Breaking News
Home / ಜಿಲ್ಲೆ / ಬೆಳಗಾವಿ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಶಶಿಧರ ಕುರೇರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ

ಬೆಳಗಾವಿ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಶಶಿಧರ ಕುರೇರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ

Spread the love

ಭಾರತ ಸರ್ಕಾರದ ಸ್ಮಾರ್ಟ್ ಸಿಟಿ ಮಿಷನ್ ನಗರಗಳು ಪ್ರಮುಖ ಮೂಲ ಸೌಕರ್ಯಗಳನ್ನು ಒದಗಿಸುವ ಹಾಗೂ ನಾಗರಿಕರಿಗೆ ಯೋಗ್ಯವಾದ ಜೀವನ ಮಟ್ಟವನ್ನು ನೀಡುವ ಸ್ವಚ್ಚ ಮತ್ತು ಸುಸ್ಥಿರ ಪರಿಸರ ಹಾಗೂ ಉತ್ತಮ ಪರಿಹಾರಗಳಿಗೆ ಅನ್ವಯಿಸುವ ನಗರಗಳನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿದೆ.

ಬೆಳಗಾವಿ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಶಶಿಧರ ಕುರೇರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು.

ಪ್ರಸ್ತುತ ಇನ್‌ಪುಟ್ ಆಧಾರಿತ ವಿಧಾನದಿಂದ ನಗರ ಆಡಳಿತಗಳು, ಫಲಿತಾಂಶ – ಆಧಾರಿತ ಯೋಜನೆಯತ್ತ ಸಾಗಲು ಸಮೀಕ್ಷೆಯು ಸಹಾಯ ಮಾಡುತ್ತದೆ. ಇದರೊಂದಿಗೆ, ಈ ಮೂರು ಫಲಿತಾಂಶಗಳ ಮೌಲ್ಯಮಾಪನದಲ್ಲಿ ಸ್ಮಾರ್ಟ್ ನಗರಗಳು ಮತ್ತು ಇತರ ಅಧಿಕ ಜನಸಂಖ್ಯೆಯ ನಗರಗಳಿಗೆ ಅನುಕೂಲವಾಗುವಂತೆ ಸಚಿವಾಲಯವು ಪ್ರಯತ್ನಿಸುತ್ತಿದೆ. ಇದು ಅಂತಿಮವಾಗಿ ನಗರಗಳ ಯೋಜನೆ ಮತ್ತು ನಿರ್ವಹಣೆಗೆ ಕಾರಣವಾಗುತ್ತದೆ.
೨೦೧೭ ರ ಸಮೀಕ್ಷೆಯಲ್ಲಿ ೧೦೦ ಸ್ಮಾರ್ಟ್ ನಗರಗಳಲ್ಲಿ ಬೆಳಗಾವಿ ನಗರ ೫೨ನೇ ಸ್ಥಾನದಲ್ಲಿತ್ತು. ಈ ವರ್ಷ ೧೧೪ ನಗರಗಳು ಸಮೀಕ್ಷೆಯಲ್ಲಿ ಭಾಗವಹಿಸುತ್ತಿದ್ದು, ಅದರಲ್ಲಿ ೧೦೦ ಸ್ಮಾರ್ಟ್ ನಗರಗಳು ಮತ್ತು ೧೪ ಅಧಿಕ ಸಂಖ್ಯೆಯ ನಗರಗಳು ಭಾಗವಹಿಸುತ್ತಿವೆ

ಇ.ಒ.ಎಲ್ ಕುರಿತಂತೆ ಮಾಹಿತಿಯನ್ನು http://amplifi.mohua.gov.in/ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತಿದೆ. ಸದರಿ ಮಾಹಿತಿಯನ್ನು ನಗರದ ಸಾರ್ವಜನಿಕರು ಸಹ https://eol2019.org/CitizenFeedback ಲಿಂಕ್ ಮುಖಾಂತರ ತಮ್ಮ ಅಭಿಪ್ರಾಯವನ್ನು ತಿಳಿಸಬಹುದಾಗಿರುತ್ತದೆ ಹಾಗೂ ಟ್ವಿಟ್ಟರ್ ಮತ್ತು ಫೇಸ್‌ಬುಕ್ ಮೂಲಕವು ಸಹ ನಾಗರೀಕ ಗ್ರಹಿಕ ಸಮೀಕ್ಷೆಯನ್ನು ಕೈಗೊಳ್ಳಲಾಗುತ್ತಿದೆ. ಈ ಕೆಳಕಂಡ ಜಿಲ್ಲಾ ಮಟ್ಟದ ಕಛೇರಿ/ಇಲಾಖೆಗಳಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ.
ಇ.ಒ.ಎಲ್ ಸಂಬಂಧಿಸಿದ ಸಮೀಕ್ಷೆಯನ್ನು ಆನ್ಲೈನ್, ಫೇಸ್‌ಬುಕ್ ಮತ್ತು ಟ್ವಿಟ್ಟರ್‌ನಲ್ಲಿ ಈ ಕೆಳಗಿನ ಲಿಂಕ್‌ಗಳ ಮೂಲಕ ಕೈಗೊಳ್ಳಲಾಗುತ್ತಿದೆ.
ಆನ್‌ಲೈನ್ – https://eol2019.org/CitizenFeedback
ಫೇಸ್‌ಬುಕ್ – http://@easeofliving2019
ಟ್ವಿಟ್ಟರ್ –

http://@easeofliving19

http://@MoHUA


Spread the love

About Laxminews 24x7

Check Also

ಸರ್ಕಾರಿ ವಾಹನದಲ್ಲಿ ಬಿಜೆಪಿ ಹಣ ಸಾಗಣೆ: ದಿನೇಶ್‌ ಗುಂಡೂರಾವ್

Spread the loveಮೈಸೂರು: ‘ಬಿಜೆಪಿ ನಾಯಕರು ಸರ್ಕಾರಿ ವಾಹನಗಳಲ್ಲಿ ಕೋಟ್ಯಂತರ ರೂಪಾಯಿ ಸಾಗಿಸಿ ಹಂಚುತ್ತಿದ್ದಾರೆ. ಐಟಿ, ಇಡಿ ರಕ್ಷಣೆಯಲ್ಲೇ ಈ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ