ಶಿಕಾರಿಪುರ: ತಾಲ್ಲೂಕಿನ ಮದಗಹಾರನಹಳ್ಳಿ ಗ್ರಾಮದ ಸಮೀಪ ಅರಣ್ಯ ಇಲಾಖೆ ಸಂಗ್ರಹಿಸಿಟ್ಟಿದ ಬೋನಿನಲ್ಲಿ ಬುಧವಾರ ಮುಂಜಾನೆ ಚಿರತೆ ಸೆರೆ ಸಿಕ್ಕಿದೆ. ಗ್ರಾಮದ ಸುತ್ತಲೂ ಚಿರತೆ ಓಡಾಡುತ್ತಿದೆ ಎಂಬ ಮಾಹಿತಿಯನ್ನು ಕೆಲವು ದಿನಗಳ ಹಿಂದೆ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ನೀಡಿದ್ದರು. ಗ್ರಾಮಸ್ಥರ ಮಾಹಿತಿ ಆಧಾರದ ಮೇಲೆ ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ ಗೋಪ್ಯಾನಾಯ್ಕ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಅಧಿಕಾರಿಗಳು ಚಿರತೆ ಚಲನವಲನ ಗಮನಿಸಿ ಎರಡು ದಿನಗಳ ಹಿಂದೆ ಗ್ರಾಮ ಸಮೀಪವೇ ನಾಯಿ …
Read More »ಸದನದಲ್ಲಿ ಆಡಳಿತ ಪಕ್ಷದ ಶಾಸಕರಿಂದಲೇ ಮೀಸಲಾತಿ ಕದನ
ಬೆಂಗಳೂರು, ಮಾ.10- ಲಿಂಗಾಯತ ಪಂಚಮಸಾಲಿ ಸಮುದಾಯವನ್ನು 2ಎಗೆ ಸೇರ್ಪಡೆ ಮಾಡುವ ಕುರಿತಾಗಿ ಆಡಳಿತ ಪಕ್ಷದ ಸದಸ್ಯರ ನಡುವೆಯೇ ವಾಗ್ವಾದ ನಡೆಯಿತು. ಶಾಸಕ ಬಸವನಗೌಡ ಪಾಟೀಲ್ ವಿಷಯ ಪ್ರಸ್ತಾಪಿಸಿ ನಾವು ಅನೇಕ ದಿನಗಳಿಂದ ಮೀಸಲಾತಿ ಗಾಗಿ ಹೋರಾಟ ಮಾಡುತ್ತಿದ್ದೇವೆ. ಸರ್ಕಾರದಿಂದ ನಮಗೆ ಯಾವುದೇ ರೀತಿಯ ಸ್ಪಷ್ಟ ಭರವಸೆ ಸಿಗುತ್ತಿಲ್ಲ. ಮೀಸಲಾತಿ ಕೊಡುತ್ತೀರೋ, ಇಲ್ಲವೋ ಎಂಬುದನ್ನು ಸದನದಲ್ಲೇ ಸ್ಪಷ್ಟವಾಗಿ ತಿಳಿಸಿ ಎಂದು ಒತ್ತಾಯಿಸಿದರು. ಸದನದಲ್ಲಿ ಇಂದು ಚರ್ಚೆಗೆ ಅವಕಾಶ ಕೊಡುತ್ತೇವೆ ಎಂದಿದ್ದೀರಿ. ಮುಖ್ಯಮಂತ್ರಿಗಳು …
Read More »ರಮೇಶ್ ಜಾರಕಿಹೊಳಿ ಸಿಡಿ ಬಗ್ಗೆ ಹೊಸ ಬಾಂಬ್ ಸಿಡಿಸಿದ ಸಚಿವ ಸೋಮಶೇಖರ್
ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎಂದು ಮಾಜಿ ಸಚಿವ ಎಸ್.ಟಿ.ಸೋಮಶೇಖರ್ ನೇರವಾಗಿ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್.ಟಿ.ಸೋಮಶೇಖರ್, ರಮೇಶ್ ಜಾರಕಿಹೊಳಿ ಸಿಡಿ ಮಾಡಿದ್ದು ಕಾಂಗ್ರೆಸ್ ನವರೇ. ನಾನೂ ಕೂಡ ಕಾಂಗ್ರೆಸ್ ನಲ್ಲಿ 20 ವರ್ಷಗಳ ಕಾಲ ಇದ್ದೆ. ಹಾಗಾಗಿ ಕಾಂಗ್ರೆಸ್ ನವರು ಏನೆಲ್ಲಾ ಮಾಡುತ್ತಾರೆ ಎಂಬುದು ನನಗೂ ಗೊತ್ತು. ಇಂಥ ಮನೆ ಹಾಳ ಕೆಲಸ ಮಾಡುವುದು ಅವರೇ ಎಂದು ಹೇಳಿದ್ದಾರೆ. ಸಿಡಿ ಕೇಸ್ ನ್ನು …
Read More »ರಮೇಶ್ ಜಾರಕಿಹೊಳಿ ಖಾತೆಯ ಮೇಲೆ ಎಲ್ಲರ ಕಣ್ಣು..
ರಮೇಶ ಜಾರಕಿಹೊಳಿಯಿಂದ ತೆರವಾದ ಜಲಸಂಪನ್ಮೂಲ ಖಾತೆ ಮೇಲೆ ಹಲವು ಸಚಿವರ ಕಣ್ ಬೆಂಗಳೂರು: ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ರಾಜೀನಾಮೆಯಿಂದ ತೆರವಾಗಿರುವ ಜಲಸಂಪನ್ಮೂಲ ಖಾತೆ ಮೇಲೆ ಹಲವು ಸಚಿವರು ಕಣ್ಣಿಟ್ಟಿದ್ದಾರೆ. ರಮೇಶ್ ಜಾರಕಿಹೊಳಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಿದ್ದಂತೆ ಬೃಹತ್ ನೀರಾವರಿ ಖಾತೆ ಮೇಲೆ ಮೊದಲಿನಿಂದಲೂ ಕಣ್ಣಿಟ್ಟಿದ್ದ ಆಕಾಂಕ್ಷಿಗಳು ಸಿಎಂ ಬಳಿ ತಮಗೇ ಖಾತೆ ನೀಡುವಂತೆ ಲಾಬಿ ನಡೆಸಿದ್ದಾರೆ. ಪ್ರಬಲ ಆಕಾಂಕ್ಷಿಗಳು: ಮೊದಲಿನಿಂದಲೂ ನೀರಾವರಿ ಖಾತೆ ಮೇಲೆ ಕಣ್ಣಿಟ್ಟಿದ್ದ …
Read More »ಸರ್ಕಾರದ ಮೇಲೆ ಅಶೋಕ್ ಪೂಜಾರಿ ಗಂಭೀರ್ ಆರೋಪ..
ಓರ್ವ ಜವಾಬ್ದಾರಿಯುತ ಹಿರಿಯ ಸಚಿವ ರಾಸಲೀಲೆ ಸಿಡಿ ಹಗರಣದಲ್ಲಿ ರಾಜೀನಾಮೆ ಕೊಟ್ಟಿದ್ದಾರೆ ಎಂದರೆ ಅದು ಸಣ್ಣ ವಿಷಯ ಅಲ್ಲ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕಿತ್ತು. ಆದರೆ ಸರ್ಕಾರ ಈವರೆಗೂ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಜೆಡಿಎಸ್ ಮುಖಂಡ ಅಶೋಕ್ ಪೂಜಾರಿ ಗಂಭೀರ ಆರೋಪ ಮಾಡಿದರು. ಬುಧವಾರ ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅಶೋಕ ಪೂಜಾರಿ ರಮೇಶ ಜಾರಕಿಹೊಳಿ ಹಾಗೂ ಬಾಲಚಂದ್ರ ಜಾರಕಿಹೊಳಿ ಅವರು ಸಂಪೂರ್ಣವಾಗಿ ಇದು ಫೇಕ್ ವಿಡಿಯೋ ಇದೆ ಎಂದು …
Read More »2020ರಲ್ಲಿ ದೇಶದ 10 ಸಾವಿರ ಕಂಪನಿಗಳು ಬಂದ್! ಕರ್ನಾಟಕದಲ್ಲಿ ಎಷ್ಟು ಗೊತ್ತಾ?
ನವದೆಹಲಿ : 2020ರ ಏಪ್ರಿಲ್ ನಿಂದ ಈ ವರ್ಷದ ಫೆಬ್ರವರಿವರೆಗೆ ದೇಶದಲ್ಲಿ 10,000 ಕ್ಕೂ ಹೆಚ್ಚು ಕಂಪನಿಗಳು ಸ್ವಯಂ ಪ್ರೇರಿತವಾಗಿ ಬಂದ್ ಆಗಿವೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ (ಎಂಸಿಎ) ಲಭ್ಯವಿರುವ ಇತ್ತೀಚಿನ ದತ್ತಾಂಶದ ಪ್ರಕಾರ, ಪ್ರಸಕ್ತ ಹಣಕಾಸು ವರ್ಷದಲ್ಲಿ ಫೆಬ್ರವರಿವರೆಗೆ ಒಟ್ಟು 10,113 ಕಂಪನಿಗಳು ಕಂಪನಿಗಳ ಕಾಯ್ದೆ 2013ರ ಸೆಕ್ಷನ್ 248(2) ರ ಅಡಿಯಲ್ಲಿ ಸ್ಥಗಿತವಾಗಿವೆ.ಸೆಕ್ಷನ್ 248(2) ಪ್ರಕಾರ ಕಂಪನಿಗಳು ಸ್ವಯಂ ಪ್ರೇರಿತವಾಗಿ …
Read More »ಕರ್ನಾಟಕದಲ್ಲಿ ಒಂದೇ ದಿನ 590 ಮಂದಿಗೆ ಕೊರೊನಾವೈರಸ್
ಬೆಂಗಳೂರು, ಮಾರ್ಚ್.09: ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಕರ್ನಾಟಕದಲ್ಲಿ ಕಡಿಮೆ ಆಗುತ್ತಲೇ ಇಲ್ಲ. ಬೆಂಗಳೂರಿನಲ್ಲಿ ಒಂದೇ ದಿನ 363 ಜನರಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ರಾಜ್ಯದಲ್ಲಿ ಒಂದೇ ದಿನ 590 ಜನರಿಗೆ ಕೊರೊನಾವೈರಸ್ ಸೋಂಕು ತಗುಲಿದ್ದು, ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 956041ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 6 ಮಂದಿ ಕೊವಿಡ್-19 ಸೋಂಕಿಗೆ ಬಲಿಯಾಗಿದ್ದು, ಈವರೆಗೂ 12373 ಜನರು ಮಹಾಮಾರಿಯಿಂದ ಪ್ರಾಣ ಬಿಟ್ಟಿದ್ದಾರೆ. ಕೊವಿಡ್ …
Read More »ಯುವತಿಯ ಕಪಾಳಕ್ಕೆ ಹೊಡೆದ ಮಹಿಳಾ ಪಿಎಸ್‌ಐ! ವಾಹನ ತಪಾಸಣೆ ವೇಳೆ ಬೆಸಗರಹಳ್ಳಿ ರಾಮಣ್ಣ ವೃತ್ತದಲ್ಲಿ ಘಟನೆ
ಮಂಡ್ಯ: ದ್ವಿಚಕ್ರ ವಾಹನ ದಾಖಲೆಗಳ ತಪಾಸಣೆ ವೇಳೆ ಯುವತಿಯೊಬ್ಬರು ತನ್ನೊಂದಿಗೆ ವಾಗ್ವಾದಕ್ಕೆ ಇಳಿದರೆಂದು ವ್ಯಗ್ರಗೊಂಡ ಮಹಿಳಾ ಪಿಎಸ್‌ಐ ಸವಿತಾಗೌಡ ಪಾಟೀಲ್ ಯುವತಿಯ ಕಪಾಳಕ್ಕೆ ಹೊಡೆದಿರುವ ಘಟನೆ ನಡೆದಿದೆ. ಮಂಡ್ಯದ ಬೆಸಗರಹಳ್ಳಿ ರಾಮಣ್ಣ ವೃತ್ತದಲ್ಲಿ ಈ ಘಟನೆ ನಡೆದಿದೆ. ಪಿಎಸ್‌ಐ ಹೊಡೆದ ಬಳಿಕ ಯುವತಿಯೂ ಏಕವಚನದಲ್ಲಿ ಪಿಎಸ್‌ಐ ಸವಿತಾಗೌಡ ಪಾಟೀಲ್ ಅವರನ್ನು ನಿಂದಿಸಿದ್ದಾರೆ. ಈ ಬಗ್ಗೆ ಯುವತಿಯು ಸ್ಥಳದಲ್ಲಿದ್ದ ಹಿರಿಯರೊಬ್ಬರ ಗಮನ ಸೆಳೆದಾಗ ಅವರೂ ಸಹ ಪೊಲೀಸ್ ಅಧಿಕಾರಿಯ ದರ್ಪವನ್ನು ಪ್ರಶ್ನಿಸಿದ್ದಾರೆ. …
Read More »ಮೈಸೂರು: ಪಾರ್ಕ್‌ನಲ್ಲಿಯೇ ಮಗುವಿಗೆ ಜನ್ಮ ನೀಡಿದ ಮಹಿಳೆ
ಮೈಸೂರು, ಮಾರ್ಚ್ 9: ಮೈಸೂರು ನಗರದಲ್ಲಿ ಮಂಗಳವಾರ ಅಪರೂಪದ ಹೆರಿಗೆಯಾಗಿದೆ. ಸಿನಿಮೀಯ ಶೈಲಿಯಲ್ಲಿ ತಾಯಿಯೊಬ್ಬಳು ಉದ್ಯಾನದಲ್ಲಿಯೇ ಮಗುವಿಗೆ ಜನ್ಮ ನೀಡಿದ್ದಾಳೆ. ಮೈಸೂರು ನಗರದ ಹೃದಯ ಭಾಗದಲ್ಲಿರುವ ಪೀಪಲ್ಸ್ ಪಾರ್ಕ್‌ನಲ್ಲಿ ಈ ಘಟನೆ ನಡೆದಿದ್ದು, ಕೊಡಗು ಮೂಲದ ಮಹಿಳೆ ಪಾರ್ಕ್‌ನಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ. ತುಂಬು ಗರ್ಭಿಣಿ ಆಗಿದ್ದ ಮಹಿಳೆ ತನ್ನ ಇಬ್ಬರು ಮಕ್ಕಳ ಜೊತೆ ಮೈಸೂರಿಗೆ ಆಗಮಿಸಿದ್ದರು. ಈ ವೇಳೆ ಪಾರ್ಕ್‌ನಲ್ಲಿ ಕುಳಿತ್ತಿದ್ದಾಗ ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ತಕ್ಷಣವೇ …
Read More »ವಿದ್ಯುತ್ ಉತ್ಪಾದನೆಗೆ ಬ್ಯಾರೇಜ್ ನಿರ್ಮಾಣ, ದೀಪದ ಬುಡಕ್ಕೆ ಕತ್ತಲು; ಸಿಎಂ ಸಾಹೇಬ್ರೇ ಪರಿಹಾರ ನೀಡಿ!
ಯಾದಗಿರಿ: ಕರ್ನಾಟಕ ರಾಜ್ಯಕ್ಕೆ ಬೆಳಕಿನ ಸೌಲಭ್ಯ ಕಲ್ಪಿಸುವ ಆರ್ ಟಿಪಿಎಸ್ ಕೇಂದ್ರವು ಈಗ ರೈತರ ಜೀವಕ್ಕೆ ಮಾತ್ರ ಕತ್ತಲಾಗಿಸಿದೆ. ರಾಯಚೂರಿನ ಶಕ್ತಿನಗರದಲ್ಲಿರುವ ಆರ್ ಟಿಪಿಎಸ್ ಕೇಂದ್ರಕ್ಕೆ ವಿದ್ಯುತ್ ಉತ್ಪಾದನೆ ಗಾಗಿ ನೀರು ಪೂರೈಕೆ ಮಾಡಲು ಸರಕಾರ 2016 ನೆ ಸಾಲಿನಲ್ಲಿ ಕೋಟ್ಯಾಂತರ ರೂ ವೆಚ್ಚ ಮಾಡಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಮಾಡಿದೆ. ಬ್ಯಾರೇಜ್ ನಿರ್ಮಾಣ ಮಾಡಿ ನಾಲ್ಕು ವರ್ಷ ಕಳೆದಿದ್ದು, ಈಗ ಬ್ಯಾರೇಜ್ ರೈತರ ಪಾಲಿಗೆ ಜಲಕಂಟಕ ತಂದಿದೆ. …
Read More »
Laxmi News 24×7