Home / new delhi / ಅಷ್ಟೇ ಅಲ್ಲ ಇವರ ಬಗ್ಗೆ ಸಿನಿಮಾ ಮಾಡಲು ಕೂಡ ಸಿದ್ಧತೆ ನಡೀತಾ ಇದೆ. ರೋಹಿಣಿ ಸಿಂಧೂರಿ

ಅಷ್ಟೇ ಅಲ್ಲ ಇವರ ಬಗ್ಗೆ ಸಿನಿಮಾ ಮಾಡಲು ಕೂಡ ಸಿದ್ಧತೆ ನಡೀತಾ ಇದೆ. ರೋಹಿಣಿ ಸಿಂಧೂರಿ

Spread the love

 

ಇತ್ತೀಚೆಗೆ ಅತಿ ಹೆಚ್ಚು ಸುದ್ದಿ ಆಗಿರುವ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ. ಅದೇನಾಯ್ತೋ ಅವರ ಮೇಲೆ ಇನ್ನೊಬ್ಬ ಮಹಿಳಾ ಐಎಎಸ್ ಅಧಿಕಾರಿಯೇ ತಿರುಗಿ ಬಿದ್ದಿದ್ರು. ಕೊನೆಗೆ ಇಬ್ಬರು ಅಧಿಕಾರಿಗಳ ವರ್ಗಾವಣೆಯೊಂದಿಗೆ ಎಲ್ಲವೂ ತಣ್ಣಗಾಗಿತ್ತು. ಆದ್ರೆ ರೋಹಿಣಿ ಸಿಂಧೂರಿ ಸಿಕ್ಕಾಪಟ್ಟೆ ಫೇಮಸ್ ಆಗಿ ಬಿಟ್ರು. ಅಷ್ಟೇ ಅಲ್ಲ ಇವರ ಬಗ್ಗೆ ಸಿನಿಮಾ ಮಾಡಲು ಕೂಡ ಸಿದ್ಧತೆ ನಡೀತಾ ಇದೆ.
ರೋಹಿಣಿ ಸಿಂಧೂರಿ. ಮೊನ್ನೆ ಮೊನ್ನೆಯವರಿಗೆ ಮೈಸೂರಿನ ಜಿಲ್ಲಾಧಿಕಾರಿಯಾಗಿದ್ದರು. ಆದರೆ, ಮೈಸೂರಿನಲ್ಲಿ ನಡೆದ ಬಹಿರಂಗ ಮಾತಿನ ಸಮರ, ಆರೋಪ-ಪ್ರತ್ಯಾರೋಪ, ಕೊನೆಗೆ ಇವರ ವರ್ಗಾವಣೆಯಲ್ಲಿ ಕೊನೆಗೊಂಡಿತ್ತು. ರೋಹಿಣಿ ಸಿಂಧೂರಿ ಹೋದಲ್ಲೆಲ್ಲಾ ಸುದ್ದಿ ಮಾಡುತ್ತಲೇ ಬಂದವರು. ತುಮಕೂರಿನಲ್ಲಿ ಕೆಲಸ ಮಾಡಿದ್ರು. ಹಾಸನದಲ್ಲಿ ಕೆಲಸ ಮಾಡಿದ್ರು. ಮಹಾ ಮಸ್ತಕಾಭಿಷೇಕದ ಸಂದರ್ಭದಲ್ಲಿ ಮಿಂಚಿಿದ್ರು.

 

ಅದಾದ ಬಳಿಕ ಅರಮನೆಗಳ ನಗರಿಗೆ ಇನ್ನೊಬ್ಬರನ್ನು ಬದಿಗೆ ಸರಿಸಿ ಡಿಸಿ ಆಗಿದ್ರು. ಡಿಸಿ ಆದ ಕೆಲವೇ ತಿಂಗಳಿನಲ್ಲಿ ಅನಿವಾರ್ಯವಾಗಿ ವರ್ಗಾವಣೆ ಕೂಡ ಅಗಿ ಬಿಟ್ಟರು.

 

ಮೊದಲು ಸಾ.ರಾ.ಮಹೇಶ್ ವಾಗ್ದಾಳಿ ನಡೆಸಿದ್ರು. ಬಳಿಕ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ರು. ಎಲ್ಲಾ ಆದ ನಂತರ ಫೈನಲ್ ಆಗಿ ಇನ್ನೊಬ್ಬ ಮಹಿಳಾ ಐಎಎಸ್ ಅಧಿಕಾರಿ ಶಿಲ್ಪಾ ನಾಗ್ ಅವರೇ ರೋಹಿಣಿ ಸಿಂಧೂರಿ ವಿರುದ್ಧ ಸಿಡಿದು ಬಿದ್ರು. ಮೊದಲೇ ವಾಗ್ದಾಳಿ ನಡೆಸುತ್ತಿದ್ದವರಿಗೆ ಇಷ್ಟು ಸಾಕಿತ್ತು. ಇನ್ನೇನು ವರ್ಗಾವಣೆಗೆ ಒತ್ತಡ ಶುರುವಾಗಿ ಹೋಗಿತ್ತು. ವರ್ಗಾವಣೆಯೂ ಆಗಿ ಹೋಗಿದ್ದಾರೆ. ಆದ್ರೆ ಯಾಕೆ ವರ್ಗಾವಣೆ ಆದ್ರು, ರೋಹಿಣಿ ಸಿಂಧೂರಿ ಅದ್ಯಾವ ತಪ್ಪು ಮಾಡಿದ್ರು, ತಮ್ಮ ಕೆಲಸ ನಿಭಾಯಿಸುವಲ್ಲಿ ವಿಫಲರಾದ್ರಾ ಯಾರಿಗೂ ಗೊತ್ತಿಲ್ಲ. ಆದ್ರೆ ಸರ್ಕಾರಿ ಭೂಮಿ ಉಳಿಸಲು ಹೋಗಿದ್ದೇ ರೋಹಿಣಿ ಸಿಂಧೂರಿ ಅವರಿಗೆ ಮುಳುವಾಯ್ತು, ಕೆರೆ ಒತ್ತುವರಿ ತೆರವು ಮಾಡಿಸಲು ಹೋಗಿದ್ದೇ ತಪ್ತಾಯ್ತು, ದಕ್ಷತೆಯಿಂದ ಕೆಲಸ ಮಾಡಲು ಹೋಗಿದ್ದೇ ವರ್ಗಾವಣೆಗೆ ಕಾರಣವಾಗಿ ಹೋಯ್ತು ಅಂತೆಲ್ಲ ಮಾತನಾಡಿಕೊಳ್ಳುತ್ತಿದ್ದಾರೆ. ಸತ್ಯ ಏನು ಎಂಬುದು ಯಾರಿಗೂ ಸ್ಪಷ್ಟವಾಗಿ ಗೊತ್ತಿಲ್ಲ. ಗೊತ್ತಿದ್ದವರು ಹೇಳ್ತಾ ಇಲ್ಲ. ಅದೇನೇ ಇರಲಿ ಮೈಸೂರಿನಲ್ಲಿ ಇದ್ದಷ್ಟು ದಿನ ರೋಹಿಣಿ ಸಿಂಧೂರಿ ಮಿಂಚಿದ್ದಂತೂ ನಿಜ.

 

 

 

ರೋಹಿಣಿ ಸಿಂಧೂರಿ ವರ್ಗಾವಣೆ ಬಳಿಕ ಪರ ವಿರೋಧ ಚರ್ಚೆಗಳು ಜೋರಾಗಿ ನಡೆದಿದ್ದವು. ರೋಹಿಣಿ ಪರವಾಗಿ ಹಲವರು ನಿಂತರು. ಮಾತನಾಡತೊಡಗಿದ್ರು. ಈಗ ಇನ್ನೊಂದು ಹೆಜ್ಜೆ ಮುಂದೆ ಹೋಗಿ ರೋಹಿಣಿ ಸಿಂಧೂರಿ ಅವರ ಬಗ್ಗೆ ಸಿನಿಮಾ ಮಾಡಲು ಕೂಡ ಒಬ್ಬರು ಮುಂದಾಗಿದ್ದಾರೆ.

 

ಕನ್ನಡ ಚಿತ್ರವಾಗಲಿದೆ ಐ.ಎ.ಎಸ್ ರೋಹಿಣಿ ಸಿಂಧೂರಿ ಕಥೆ..!

ಮೈಸೂರಿನ ನಿರ್ಗಮಿತ ಡಿಸಿ ಕಥೆ ಸಿನಿಮಾ ಆಗೋದ್ಯಾವಾಗ..?

 

ಸ್ಯಾಂಡಲ್​ವುಡ್ ಲೋಕದ ರಾಜಧಾನಿ ಗಾಂಧಿನಗರದಲ್ಲಿ ಯಾವಾಗಲೂ ಒಳ್ಳೆ ಕಥೆ ಮತ್ತು ಟೈಟಲ್​​​​​ಗಳ ಭೇಟೆ ನಡಿಯುತ್ತಲೇ ಇರುತ್ತೆ. ಯಾರಾದ್ರು ಫೇಮಸ್ ಆಗಿ ಹೆಸರು ಮಾಡಿ ಬಿಟ್ರೆ ತಕ್ಷಣ ಅವರ ಕಥೆಯ ಪೇಟೆಂಟ್ ಖರೀದಿಸಿ ಟೈಟಲ್ ನೊಂದವಣೆ ಮಾಡಿಕೊಂಡು ಕೆಲಸ ಶುರು ಮಾಡ್ತಾರೆ ಗಾಂಧಿನಗರ ಮಂದಿ. ಅದ್ರಲೂ ಸರ್ಕಾರಿ ಅಧಿಕಾರಿಗಳೇನಾದ್ರು ಫೇಮಸ್ ಆಗಿ ಬಿಟ್ರೇ ಅವರ ಕಥೆಯನ್ನ ಸಿನಿಮಾವನ್ನ ಮಾಡಲು ತುದಿಗಾಲಿನಲ್ಲಿ ನಿಂತು ಬಿಡ್ತಾರೆ. ಎರಡು ವರ್ಷದ ಹಿಂದೆ ಧಕ್ಷ ಐಪಿಎಸ್ ಅಧಿಕಾರಿ ಕೆ.ಅಣ್ಣಮಲೈ ರಾಜೀನಾಮೆ ಕೊಟ್ಟಾಗ ಗಾಂಧಿನಗರ ಕೆಲ ಮಂದಿ ಅವರ ಕಥೆಯನ್ನ ಸಿನಿಮಾವನ್ನಾಗಿ ಮಾಡಲು ಮುಂದೆ ಬಂದಿದ್ರು. ಆದ್ರೆ ಇನ್ನೂ ಕೂಡ ಅಣ್ಣಾಮಲೈ ಅವರ ಪೂರ್ತಿ ಕಥೆ ಸಿನಿಮಾ ಆಗಿಲ್ಲ , ಆದ್ರೆ ಅಲ್ಲಲೇ ಒಂದಷ್ಟು ಹೋಲಿಕೆಯಾಗುವ ಸಿನಿಮಾಗಳು ಬಂದು ಹೋಗಿವೆ. ಈಗ ಮತ್ತೊಬ್ಬ ಆಫೀಸರ್ ಕಥೆಯನ್ನ ಸಿನಿಮಾವನ್ನಾಗಿ ಮುಂದೆ ಬಂದಿದೆ ಸ್ಯಾಂಡಲ್​ವುಡ್. ಆ ಅಧಿಕಾರಿಯ ಹೆಸರು ರೋಹಿಣಿ ಸಿಂಧೂರಿ.

 

ರೋಹಿಣಿ ಸಿಂಧೂರಿ ದಾಸರಿ.. ಕರ್ನಾಟಕದ 2009ರ ಬ್ಯಾಚ್​​​ನ ಐಎಎಸ್ ಅಧಿಕಾರಿ.. ಎಷ್ಟು ಹೆಸರು ಮಾಡಿದ್ದಾರೋ ಅಷ್ಟೇ ವಾದ-ವಿವಾದಗಳು ರೋಹಿಣಿ ಸಿಂಧೂರ ಅವರ ಸುತ್ತ ಪ್ರದಕ್ಷಣೆ ಹಾಕಿವೆ. ಜನಸೇವೆ ಕನಸು ಕಂಡು ಬಿಟೆಕ್ ಇನ್ ಕೆಮಿಕಲ್ ಇಂಜಿನೀಯರಿಂಗ್ ಪದವಿ ಪಡೆದು ನಂತರ ಯುಪಿಎಸ್​​ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಮೂಲಕ ಐಎಎಸ್​ ಅಧಿಕಾರಿಯಾದವರು.. ಬರಿ ಅಧಿಕಾರಿಯಲ್ಲ ; ಖಡಕ್ ಅಧಿಕಾರಿ ಎಂದು ಹೆಸರು ಮಾಡಿದವರು ರೋಹಿಣಿ ಸಿಂಧೂರಿ. ಈಗ ರೋಹಿಣಿ ಸಿಂಧೂರಿ ಅವರ ಜೀವನಾಧರಿತ ಸಿನಿಮಾ ಮಾಡಲು ಸಿನಿ ಮಂದಿ ಮುಂದಾಗಿದ್ದಾರೆ. ರೋಹಿಣಿ ಸಿಂಧೂರಿ ಅವರ ಕಥೆಯನ್ನ ಸಿನಿಮಾ ಕಥೆಯನ್ನ ಮಾಡಿಕೊಳ್ಳಲು ಸ್ವತಃ ರೋಹಿಣಿ ಸಿಂಧೂರಿ ಅವರೇ ಅಸ್ತು ಎಂದಿದ್ದಾರೆ ಎನ್ನಲಾಗ್ತಾ ಇದೆ. ಹಾಗಾದ್ರೆ ಯಾರು ರೋಹಿಣಿ ಸಿಂಧೂರಿ ಅವರ ಜೀವನಾಧರಿತ ಕಥೆಯನ್ನ ಸಿನಿಮಾ ಮಾಡಲಿದ್ದಾರೆ ಅನ್ನೋ ಪ್ರಶ್ನೆಗೆ ಉತ್ತರ ಮಂಡ್ಯ ಮೂಲದ ನಿರ್ದೇಶಕ ಕೃಷ್ಣ ಸ್ವರ್ಣ ಸಂದ್ರ..

 

ರೋಹಿಣಿ ಸಿಂಧೂರ ಅಧಿಕಾರಿಯಾಗಿ ಬಂದಾಗಿನಿಂದಲೂ ಬ್ಯೂಟಿ ಫ್ಲಸ್ ಬ್ರೈನ್ ಆಫೀಸರ್ ಎಂದು ಹೆಸರು ಗಳಿಸಿದವರು. ಮೊದಲು ತುಮಕೂರು, ಆಮೇಲೆ ಮಂಡ್ಯ ಆಮೇಲೆ ಹಾಸನ ಮೊನ್ ಮೊನ್ನೆ ತನಕ ಮೈಸೂರು ಜಿಲ್ಲೆಯಲ್ಲೂ ಸೇವೆ ಸಲ್ಲಿಸಿದ್ದಾರೆ.. ಈಗ ರೋಹಿಣಿ ಸಿಂಧೂರಿ ಬಗ್ಗೆ ಚಲನಚಿತ್ರವೊಂದು ತಯಾರಾಗುತ್ತಿದೆ. ಈಗಾಗಲೇ ಚಿತ್ರ ಟೈಟಲ್ ಕೂಡ ಫೈನಲ್ ಆಗಿದೆ.. ಹಾಗಾದ್ರೆ ರೋಹಿಣಿ ಸಿಂಧೂರಿ ಅವರ ಜೀವನ ಕಥೆಯನ್ನ ಆಧಾರಿಸಿದ ಸಿನಿಮಾದ ಹೆಸರೇನು ಗೊತ್ತಾ ”ಭಾರತ ಸಿಂಧೂರಿ”.

 

ರೋಹಿಣಿ ಸಿಂಧೂರಿ ಅವರ ಕಥೆ ಚಿತ್ರ ”ಭಾರತ ಸಿಂಧೂರಿ”

ಲಾಕ್ ಡೌನ್ ನಂತರ ಸೆಟ್ಟೇರಲಿದೆ ”ಸಿಂಧೂರಿ” ಸಿನಿಮಾ

 

ವಿವಾದದಿಂದಲೇ ಮೈಸೂರಿನಿಂದ ಟ್ರಾನ್ಸಫರ್ ಆದ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಜೀವನಚರಿತ್ರೆ ತೆರೆ ಮೇಲೆ ತರಲು ತೆರೆ ಮರೆಯ ಕಾರ್ಯಗಳು ಶುರುವಾಗಿವೆ. ಈಗಾಗಲೇ ರೋಹಿಣಿ ಸಿಂಧೂರಿ ಬಯೋಪಿಕ್‌ ಮಾಡಲು ಮಂಡ್ಯದ ನಿರ್ದೇಶಕರೊಬ್ಬರು ಮುಂದಾಗಿದ್ದಾರೆ. ರೋಹಿಣಿ ಸಿಂಧೂರಿ ಅವರ ಜೀವನಚರಿತ್ರೆ ಆಧಾರಿತ ಚಿತ್ರಕ್ಕೆ ‘ಭಾರತ ಸಿಂಧೂರಿ’ ಅಂತಾ ಟೈಟಲ್ ಕೂಡ ರಿಜಿಸ್ಟರ್ ಮಾಡಿಸಿದ್ದಾರೆ.. ಸಕ್ಕಾರೆ ನಾಡು ಮಂಡ್ಯದ ಸ್ವರ್ಣಸಂದ್ರ ಬಡಾವಣೆಯ ನಿವಾಸಿ, ಪತ್ರಕರ್ತರಾಗಿರುವ ಕೃಷ್ಣ ಸ್ವರ್ಣಸಂದ್ರ ಅವರಯ ರೋಹಿಣಿ ಸಿಂಧೂರಿ ಅವರ ಜೀವನಚರಿತ್ರೆ ಆಧರಿಸಿ ಚಲನಚಿತ್ರ ಮಾಡಲು‌ ಹೊರಟಿದ್ದಾರೆ. ಹಾಗಾದ್ರೆ ರೋಹಿಣಿ ಸಿಂಧೂರಿ ಅವರ ಪಾತ್ರವನ್ನ ಮಾಡ್ತಿರೋದು ಯಾರು ಅನ್ನೋದಕ್ಕೆ ಉತ್ತರ ಅಕ್ಷತಾ ಪಾಂಡವಪುರ..

 

 

 

ಎಷ್ಟೋ ಜನಕ್ಕೆ ಈ ವಿಷಯ ಗೊತ್ತೇ ಇಲ್ಲ.. ರೋಹಿಣಿ ಸಿಂಧೂರಿ ಹಾಸನ ಜಿಲ್ಲಾಧಿಕಾರಿಯಾಗಿದ್ದರು ನಂತರ ಮೈಸೂರಿನ ಜಿಲ್ಲಾಧಿಕಾರಿಯಾದ್ರು ಅಂತ ಅಷ್ಟೇ ಗೊತ್ತು.. ಆದ್ರೆ ಮೊದಲು ಐಎಎಸ್ ಅಧಿಕಾರಿಯಾಗಿ ರೋಹಿಣಿ ಇನ್​ಚಾರ್ಜ್ ತೆಗೆದುಕೊಂಡಿದ್ದು ಮಂಡ್ಯದ ಸಿಇಒ ಆಗಿ ಕೆಲಸ ಮಾಡಿ ಹೆಸರು ಸಂಪಾದಿಸಿದ್ದರು.

 

ಈ ಮೊದಲು ಕೃಷ್ಣ ಸ್ವರ್ಣ ಸಂದ್ರ ಅವರು ನೇಗಿಲ ಧರ್ಮ ಅನ್ನೋ ಸಿನಿಮಾವನ್ನ ಮಾಡಿದ್ದಾರೆ. ಈ ಅನುಭವವದ ಜೊತೆಗೆ ಈಗ ಎರಡನೇ ಸಿನಿಮಾವನ್ನ ಮಾಡಲು ಹೊರಟ್ಟಿದ್ದಾರೆ ನಿರ್ದೇಶಕರು.

 

ಕಳೆದ ವರ್ಷ ಜೂನ್‌ನಲ್ಲಿಯೇ ‘ಭಾರತ ಸಿಂಧೂರಿ’ ಹೆಸರಲ್ಲಿ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಟೈಟಲ್ ನೋಂದಣಿಯಾಗಿದೆ. ಇದೀಗ ವಿವಾದದಿಂದ ರೋಹಿಣಿ ಸಿಂಧೂರಿ ವರ್ಗಾವಣೆ ಆಗುತ್ತಿದ್ದಂತೆಯೇ ಚಿತ್ರ ನಿರ್ಮಾಣಕ್ಕೆ ನಿರ್ದೇಶಕ ಕೃಷ್ಣ ಸ್ವರ್ಣಸಂದ್ರ ಮುಂದಾಗಿದ್ದು, ಕಥೆ, ನಿರ್ದೇಶನ, ರಚನೆ ಸಾಹಿತ್ಯದ ನಿರ್ವಹಣೆಯನ್ನು ಕೃಷ್ಣ ಸ್ವರ್ಣಸಂದ್ರ ಅವರೇ ನೋಡಿಕೊಳ್ಳಲಿದ್ದಾರೆ. ತಮ್ಮದೇ ಒಡೆತನದ ಶ್ರೀ ರಾಜಶ್ರೀ ನಾಲ್ವಡಿ ಕೃಷ್ಣರಾಜ ಫಿಲಂಸ್ ಬ್ಯಾನರ್‌ನಡಿಯಲ್ಲಿ ಈ ಚಿತ್ರ ನಿರ್ಮಾಣವಾಗಲಿದೆ‌ ಎಂದು ತಿಳಿಸಿದ್ದಾರೆ.

ಇಷ್ಟೆಲ್ಲಾ ಸುದ್ದಿ ಗೊತ್ತಾಗ್ತಾ ಇದ್ದಂತೆ ಮೈಸೂರಿನಲ್ಲಿ ಮಾತನಾಡಿರುವ ಸಾ.ರಾ.ಮಹೇಶ್, ರೋಹಿಣಿ ಸಿಂಧೂರಿ ಅವರ ಸಿನಿಮಾ ಮಾಡಲಿ, ನಾವು ರೈತನ ಮಗ ಐಎಎಸ್ ಅಧಿಕಾರಿಯಾದ ಕಥೆಯನ್ನು ಸಿನಿಮಾ ಮಾಡ್ತೀವಿ ಅಂತ ಟಾಂಗ್ ಕೊಟ್ಟಿದ್ದಾರೆ. ರೋಹಿಣಿಯವರನ್ನು ವಜಾ ಮಾಡಬೇಕಿತ್ತು, ವರ್ಗಾವಣೆಯಲ್ಲ ಅಂತಾನೂ ಮತ್ತೆ ವಾಗ್ದಾಳಿ ಮುಂದುವರೆಸಿದ್ದಾರೆ.

 

 

 

ಒಟ್ಟಿನಲ್ಲಿ ವಿವಾದ ತಾರಕಕ್ಕೇರಿ ಮೈಸೂರು ಜಿಲ್ಲೆಯಿಂದ ವರ್ಗಾವಣೆಯಾದ ರೋಹಿಣಿ ಸಿಂಧೂರ ಹೆಸರು ಈಗ ರಾಜಕೀಯದಿಂದ ಸಿನಿಮಾ ರಂಗದ ತನಕ ಬಂದು ನಿಂತಿದೆ. ಲಾಕ್ ಡೌನ್ ಮತ್ತು ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಮುಗಿದ ನಂತರ ಭಾರತ ಸಿಂಧೂರಿ ಸಿನಿಮಾ ಸೆಟ್ಟೇರುತ್ತಿದೆ.

 

ರೋಹಿಣಿ ಸಿಂಧೂರಿ ಸದ್ಯಕ್ಕಂತೂ ಭರ್ಜರಿ ಸುದ್ದಿಯಲ್ಲಿದ್ದಾರೆ. ಈಗ ಅವರ ಬಗ್ಗೆನೇ ಸಿನಿಮಾ ಕೂಡ ಬರ್ತಾ ಇದೆ ಅಂದ್ರೆ ಮತ್ತಷ್ಟು ಕುತೂಹಲ ಮೂಡೋದು ಸಹಜ.


Spread the love

About Laxminews 24x7

Check Also

ಬೆಂಗಳೂರು: ಹೊತ್ತಿ ಉರಿದ ಯಾರ್ಡ್, ಗಾರ್ಮೆಂಟ್ಸ್ ಕಾರ್ಖಾನೆ

Spread the loveಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಬಳಿಯ ಸಿಂಗಸಂದ್ರದ ಕಂಟ್ರಿ ರಸ್ತೆಯಲ್ಲಿ ಮಂಗಳವಾರ ತಡರಾತ್ರಿ ಬೆಂಕಿ ಅವಘಡ ಸಂಭವಿಸಿದ್ದು, ಸೆಂಟ್ರಿಂಗ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ