Breaking News
Home / Uncategorized / ಬಿಜೆಪಿ ಮತ್ತು ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ ದಲಿತ ಮುಖಂಡ ಶ್ರೀನಾಥ್ ಪೂಜಾರಿ

ಬಿಜೆಪಿ ಮತ್ತು ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ ದಲಿತ ಮುಖಂಡ ಶ್ರೀನಾಥ್ ಪೂಜಾರಿ

Spread the love

 

 

 

ಸಿಂದಗಿಯಲ್ಲಿ ಪಾಕ್ ಧ್ವಜ ಹಾರಿಸಿದ ಆರೋಪಿಗಳಿಗೆ ಜಾಮೀನು ನೀಡಲು ಸಹಕರಿಸಿದ ಹಾಗೂ ನೂತನ ಕ್ರೀಡಾಂಗಣದಲ್ಲಿರುವ ಮಸೀದಿಯನ್ನು ಇಂದಿನ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿರುವ ರಮೇಶ್ ಭೂಸನೂರರವರು ತೆರವುಗೊಳಿಸುವಾಗ ಇಂದಿನ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಅಶೋಕ್ ಮನಗೂಳಿಯವರು ಯಾವುದೇ ರೀತಿಯ ಪ್ರತಿಭಟನೆ ಮಾಡದೇ ಮೌನ ಸಮ್ಮತಿ ಸೂಚಿಸಿರುವುದು ಮನುವಾದಿ ಮನಸ್ಥಿತಿ ತೋರುತ್ತದೆ.

ಪ್ರಸ್ತುತ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಅಶೋಕ್ ಮನಗೂಳಿ ಅವರಿಗೆ ಮುಸ್ಲಿಂ ಮತ ಕೇಳಲು ನಾಚಿಕೆ ಆಗುವುದಿಲ್ಲವೇ..?

RSS ಗರಡಿಯಲ್ಲಿ ಬೆಳೆದಿರುವ ಅಶೋಕ್ ಮನಗೂಳಿ ಅವರು ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡುತ್ತಾರೆ ಎಂಬ ಭರವಸೆಯೇ.
ಅದೇ ರೀತಿ ಬಿಜೆಪಿ ಅಭ್ಯರ್ಥಿ ಸಹ ಗೋಮುಖ ವ್ಯಾಘ್ರವೇ ಸರಿ. ಅವರು ಸಹ ಸಿಂದಗಿ ವಿಧಾನಸಭಾ ಕ್ಷೇತ್ರಕ್ಕೆ ನೀಡಿದ ಕೊಡುಗೆ ಶೂನ್ಯ.
ಕಳೆದ ಬಾರಿ ಹಾಲುಮತ ಸಮುದಾಯಕ್ಕೆ ನೀಡಿದ ಟಿಕೇಟ್ ನ್ನು ಈ ಬಾರಿ ಅಶೋಕ್ ಮನಗೂಳಿ ಕಸಿದುಕೊಂಡು ಹಾಲುಮತ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ. ಈ ಚುನಾವಣೆಯಲ್ಲಿ ಹಾಲುಮತ ಸಮಾಜದ ಸಹೋದರರು ಈ ಚುನಾವಣೆಯಲ್ಲಿ ಅಶೋಕ್ ಮನಗೂಳಿ ಅವರಿಗೆ ತಕ್ಕ ಪಾಠ ಕಲಿಸಬೇಕು.
ಬಹು ದಿನಗಳ ಕಾಲ ವಿಜಯಪುರ ಜಿಲ್ಲೆಯ ಪ್ರಮುಖ ರಾಜಕೀಯ ಶಕ್ತಿ ಯಾಗಿದ್ದ ಗಂಗಾಮತಸ್ಥ, ತಳವಾರ, ಕೋಳಿ, ಕಬ್ಬಲಿಗ ಎಂದು ಕರೆಯಿಸಿಕೊಳ್ಳುವ ಅತೀ ದೊಡ್ಡ ಸಮುದಾಯವನ್ನು ಸಹ ರಾಜಕೀಯವಾಗಿ ಪ್ರಾತಿನಿದ್ಯ ದೊರಕಿಸದಂತೆ ಮಾಡುವ ಮೂಲಕ ಅಶೋಕ್ ಮನಗೂಳಿ ಗಂಗಾಮತಸ್ಥ ಸಮುದಾಯದ ಬಾಂದವರಿಗೂ ಸಹ ದೊಡ್ಡ ಅನ್ಯಾಯ ಮಾಡಿದ್ದಾರೆ.

ಹಿಂದುಳಿದ ವರ್ಗ ,ಗಂಗಾಮತಸ್ಥ ಸಮುದಾಯಕ್ಕೆ ಆಗಿರುವ ಅನ್ಯಾಯದ ಬಗ್ಗೆ ನಾನು ತಂಡ ಸಮೇತ ಮನೆ ಮನೆಗೂ ಹೋಗಿ ಈ ಬಗ್ಗೆ ಜಾಗೃತಿ ಮೂಡಿಸಿ , ಆಗಿರುವ ಅನ್ಯಾಯದ ವಿರುದ್ಧ ಮತ ಚಲಾಯಿಸುವಂತೆ ಕೈ ಮುಗಿದು ಬೇಡಿಕೊಳ್ಳುವೆ.
ದಲಿತ ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತಸಮುದಾಯದ ಪ್ರತಿನಿಧಿಯಾಗಿ ಚುನಾವಣಾ ಕಣದಲ್ಲಿರುವ ನಾಜೀಯಾ ಅಂಗಡಿ ಅವರನ್ನು ಬೆಂಬಲಿಸಿ ಎಂದು ಕೋರುವೆ.
ಪಕ್ಷಕ್ಕಿಂತ ನಮಗೆ ಸಮುದಾಯದ ಮುಖ್ಯ. ಇದೇ ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತ ಅಥವಾ ಹಿಂದುಳಿದ ವರ್ಗದವರಿಗೆ ಟಿಕೆಟ್ ನೀಡಿದರೆ ಅವರ ಪರವಾಗಿಯೇ ನಾನು ಕೆಲಸ ಮಾಡುತ್ತಿದ್ದೆ ಶ್ರೀನಾಥ್ ಪೂಜಾರಿ.
ಚುನಾವಣೆ ಬಂದಾಗ ಅಲ್ಪಸಂಖ್ಯಾತರು, ಹಿಂದುಳಿದವರು ಕಾಂಗ್ರೆಸ್ ಪಕ್ಷಕ್ಕೆ ನೆನಪಾಗುತ್ತಾರೆ ಆದರೆ ಟೀಕೆಟ ಹಂಚಿಕೆ ವಿಷಯ ಬಂದಾಗ ಈ ಯಾವ ಸಮುದಾಯದವರು ಕಾಂಗ್ರೆಸ್ ನಾಯಕರಿಗೆ ನೆನಪಾಗುವುದಿಲ್ಲ.
ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತ, ದಲಿತ ಬಾಂದವರು ಸಾಮಾಜಿಕ ನ್ಯಾಯಕ್ಕೆ ಮತ ಕೊಟ್ಟ ಪ್ರತಿಕವಾಗಿ ಅಲ್ಪಸಂಖ್ಯಾತ ಸಮುದಾಯದ ಸಹೋದರಿ ನಾಜೀಯಾ ಅಂಗಡಿ ಅವರಿಗೆ ಮತ ಚಲಾಯಿಸಬೇಕು ಎಂದು ದಲಿತ ಮುಖಂಡ ಶ್ರೀನಾಥ್ ಪೂಜಾರಿ ಅವರು ಪತ್ರಿಕೆ ಮಾಧ್ಯಮದ ಮೂಲಕ ಹೇಳಿದರು.

ವರದಿ ಬಸವರಾಜ ಜಮಖಂಡಿ


Spread the love

About Laxminews 24x7

Check Also

‘ಲೋಕಾ’ ದಾಳಿಯಲ್ಲಿ ಪತ್ತೆಯಾಯ್ತು ಅಧಿಕಾರಿಯ ಆಕ್ರಮ ಸಂಪತ್ತು;17 ಸೈಟ್, 27 ಎಕರೆ ಕೃಷಿ ಭೂಮಿ:

Spread the love ಕೊಪ್ಪಳ: ಕೊಪ್ಪಳದ ಕೃಷಿ ಇಲಾಖೆ ಉಪ ನಿರ್ದೇಶಕ ಸಹದೇವ ಯರಗುಪ್ಪ ಅವರಿಗೆ ಸೇರಿದ ಮನೆ ಮತ್ತು ಕಚೇರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ