Home / Uncategorized / ‘ಗೋಕಾಕ್ ಕ್ಷೇತ್ರ ಟಾರ್ಗೆಟ್ ಮಾಡ್ತೀನಿ’ ಎಂದ ಹೆಬ್ಬಾಳ್ಕರ್​​ಗೆ ಸತೀಶ್ ಜಾರಕಿಹೊಳಿ ಮಾಸ್ಟರ್​​ ಸ್ಟ್ರೋಕ್

‘ಗೋಕಾಕ್ ಕ್ಷೇತ್ರ ಟಾರ್ಗೆಟ್ ಮಾಡ್ತೀನಿ’ ಎಂದ ಹೆಬ್ಬಾಳ್ಕರ್​​ಗೆ ಸತೀಶ್ ಜಾರಕಿಹೊಳಿ ಮಾಸ್ಟರ್​​ ಸ್ಟ್ರೋಕ್

Spread the love

ನನಗೆ ಉತ್ತರ ಕೊಡಲು ಜಾಸ್ತಿ ಹೊತ್ತು ಬೇಕಿಲ್ಲ. 2023ರಲ್ಲಿ ಜನರಿಂದ ಉತ್ತರ ಕೊಡಿಸಲು ಕಾಯುತ್ತಿದ್ದೇನೆ. ಸರ್ಕಾರವನ್ನು ಬೀಳಿಸಿದವರಿಗೆ ಗ್ರಾಪಂ ಯಾವ ಲೆಕ್ಕ. ಎಂಎಲ್ಎಗಳನ್ನೇ ಎಸ್ಕೇಪ್ ಮಾಡಿದ್ದಾರೆ. ಇವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ? ಕಾಲಾಯ ತಸ್ಮೈ ನಮಃ. ನಾನು ಗೋಕಾಕ್ ಅನ್ನು ಮುಂದಿನ ಚುನಾವಣೆಯಲ್ಲಿ ಟಾರ್ಗೆಟ್ ಮಾಡುತ್ತೇನೆ.
ಲಕ್ಷ್ಮಿ ಹೆಬ್ಬಾಳ್ಕರ್‌, ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ

ಮೊನ್ನೆ ಲಕ್ಷ್ಮಿ ಹೆಬ್ಬಾಳ್ಕರ್‌ ಹೇಳಿದ ಈ ಒಂದು ಮಾತು ಬೆಳಗಾವಿಯಲ್ಲಿ ಹೊಸ ಚರ್ಚೆ ಹುಟ್ಟು ಹಾಕಿದೆ. ಜಾರಕಿಹೊಳಿ ಬ್ರದರ್ಸ್‌ ಌಕ್ಟಿವ್‌ ಆಗುವಂತೆ ಮಾಡಿದೆ. ಈಗಾಲೇ ಗೋಕಾನ್​​ನಲ್ಲಿ ತಮ್ಮದೇ ಆದ ಕೋಟೆ ಕಟ್ಟಿಕೊಂಡಿರುವ ರಮೇಶ್ ಜಾರಕಿಹೊಳಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ತೊಡೆ ತಟ್ಟಿದ್ದಾರೆ. ಲೆಟೆಸ್ಟ್​ ವಿಷ್ಯ ಏನಂದರೆ.. ಜಾರಕಿಹೊಳಿ ಕುಟುಂಬದ ಅಭೇದ್ಯ ಕೋಟೆಯೊಳಗೆ ಲಕ್ಷ್ಮಿ ಹೆಬ್ಬಾಳ್ಕರ್​​ ಪ್ರವೇಶ ಮಾಡದಂತೆ, ಸತೀಶ್‌ ಜಾರಕಿಹೊಳಿ ಸದ್ದಿಲ್ಲದೇ ಮಾಸ್ಟರ್‌ ಪ್ಲಾನ್‌ ರೂಪಿಸಿದ್ದಾರೆ ಎನ್ನಲಾಗಿದೆ.

ರಮೇಶ್‌ ಜಾರಕಿಹೊಳಿ ಬಿಜೆಪಿ ಸೇರ್ಪಡೆಯಾದ ನಂತರ ಪ್ರಬಲ ನಾಯಕತ್ವ ಇಲ್ಲದೇ ಮಂಕಾಗಿರುವ ಕಾಂಗ್ರೆಸ್‌ಗೆ ಹೊಸ ಚೈತನ್ಯ ತುಂಬಲು ರೆಡಿಯಾಗಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್‌ ಗೋಕಾಕ್ ಸ್ಪರ್ಧೆಯ ಪ್ಲ್ಯಾನನ್ನು ಪ್ರಾರಂಭದಲ್ಲಿ ಪ್ಲಾಪ್‌ ಮಾಡಲು ತಂತ್ರ ರೂಪಿಸಿದ್ದಾರೆ. ಆ ತಂತ್ರವೇ ಅಶೋಕ್‌ ಪೂಜಾರಿ. ಲಿಂಗಾಯತ ಪ್ರಬಲ ನಾಯಕ ಅಶೋಕ್‌ ಪೂಜಾರಿಯನ್ನು ಗೋಕಾಕ್‌ಗೆ ಕರೆತಂದು, ಇಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಿರುವಾಗ್ಲೇ ಮತ್ತೊಬ್ಬ ಅಭ್ಯರ್ಥಿ ಯಾಕೆ ಎನ್ನುವ ಸಂದೇಶವನ್ನು ಹೈಕಮಾಂಡ್‌ಗೆ ರವಾನಿಸುವ ಪ್ಲಾನ್‌ ಸತೀಶ್ ಜಾರಕಿಹೊಳಿ ಮಾಡಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ ನಿನ್ನೆ ಸತೀಶ್‌ ಜಾರಕಿಹೊಳಿ ಅಶೋಕ್‌ ಪೂಜಾರಿ ಮನೆಗೆ ಹೋಗಿದ್ದು, ಅವ್ರನ್ನು ಕಾಂಗ್ರೆಸ್‌ಗೆ ವೆಲ್‌ಕಮ್‌ ಎಂದಿದ್ದು ಅಂತಾ ಹೇಳಲಾಗುತ್ತಿದೆ.

ನಿನ್ನೆ ನಮ್ಮ ಮನೆಗೆ ಸತೀಶ್ ಜಾರಕಿಹೊಳಿ ಬಂದಿದ್ದರು. ಅಧಿಕೃತವಾಗಿಯೇ ಕಾಂಗ್ರೆಸ್​ ಪಕ್ಷದ ಭೇಟಿಗಾಗಿ ಬಂದಿದ್ದಾಗಿ ಹೇಳಿದ್ದರು. ಎಲ್ಲರೂ ಸೇರಿ ಹೊಸ ಅಧ್ಯಾಯ ಆರಂಭಿಸೋಣ. ಕಾಂಗ್ರೆಸ್​ ಸೇರಲು ಸತೀಶ್ ಸೌಜನ್ಯದ ಆಹ್ವಾನ ಕೊಟ್ಟಿದ್ದಾರೆ. ಈ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡ ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ಜೊತೆ ಮಾತನಾಡುತ್ತೇನೆ. ಅವರ ಜೊತೆ ಚರ್ಚಿಸಿ ನನ್ನ ನಿರ್ಧಾರವನ್ನ ತಿಳಿಸೋದಾಗಿ ಹೇಳಿದ್ದೇನೆ
ಅಶೋಕ್‌ ಪೂಜಾರಿ, ‌ಜೆಡಿಎಸ್‌ ಮುಖಂಡ

ಲಕ್ಷ್ಮಿ ಹೆಬ್ಬಾಳ್ಕರ್‌ ಕ್ಷೇತ್ರ ಬೆಳಗಾವಿ ಗ್ರಾಮೀಣ ಕ್ಷೇತ್ರ. ಲಕ್ಷ್ಮಿ ಹೆಬ್ಬಾಳ್ಕರ್‌ ಕಾಂಗ್ರೆಸ್‌ ಪಕ್ಷದವರೇ ಆಗಿದ್ರು, ಗೋಕಾಕ್‌ನ ಕೋಟೆಯಲ್ಲಿ ಅವ್ರ ಎಂಟ್ರಿಗೆ ಜಾರಕಿಹೊಳಿ ವಿರೋಧವಿದೆ ಅಂತಾ ಹೇಳಲಾಗ್ತಿದೆ. ಇದೇ ಕಾರಣಕ್ಕೆ ಕ್ಷೇತ್ರದಲ್ಲಿ ಹೊರಗಿನವರಿಗೆ ಅವಕಾಶ ಕೊಟ್ರೆ, ಗೋಕಾಕ್‌ ಸಾಮ್ರಾಜ್ಯಕ್ಕೆ ಧಕ್ಕೆಯಾಗುತ್ತೆ ಅನ್ನೋದು ಸತೀಶ್‌ ಲೆಕ್ಕಾಚಾರ. ಜೊತೆಗೆ ಕಾಂಗ್ರೆಸ್‌ ಬಿಟ್ಟು, ಬಿಜೆಪಿ ಸೇರಿರುವ ಸಹೋದರ ರಮೇಶ್‌ ಜಾರಕಿಹೊಳಿಗೆ ಗೋಕಾಕ್‌ನಲ್ಲಿ ಸೋಲಿನ ರುಚಿ ತೋರಿಸಲು ಲಿಂಗಾಯತ ಅಸ್ತ್ರವಾಗಿದ್ದಾರೆ ಅಶೋಕ್‌ ಪೂಜಾರಿ. ಇದೇ ಕಾರಣಕ್ಕೆ ಪೂಜಾರಿ ಕಾಂಗ್ರೆಸ್‌ ಸೇರುವ ಸಿದ್ಧತೆಗಳು ಜೋರಾಗಿ ನಡೀತಿವೆ.

35 ವರ್ಷಗಳಿಂದ ಕಟ್ಟಿದ ಸಾಮ್ರಾಜ್ಯಕ್ಕೆ ರಾಜಕೀಯವಾಗಿ ಜಾರಕಿಹೊಳಿ ಬ್ರದರ್ಸ್‌ ಯಾವುದೇ ಕಾರಣಕ್ಕೂ ಹೊರಗಿನವರಿಗೆ ಎಂಟ್ರಿಯಾಗಲು ಕೊಟ್ಟಿಲ್ಲ. ಲಕ್ಷ್ಮಿ ಹೆಬ್ಬಾಳ್ಕರ್‌ ಗೋಕಾಕ್‌ನಿಂದ ಸ್ಪರ್ಧೆ ಮಾಡ್ತಾರೆ ಅಂತ ಯಾವಾಗ ಘೋಷಣೆ ಮಾಡಿದ್ರೂ ಆಗಲೇ ಲಕ್ಷ್ಮೀಗೆ ತಮ್ಮದೇ ತಂತ್ರಗಾರಿಕೆ ಮೂಲಕ ಉತ್ತರ ಕೊಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಅಶೋಕ ಪೂಜಾರಿ ಎನ್ನುವ ಅಸ್ತ್ರ ಬಳಸಿ ಗೋಕಾಕ್‌ ಸಾಮ್ರಾಜ್ಯದ ಬಾಗಿಲು ಹಾಕುವ ಪ್ರಯತ್ನ ಮಾಡಿದ್ದಾರೆ.

 

 


Spread the love

About Laxminews 24x7

Check Also

ಬೆಂಗಳೂರು: ಹೊತ್ತಿ ಉರಿದ ಯಾರ್ಡ್, ಗಾರ್ಮೆಂಟ್ಸ್ ಕಾರ್ಖಾನೆ

Spread the loveಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಬಳಿಯ ಸಿಂಗಸಂದ್ರದ ಕಂಟ್ರಿ ರಸ್ತೆಯಲ್ಲಿ ಮಂಗಳವಾರ ತಡರಾತ್ರಿ ಬೆಂಕಿ ಅವಘಡ ಸಂಭವಿಸಿದ್ದು, ಸೆಂಟ್ರಿಂಗ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ