ಬೆಳಗಾವಿ : ಜಿಲ್ಲೆಯ ಘಟಪ್ರಭಾ ನದಿಯಲ್ಲಿ ಸೋಮವಾರ 4 ಮೊಸಳೆ ಮರಿಗಳು ಪ್ರತ್ಯಕ್ಷವಾಗಿವೆ. ಇದರಿಂದ ಜನರು ಆಂತಕಗೊಂಡಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಮೊಸಳೆ ಮರಿ ತಾಯಿ ಹುಡುಕಾಟದಲ್ಲಿದ್ದಾರೆ.
ಬೆಳಿಗ್ಗೆ ಯುವಕರು ಶಿವಗೊಂಡ ಅಂಗಡಿ ನದಿಗೆ ಈಜಲು ಹೋಗಿದ್ದಾರೆ. ಈ ಸಂದರ್ಭದಲ್ಲಿ ಮೊಸಳೆ ಮರಿಗಳು ಪ್ರತ್ಯಕ್ಷವಾಗಿವೆ. ಬಳಿಕ 2 ಮರಿಗಳನ್ನು ಸಂರಕ್ಷಿಸುವ ಮೂಲಕ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದಿರುವ ಅರಣ್ಯ ಇಲಾಖೆ ಸಿಬ್ಬಂದಿ ಹನುಮಂತ ಹನ್ನಮಣ್ಣವರ ಮೊಸಳೆ ಮರಿಗಳು ವಶಕ್ಕೆ ಪಡೆದಿದ್ದಾರೆ.
ಪ್ರವಾಹ ಸಂದರ್ಭದಲ್ಲಿ ಜಿಲ್ಲೆಯ ಕೆಲವೊಂದು ಪ್ರಮುಖ ನದಿಗಳಲ್ಲಿ ಮೊಸಳೆಗಳು ಕಂಡು ಬರುತ್ತಿವೆ. ಜನರು ಆತಂಕಕ್ಕೆ ಒಳಗಾಗಬಾರದು. ಇಲಾಖೆಯಿಂದ ಮುಂಜಾಗೃತ ಕ್ರಮ ಕೈಗೊಳ್ಳಲಾಗಿದೆ. ಜತೆಗೆ ಜನರು ಸಹ ನದಿಗೆ ಇಳಿಯುವಾಗ ಎಚ್ಚರಿಕೆಯಿಂದ ಇಳಿಯಬೇಕು. ಮೊಸಳೆ ತಾಯಿ ಇರಬಹುದು ಎಂಬ ಅನುಮಾನ ಇರುವುದರಿಂದ ಹುಡುಕಾಟ ನಡೆಸಲಾಗುತ್ತಿದೆ ಎಂದು ತಿಳಿಸಿದರು.