Breaking News
Home / Uncategorized / (ರಂಜಾನ್) ಹಬ್ಬವನ್ನು ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ನಾಡಿನ ಮುಸಲ್ಮಾನ ಬಾಂಧವರು ಇಂದು ಸರಳವಾಗಿ ಆಚರಿಸಿದರು.

(ರಂಜಾನ್) ಹಬ್ಬವನ್ನು ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ನಾಡಿನ ಮುಸಲ್ಮಾನ ಬಾಂಧವರು ಇಂದು ಸರಳವಾಗಿ ಆಚರಿಸಿದರು.

Spread the love

ಮೂವತ್ತು ದಿನಗಳ ಉಪವಾಸ ಮತ್ತು ಪ್ರಾರ್ಥನೆ ನಂತರ ಬಂದಿರುವ ಈದ್ ಉಲ್ ಫಿತರ್ (ರಂಜಾನ್) ಹಬ್ಬವನ್ನು ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ನಾಡಿನ ಮುಸಲ್ಮಾನ ಬಾಂಧವರು ಇಂದು ಸರಳವಾಗಿ ಆಚರಿಸಿದರು. ಮುಸಲ್ಮಾನ ಬಾಂಧವರು ಶ್ರದ್ಧೆ, ನಿಷ್ಠೆ, ಭಕ್ತಿಯಿಂದ ಪ್ರತಿ ವರ್ಷ ಪವಿತ್ರ ರಂಜಾನ್ ತಿಂಗಳಿನಲ್ಲಿ ಉಪವಾಸ ಆಚರಿಸಿ ಹಬ್ಬ ಮಾಡುವುದು ವಾಡಿಕೆ.

ರಂಜಾನ್ ತಿಂಗಳಿನಲ್ಲಿ ಉಪವಾಸವೆಂದರೆ ಸೂರ್ಯೋದಯಕ್ಕೂ ಮುನ್ನ ಆಹಾರ ಸೇವನೆ ಮಾಡಿ ಬಳಿಕ 14 ಗಂಟೆಗೂ ಹೆಚ್ಚು ಕಾಲ ನೀರು ಸಹ ಕುಡಿಯದೆ ಸೂರ್ಯಾಸ್ತವಾದ ಬಳಿಕವೇ ಆಹಾರ ಸೇವನೆ ಮಾಡುವರು. ಈ ಉಪವಾಸದಲ್ಲಿ ಬಹಳ ಜಾಗ್ರತೆಯಿಂದ ಆರೋಗ್ಯ ನೋಡಿಕೊಂಡು ಉಪವಾಸ ವ್ರತ ಮಾಡಬೇಕಾಗುತ್ತದೆ. ಈ ರಂಜಾನ್ ತಿಂಗಳು ಮುಸ್ಲಿಮರಿಗೆ ಬಹಳ ಪ್ರಮುಖವಾದದ್ದು

ಉಪವಾಸ ವ್ರತ ಆಚರಣೆಯಿಂದ ಅಹ್‍ನ ಒಲುಮೆ ಗಳಿಸುವ ಪುಣ್ಯಮಯ ಕಾಲ ಇದಾಗಿದೆ. ಈ ನಂಬಿಕೆಯಿಂದ ಮುಸ್ಲಿಂ ಸಮುದಾಯದ ಬಾಂಧವರು ವ್ರತಾಚರಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವರು. ರೋಜಾ ಎಂದರೆ ಬರೀ ಉಪವಾಸ ಮಾತ್ರ ಮಾಡುವುದಲ್ಲ, ಉಪವಾಸದ ಜತೆಗೆ ಕೆಟ್ಟ ಚಟಗಳಿಂದ ದೂರವಿದ್ದು, ಪರಿಶುದ್ಧ ಮನೋಭಾವ ಹೊಂದಿರಬೇಕಾಗುತ್ತದೆ.

ಈ ಅವಧಿಯಲ್ಲಿ ಇತರರಿಗೆ ಕೇಡು ಮಾಡದೆ, ಒಳ್ಳೆಯದನ್ನು ಬಯಸುವುದು, ತನಗೆ ಸಾಧ್ಯವಿದ್ದಷ್ಟು ಉಪಯುಕ್ತ ಕೆಲಸ, ಇತರರಿಗೆ ಸಹಾಯ-ಸಹಕಾರ ಮಾಡಬೇಕಾಗುತ್ತದೆ. ಈ ತಿಂಗಳಿನಲ್ಲಿ ಪ್ರತಿ ದಿನ ಸಾಯಂಕಾಲದ ಸಮಯದಲ್ಲಿ ಮಸೀದಿಯಲ್ಲಿ ರೋಜಾ ಇಫ್ತಾರ್ ಅಂದರೆ ರೋಜಾ ಬಿಡುವ ಕಾರ್ಯಕ್ರಮವಿರುತ್ತದೆ.

ಆ ಸಮಯದಲ್ಲಿ ವಿವಿಧ ರೀತಿಯ ಹಣ್ಣುಗಳು ಸೇರಿದಂತೆ ಹಲವು ಬಗೆಯ ತಿಂಡಿ-ತಿನಿಸುಗಳನ್ನು ಉಪವಾಸ ನಿರತರು ತರುವರು, ಎಲ್ಲರೂ ಸೇರಿ ರೋಜಾ ಬಿಟ್ಟು ಆತ್ಮೀಯತೆಯಿಂದ ಸೇವನೆ ಮಾಡುವರು.

ಮುಸ್ಲಿಂ ಸಮುದಾಯದ ಬಾಂಧವರು ಈ ಪವಿತ್ರ ತಿಂಗಳಿನಲ್ಲಿ ಗತಿಸಿ ಹೋದ ಹಿರಿಯರ ಹೆಸರಿನಲ್ಲಿ ಬಟ್ಟೆ, ಹಣ, ದವಸ-ಧಾನ್ಯಗಳನ್ನು ಬಡ-ಬಗ್ಗರಿಗೆ, ಅನಾಥರಿಗೆ ದಾನ-ಧರ್ಮ ಮಾಡುವರು. ಹೀಗೆ ಮಾಡುವುದರಿಂದ ಒಂದು ರೋಜಾ ಹಾಗೂ ನಮಾಜ್ ಮಾಡಿದ ಪುಣ್ಯ ಬರುತ್ತದೆ ಎಂಬ ನಂಬಿಕೆ ಇದೆ.

ಪವಿತ್ರ ರಂಜಾನ್ ತಿಂಗಳಿನಲ್ಲಿ ಮುಸ್ಲಿಂ ಧರ್ಮದವರು ಆಚರಿಸಿಕೊಳ್ಳುವ ಉಪವಾಸ ವ್ರತವು ಕೇವಲ ಅವರ ದೇಹ ದಂಡನೆಗೆ ಮಾತ್ರ ಸೀಮಿತವೆಂದು ತಿಳಿದರೆ ತಪ್ಪಾದೀತು. ಈ ಕಾರ್ಯಕ್ಕೆ ದೇಹ ಮತ್ತು ನಂಬಿಕೆಯ ನಡುವೆ ನೇರ ಸಂಬಂಧವಿದೆ. ದೇಹವನ್ನು ಉಪವಾಸದಿಂದ ದಂಡಿಸಿ ಮನಸ್ಸನ್ನು ಹತೋಟಿಗೆ ತಂದು ಮೋಹ-ಮಮಕಾರಗಳಿಂದ ಮುಕ್ತವಾಗಿ ಮಾನಸಿಕ ಮತ್ತು ದೈಹಿಕ ಆರೋಗ್ಯ ಹೆಚ್ಚಿಸುವುದು ಎಂಬ ಅಂಶ ವೈಜ್ಞಾನಿಕವಾಗಿ ತಿಳಿದು ಬಂದಿದೆ.

ನಿಯಮಿತವಾಗಿ ಉಪವಾಸ ಮಾಡುವುದು ಇಸ್ಲಾಂ ಧರ್ಮ ವಲ್ಲದೆ ಇತರ ಧರ್ಮಗಳಲ್ಲಿಯೂ ಆಚರಣೆಯಲ್ಲಿದ್ದು, ಇದು ಶರೀರಕ್ಕೂ ಅನುಕೂಲಕರವಾಗಿದ್ದು, ಒಟ್ಟಿನಲ್ಲಿ ದೇಹ-ಮನಸ್ಸುಗಳನ್ನು ಹತೋಟಿಗೆ ತಂದು ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಸಮತೋಲನದಲ್ಲಿ ಇಟ್ಟುಕೊಳ್ಳುವುದೇ ನಿಯಮಿತವಾಗಿ ಉಪವಾಸ ಮಾಡುವುದರ ಮೂಲ ಉದ್ದೇಶವಾಗಿದೆ.

ಬದುಕಿನ ತಳಹದಿಯ ಮೇಲೆ ನಡೆಯುವ ಪವಿತ್ರ ಕಾರ್ಯ ಗಳಿಗೆ ದೇಹ ಪೂರಕವಾಗಿ ಸ್ಪಂದಿಸುತ್ತದೆ. ಹೀಗಾಗಿ ದೇಹದ ಆರೋಗ್ಯವು ಸಮತೋಲನ ವಾಗುತ್ತದೆ, ದೇಹವೂ ಶುದ್ಧ ವಾಗುವುದು. ಹಬ್ಬದ ದಿನ ಮುಸಲ್ಮಾನ ಬಾಂಧವರು ಯಾವುದೇ ಭೇದ-ಭಾವವಿಲ್ಲದೆ ಪರಸ್ಪರ ಬಿಗಿದಪ್ಪಿ ಈದ್ ಮುಬಾರಕ್‍ಎಂದು ಹೇಳುತ್ತಾ ಶುಭಾಶಯ ವಿನಿಮಯ ಮಾಡಿಕೊಳ್ಳುವರು. ನಾಡಿನ ಮುಸ್ಲಿಂ ಸಮುದಾಯದ ಬಾಂಧವರಿಗೆ ರಂಜಾನ್ ಹಬ್ಬದ ಹಾರ್ದಿಕ ಶುಭಾಶಯಗಳು.


Spread the love

About Laxminews 24x7

Check Also

ನೀರಿಲ್ಲದಿದ್ದರೇನು..? ಬಿಯರ್ ಇದೆಯಲ್ಲ.. : ಬೆಂಗಳೂರಲ್ಲಿ ಬಿಯರ್‌ಗೆ ಫುಲ್ ಡಿಮ್ಯಾಂಡ್!

Spread the loveಬೆಂಗಳೂರು : ರಾಜ್ಯದಲ್ಲಿ ಬಿಸಿಲಿನ ತಾಪಮಾನ ದಿನದಿಂದ ಹೆಚ್ಚಾಗುತ್ತಿದ್ದು, ಬಿಯರ್‌ಗೂ ಬೇಡಿಕೆ ಹೆಚ್ಚಾಗಿದೆ. ಮದ್ಯಪ್ರಿಯರು ಹಾಟ್​ ಡ್ರಿಂಕ್ಸ್​ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ