ಬೆಂಗಳೂರು: ಚಿನ್ನ ಕಳ್ಳಸಾಗಣೆ ಪ್ರಕರಣದ ತನಿಖೆಯನ್ನು ಕೇಂದ್ರ ತನಿಖಾ ದಳ (ಸಿಬಿಐ) ಅಧಿಕಾರಿಗಳು ಕೈಗೆತ್ತಿಕೊಂಡಿದ್ದು, ಬೆಂಗಳೂರಿನಲ್ಲಿರುವ ರನ್ಯಾ ರಾವ್‌ರ ನಿವಾಸ, ಅವರ ವಿವಾಹ ಜರುಗಿದ ಹೋಟೆಲ್, ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಕಚೇರಿಗಳಲ್ಲಿ ಪರಿಶೀಲನೆ ನಡೆಸಿದ್ದಾರೆ. ಚಿನ್ನ ಕಳ್ಳಸಾಗಣೆ ಪ್ರಕರಣದ ಆರೋಪಿ ರನ್ಯಾ ರಾವ್ ಜೊತೆಗೆ ಸಂಪರ್ಕ ಹೊಂದಿರುವವರ ಕುರಿತು ಸಾಕ್ಷ್ಯಾಧಾರಗಳನ್ನು ಕಲೆ ಹಾಕುವುದರ ಭಾಗವಾಗಿ ಅವರ ವಿವಾಹ ಸಮಾರಂಭದಲ್ಲಿ ಭಾಗಿಯಾಗಿದ್ದ ಅತಿಥಿಗಳು, ಬಂದಿರುವ ದುಬಾರಿ ಉಡುಗೊರೆಗಳು ಕುರಿತು …
Read More »ಸಿಡಿಮದ್ದು ಜಗಿದು ಸ್ಫೋಟ: ಹಸುವಿನ ಬಾಯಿ ಛಿದ್ರ
ಚಾಮರಾಜನಗರ: ಹಂದಿಗಳ ಬೇಟೆಗೆ ಇರಿಸಿದ್ದ ಸಿಡಿಮದ್ದು ಜಗಿದು ಹಸುವಿನ ಬಾಯಿ ಛಿದ್ರವಾದ ದಾರುಣ ಘಟನೆ ಹನೂರು ತಾಲೂಕಿನ ಬೂದಬಾಳು ಗ್ರಾಮದಲ್ಲಿ ನಡೆದಿದೆ. ಜಮೀನಿನಲ್ಲಿ ಮೇವು ಮೇಯುತಿದ್ದಾಗ ಈ ಘಟನೆ ನಡೆದಿದೆ. ಮಲ್ಲಯ್ಯ ಎಂಬವರ ಹಸು ಇದಾಗಿದ್ದು, ಅದರ ಮೂಕ ರೋದನೆ ಮನಕಲಕುವಂತಿತ್ತು. ಗ್ರಾಮದ ಆಂಜನೇಯಸ್ವಾಮಿ ದೇವಾಲಯದ ಬಳಿ ಜಾನುವಾರುಗಳು ಮೇವು ಮೇಯಲು ತೆರಳುತ್ತಿದ್ದ ವೇಳೆ ಕಾಡುಹಂದಿ ಬೇಟೆಗೆ ಅಡಗಿಸಿಟ್ಟಿದ್ದ ಸಿಡಿಮದ್ದು ಜಗಿದು ಸ್ಫೋಟಗೊಂಡಿದೆ. ಸ್ಫೋಟದ ರಭಸಕ್ಕೆ ಹಸುವಿನ ಮುಖ ಛಿದ್ರವಾಗಿದೆ ಎಂದು …
Read More »ಕಟ್ಟಡ ಕಾರ್ಮಿಕರು ಕೆಲಸ ಮಾಡುವ ಸ್ಥಳಕ್ಕೇ ಹೋಗಿ ಆರೋಗ್ಯ ತಪಾಸಣೆ,
ಬೆಂಗಳೂರು: ಕಟ್ಟಡ ಕಾರ್ಮಿಕರು ಕೆಲಸ ಮಾಡುವ ಸ್ಥಳಕ್ಕೇ ಹೋಗಿ ಆರೋಗ್ಯ ತಪಾಸಣೆ, ಚಿಕಿತ್ಸೆ ಕೊಡುವ 135 ಸಂಚಾರಿ ಆಸ್ಪತ್ರೆಗಳನ್ನು ಸಿಎಂ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಿದರು. ವಿಧಾನಸೌಧದ ಮುಂದೆ ನಡೆದ ಕಾರ್ಯಕ್ರಮದಲ್ಲಿ ಕಾರ್ಮಿಕ ಇಲಾಖೆ ವತಿಯಿಂದ ಕಟ್ಟಡ ಕಾರ್ಮಿಕರಿಗಾಗಿ ಮಾತ್ರ ಸಜ್ಜುಗೊಳಿಸಿರುವ 135 “ಸಂಚಾರಿ ಆರೋಗ್ಯ ಘಟಕ” ಆ್ಯಂಬುಲೆನ್ಸ್ ವಾಹನಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಸಿಎಂ, ಬಸವಣ್ಣನವರ ಕಾಯಕ – ದಾಸೋಹ ಪರಿಕಲ್ಪನೆಯಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ತಿಳಿಸಿದರು. ಸಮಾಜದಲ್ಲಿ ದುಡಿಯುವ ವರ್ಗ …
Read More »ಬೆಳಗಾವಿ ತಾನಾಜೀ ಗಲ್ಲಿ ರೇಲ್ವೆ ಗೇಟ್ ಸಂಪೂರ್ಣವಾಗಿ ಬಂದ್….!!!
ಬೆಳಗಾವಿ ತಾನಾಜೀ ಗಲ್ಲಿ ರೇಲ್ವೆ ಗೇಟ್ ಸಂಪೂರ್ಣವಾಗಿ ಬಂದ್….!!! ಸ್ಥಳೀಯರಲ್ಲಿ ಮೂಡಿದ ಸಂಚಾರದ ಸಮಸ್ಯೆ…. ಬೆಳಗಾವಿ ತಾನಾಜೀ ಗಲ್ಲಿ ರೇಲ್ವೆ ಗೇಟ್ ಸಂಪೂರ್ಣವಾಗಿ ಬಂದ್….!!! ಸ್ಥಳೀಯರಲ್ಲಿ ಮೂಡಿದ ಸಂಚಾರದ ಸಮಸ್ಯೆ…. ಕಪಿಲೇಶ್ವರ ಮೇಲ್ಸೇತುವೆ ಮಾರ್ಗವಾಗಿ ಸಂಚರಿಸುವ ಪರ್ಯಾಯ ಶಾಲಾ ವಿದ್ಯಾರ್ಥಿಗಳಿಗೆ ತೊಂದರೆ ನೈಋತ್ಯ ರೇಲ್ವೆಯ ವತಿಯಿಂದ ಬೆಳಗಾವಿಯ ತಾನಾಜೀ ಗಲ್ಲಿಯ ರೇಲ್ವೆ ಗೇಟ್ ನಿನ್ನೆಯಿಂದ ಬಂದ್ ಮಾಡಲಾಗಿದ್ದು, ಈ ಮಾರ್ಗವಾಗಿ ಸಂಚರಿಸುವ ಜನರಲ್ಲಿ ಗೊಂದಲ ಉಂಟಾಗಿದೆ. ಬೆಳಗಾವಿಯ ತಾನಾಜೀ ಗಲ್ಲಿಯ …
Read More »ರಂಗಪಂಚಮಿ ವೇಳೆ ಅಶಾಂತಿ ಮೂಡಿಸಲು ಯತ್ನಿಸಿದರೇ ಹುಷಾರ್: ಕಮಿಷನರ್
ರಂಗಪಂಚಮಿ ವೇಳೆ ಅಶಾಂತಿ ಮೂಡಿಸಲು ಯತ್ನಿಸಿದರೇ ಹುಷಾರ್: ಕಮಿಷನರ್ ರಂಗಪಂಚಮಿ ಹಬ್ಬದ ಹಿನ್ನೆಲೆಯಲ್ಲಿ ಇಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಹುಬ್ಬಳ್ಳಿಯಲ್ಲಿ ಕಾಮದೇವರನ್ನು ಪ್ರತಿಸ್ಥಾಪನೆ ಮಾಡುವ ಸ್ಥಳಗಳಿಗೆ ಭೇಟಿ ನೀಡಿ ಶಾಂತಿಯುತ ಹಬ್ಬ ಆಚರಣೆಗೆ ಕರೆ ಕೊಟ್ಟರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹು-ಧಾ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಈ ಬಾರಿ ಹೋಳಿಹಬ್ಬವನ್ನು ಧಾರವಾಡದಲ್ಲಿ ಮಾರ್ಚ್ 15, ಹುಬ್ಬಳ್ಳಿಯಲ್ಲಿ 18 ನೇ ತಾರೀಖು ಆಚರಣೆ ಮಾಡಲಾಗುತ್ತಿದೆ. ಇದಕ್ಕಾಗಿ ಹೊರ …
Read More »ಯುವಜನರನ್ನು ಸನ್ಮಾರ್ಗದತ್ತ ತರುವ ಕಾವ್ಯ ವಾಚಿಸಿದ ಕೋಟಾರಗಸ್ತಿ
*ರಾಷ್ಟ್ರ ರಾಜಧಾನಿಯಲ್ಲಿ ರಾಮಾಯಣ ರಚನೆಯ ಪ್ರಸಂಗ ನೆನೆದ ರವಿ ಬೆಳಗಾವಿ: ಕೇಂದ್ರ ಸಾಂಸ್ಕೃತಿಕ ಸಚಿವಾಲಯದ ಸಹಯೋಗದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯು ನವದೆಹಲಿಯಲ್ಲಿ ಆಯೋಜಿಸಿದ್ದ ಸಾಹಿತ್ಯ ರಂಗದಲ್ಲೇ ಪ್ರತಿಷ್ಠಿತ ಕಾರ್ಯಕ್ರಮವಾದ ‘ಏಷ್ಯಾದ ಅತಿದೊಡ್ಡ ಸಾಹಿತ್ಯೋತ್ಸವ’ಕ್ಕೆ ಬೆಳಗಾವಿಯ ಹಿರಿಯ ಸಾಹಿತಿ, ಕವಿ ಮತ್ತು ನಿವೃತ್ತ ಅಧಿಕಾರಿ ರವಿ ಕೋಟಾರಗಸ್ತಿ (ಎಸ್.ಸಿ.ಕೋಟಾರಗಸ್ತಿ) ಪಾಲ್ಗೊಂಡರು. ಮಾರ್ಚ್ 8ರಂದು ಖ್ಯಾತ ಹಿಂದಿ ಸಾಹಿತಿ ವಿನೋದ ಜೋಶಿ ಅಧ್ಯಕ್ಷತೆಯಲ್ಲಿ ನಡೆದ ‘ಎಸೆಂಬಲ್ ಆಫ್ ಇಮೇಜ್ ರಿದಮ್ ಆ್ಯಂಡ್ ಬ್ಯೂಟಿ: …
Read More »ನಗರಸೇವಕ ಹನುಮಂತ ಕೊಂಗಾಲಿಯವರಿಂದ ಗಾರ್ಡನ್ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ
ನಗರಸೇವಕ ಹನುಮಂತ ಕೊಂಗಾಲಿಯವರಿಂದ ಗಾರ್ಡನ್ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ವಿವಿಧ ಬಡಾವಣೆಗಳಲ್ಲಿ ಗಾರ್ಡನ್ ಅಭಿವೃದ್ದಿ ಕಾಮಗಾರಿ ಉದ್ಘಾಟನೆ ಕುಲಕರ್ಣಿ ಲೇಔಟ್ ಗಾರ್ಡನ್ (18,ಲಕ್ಷ )ಕಾಮಗಾರಿ ಉದ್ಘಾಟನೆ ಹಾಗೂ ರೇವನೂ ಕಾಲನಿ (20 ಲಕ್ಷ) ಅಭಿವೃದ್ದಿ ಕಾಮಗಾರಿ ಚಾಲನೆ ನೀಡಲಾಯಿತು ಮಹಾನಗರ ಪಾಲಿಕೆ ( ಶ್ರೀ ಹಣಮಂತ ಕೊಂಗಾಲಿ ನಗರ್ ಸೇವಕರ) 38 ಲಕ್ಷ ಅನುದಾನದಲ್ಲಿ ಗಾರ್ಡನ್ ಅಭಿವೃದ್ಧಿ ಕಾಮಗಾರಿಯನ್ನು ಪೂಜೆ ಮಾಡಲಾಯಿತು, ಶ್ರೀ ಹಣಮಂತ ಕೊಂಗಾಲಿ, ನಗರ ಸೇವಕರು,ನನ್ನೊಂದಿಗೆ ಕುಲಕರ್ಣಿ …
Read More »ಬಿಆರ್‌ಟಿಎಸ್ ರಸ್ತೆ ಡಿವೈಡರ್ ಗ್ರೀಲ್ ಮುರಿದು ಬಿದ್ದರು ತಿರುಗಿ ನೋಡದ BRTS ಅಧಿಕಾರಿಗಳು
ಬಿಆರ್‌ಟಿಎಸ್ ರಸ್ತೆ ಡಿವೈಡರ್ ಗ್ರೀಲ್ ಮುರಿದು ಬಿದ್ದರು ತಿರುಗಿ ನೋಡದ BRTS ಅಧಿಕಾರಿಗಳು… ಅಧಿಕಾರಿಗಳ ವರ್ತನೆಗೆ ಬೇಸತ್ತು ಗ್ರೀಲ್ ಸರಿ ಮಾಡಿದ ಸಂಚಾರಿ ಪೊಲೀಸರು. ಹುಬ್ಬಳ್ಳಿ ಧಾರವಾಡ ಅವಳಿನಗರದ ಜನತೆಗೆ ತ್ವರಿತ ಸಂಚಾರ ಸೇವೆ ನೀಡುವ ಉದ್ದೇಶದಿಂದ ಆರಂವಾಗಿರೋ ಬಿಆರ್‌ಟಿಎಸ್ ಯೋಜನೆಯ ಸಂಚಾರ ಸೇವೆಯು, ತ್ವರಿತ ಸಂಚಾರ ಸೇವೆಯಲ್ಲಿ ಸುದ್ದಿಯಾಗುವುದರ ಬದಲು ಅವಾಂತರಗಳಿಂದಲ್ಲೇ ಹೆಚ್ಚು ಸುದ್ದಿಯಾಗುತ್ತಾ ಬಂದಿದೆ. ಈಗ ಮತ್ತೊಂದು ಅವಾಂತರದಿಂದ ಬಿಆರ್‌ಟಿಎಸ್ ಸುದ್ದಿಯಲ್ಲಿದೆ. ಧಾರವಾಡದಲ್ಲಿ ಬಿಆರಟಿಎಸ್ ಮಾರ್ಗದ ರಸ್ತೆ …
Read More »ಡಾ. ಬಿ ಆರ್ ಅಂಬೇಡ್ಕರ ಬಾಲಕಿಯರ ವಸತಿ ಶಾಲೆಯ ಶಂಕುಸ್ಥಾಪನೆ
ಡಾ. ಬಿ ಆರ್ ಅಂಬೇಡ್ಕರ ಬಾಲಕಿಯರ ವಸತಿ ಶಾಲೆಯ ಶಂಕುಸ್ಥಾಪನೆ ಚಿಕ್ಕೋಡಿ-“ಚಿಕ್ಕೋಡಿ-ಸದಲಗಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಹಾಲಕ್ಷ್ಮೀ ಏತ ನೀರಾವರಿ ಯೋಜನೆಯನ್ನು ಇನ್ನು ಎರಡು ವರ್ಷಗಳಲ್ಲಿ ಪೂರ್ಣಗೊಳಿಸಿ, 17 ಗ್ರಾಮಗಳ 16 ಸಾವಿರ ಎಕರೆ ಜಮೀನಿಗೆ ನೀರು ಹರಿಸಲಾಗುವುದು. ರೈತ ಬಾಂಧವರು ಸಹಕರಿಸಬೇಕು” ಎಂದು ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ ಹೇಳಿದರು . ತಾಲ್ಲೂಕಿನ ಶಿರಗಾಂವ ಗ್ರಾಮದಲ್ಲಿ 22 ಕೋಟಿ ರೂ. ಮೊತ್ತದ ಡಾ. ಬಿ …
Read More »ಸ್ಥಳೀಯ ನಿರಾಶ್ರಿತರ ಪರಿಹಾರ ಕೇಂದ್ರ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಣೆ: ಡಿಸಿ ಟಿ.ಭೂಬಾಲನ್ ಶ್ಲಾಘನೆ
ಸ್ಥಳೀಯ ನಿರಾಶ್ರಿತರ ಪರಿಹಾರ ಕೇಂದ್ರ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಣೆ: ಡಿಸಿ ಟಿ.ಭೂಬಾಲನ್ ಶ್ಲಾಘನೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ವಿಜಯಪುರ ನಗರದಲ್ಲಿ ಸ್ಥಳೀಯ ನಿರಾಶ್ರಿತರ ಕೇಂದ್ರವು ಅಚ್ಚುಕಟ್ಟಾಗಿ ಕಾರ್ಯನಿರ್ವಾಹಿಸುತ್ತಿದೆ ಎಂದು ವಿಜಯಪುರ ಜಿಲ್ಲಾಧಿಕಾರಿ ಟಿ.ಭೂಬಾಲನ್ ಪ್ರಶಂಸೆ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ಕಚೇರಿ ಎದುರ ಸ್ಥಳೀಯ ನಿರಾಶ್ರಿತರ ಪರಿಹಾರ ಕೇಂದ್ರದ ವತಿಯಿಂದ ಬಿಕ್ಷಾಟನೆ ನಿರ್ಮೂಲನೆಗಾಗಿ ಜಾಗೃತಿ ಮೂಡಿಸುವ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದರು. ವಿಜಯಪುರ ಹಾಗೂ ಬಾಗಲಕೋಟ ಜಿಲ್ಲೆಗಳಲ್ಲಿ ಭಿಕ್ಷಾಟನೆ ನಿರ್ಮೂಲನೆಗಾಗಿ ಜಾಗೃತಿ …
Read More »
Laxmi News 24×7