ನವದೆಹಲಿ: ರಾಜ್ಯದಲ್ಲಿ ಹಲವು ಬಾರಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ, ರಾಹುಲ್ ಗಾಂಧಿ ಈ ಬಗ್ಗೆ ಒಮ್ಮೆಯಾದ್ರೂ ಮಾತನಾಡಿದ್ದಾರಾ? ಯಾಕೆ ಮಾತನಾಡಿಲ್ಲ ಎಂದು ಸಂಸದ ಗೋವಿಂದ ಕಾರಜೋಳ ಪ್ರಶ್ನೆ ಮಾಡಿದ್ದಾರೆ.
ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ರಾಹುಲ್ ಗಾಂಧಿ ಅವರ ʻಮೂರ್ಖ ಮತ್ತು ಅಂಧಭಕ್ತʼ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ. ಲೋಕಸಭೆ ಒಂದು ಸಾಂವಿಧಾನಿಕ ಸಂಸ್ಥೆ, ಅದರ ಘನತೆ ಗೌರವ ಎತ್ತಿ ಹಿಡಿಯಬೇಕು. ಇದು ಎಲ್ಲರ ಕರ್ತವ್ಯ, ಕಳೆದ ಒಂದು ವಾರದಿಂದ. ವಿಪಕ್ಷಗಳು ಗದ್ದಲ ಮಾಡುತ್ತಿವೆ. ರಾಹುಲ್ ಗಾಂಧಿ ಜೋಕರ್ ಥರಕ್ಕೆ ವರ್ತಿಸುತ್ತಿದ್ದಾರೆ ಎಂದು ಕುಟುಕಿದ್ದಾರೆ.
2012 ರಲ್ಲಿ ಪಿಯು ಪತ್ರಿಕೆ ಸೋರಿಕೆಯಾಯಿತು, 2014 ಸಿಓಡಿ ವರದಿ ಬಂತು. 2016 ರಲ್ಲೂ ಪ್ರಶ್ನೆ ಪತ್ರಿಕೆ ಸೋರಿಕೆಯಾಯಿತು. ಹಲವು ಬಾರಿ ರಾಜ್ಯದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದೆ. ಈ ಬಗ್ಗೆ ರಾಹುಲ್ ಗಾಂಧಿ ಯಾಕೆ ಮಾತನಾಡಲ್ಲ? ಕಾಂಗ್ರೆಸ್ ನಾಯಕರು ಈ ಬಗ್ಗೆ ಮಾತನಾಡುವುದಿಲ್ಲ, ಪ್ರಶ್ನೆ ಪತ್ರಿಕೆ ವಿಚಾರದಲ್ಲಿ ಸರಿಯಾಗಿ ಕಾಂಗ್ರೆಸ್ ಸರ್ಕಾರ ಕಾನೂನು ಹೋರಾಟ ಮಾಡಲಿಲ್ಲ. ಇದರಿಂದ ಆರೋಪಿಗಳು ಪಾರಾದ್ರು, 2018-19 ರಲ್ಲಿ ಪರಮೇಶ್ವರ್ ಪಿಎ ಆತ್ಮಹತ್ಯೆ ಮಾಡಿಕೊಂಡರು ಇದರ ಬಗ್ಗೆ ರಾಹುಲ್ ಗಾಂಧಿ ಮಾತನಾಡಬೇಕಿತ್ತು ಎಂದು ಹೇಳಿದ್ದಾರೆ.
ನೀಟ್ ನಿಂದ ವೈದ್ಯಕೀಯ ಸೀಟುಗಳ ಮಾರಾಟ ನಿಯಂತ್ರಣಕ್ಕೆ ಬಂದಿದೆ. ಮೋದಿ ಅವರು ನೀಟ್ ಪರೀಕ್ಷೆ ಆರಂಭಿಸಿದ ಮೇಲೆ ದಲಿತ ಹಿಂದುಳಿದ ವರ್ಗಗಳಿಗೆ ಅವಕಾಶ ಸಿಕ್ಕಿದೆ. ದರ ಶ್ಲಾಘಿಸುವ ಬದಲು ವಿರೋಧ ಮಾಡುತ್ತಿದ್ದಾರೆ, ಸರ್ಕಾರ ತಪ್ಪು ಮಾಡಿದ್ದರೆ ಲೋಕಸಭೆಯಲ್ಲಿ ವಿಪಕ್ಷ ನಾಯಕನಾಗಿ ಮಾತನಾಡಬೇಕು, ಅದರ ಬದಲು ಜೋಕರ್ ರೀತಿಯಲ್ಲಿ ಅಸಾಂವಿಧಾನಿಕವಾಗಿ ಮಾತನಾಡುವುದಾ? ಎಂದು ಕಿಡಿ ಕಾರಿದ್ದಾರೆ.
Laxmi News 24×7