Breaking News
Home / new delhi / ಹುಕ್ಕೇರಿ: ಯುವಕರು ವಿದ್ಯಾಭ್ಯಾಸ ಹಾಗೂ ಕ್ರೀಡೆ ಜೊತೆಗೆ ಸಮಾಜಸೇವೆ ಮಾಡಲು ಮುಂದಾಗಬೇಕು ಎಂದು ಯುವ ನಾಯಕ ರಾಹುಲ್‌ ಜಾರಕಿಹೊಳಿ ತಿಳಿ ಹೇಳಿದರು.

ಹುಕ್ಕೇರಿ: ಯುವಕರು ವಿದ್ಯಾಭ್ಯಾಸ ಹಾಗೂ ಕ್ರೀಡೆ ಜೊತೆಗೆ ಸಮಾಜಸೇವೆ ಮಾಡಲು ಮುಂದಾಗಬೇಕು ಎಂದು ಯುವ ನಾಯಕ ರಾಹುಲ್‌ ಜಾರಕಿಹೊಳಿ ತಿಳಿ ಹೇಳಿದರು.

Spread the love

 

ಹುಕ್ಕೇರಿ: ಯುವಕರು ವಿದ್ಯಾಭ್ಯಾಸ ಹಾಗೂ ಕ್ರೀಡೆ ಜೊತೆಗೆ ಸಮಾಜಸೇವೆ ಮಾಡಲು ಮುಂದಾಗಬೇಕು ಎಂದು ಯುವ ನಾಯಕ ರಾಹುಲ್‌ ಜಾರಕಿಹೊಳಿ ತಿಳಿ ಹೇಳಿದರು.

ಹುಕ್ಕೇರಿ ತಾಲೂಕಿನ ಗುಮಚಿನಮರಡಿ ಗ್ರಾಮದಲ್ಲಿ ಕಾಲೇಜು ಶಿಕ್ಷಣ ಇಲಾಖೆ ,ಸರ್ಕಾರಿ ಪ್ರಥಮ ದರ್ಜೆ ಕಾಲೇಜು ,ಪಾಶ್ಚಾಪುರ ಕಾಲೇಜಿನ ಎನ್.ಎಸ್.ಎಸ್ ಘಟಕದ ವತಿಯಿಂದ ಗುಮಚನಮರಡಿ ಗ್ರಾಮದ ಕಮಲಾದೇವಿ ದೇವಾಲಯದ ಅವರಣದಲ್ಲಿ ನಡೆದ ವಿಶೇಷ ವಾರ್ಷಿಕ ಶಿಬಿರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಕಾಲೇಜಿನ ಪ್ರಾಂಶುಪಾಲರಾದ ಜಗದೀಶ್ ಎಸ್.ಎಸ್. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಶಿಬಿರಾಧಿಕಾರಿಗಳಾದ ಪ್ರೊ. ಯಲ್ಲಪ್ಪ ಮುಗಳಿಹಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಅತಿಥಿಗಳಾಗಿ ಗ್ರಾಮದ ಯುವಕರು ಸಮಾಜಸೇವಕರು ಶಾಸಕರ ಆಪ್ತ ಸಹಾಯಕರಾದ ಫಜಲ್ ಮಕಾನದಾರ ಆಗಮಿಸಿದ್ದರು.

ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಭೀಮಶಿ ನಿಪನ್ಯಾಳ,ಸಾಬುರಾವ್ ದೇಸಾಯಿ, ಪಾಶ್ಚಾಪೂರ ಗ್ರಾಪಂ ಅಧ್ಯಕ್ಷೆ ಸರಸ್ವತಿ ಕುರುಬರ, ಉಪಾಧ್ಯಕ್ಷ ಜಾಕೀರ ನದಾಫ್, ಬಸವರಾಜ್ ನಾಯಕ್,ಸಿದ್ದಪ್ಪಾ ಚೆನ್ನಿಕೊಪ್ಪಿ, ಸಿದ್ದಪ್ಪ ನಾಯಕ್ ,ರಾಮಪ್ಪ ಸನದಿ ,ಗುರುಸಿದ್ಧ ಪಾಟೀಲ್ ಗ್ರಾಮದ ಹಿರಿಯರು ಹಾಗೂ ಶಿಬಿರಾರ್ಥಿಗಳು ಕಾಲೇಜಿನ ಪ್ರಾಧ್ಯಾಪಕರು ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕ ಎನ್. ಬಿ. ಭೂಮಣ್ಣವರ್ ನಿರ್ವಹಿಸಿದರು. ಡಾ. ಎಸ್. ಜಿ. ಸಜ್ಜನ್ ವಂದಿಸಿದರು.


Spread the love

About Laxminews 24x7

Check Also

ಕನಕದಾಸರ ಚರಿತ್ರೆ ಹಿಂದೆ ಇದ್ದಂತೆಯೇ ಪ್ರಕಟಿಸಬೇಕು: C.M. ಬೊಮ್ಮಾಯಿ

Spread the love ಬೆಂಗಳೂರು: ‘ಪಠ್ಯಪುಸ್ತಕದಲ್ಲಿ ದಾಸ ಶ್ರೇಷ್ಠ ಕನಕದಾಸರ ಜೀವನ ಚರಿತ್ರೆಯನ್ನು ಈ ಹಿಂದೆ ಇದ್ದಂತೆಯೇ ಮತ್ತೆ ಪ್ರಕಟಿಸಬೇಕು’ ಎಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ