ದಾವಣಗೆರೆ: ನಿನಗೆ ಸವಾಲು ಹಾಕ್ತೀನಿ.. ತಾಕತ್ತಿದ್ದರೆ ಮುಖ್ಯಮಂತ್ರಿಗಳನ್ನ ಬದಲಾವಣೆ ಮಾಡಿ ನೋಡು ಅಂತ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳೆಗೆ ಸವಾಲೆಸೆದಿದ್ದಾರೆ. ಪಂಚರಾಜ್ಯಗಳ ಚುನಾವಣೆಯ ನಂತರ ನೂರಕ್ಕೆ ನೂರರಷ್ಟು ಸಿಎಂ ಬದಲಾವಣೆ ಖಚಿತ ಎಂದು ಯತ್ನಾಳ್ ಹೇಳಿಕೆ ನೀಡಿದ್ದರು. ಈ ಹಿನ್ನೆಲೆ ರೇಣುಕಾಚಾರ್ಯ ಏಕವಚನದಲ್ಲೇ ಯತ್ನಾಳ್ ವಿರುದ್ಧ ಕಿಡಿಕಾರಿದ್ದಾರೆ. ರಾಜ್ಯದಲ್ಲಿ ಬಿಜೆಪಿಯನ್ನ ಕಟ್ಟಿ ಬೆಳೆಸಿದ್ದು ಯಡಿಯೂರಪ್ಪ, ಅನಂತಕುಮಾರ್. ಯಡಿಯೂರಪ್ಪನವರನ್ನ ಮುಖ್ಯಮಂತ್ರಿಯನ್ನಾಗಿ ಮಾಡಿದ್ದು, ಪ್ರಧಾನಮಂತ್ರಿ ನರೇಂದ್ರಮೋದಿ …
Read More »ಖತರ್ನಾಕ್ ಕಳ್ಳರ ಬಂಧನ; ₹6 ಲಕ್ಷ ಮೌಲ್ಯದ 12 ಬೈಕ್ ವಶ
ಮೈಸೂರು: ನಗರದ ನರಸಿಂಹರಾಜ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರು ದ್ವಿಚಕ್ರ ವಾಹನ ಕಳ್ಳರನ್ನು ಬಂಧಿಸಿದ್ದಾರೆ. ಫಯಾಜ್ ಅಹಮ್ಮದ್ ಹಾಗೂ ಮೊಕ್ತಾರ್ ಪಾಷಾ ಬಂಧಿತ ಆರೋಪಿಗಳು. ಈ ಹಿಂದೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳು ನಕಲಿ ಕೀ ಬಳಸಿ ಬೈಕ್ಗಳನ್ನ ಕಳ್ಳತನ ಮಾಡುತ್ತಿದ್ದರು. ಬೈಕ್ ಕಳುವಾಗಿರುವ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರುಗಳು ದಾಖಲಾಗಿದ್ದವು. ಕದ್ದ ಬೈಕ್ಗಳನ್ನ ಮಾರಾಟ ಮಾಡಲು ಮುಂದಾದ ಆರೋಪಿಗಳು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಬಂಧಿತ ಆರೋಪಿಗಳಿಂದ ಪೊಲೀಸರು, 6 …
Read More »ಬೆಳಗಾವಿಯಲ್ಲಿ CRPF ಯೋಧನ ಸಾವು
ಬೆಳಗಾವಿ: ಕೋಬ್ರಾ ಬಟಾಲಿಯನ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಆರ್ಪಿಎಫ್ನ ವೀರ ಯೋಧ ಮೌಲಾಹುಸೇನ್ ಕಲೇಬಾಯಿ(40) ಅನಾರೋಗ್ಯದ ಕಾರಣ ಸಾವನ್ನಪ್ಪಿದ್ದಾರೆ. ಮೂಲತಃ ಗದಗ ತಾಲೂಕಿನ ಹೊಂಬಳ ಗ್ರಾಮದವರಾದ ಯೋಧ ಬೆಳಗಾವಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಯೋಧ ನಿನ್ನೆ ಸೇನಾ ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ದಾರೆ. ತಾಯಿ, ಪತ್ನಿ, ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಂದು ಗಂಡು ಮಗುವನ್ನ ಅಗಲಿದ್ದಾರೆ. ಇಂದೇ ಹೊಂಬಳ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಸಲಾಗುತ್ತಿದೆ.
Read More »ಕಳೆದುಕೊಂಡ ಮೊಬೈಲ್ಗಳನ್ನ ಹಿಂದಿರುಗಿಸಿದ ಪೊಲೀಸರು
ಹುಬ್ಬಳ್ಳಿ:ಇತ್ತೀಚೆಗೆ ಮೊಬೈಲ್ ಕಳೆದು ಹೋಯಿತು ಎಂದರೆ ಅದನ್ನು ಮರೆತು ಬಿಡುವುದೇ ವಾಸಿ ಎನ್ನುವಂತಾಗಿದೆ. ಆದರೆ ಅವಳಿ ನಗರದ ಖಾಕಿ ಪಡೆ ಅದಕ್ಕೆ ಅಪವಾದ ಎಂಬಂತೆ ಕೆಲಸ ಮಾಡಿದೆ. ಸಾರ್ವಜನಿಕರಿಗೆ ಉತ್ತಮ ರಕ್ಷಣೆ ನೀಡಿ ಪೊಲೀಸ್ ಸೇವೆ ನೀಡುವ ಮೂಲಕ ಸಾಕಷ್ಟು ಜನಮನ್ನಣೆಗಳಿಸಿರುವ ಹುಬ್ಬಳ್ಳಿ- ಧಾರವಾಡ ಮಹಾನಗರ ಪೊಲೀಸ್ ಕಮೀಷನರೇಟ್ ಈಗ ಮತ್ತೊಂದು ಮಹತ್ವದ ಕಾರ್ಯವನ್ನು ಮಾಡಿದೆ. ಹುಬ್ಬಳ್ಳಿ-ಧಾರವಾಡ ನಗರದಲ್ಲಿ ಸಾರ್ವಜನಿಕರು ಕಳೆದುಕೂಂಡ ಮೊಬೈಲ್ಗಳನ್ನು ಪತ್ತೆ ಮಾಡಲು ಕಾನೂನು ಮತ್ತು ಸುವ್ಯವಸ್ಥೆ …
Read More »ಪ್ರತಿಭಾನ್ವಿತ ಕ್ರೀಡಾಪಟುಗಳಾಗಿದ್ದವರಿಗೆ ಇನ್ಮುಂದೆ ಪೊಲೀಸ್ ನೇಮಕಾತಿಯಲ್ಲಿ ಕೋಟಾ.!
ಬೆಂಗಳೂರು:ಹೌದು ರಾಜ್ಯ ಸರಕಾರವು ಕರ್ನಾಟಕದ ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ಪೊಲೀಸ್ ಪಡೆ ನೇಮಕಾತಿಯಲ್ಲಿ ಶೇಕಡಾ ಎರಡು ಕೋಟಾ ನೀಡಲಾಗುವುದು ಎಂದು ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ವಿಶೇಷ ನಿಯಮಗಳನ್ನು ಕಳೆದ ವರ್ಷ ರೂಪಿಸಲಾಯಿತು ಮತ್ತು ಅಂತಿಮವಾಗಿ ಮಾರ್ಚ್ 3 ರಂದು ರಾಜ್ಯ ಗೆಜೆಟ್‌ನಲ್ಲಿ ತಿಳಿಸಲಾಯಿತು. ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮತ್ತು ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತಾ, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕೆಎಸ್‌ಆರ್‌ಪಿ) ಅಲೋಕ್ ಕುಮಾರ್ ಅವರು, ‘ಪೊಲೀಸ್ …
Read More »ಸಿಡಿ ಪ್ರಕರಣವನ್ನು ಬೇರೆ ತನಿಖಾ ಸಂಸ್ಥೆಗೆ ವಹಿಸುವುದಿಲ್ಲ: ಸಚಿವ ಬಸವರಾಜ ಬೊಮ್ಮಾಯಿ
ಧಾರವಾಡ: ಸಿಡಿ ಪ್ರಕರಣದ ತನಿಖೆಯನ್ನು ಎಸ್ ಐ ಟಿ ಸಮರ್ಥವಾಗಿ ನಡೆಸುತ್ತಿದೆ. ಹೀಗಾಗಿ ಈ ಪ್ರಕರಣದ ತನಿಖೆಯನ್ನು ಬೇರೆ ಸಂಸ್ಥೆ ಗೆ ವಹಿಸುವುದಿಲ್ಲ ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು. ಧಾರವಾಡದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಎಸ್ ಐ ಟಿ ಸಿಡಿ ತನಿಖೆಯನ್ನು ನಿಷ್ಪಕ್ಷಪಾತ, ನಿಷ್ಠುರ, ನ್ಯಾಯಸಮ್ಮತವಾಗಿ ನಡೆಸುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು. ಹೊರ ರಾಜ್ಯಗಳಲ್ಲಿ ಕೋವಿಡ್ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ …
Read More »ಸಿಎಂಗೆ ಜಲ ಸಂಪನ್ಮೂಲ ಇಲಾಖೆ ತಮಗೇ ಬೇಕಿತ್ತು, ಹೀಗಾಗಿ ಜಾರಕಿಹೊಳಿಯನ್ನು ಸಿಲುಕಿಸಲಾಗಿದೆ: ಯತ್ನಾಳ್
ವಿಜಯಪುರ (ಮಾರ್ಚ್ 21)- ರಾಜ್ಯದಲ್ಲಿ ನಡೆದಿರುವ ಸಿಡಿ ವಿಚಾರಕ್ಕೆ ಸಂಬಂಧಿಸಿದಂತೆ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತೊಂದು ಹೊಸ ಬಾಂಬ್ ಸಿಡಿಸಿದ್ದಾರೆ.ವಿಜಯಪುರದಲ್ಲಿ ಮಾತನಾಡಿದ ಅವರು, “ಸಿಎಂ ಗೆ ಜಲ ಸಂಪನ್ಮೂಲ, ಹಣಕಾಸು, ಇಂಧನ, ಬೆಂಗಳೂರು ನಗರಾಭಿವೃದ್ಧಿ ಇಲಾಖೆ ತಮ್ಮಲ್ಲಿಯೇ ಉಳಿಯಬೇಕಾಗಿದೆ. ಮಾರ್ಚ್ ಕೊನೆಯಲ್ಲಿ ಈ ಇಲಾಖೆಗಳಿಗೆ ಸಾವಿರಾರು ಕೋಟಿ ರೂಪಾಯಿ ಹಣ ಬಿಡುಗಡೆಯಾಗುತ್ತದೆ. ಆ ಹಣ ಹೇಗೆ ತೆಗೆದುಕೊಳ್ಳಬೇಕು? ಎಂಬುದು ಮುಖ್ಯಮಂತ್ರಿ ಪ್ಲ್ಯಾನ್ ಆಗಿತ್ತು. ಇದೇ …
Read More »ಇನ್ನೂ 19 ಸಿ.ಡಿ ಇವೆಯಂತೆ. ಎಲ್ಲವೂ ಹಿಡಿತದಲ್ಲಿ ಇರಲಿ. :ಸಿದ್ದರಾಮಯ್ಯ
ಬೆಂಗಳೂರು,ಮಾ.21- ಇನ್ನೂ 19 ಸಿ.ಡಿ ಇವೆಯಂತೆ. ಎಲ್ಲವೂ ಹಿಡಿತದಲ್ಲಿ ಇರಲಿ. ನಾಲಿಗೆ ಕೂಡ ಎಂದು ಹೇಳುವ ಮೂಲಕ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್‍ಕಟೀಲ್ ಅವರಿಗೆ ಬಿಸಿ ಮುಟ್ಟಿಸಿದ್ದಾರೆ. ಕಾಂಗ್ರೆಸ್‍ಗೆ ರಾಜೀನಾಮೆ ನೀಡಲು ಸಿದ್ದರಾಮಯ್ಯ ಅವರಿಂದ 90 ಜೊತೆ ಬಟ್ಟೆ ಖರೀದಿಯಾಗಿದೆ ಎಂದು ನಳೀನ್‍ಕುಮಾರ್ ಕಟೀಲ್ ಹೇಳಿಕೆ ನೀಡಿದ್ದರು. ಇದಕ್ಕೆ ಅಷ್ಟೇ ತೀಕ್ಷ್ಣವಾಗಿ ಟ್ವಿಟರ್‍ನಲ್ಲಿ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯನವರು, ಎಲ್ಲೆಲ್ಲೋ ಹೋಗಿ ಬಟ್ಟೆ ಬಿಚ್ಚಿ ಮರ್ಯಾದೆ ಕಳೆಯುತ್ತಿರುವ ಕರ್ನಾಟಕದ ಬಿಜೆಪಿ …
Read More »ಮೇ.2ರ ನಂತ್ರ ಯಾವುದೇ ಕ್ಷಣದಲ್ಲಿ ‘ಸಿಎಂ ಬದಲಾವಣೆ, ಉ.ಕರ್ನಾಟಕ ವ್ಯಕ್ತಿ ಮುಂದಿನ ಸಿಎಂ : ಯತ್ನಾಳ್
ವಿಜಯಪುರ : ಇದೀಗ ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯ ಕಾವಿದೆ. ಇಂತಹ ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ಮುಗಿಯುತ್ತಲೇ ಮೇ.2ರ ನಂತ್ರ ಯಾವುದೇ ಕ್ಷಣದಲ್ಲಿ ಆದ್ರು.. ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಆಗಲಿದ್ದಾರೆ ಎಂಬುದಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ‘ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಉತ್ತರ ಕರ್ನಾಟಕ ಭಾಗದವರಿಗೆ ಮುಖ್ಯಮಂತ್ರಿ ಅವಕಾಶ ಇದೆ ಎಂದು ಮಾತ್ರವೇ ಗೊತ್ತಿದೆ. ಆದ್ರೇ ಅದರಲ್ಲಿ ನನ್ನ ಹೆಸರು ಇರುವ ಬಗ್ಗೆ ಖಚಿತ …
Read More »ಇನ್ನೂ 400 ಸಿಡಿಗಳಿವೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್
ವಿಜಯಪುರ: ರಾಜ್ಯದಲ್ಲಿ ಸಿಡಿ ತಯಾರಿಸುವ ಎರಡು ಫ್ಯಾಕ್ಟರಿಗಳಿವೆ. ಒಂದು ಬಿಜೆಪಿಯಲ್ಲಿದೆ. ಇನ್ನೊಂದು ಕಾಂಗ್ರೆಸ್ ನಲ್ಲಿದೆ. ರಮೇಶ್ ಜಾರಕಿಹೊಳಿ ಸಿಡಿ ರೀತಿಯೇ ಇನ್ನೂ 400 ಸಿಡಿಗಳಿವೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಯತ್ನಾಳ್, ಸಿಡಿ ತಯಾರಿಸುವ ದೊಡ್ಡ ಗ್ಯಾಂಗ್ ಇದೆ. ಗ್ಯಾಂಗ್ ಕಟ್ಟಿಕೊಂಡು ಮೊದಲು ಶಾಸಕರು, ಸಚಿವರ ಜೊತೆ ಸಲುಗೆ ಬೆಳಸಿಕೊಳ್ಳುತ್ತಾರೆ. ಸಲುಗೆ ಬೆಳೆಸಿಕೊಂಡು ಸಿಡಿ ತಯರೈಸಿ ಬಳಿಕ ಬ್ಲ್ಯಾಕ್ ಮೇಲ್ …
Read More »
Laxmi News 24×7