಿಲ್ಲ; ವಸ್ತ್ರಸಂಹಿತೆ ನಿಗದಿ ಬಗ್ಗೆ ಚಿಂಥನ- ಮಂಥನಕ್ಕೆ ಮುಂದಾದ ಪದವಿ ಪೂರ್ವ ಶಿಕ್ಷಣ ಇಲಾಖೆ

ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯ ಮಾಡಿಲ್ಲ; ವಸ್ತ್ರಸಂಹಿತೆ ನಿಗದಿ ಬಗ್ಗೆ ಚಿಂಥನ- ಮಂಥನಕ್ಕೆ ಮುಂದಾದ ಪದವಿ ಪೂರ್ವ ಶಿಕ್ಷಣ ಇಲಾಖೆ

Spread the love

ಬೆಂಗಳೂರು: ಕಳೆದ ಕೆಲ ದಿನಗಳಿಂದ ಕರ್ನಾಟಕದಲ್ಲಿ ಕೆಲ ಕಾಲೇಜುಗಳಲ್ಲಿ ಹಿಜಾಬ್ ವಿವಾದ ಭಾರಿ ಸದ್ದು ಮಾಡ್ತಿದೆ. ರಾಷ್ಟ್ರಮಟ್ಟದಲ್ಲಿ ಭಾರಿ ಚರ್ಚೆ ಗ್ರಾಸವಾಗಿದೆ. ತರಗತಿಗಳಲ್ಲಿ ಹಿಜಾಬ್ ಹಾಕ್ಕೊಂಡು ಮುಸ್ಲಿಂ ವಿದ್ಯಾರ್ಥಿನಿಯರು ಕುಳಿತುಕೊಳ್ಳೋದಕ್ಕೆ ಆಕ್ಷೇಪ ವ್ಯಕ್ತವಾಗಿದೆ. ಕಾಲೇಜು ಆಡಳಿತ ಮಂಡಳಿ ಹಿಜಾಬ್ ಹಾಕಲು ವಿರೋಧಿಸ್ತಿದ್ದು, ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ಹಿಜಾಬ್ ಧರಿಸಲು ಅವಕಾಶ ನೀಡುವಂತೆ ಪಟ್ಟು ಹಿಡಿದಿದ್ದಾರೆ.

ಸದ್ಯ ವಸ್ತ್ರ ಸಂಹಿತೆ ವಿಚಾರದಲ್ಲಿ ಉನ್ನತ ಮಟ್ಟದ ಸಮಿತಿ ರಚನೆ ಮಾಡಲು ಪದವಿ ಪೂರ್ವ ಶಿಕ್ಷಣ ಇಲಾಖೆ ಮುಂದಾಗಿದೆ. ಶಿಕ್ಷಣ ಇಲಾಖೆ ಪದವಿಪೂರ್ವ ಕಾಲೇಜುಗಳಲ್ಲಿ ಸಮ ವಸ್ತ್ರ ನಿಗದಿಗೊಳಸಿ ಕಡ್ಡಾಯ ಮಾಡಿಲ್ಲ. ಸರ್ಕಾರಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳು ಸಂಸ್ಥೆಯ ಹಂತದಲ್ಲಿ ಶೈಕ್ಷಣಿಕ ಏಕತೆ, ಸದ್ದುದೇಶದಿಂದ ವಸ್ತ್ರ ಸಂಹಿತೆ ನಿಗದಿಮಾಡಿಕೊಂಡಿವೆ. ಅನೇಕ ವರ್ಷಗಳಿಂದ ಕೆಲವು ಕಾಲೇಜುಗಳು ಅನುಷ್ಠಾನ ಮಾಡಿಕೊಂಡು ಬಂದಿವೆ. ಆದ್ರೆ ಉಡಪಿಯ ವಿದ್ಯಾರ್ಥಿನಿಯರು ತಮ್ಮ ಆಯ್ಕೆಯ ವಸ್ತ್ರ ತೊಡಲು ಅವಕಾಶಕ್ಕೆ ಒತ್ತಾಯ ಮಾಡ್ತೀದ್ದಾರೆ. ವಿದ್ಯಾರ್ಥಿಗಳ ಒತ್ತಡ ಕಾಲೇಜಿನಲ್ಲಿ ಅನಗತ್ಯ ಗೊಂದಲಕ್ಕೆ ಕಾರಣವಾಗಿದೆ.

ವಿದ್ಯಾರ್ಥಿಗಳ ಆಯ್ಕೆಯ ರೀತಿಯಲ್ಲಿ ವಸ್ತ್ರ ಧರಿಸಲು ಅವಕಾಶ ನೀಡಿದ್ರೆ. ಕಾಲೇಜು ಹಂತದಲ್ಲಿ ಅನಗತ್ಯ ಗೊಂದಲ ಸೃಷ್ಟಿಯಾಗುತ್ತೆ. ಕಾಲೇಜುಗಳಲ್ಲಿ ಅಶಿಸ್ತು ಹೆಚ್ಚಾಗುವ ಸಾಧ್ಯತೆ ಇದೆ. ಕೆಲವೊಮ್ಮೆ ವಿದ್ಯಾರ್ಥಿಗಳು ಸಭ್ಯತೆ ಮೀರಿದ ಉಡುಗೆ ತೊಡಲು ಪ್ರಚೋದಿಸುವ ಸಾಧ್ಯತೆ ಇದೆ. ಹೀಗಾಗಿ ಶಿಕ್ಷಣ ಇಲಾಖೆ ವಸ್ತ್ರ ಸಂಹಿತೆ ನಿಗದಿ ಬಗ್ಗೆ ಚಿಂಥನ- ಮಂಥನಕ್ಕೆ ಮುಂದಾಗಿದೆ. ಉನ್ನತ ಮಟ್ಟದ ಸಮಿತಿ ರಚನೆ ಮಾಡಲು ಮುಂದಾಗಿದೆ. ಸಮಿತಿಯು ವಸ್ತ್ರಸಂಹಿತೆಯ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಲಿದೆ. ಈ ವರದಿ ಸಲ್ಲಿಸುವ ಶಿಫಾರಸ್ಸುಗಳನ್ನ ಅವಲೋಕಿಸಿ ಪರಿಶೀಲಿಸಿ ನಂತರ ಅಗತ್ಯ ಕ್ರಮ ಕೈಗೊಳ್ಳಲಾಗುತ್ತೆ. ಅಲ್ಲಿಯವೆರೆಗೂ ಪದವಿಪೂರ್ವ ಶಿಕ್ಷಣ ಸಂಸ್ಥೆಗಳು ಯಥಾಸ್ಥಿಯ ವಸ್ತ್ರಸಂಹಿತೆ ಪಾಲಿಸುವಂತೆ ಸೂಚನೆ ನೀಡಿದೆ.

ಬಾಳಗಡಿಯ ಪದವಿ ಕಾಲೇಜಿನಲ್ಲಿ ಹಿಜಾಬ್ ವಿವಾದ
ಚಿಕ್ಕಮಗಳೂರಿನ ಬಾಳಗಡಿಯ ಪದವಿ ಕಾಲೇಜಿನಲ್ಲಿ ಒಂದು ತಿಂಗಳ ಹಿಂದೆ ಹಿಜಾಬ್ ವಿವಾದ ಭುಗಿಲೆದ್ದಿತ್ತು. ಕೆಲ ಮುಸ್ಲಿಂ ವಿದ್ಯಾರ್ಥಿನಿಯರು ಕಾಲೇಜಿಗೆ ಹಿಜಾಬ್ ಧರಿಸಿಕೊಂಡು ಬಂದ್ರೂ, ಕ್ಲಾಸ್ ರೂಂನಲ್ಲೂ ಹಿಜಾಬ್ ತೆಗೆಯದೆ ಕುಳಿತುಕೊಳ್ತಿದ್ರು. ಇದಕ್ಕೆ ವಿರೋಧಿಸಿದ್ದ ಕೆಲ ವಿದ್ಯಾರ್ಥಿಗಳು ಕಾಲೇಜಿಗೆ ಕೇಸರಿ ಶಾಲು ಧರಿಸಿಕೊಂಡು ಬರೋಕೆ ಶುರುಮಾಡಿದ್ರು. ಹೀಗಾಗಿ ಕಾಲೇಜಿನಲ್ಲಿ ಒಂದೆಡೆ ಹಿಜಾಬ್ ಧರಿಸಿರೋ ವಿದ್ಯಾರ್ಥಿಗಳು ಕಂಡುಬಂದ್ರೆ, ಇನ್ನೊಂದೆಡೆ ಕೇಸರಿ ಶಾಲು ಧರಿಸಿರೋ ವಿದ್ಯಾರ್ಥಿಗಳ ದೊಡ್ಡ ತಂಡವೇ ಸೃಷ್ಟಿಯಾಯ್ತು. ಕಾಲೇಜಿನಲ್ಲಿ ಎಲ್ಲರೂ ಒಂದೇ. ಒಂದೇ ನ್ಯಾಯ ಅಂತಾ ವಿದ್ಯಾರ್ಥಿಗಳು ಹೋರಾಟಕ್ಕೆ ನಿಂತಿದ್ರು.

ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಹಿಜಾಬ್ ವಿವಾದ
ಉಡುಪಿಯ ಪದವಿಪೂರ್ವ ಮಹಿಳಾ ಕಾಲೇಜಿನಲ್ಲಿ ಈಗ ಸದ್ಯಕ್ಕೆ ಹಿಜಾಬ್ ಕಾಂಟ್ರೋವರ್ಸಿ ಸದ್ದು ಮಾಡ್ತಿದೆ. ಈ ಹಿಂದೆ, ಹಿಜಾಬ್ ಧರಿಸಿ ಬಂದವರು, ತರಗತಿ ಪ್ರವೇಶಿಸುವಾಗ ಹಿಜಾಬ್ ತೆಗೆದಿರಿಸಿ ಪಾಠ ಕೇಳ್ತಿದ್ರು. ಆದ್ರೆ, ಇತ್ತೀಚೆಗೆ ಕೆಲ ವಿದ್ಯಾರ್ಥಿನಿಯರು ತರಗತಿಯೊಳಗೆ ಹಿಜಾಬ್ ಧರಿಸುವುದಕ್ಕೆ ಅವಕಾಶ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ. ತರಗತಿಯಿಂದ ಹೊರಗೆ ಕುಳಿತು ಪ್ರತಿಭಟನೆ ನಡೆಸಿದ್ದಾರೆ. ಪೋಸ್ಟರ್‌ಗಳನ್ನ ಹಿಡಿದು ಹಿಜಾಬ್ ನನ್ನ ಹಕ್ಕು ಅನುಮತಿ ನೀಡಬೇಕೆಂದು ಒತ್ತಾಯಿಸ್ತಿದ್ದಾರೆ. ಇತ್ತ ಹಿಜಾಬ್ ಧರಿಸಲು ಅವಕಾಶ ಕೊಟ್ರೆ, ಹಿಂದೂ ವಿದ್ಯಾರ್ಥಿನಿಯರು ಕೇಸರಿ ಶಾಲು ಧರಿಸಲು ಅವಕಾಶ ಕೇಳಿದ್ದಾರೆ. ಹೀಗಾಗಿ, ಸದ್ಯ ವಿದ್ಯಾರ್ಥಿನಿಯರಿಗೆ ಆನ್‌ಲೈನ್‌ ಕ್ಲಾಸ್‌ ನೀಡಲು ನಿರ್ಧರಿಸಿದ್ದಾರೆ.


Spread the love

About Laxminews 24x7

Check Also

ಅರ್ಥಿಂಗ್ ಸಮಸ್ಯೆ – ಶೌಚಾಲಯಕ್ಕೆ ಬೀಗ, ಬಹಿರ್ದೆಸೆಗೆ ಮಹಿಳೆಯರ ಅಲೆದಾಟ

Spread the loveಸಿಂಧನೂರು: ನಗರದ ವಾರ್ಡ್ ನಂ.19ರ ವ್ಯಾಪ್ತಿಗೊಳಪಡುವ ಶರಣಬಸವೇಶ್ವರ ಕಾಲೊನಿಯಲ್ಲಿ ಸಾರ್ವಜನಿಕ ಮಹಿಳಾ ಶೌಚಾಲಯಕ್ಕೆ ಬೀಗ ಹಾಕಿರುವ ಘಟನೆ ನಡೆದಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ