Breaking News
Home / new delhi / ಇಂದು ಪ್ರಧಾನಿ ಮೋದಿಯಿಂದ ನೇತಾಜಿ ಸುಭಾಷ್​ ಚಂದ್ರ ಬೋಸ್​ರ ಹೊಲೋಗ್ರಾಮ್​ ಪ್ರತಿಮೆ ಅನಾವರಣ

ಇಂದು ಪ್ರಧಾನಿ ಮೋದಿಯಿಂದ ನೇತಾಜಿ ಸುಭಾಷ್​ ಚಂದ್ರ ಬೋಸ್​ರ ಹೊಲೋಗ್ರಾಮ್​ ಪ್ರತಿಮೆ ಅನಾವರಣ

Spread the love

ಗಣರಾಜ್ಯೋತ್ಸವ ಆಚರಣೆ ದೇಶದಲ್ಲಿ ಇಂದಿನಿಂದಲೇ ಪ್ರಾರಂಭವಾಗಲಿದೆ. ಇಂದು ನೇತಾಜಿ ಸುಭಾಷ್​ ಚಂದ್ರ ಬೋಸ್​ ಅವರ ಜನ್ಮದಿನ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೆಹಲಿಯಲ್ಲಿ ನೇತಾಜಿಯವರ ಹೊಲೋಗ್ರಾಮ್​ ಪ್ರತಿಮೆ (ಲೇಸರ್ ಅಥವಾ ಅಂಥ ಇತರ ಬೆಳಕಿನ ಕಿರಣಗಳ ಟಚ್​ ಕೊಡಲಾದ  ಮೂರು ಆಯಾಮದ ಪ್ರತಿಮೆ). ದೇಶದಲ್ಲಿ ಸಾಮಾನ್ಯವಾಗಿ ಜನವರಿ 24ರಿಂದ ಗಣರಾಜ್ಯೋತ್ಸವ ದಿನಾಚರಣೆ ಶುರುವಾಗುತ್ತಿತ್ತು. ಆದರೆ ಈ ಬಾರಿ ನೇತಾಜಿ ಸುಭಾಷ್​ ಚಂದ್ರ ಬೋಸ್​ ಜನ್ಮದಿನದಿಂದಲೇ ಗಣರಾಜ್ಯೋತ್ಸವ ಸಂಭ್ರಮವೂ ಶುರುವಾಗಲಿದೆ ಎಂದು ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಹೇಳಿದೆ.

ನೇತಾಜಿ ಸುಭಾಷ್​ ಚಂದ್ರ ಬೋಸ್​ ಪ್ರತಿಮೆಯನ್ನು ಗ್ರಾನೈಟ್​​ನಿಂದ ಮಾಡಲಾಗಿದ್ದು, ಅದನ್ನು ಇಂಡಿಯಾ ಗೇಟ್​ ಬಳಿ ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ.  ಈ ಬಗ್ಗೆ ನಿನ್ನೆ ಟ್ವೀಟ್ ಮಾಡಿದ್ದ ಪ್ರಧಾನಿ ಮೋದಿ, ಈ ಬಾರಿ ದೇಶ ನೇತಾಜಿ ಸುಭಾಷ್​ ಚಂದ್ರ ಅವರ 125ನೇ ಜನ್ಮ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಗ್ರಾನೈಟ್​​ನಿಂದ ನಿರ್ಮಿಸಲಾದ ಅವರ ಬಹುದೊಡ್ಡ ಪ್ರತಿಮೆಯನ್ನು ಇಂಡಿಯಾ ಗೇಟ್​ಬಳಿ ಸ್ಥಾಪಿಸಲಾಗುತ್ತಿರುವುದಕ್ಕೆ ನನಗೆ ತುಂಬ ಸಂತೋಷವಾಗುತ್ತಿದೆ. ನೇತಾಜಿಯವರ ಋಣ ತೀರಿಸುವ ಒಂದು ಅವಕಾಶ ಎಂದೇ ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ. ನೇತಾಜಿ ಸುಭಾಷ್​ ಚಂದ್ರ ಬೋಸ್​ ಅವರ ಗ್ರಾನೈಟ್​ ಪ್ರತಿಮೆ ಪೂರ್ಣಗೊಳ್ಳಲು ಇನ್ನೂ ಸಮಯ ಬೇಕು. ಅಲ್ಲಿಯವರೆಗೆ ಈ ಹೊಲೋಗ್ರಾಮ್​ ಪ್ರತಿಮೆ ಇರುತ್ತದೆ ಎಂದೂ ಪ್ರಧಾನಿ ತಿಳಿಸಿದ್ದಾರೆ. ಸುಭಾಷ್​ ಚಂದ್ರ ಬೋಸ್ ಅವರ ಹೊಲೋಗ್ರಾಮ್​ ಮೂರ್ತಿ 30 ಸಾವಿರ ಲ್ಯೂಮೆನ್ಸ್​ 4ಕೆ ಪ್ರಾಜೆಕ್ಟರ್​​ನಿಂದ ಚಾಲಿತವಾಗಿದೆ ಎಂದು ಪಿಎಂಒ ತಿಳಿಸಿದೆ.

ಇಂಡಿಯಾ ಗೇಟ್​​ನ ಬಳಿಯಿದ್ದ ಅಮರ ಜವಾನ್​ ಜ್ಯೋತಿಯನ್ನು ಯುದ್ಧ ಸ್ಮಾರಕ ಜ್ಯೋತಿಯೊಂದಿಗೆ ಶುಕ್ರವಾರ ವಿಲೀನಗೊಳಿಸಲಾಗಿದೆ. ಇದೀಗ ಆ ಅಮರ ಜವಾನ್ ಜ್ಯೋತಿ ಇದ್ದ ಜಾಗದ ಮೇಲ್ಛಾವಣಿ ಮೇಲೆ ನೇತಾಜಿ ಸುಭಾಷ್​ ಚಂದ್ರಬೋಸ್ ಅವರ ಹೊಲೋಗ್ರಾಮ್​ ಪ್ರತಿಮೆ ಅನಾವರಣಗೊಳ್ಳಲಿದೆ. ಗ್ರಾನೈಟ್​ನ ಭವ್ಯ ಮೂರ್ತಿ ಪೂರ್ಣಪ್ರಮಾಣದಲ್ಲಿ ಸಿದ್ಧ ಆಗುವವರೆಗೂ ಈ ಪ್ರತಿಮೆ ಇರಲಿದೆ.  ಅಂದಹಾಗೇ, ಸುಭಾಷ್​ ಚಂದ್ರ ಬೋಸ್​​ ಅವರ ಗ್ರಾನೈಟ್​ ಪ್ರತಿಮೆ 28 ಅಡಿ ಎತ್ತರ ಮತ್ತು ಆರು ಅಡಿ ಅಗಲ ಇರಲಿದೆ ಎಂದು ನ್ಯಾಶನಲ್​ ಮಾಡರ್ನ್​ ಆರ್ಟ್​ ಗ್ಯಾಲರಿಯ ಪ್ರಧಾನ ನಿರ್ದೇಶಕರಾದ ಅದ್ವೈತಾ ಗಡನಾಯಕ್​ ತಿಳಿಸಿದ್ದಾರೆ. ನೇತಾಜಿ ಗ್ರಾನೈಟ್​ ಪ್ರತಿಮೆಯನ್ನು ಇಂಡಿಯಾ ಗೇಟ್​ ಬಳಿ ಸ್ಥಾಪಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಟಿಎಂಸಿ ಸೇರಿ ಹಲವು ಪ್ರತಿಪಕ್ಷಗಳು ಸ್ವಾಗತಿಸಿವೆ.


Spread the love

About Laxminews 24x7

Check Also

ನೇಹಾ ಕೊಲೆ ಪ್ರಕರಣದ ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಮುಸ್ಲಿಂ ಸಮುದಾಯದಿಂದ ಪ್ರತಿಭಟನೆ

Spread the loveಹುಬ್ಬಳ್ಳಿ : ಕಾಂಗ್ರೆಸ್ ಕಾರ್ಪೊರೇಟರ್ ಪುತ್ರಿ ನೇಹಾ ಹಿರೇಮಠ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಆರೋಪಿ ಫಯಾಝ್‌ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ